ನಿಮ್ಮ ಜನ್ಮರಾಶಿಯ ಪ್ರಾಣಿ ಯಾವುದು ಮತ್ತು ಸೆಕ್ಸ್ ವೇಳೆ ಹೇಗೆ ವರ್ತಿಸುತ್ತದೆ ಎಂದು ಅರ್ಥ ಮಾಡಿಕೊಳ್ಳಿ. ಅದು ನಿಮ್ಮ ಹಾಗೂ ಸಂಗಾತಿಯ ಲೈಂಗಿಕ ವರ್ತನೆಗಳನ್ನು ಸ್ಪಷ್ಟಪಡಿಸಿಕೊಳ್ಳಲು ನೆರವಾದೀತು.
ಪ್ರತಿಯೊಂದು ಜನ್ಮರಾಶಿಯನ್ನೂ ಒಂದೊಂದು ಪ್ರಾಣಿ ಪ್ರತಿನಿಧಿಸುತ್ತದೆ. ಈ 'ಆತ್ಮ ಪ್ರಾಣಿಗಳು' ನಿಮ್ಮ ಆಂತರಿಕ ಗುಣಲಕ್ಷಣಗಳು ಮತ್ತು ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತವೆ. ಇವು ವ್ಯಕ್ತಿಯ ಆಧ್ಯಾತ್ಮಿಕ ಶಕ್ತಿ ಮತ್ತು ಲೈಂಗಿಕ ಶಕ್ತಿಗಳನ್ನು ಪ್ರತಿನಿಧಿಸುತ್ತದೆ. ಸೆಕ್ಸ್ ಎಂಬುದು ಮನುಷ್ಯನ ಬೇಸಿಕ್ ಇನ್‌ಸ್ಟಿಂಕ್ಟ್‌ಗಳಲ್ಲಿ ಒಂದು ಆದ್ದರಿಂದ, ಈ ಪ್ರಾಣಿಯ ಸ್ವಭಾವವೇ ಅವರಲ್ಲೂ ಬೆಡ್‌ರೂಮಿನಲ್ಲಿ ವ್ಯಕ್ತವಾಗುತ್ತದೆ. ಹಾಗಿದ್ದರೆ ನಿಮ್ಮ ಜನ್ಮರಾಶಿಯ ಪ್ರತಿನಿಧಿ ಪ್ರಾಣಿ ಯಾವುದು, ಮಧುಮಂಚದಲ್ಲಿ ನಿಮ್ಮ ವರ್ತನೆ ಹೇಗೆ- ಎಂಬುದನ್ನು ಇಲ್ಲಿ ನೋಡೋಣ.
ಮೇಷ- ಗಿಡುಗ
ನಿಮ್ಮ ರಾಶಿ ಪ್ರಾಣಿ ಗಿಡುಗ ಅಥವಾ ಹದ್ದು. ಇವುಗಳು ಸ್ವಾಭಾವಿಕವಾಗಿಯೇ ನಾಯಕತ್ವ ಸ್ವಭಾವದವು. ಹೀಗಾಗಿ ಸೆಕ್ಸ್‌ನಲ್ಲೂ ಸಂಗಾತಿಗೆ ಸಂಬಂಧಿಸಿದ ಸಂಗತಿಗಳು ಲೀಡಿಂಗ್ ತಾವೇ ತೆಗೆದುಕೊಳ್ಳುತ್ತಾರೆ. ಕೆಲವೊಮ್ಮೆ ಅವರು ಹಠಾತ್ ಎಂದು ನಿಮ್ಮ ಮೇಲೆ ಎರಗಬಹುದು. ಆದರೆ ತಮ್ಮ ಕ್ರಿಯೆಯಲ್ಲಿ ಯಾವಾಗಲೂ ಸಂಪೂರ್ಣ ಆತ್ಮವಿಶ್ವಾಸ ಹೊಂದಿರುತ್ತಾರೆ. ಅತ್ಯಂತ ಭಾವೋದ್ರಿಕ್ತತೆಯ ಸ್ವಭಾವವೂ ಇವರದಾಗಿರುತ್ತದೆ. ಸಂಗಾತಿಯ ದೌರ್ಬಲ್ಯವನ್ನು ಥಟ್ಟನೆ ಅರ್ಥ ಮಾಡಿಕೊಳ್ಳಬಲ್ಲರು.
