ಮಕ್ಕಳು ದೊಡ್ಡವರಾಗ್ತಿದ್ದಂತೆ ಅವರ ಮದುವೆ ಚಿಂತೆ ಶುರುವಾಗುತ್ತೆ. ಯಾರನ್ನ ಕಂಡ್ರೂ ಇವರು ನಮ್ಮ ಮಕ್ಕಳಿಗೆ ಒಳ್ಳೆ ಸಂಗಾತಿ ಆಗ್ಬಹುದು ಎಂಬ ಲೆಕ್ಕಾಚಾರ ಮಾಡ್ತೇವೆ. ಆದ್ರೆ ಮಕ್ಕಳು ಮಾತ್ರ ಮದುವೆಗೆ ಒಪ್ಪೋದಿಲ್ಲ. ಅವರನ್ನು ಒಪ್ಪಿಸೋದು ಒಂದು ಸವಾಲೇ ಸರಿ. 

ಮಕ್ಕಳು (Children) ಹುಟ್ಟುತ್ತಿದ್ದಂತೆ ಎಲ್ಲ ಪಾಲಕರು ಅವರ ಮದುವೆ (Wedding) ಕನಸು ಕಾಣಲು ಶುರು ಮಾಡ್ತಾರೆ. ಮಕ್ಕಳಿಗೆ ಒಳ್ಳೆಯ ಸಂಗಾತಿ (Partner) ಸಿಗಲಿ ಎಂದು ಬಯಸ್ತಾರೆ. ಮಕ್ಕಳ ಮದುವೆಗೆ ಹಣ (Money) ಕೂಡಿಡಲು ಶುರು ಮಾಡ್ತಾರೆ. ಮಕ್ಕಳು ಬೆಳೆಯಲು ಪ್ರಾರಂಭಿಸಿದ್ದಂತೆ ಪೋಷಕರಿಗೆ ತಮ್ಮ ಮಕ್ಕಳ ಮದುವೆಯ ಚಿಂತೆ ಹೆಚ್ಚಾಗುತ್ತದೆ. ಮಗ (Son) ಅಥವಾ ಮಗಳ (Daughter) ಮದುವೆಗೆ ಸಾಕಷ್ಟು ಸಿದ್ಧತೆಗಳನ್ನು ಮಾಡುತ್ತಾರೆ. ಮಕ್ಕಳಿಗೆ ಸಂಗಾತಿ ಹುಡುಕುವ ಪ್ರಯತ್ನ ನಡೆದಿರುತ್ತದೆ. ಆದರೆ ಇಂದಿನ ಕಾಲದಲ್ಲಿ ಬಹುತೇಕ ಯುವಕರು ಬೇಗ ಮದುವೆಯಾಗಲು ಒಪ್ಪುವುದಿಲ್ಲ. ಮತ್ತೆ ಕೆಲವರು ಮದುವೆ ನಿರಾಕರಿಸ್ತಾರೆ. ಮದುವೆಯ ವಯಸ್ಸಾದ ನಂತರವೂ ಅವರು ಮದುವೆಗೆ ಒಪ್ಪಿಗೆ ನೀಡೋದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಪೋಷಕರು ಆಗಾಗ್ಗೆ ಮಕ್ಕಳಿಗೆ ಮದುವೆಯಾಗುವಂತೆ ಒತ್ತಡ ಹೇರುತ್ತಾರೆ. ಇಲ್ಲವೆ ಭಾವನಾತ್ಮಕವಾಗಿ ಅವರನ್ನು ಬ್ಲಾಕ್ ಮೇಲ್ (Black Mail ) ಮಾಡುತ್ತಾರೆ. ಆದರೆ ನಿಮ್ಮ ಮಗ ಅಥವಾ ಮಗಳು ಸಂತೋಷ (Happiness) ದಿಂದ ಮದುವೆಯಾಗಬೇಕೆಂದು ನೀವು ಬಯಸಿದರೆ ಮದುವೆಗೆ ಅವರನ್ನು ಒಪ್ಪಿಸಲು ಕೆಲವು ಉಪಾಯಗಳನ್ನು ಮಾಡಬಹುದು. 

