ಒಂದೇ ಬಾರಿ ಇಬ್ರು ಹುಡುಗ್ರ ಪ್ರೀತಿಗೆ ಬಿದ್ರೆ ಏನಪ್ಪಾ ಮಾಡೋದು?
ಪ್ರೀತಿ ಹೇಳಿ - ಕೇಳಿ ಬರುವಂತಹದ್ದಲ್ಲ ನಿಜ. ಆದ್ರೆ ಒಂದೇ ಬಾರಿ ಇಬ್ಬಿಬ್ಬರನ್ನು ಮನಸ್ಸು ಬಯಸಿದ್ರೆ ಕಷ್ಟ. ಇಬ್ಬರಿಗೆ ದ್ರೋಹ ಬಗೆದು ಪ್ರೀತಿ ನಾಟಕವಾಡೋದು ಕಷ್ಟ. ಹಾಗಿರುವಾಗ ದೃಢ ನಿರ್ಧಾರಕ್ಕೆ ಬರ್ಲೇಬೇಕು.
ಪ್ರೀತಿ ಒಂದೇ ಬಾರಿ ಆಗೋದು, ಈ ಡೈಲಾಗನ್ನು ನಾವು ಸಿನಿಮಾಗಳಲ್ಲಿ ಕೇಳಿರ್ತೇವೆ. ಬಾಲಿವುಡ್ ಸ್ಟಾರ್ ಶಾರುಕ್ ಖಾನ್ ಪ್ರಸಿದ್ಧ ಡೈಲಾಗ್ ನಲ್ಲಿ ಇದೂ ಒಂದು. ಶಾರುಖ್ ಖಾನ್ `ಪ್ಯಾರ್ ಏಕ್ ಬಾರ್ ಹೀ ಹೋತಾ ಹೈ’ ಎಂದು ಕುಚ್ ಕುಚ್ ಹೋತಾ ಹೈ ಚಿತ್ರದಲ್ಲಿ ಹೇಳ್ತಾರೆ. ಆದ್ರೆ ಅದೇ ಸಿನಿಮಾದಲ್ಲಿ ಶಾರುಕ್ ಎರಡು ಬಾರಿ ಪ್ರೀತಿಗೆ ಬೀಳ್ತಾರೆ. ಮೊದಲು ರಾಣಿ ಮುಖರ್ಜಿ ಮದುವೆಯಾದ್ರೆ ನಂತ್ರ ಕಾಜೋಲ್ ಮದುವೆಯಾಗ್ತಾರೆ.
ಎರಡು ಬಾರಿ ಪ್ರೀತಿ (Love) ಯಲ್ಲಿ ಬೀಳೋದು ಇತ್ತೀಚಿನ ದಿನಗಳಲ್ಲಿ ಹೊಸತಲ್ಲ. ಡೇಟಿಂಗ್ (Dating) ಅಪ್ಲಿಕೇಷನ್ ಮೂಲಕ ಮೂರ್ನಾಲ್ಕು ಸಂಗಾತಿ ಹೊಂದುವವರಿದ್ದಾರೆ. ಒಂದು ಬ್ರೇಕ್ ಅಪ್ (Break Up) ಆದ್ಮೇಲೆ ಇನ್ನೊಬ್ಬರ ಪ್ರೀತಿಗೆ ಬೀಳೋದು ಸಹಜ. ಆದ್ರೆ ಒಂದೇ ಬಾರಿ ಇಬ್ಬರನ್ನು ಪ್ರೀತಿಸೋರಿದ್ದಾರೆ. ಒಬ್ಬ ಸಂಗಾತಿ ಮೇಲೆ ಅಪಾರ ಪ್ರೀತಿ ಇರುತ್ತದೆ. ಅವರನ್ನು ಬಿಟ್ಟಿರಲು ಸಾಧ್ಯವಿಲ್ಲ ಎನ್ನುವಷ್ಟು ಪ್ರೀತಿ ಹೊಂದಿರುತ್ತಾರೆ. ಆದ್ರೆ ಅದೇ ಸಮಯದಲ್ಲಿ ಇನ್ನೊಬ್ಬರ ಮೇಲೂ ಪ್ರೀತಿ ಚಿಗುರಿರುತ್ತದೆ. ಆಗ ಜನರು ಗೊಂದಲಕ್ಕೆ ಬೀಳ್ತಾರೆ. ಯಾವುದು ಪ್ರೀತಿ, ಯಾವುದು ಆಕರ್ಷಣೆ (Attraction) ಎಂಬ ಗೊಂದಲ ಅವರನ್ನು ಕಾಡುತ್ತದೆ. ನಾವಿಂದು ಒಂದೇ ಬಾರಿ ಇಬ್ಬರು ಹುಡುಗರ ಪ್ರೀತಿಯಲ್ಲಿರುವ ಹುಡುಗಿ ಏನು ಮಾಡ್ಬೇಕು ಎಂಬುದನ್ನು ಹೇಳ್ತೆವೆ.