ವೃಷಭ- ಕರಡಿ
ವೃಷಭ ರಾಶಿಯವರು ಕರಡಿಯನ್ನು ಪ್ರತಿಧ್ವನಿಸುತ್ತಾರೆ. ಕರಡಿ ಶಕ್ತಿ ಮತ್ತು ಸಾಮರ್ಥ್ಯಗಳನ್ನು ಸಂಕೇತಿಸುತ್ತವೆ. ಹೀಗಾಗಿ ಇವರು ಸ್ವಾಭಾವಿಕವಾಗಿ ಧೈರ್ಯಶಾಲಿ ಮತ್ತು ಶಕ್ತಿಶಾಲಿ. ಕೆಲವೊಮ್ಮೆ ಕರಡಿಯಂತೆ ಸೋಮಾರಿಯಾಗಿರಬಹುದು. ಆದರೆ ಹಸಿದಾಗ ತುಂಬ ಚುರುಕಾಗಿರುತ್ತವೆ. ಕೆಲವೊಮ್ಮೆ ಹಠಾತ್ತಾಗಿ ಆಕ್ರಮಣಕಾರಿಯಾಗಿ ವರ್ತಿಸಬಹುದು. ಕರಡಿ ಪ್ರೀತಿ ಎಂದರೆ ನಿಮಗೆ ಗೊತ್ತೇ ಇರುತ್ತದೆ. ಸಂಗಾತಿಯನ್ನು ಭಯಂಕರವಾಗಿ ಪ್ರೀತಿಸುತ್ತಾರೆ. ಉಸಿರುಗಟ್ಟುವಂತೆ ಪ್ರೇಮಿಸಬಹುದು.
ಮಿಥುನ- ಕಪ್ಪು ಚಿರತೆ
ಮಿಥುನದವರು ಸಾಮಾಜಿಕ ಜೀವಿಗಳು, ಕೆಲವೊಮ್ಮೆ ಇದಕ್ಕೆ ವಿರುದ್ಧವಾಗಿ ನಾಚಿಕೆ ಮತ್ತು ಮೌನವಾಗಿರಬಹುದು. ಹೀಗಾಗಿ ಇವರ ವ್ಯಕ್ತಿತ್ವ ಕಪ್ಪು ಚಿರತೆಗೆ ಹೊಂದಿಕೆಯಾಗುತ್ತದೆ. ಚುರುಕುಬುದ್ಧಿ, ತ್ವರಿತ ಕ್ರಿಯೆ, ಹಾಸಿಗೆಯಲ್ಲೂ ಹಾಸ್ಯ ಸ್ವಭಾವ ತೋರಬಹುದು. ನಿಮ್ಮ ಮೇಲೆ ಸಾಕಷ್ಟು ಪ್ರಾಬಲ್ಯ ಹೊಂದಬಹುದು. ಕೆಲವೊಮ್ಮೆ ಕತ್ತಲಲ್ಲಿ ನಿಂತ ಚಿರತೆಯಂತೆ, ಅವರು ಯಾವುದಕ್ಕೆ ಹೊಂಚು ಹಾಕಿದ್ದಾರೆ ಎಂಬುದು ನಿಮಗೆ ಗೊತ್ತೇ ಆಗದಂತೆ ಸರ್‌ಪ್ರೈಸ್ ಕೊಡಬಹುದು.
ಇದನ್ನೂ ಓದಿ: ಸೆಕ್ಸ್ ಸಂತೃಪ್ತಿ: ವಿಲ್ ಸ್ಮಿತ್ ಮತ್ತು ಜಡಾ ಸ್ಮಿತ್ ಜೋಡಿ ನೀಡಿದ ಟಿಪ್ಸ್ ನೋಡಿ
ಕಟಕ- ಜಿಂಕೆ
ಕರ್ಕಾಟಕ ರಾಶಿಯವರು ಎಚ್ಚರಿಕೆಯಿಂದ ಮತ್ತು ಜಾಗರೂಕತೆಯಿಂದ ಇರುವವರು. ಹೀಗಾಗಿ ಜಿಂಕೆ ಇವರ ರಾಶಿ ಪ್ರಾಣಿಯಾಗಲು ಯೋಗ್ಯ. ಇವರ ಮನಸ್ಥಿತಿ ಚಂಚಲ. ನೀವು ಊಹಿಸಲು ಸಾಧ್ಯವಿಲ್ಲ.ನಿನ್ನೆ ಹಾಸಿಗೆಯಲ್ಲಿ ವಿಜೃಂಭಿಸಿದವರು ಇಂದು ಅಷ್ಟು ಉತ್ಸಾಹ ತೋರಿಸದೇ ಹೋಗಬಹುದು. ಆದರೂ ಇವರು ತುಂಬಾ ನಿಷ್ಠಾವಂತರು ಮತ್ತು ವಿಶ್ವಾಸಾರ್ಹರು. ಲೈಂಗಿಕತೆಯಲ್ಲಿ ಮೋಸ ಮಾಡುವವರಲ್ಲ. ಆದರೆ ಇವರನ್ನು ಸೆಕ್ಸ್‌ಗೆ ಹೆಚ್ಚಾಗಿ ಪ್ರಚೋದಿಸಬೇಕಾಗುತ್ತದೆ.