ಮಗ ಅಥವಾ ಮಗಳನ್ನು ಮದುವೆಯಾಗಲು ಮನವೊಲಿಸುವ ಮಾರ್ಗಗಳು : 

ಮದುವೆಯಾಗಲು ನಿರಾಕರಿಸಿದ ಕಾರಣ ತಿಳಿಯಿರಿ : ನಿಮ್ಮ ಮಗ ಅಥವಾ ಮಗಳು ಮದುವೆಯಾಗಲು ನಿರಾಕರಿಸಿದರೆ ಅವರ ಮೇಲೆ ಒತ್ತಡ ಹೇರುವ ಬದಲು ಕಾರಣ ತಿಳಿಯಿರಿ. ನಿಮ್ಮ ಮಗ ಅಥವಾ ಮಗಳು ಏಕೆ ಮದುವೆಯಾಗಲು ಬಯಸುವುದಿಲ್ಲ ಎಂಬುದನ್ನು ತಿಳಿದುಕೊಂಡರೆ ಅವರ ಸಮಸ್ಯೆಗಳನ್ನು ಪರಿಹರಿಸಬಹುದು. ಕೆಲವರು ಮದುವೆಯಾಗುವ ಇಚ್ಛೆ ಹೊಂದಿರುತ್ತಾರೆ. ಆದ್ರೆ ವೃತ್ತಿ ಬದುಕಿಗೆ (Career) ಗಮನ ಹರಿಸಲು ಬಯಸುವ ಕಾರಣ ಮದುವೆಯನ್ನು ಮುಂದೂಡಲು ಬಯಸ್ತಾರೆ.

ನಂಗೆ ಸಿಟ್ ಮಾತ್ರ ತಡೆಯಲಾಗೋಲ್ಲ ಅನ್ನೋರು ಇದನ್ನು ಓದಿ

ಸರಿಯಾದ ಸಂಗಾತಿಗಾಗಿ ಹುಡುಕಾಟ : ಪ್ರತಿಯೊಬ್ಬ ಹುಡುಗ ಅಥವಾ ಹುಡುಗಿ ಮದುವೆಗೆ ಸಂಬಂಧಿಸಿದಂತೆ ತನ್ನದೇ ಆದ ಅಭಿಪ್ರಾಯಗಳನ್ನು ಮತ್ತು ಆದ್ಯತೆಗಳನ್ನು ಹೊಂದಿರುತ್ತಾರೆ. ನಿಮ್ಮ ಮಗ ಅಥವಾ ಮಗಳು ಮದುವೆಯಾಗಲು ನಿರಾಕರಿಸಲು ಇದೂ ಕಾರಣವಿರಬಹುದು. ನೀವು ಹೇಳಿದ ಸಂಬಂಧವನ್ನು ಅವರು ಇಷ್ಟಪಡದಿರಬಹುದು ಅಥವಾ ಅವರು ಅರೇಂಜ್ಡ್ ಮ್ಯಾರೇಜ್‌ಗೆ ಸಿದ್ಧವಿಲ್ಲದೆ ಇರಬಹುದು. ಜೀವನ ಸಂಗಾತಿಗಾಗಿ ಕೆಲವು ಕನಸುಗಳನ್ನು ಹೊಂದಿರಬಹುದು. ಇದನ್ನು ಪಾಲಕರಾದ ನೀವು ಮೊದಲು ಅರ್ಥ ಮಾಡಿಕೊಳ್ಳಬೇಕು.