ಸಿಂಹ- ಸಿಂಹ
ಸಿಂಹ ರಾಶಿಗೆ ಸಿಂಹ ಅಲ್ಲದೇ ಇನ್ಯಾವುದೂ ಪ್ರತಿನಿಧಿಯಾಗಲು ಸಾಧ್ಯವಿಲ್ಲ. ಇದು ಯಾವಾಗಲೂ ದಂಡಿನ ನಾಯಕ. ಹೀಗಾಗಿ ಮಂಚದ ಮೇಲೆ ಒಬ್ಬರಲ್ಲ ಇಬ್ಬರಲ್ಲ ಹಲವು ಸಂಗಾತಿಗಳು ಇದ್ದಾಗಲೂ ಇವರು ನಾಯಕ/ನಾಯಕಿಯೇ ಆಗಿರುತ್ತಾರೆ. ತಮ್ಮ ಇಷ್ಟದಂತೆ ಸೆಕ್ಸನ್ನು ಮುನ್ನಡೆಸುತ್ತಾರೆ. ಇವರ ಕೌಶಲ್ಯದಿಂದ ಸಂಗಾತಿಗಳನ್ನು ಸಂತೃಪ್ತಿಪಡಿಸುತ್ತಾರೆ. ಕೆಲವೊಮ್ಮೆ ಮೃಗೀಯವಾಗಿ ವರ್ತಿಸಿ ಸಂಗಾತಿಗಳನ್ನು ನೋಯಿಸಬಹುದು. ಆದರೆ ಇವರ ಆತ್ಮವಿಶ್ವಾಸ, ಆಕರ್ಷಣೆ ತಡೆಯುವುದು ಅಸಾಧ್ಯ.
ಕನ್ಯಾ- ನರಿ
ಕನ್ಯಾ ರಾಶಿಯವರು ತುಂಬಾ ಜಾಗರೂಕರು, ತೀಕ್ಷ್ಣಬುದ್ಧಿಯವರು. ನರಿ ಇವರ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ. ಇವರು ತಮ್ಮ ಸಂಗಾತಿಯ ಸಣ್ಣದೊಂದು ಚಲನೆ, ಸೂಕ್ಷ್ಮ ವರ್ತನೆಗಳನ್ನೂ ಗಮನಿಸುತ್ತಾರೆ. ಅದಕ್ಕೆ ತಕ್ಕಂತೆ ಹಾಸಿಗೆಯಲ್ಲಿ ವರ್ತಿಸುತ್ತಾರೆ. ಸಂಗಾತಿಯನ್ನು ಸಂತೋಷಗೊಳಿಸಲು ಹಲವು ಕಸರತ್ತುಗಳನ್ನು ಇವರು ಮಾಡಬಹುದು. ಆತ್ಮವಿಶ್ವಾಸ ಮತ್ತು ಸಮಚಿತ್ತದಿಂದ ಕೂಡಿದ ಇವರು ಹಾಸಿಗೆಯಲ್ಲಿ ತಮಗೇನು ಬೇಕು ಎಂಬುದರ ಬಗ್ಗೆ ಸ್ಪಷ್ಟವಾದ ದೃಷ್ಟಿಕೋನ ಹೊಂದಿರುತ್ತಾರೆ.
ತುಲಾ- ಪಾಂಡಾ
ಇವರು ಪಾಂಡಾಗಳಂತೆ ಮುದ್ದಾದ ಮತ್ತು ಆಕರ್ಷಕ ವ್ಯಕ್ತಿತ್ವ ಹೊಂದಿರುತ್ತಾರೆ. ಹಾಸಿಗೆಯಲ್ಲೂ ಹಾಗೆಯೇ. ಇವರು ಹೆಚ್ಚಿನ ಅಡ್ವೆಂಚರಸ್ ಅಲ್ಲ. ಆದರೆ ಹಾಸಿಗೆಯಲ್ಲಿ ಸ್ಪಂದಿಸುತ್ತಾರೆ. ಇವರ ಮುದ್ದುತನ ಸೆಕ್ಸನ್ನು ಮತ್ತಷ್ಟು ಮಧುರಗೊಳಿಸಬಹುದು. ಆದರೆ ಕೆಲವೊಮ್ಮೆ ಇವರು ರಿಜಿಡ್ ಆಗಿ, ಸ್ಪಂದಿಸದೆಯೂ ಇರಬಹುದು. ಸಂಗಾತಿಯ ಸಂತೃಪ್ತಿಯ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುವುದಿಲ್ಲ. ತಮ್ಮದೇ ಆದ ಪ್ರಪಂಚದಲ್ಲಿ ಇರುತ್ತಾರೆ. ಸೆಕ್ಸ್ ಇವರಿಗೆ ಅನಿವಾರ್ಯ ಅಲ್ಲ.
ವೃಶ್ಚಿಕ- ಹಾವು
ಈ ಚಿಹ್ನೆಯ ರಾಶಿ ಪ್ರಾಣಿ ಹಾವು. ಇವರು ಚಾಣಾಕ್ಷರು, ಶಾಂತರು, ಸೌಮ್ಯರು, ಆದರೆ ಅಪಾಯಕಾರಿ. ಇವರು ಯಾರಿಗೂ ಹಾನಿ ಮಾಡಲು ಹಿಂಜರಿಯುವುದಿಲ್ಲ. ಸೆಕ್ಸ್‌ನಲ್ಲಿ ತಮ್ಮ ಸಂಗಾತಿಯನ್ನು ಎಚ್ಚರಿಕೆಯಿಂದ ಆರಿಸಿಕೊಳ್ಳುತ್ತಾರೆ. ಹಾಸಿಗೆಯಲ್ಲಿ ಸಂಗಾತಿಯ ತೃಪ್ತಿಗಿಂತ ತಮ್ಮ ಸಂತೃಪ್ತಿಯನ್ನು ಮುಖ್ಯವೆಂದು ಭಾವಿಸುತ್ತಾರೆ. ಸಂಗಾತಿ ಮೇಲೆ ಆಕ್ರಮಣ ಎಸಗಬಹುದು. ಇವರು ಹೆಚ್ಚು ಕಾಲ ಹಾವಿನಂತೆ ಹಾಸಿಗೆಯಲ್ಲಿ ಕ್ರೀಡಿಸಬಲ್ಲರು.
ಧನು- ನಾಯಿ
ಧನು ರಾಶಿಯವರು ಅಲೆದಾಡುವವರು, ನಿರಾತಂಕದ ವ್ಯಕ್ತಿತ್ವ. ಹಾಗೆಯೇ ಸಂಗಾತಿಗೆ ವಿಧೇಯತೆಯನ್ನೂ ಪ್ರಕಟಿಸುತ್ತಾರೆ. ಕೆಲವೊಮ್ಮೆ ಮಾತ್ರ ಉದ್ರೇಕಿತರಾಗುವುದು ಇವರ ಗುಣ. ಸಂಗಾತಿಗೆ ರಕ್ಷಣೆ, ನೆಮ್ಮದಿ ಕೊಡಬಹುದು, ಆದರೆ ಸೆಕ್ಸ್ ಸಂತೃಪ್ತಿ ಕೊಡಲಾರರು. ಆದರೆ ಹಾಸಿಗೆಯಲ್ಲಿ ವಿಧೇಯವಾಗಿ ಇರಬಹುದು. ಹೊಸ ಸಾಹಸಗಳನ್ನು ಮಾಡಲು ಹಿಂಜರಿಯುವವರು. ತಮಗಿಂತ ಶಕ್ತಿಶಾಲಿ ಎದುರಿಗೆ ಇದ್ದರೆ ಬಾಲ ಮಡಚಿ ಹೋಗುತ್ತಾರೆ.
ಇದನ್ನೂ ಓದಿ: ಅಬ್ಬಬ್ಬಾ..ಹತ್ತು ಸೆಕೆಂಡ್‌ನ ಸುದೀರ್ಘ ಫ್ರೆಂಚ್ ಕಿಸ್‌ನಿಂದ ಇಷ್ಟೆಲ್ಲಾ ಪ್ರಯೋಜನವಿದೆಯಂತೆ !