ಪ್ರೀತಿ : ಕೆಲ ಬಾರಿ ಮಕ್ಕಳು ಪ್ರೀತಿಯಲ್ಲಿರುತ್ತಾರೆ. ಈ ವಿಷ್ಯವನ್ನು ಪೋಷಕರು ಅಥವಾ ಕುಟುಂಬ ಸದಸ್ಯರಿಂದ ಮುಚ್ಚಿಡುತ್ತಾರೆ. ಅವರ ಆದ್ಯತೆಗಳು ಅಥವಾ ಭಾವನೆಗಳನ್ನು ನೀವು ಅರ್ಥಮಾಡಿಕೊಂಡಿದ್ದೀರಿ ಎಂಬ ಭಾವನೆ ಅವರಿಗೆ ಬರಬೇಕು. ಆಗ ಅವರು ಈ ವಿಷ್ಯವನ್ನು ನಿಮಗೆ ಹೇಳ್ತಾರೆ. ಅವರ ಪ್ರೀತಿಗೆ ನೀವು ಬೆಲೆ ನೀಡಬೇಕಾಗುತ್ತದೆ. ಪ್ರೀತಿಸಿದ ವ್ಯಕ್ತಿಯ ಪೂರ್ವಾಪರ ನೋಡಿ ಮದುವೆಗೆ ಮುಂದಾಗಬೇಕಾಗುತ್ತದೆ.

ಲಿವ್ಇನ್‌ ರಿಲೇಷನ್‌ಶಿಪ್‌ನಲ್ಲಿ ಜನಿಸಿದ ಮಗುವಿಗೂ ತಂದೆಯ ಆಸ್ತಿ ಮೇಲೆ ಸಂಪೂರ್ಣ ಹಕ್ಕು: ಸುಪ್ರೀಂ

ಮಕ್ಕಳಿಗೆ ಸಮಯ ನೀಡಿ : ಮದುವೆಗೆ ಮನಸ್ಸಿಲ್ಲದೆ ಹೋದ್ರೂ ಒತ್ತಡ ಹೇರಿ ಪಾಲಕರು ಮಕ್ಕಳ ಮದುವೆ ಮಾಡ್ತಾರೆ. ಮದುವೆ ನಂತ್ರ ಯಾವುದೇ ಸಮಸ್ಯೆ ಬಂದ್ರೂ ಮಕ್ಕಳು ಇದನ್ನು ಪಾಲಕರ ಮೇಲೆ ಹಾಕ್ತಾರೆ. ಹಾಗಾಗಿ ಮಗ ಅಥವಾ ಮಗಳನ್ನು ಮದುವೆಯಾಗುವಂತೆ ಒತ್ತಾಯಿಸುವ ಬದಲು ಅವರಿಗೆ ಸಮಯ ನೀಡಿ. ಅವರ ಸಮಸ್ಯೆ ಅಥವಾ ಕಾರಣವನ್ನು ತಿಳಿದುಕೊಂಡು ಅದನ್ನು ಪರಿಹರಿಸಿ. ಇಲ್ಲದಿದ್ದರೆ, ಅವರಿಗೆ ಕೆಲವು ದಿನಗಳನ್ನು ನೀಡಿ. ಮದುವೆ ಬಗ್ಗೆ ಗಂಭೀರವಾಗಿ ಯೋಚಿಸಲು ಅವರಿಗೆ ಅವಕಾಶ ನೀಡಿ. ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ನೀವು ಇಷ್ಟಪಡುವ ಜೀವನ ಸಂಗಾತಿಯೊಂದಿಗೆ ಮಗ ಅಥವಾ ಮಗಳನ್ನು ಪರಿಚಯಿಸಿ. ಅವರಿಬ್ಬರ ಮಾತುಕತೆ ನಂತ್ರ ಮಗ ಅಥವಾ ಮಗಳ ಮದುವೆ ಬಗೆಗಿನ ನಿರ್ಧಾರ ಬದಲಾಗಬಹುದು. ಮಕ್ಕಳು ಮದುವೆಯಾಗಲು ಸಿದ್ಧವಾಗಬಹುದು.