ಮಕರ- ತೋಳ
ಮಕರ ರಾಶಿಯವರು ಹಸಿದ ತೋಳದ ಹಾಗೆ. ಸಾಕಷ್ಟು ಬುದ್ಧಿಜೀವಿಗಳು. ತೋಳದಂತೆಯೇ ಇವರು ತಮ್ಮ ಸುತ್ತಮುತ್ತಲಿನವರನ್ನು, ಸಂಗಾತಿಗಳನ್ನು ಎಚ್ಚರಿಕೆಯಿಂದ ವಿಶ್ಲೇಷಿಸುತ್ತಾರೆ. ಯಾವುದೇ ತಪ್ಪು ಹೆಜ್ಜೆಗಳನ್ನು ಇಡುವುದಿಲ್ಲ. ತೀಕ್ಷ್ಣವಾಗಿ, ಸರಿಯಾದ ಸಮಯದಲ್ಲಿ ಸಂಗಾತಿಯನ್ನು ಬಲೆಗೆ ಹಾಕಿಕೊಳ್ಳುತ್ತಾರೆ. ಸೆಕ್ಸ್‌ನಲ್ಲಿ ಇವರು ಆತುರಗಾರರು. ಹಸಿದ ತೋಳದಂತೆ ಬೇಟೆಯನ್ನು ಕ್ಷಣಾರ್ಧದಲ್ಲಿ ಮುಗಿಸುತ್ತಾರೆ. ಹೀಗಾಗಿ ಸಂಗಾತಿಯ ತೃಪ್ತಿ ಇವರಿಗೆ ಮುಖ್ಯವಾಗುವುದಿಲ್ಲ.
ಕುಂಭ- ಬೆಕ್ಕು
ಬೆಕ್ಕುಗಳು ತುಂಬಾ ಅನಿರೀಕ್ಷಿತ ಸ್ವಭಾವದವು. ಇವರು ಏನು ಯೋಚಿಸುತ್ತಿದ್ದಾರೆಂದು ನಿರ್ಧರಿಸಲು ತುಂಬಾ ಕಷ್ಟ. ಹಾಗೆಯೇ ಇವರ ಸೆಕ್ಸ್ ಲೈಫ್ ಕೂಡ ತುಂಬಾ ನಿಗೂಢ. ಬೆಕ್ಕುಗಳು ಕಾಮಿಸುವುದನ್ನು ಎಲ್ಲಾದರೂ ನೋಡಿದ್ದೀರಾ? ಹಾಗೇ ಇವರು. ಸಂಗಾತಿಗಳಲ್ಲೂ ತಮ್ಮ ಕಾಮ ಸ್ವಭಾವದ ಗುಟ್ಟುಗಳನ್ನು ಇವರು ಬಿಟ್ಟುಕೊಡುವುದಿಲ್ಲ. ಇವರನ್ನು ಮೆಚ್ಚಿಸಲು ಸಂಗಾತಿಗೆ ತುಂಬಾ ಕಷ್ಟ. ಆದರೆ ಸಂಗಾತಿಯ ಬೇಕು ಬೇಡಗಳನ್ನು ಇವರು ಅರಿತುಕೊಳ್ಳುತ್ತಾರೆ.
ಮೀನ- ಮೀನು
ಮೀನ ರಾಶಿಯವರು ಇತರ ಕಡೆಗಂತೆಯೇ ಹಾಸಿಗೆಯಲ್ಲೂ ತುಂಬಾ ಉದಾರ. ಸಂಗಾತಿಯ ಮೇಲೆ ಪ್ರೇಮದ ಮಳೆಯನ್ನೇ ಸುರಿಸುತ್ತಾರೆ. ಇವರ ವ್ಯಕ್ತಿತ್ವ ಮೀನುಗಳೊಂದಿಗೆ ಪ್ರತಿಧ್ವನಿಸುತ್ತದೆ. ಇವರು ನೀರಿನಲ್ಲಿ ಈಜುವಂತೆ ಎತ್ತ ಬೇಕದಾರೂ ದಾರಿ ಮಾಡಿಕೊಂಡು ಸಾಗಬಲ್ಲರು. ಇವರು ಸಂಗಾತಿಗೆ ಕಾಮದ ದಾರಿಗಳನ್ನು ತೋರಿಕೊಡುತ್ತಾರೆ. ಸಂಗಾತಿಯನ್ನು ತೃಪ್ತಗೊಳಿಸುತ್ತಾರೆ. ಸುದೀರ್ಘ ಕಾಲ ಜತೆಯಾಗಿರುತ್ತಾರೆ.