ಪ್ರೀತಿ ಗುರುತಿಸೋದು ಮುಖ್ಯ : ಎರಡು ಹುಡುಗರನ್ನು ಒಟ್ಟಿಗೆ ಪ್ರೀತಿಸುವಾಗ ಮುಂದೇನು ಮಾಡ್ಬೇಕು ಎಂಬ ಚಿಂತೆ ಹುಡುಗಿಯರನ್ನು ಕಾಡುತ್ತದೆ. ಯಾರನ್ನು ಆಯ್ಕೆ ಮಾಡಿಕೊಳ್ಳೋದು ಎಂಬ ಪ್ರಶ್ನೆ ಮೂಡುತ್ತದೆ. ಈ ಸಂದರ್ಭದಲ್ಲಿ ಯಾವುದು ಪ್ರೀತಿ ಎಂದು ನೀವು ಪತ್ತೆ ಹಚ್ಚುವುದು ಅನಿವಾರ್ಯ. ಮೊದಲ, ನೀವು ಯಾರನ್ನು ನಿಜವಾಗ್ಲೂ ಪ್ರೀತಿ ಮಾಡ್ತಿದ್ದೀರಿ ಹಾಗೆ ಯಾರ ಆಕರ್ಷಣೆಗೆ ಒಳಗಾಗಿದ್ದೀರಿ ಎಂಬುದನ್ನು ಪತ್ತೆ ಮಾಡ್ಬೇಕು. ಪ್ರೀತಿ ಹಾಗೂ ಆಕರ್ಷಣೆಗೆ ದೊಡ್ಡ ವ್ಯತ್ಯಾಸ (Difference) ವಿಲ್ಲ. ಹಾಗಾಗಿ ಅದನ್ನು ಪತ್ತೆ ಮಾಡುವುದು ಸ್ವಲ್ಪ ಕಷ್ಟವಾದ್ರೂ ಈ ಪರಿಸ್ಥಿತಿಯಲ್ಲಿ ನಿಮಗೆ ಇದು ಅನಿವಾರ್ಯ.
CHINESE WEDDING: ವಧುವಿನ ಅನುಮತಿ ಇಲ್ಲದೇ ವರ ಟಚ್ ಮಾಡೋ ಹಾಗಿಲ್ಲ!
ಭವಿಷ್ಯ(Future) ನಿಮ್ಮ ಕೈನಲ್ಲಿದೆ : ಒಂದೇ ಬಾರಿ ಇಬ್ಬರ ಮೇಲೆ ಪ್ರೀತಿಯೋ ಅಥವಾ ಆಕರ್ಷಣೆಯೋ ನಿಮಗೆ ಆಗಿರಬಹುದು. ಆದ್ರೆ ಒಂದೇ ಬಾರಿ ಇಬ್ಬರ ಜೊತೆ ಡೇಟಿಂಗ್ ಒಳ್ಳೆಯದಲ್ಲ. ಇದು ಇಬ್ಬರಿಗೂ ಮೋಸ (Cheating) ಮಾಡಿದಂತೆ. ಹಾಗಾಗಿ ನೀವು ಒಬ್ಬರ ಜೊತೆ ಮಾತ್ರ ಡೇಟಿಂಗ್ ಮಾಡಬಹುದು. ಯಾರ ಜೊತೆ ಜೀವನ ನಡೆಸಿದ್ರೆ ನಿಮ್ಮ ಭವಿಷ್ಯ ಚೆನ್ನಾಗಿರುತ್ತದೆ ಎಂಬುದನ್ನು ನೀವು ನಿರ್ಧರಿಸಬೇಕು. ಯಾರು ನಿಮ್ಮನ್ನು ಬಿಟ್ಟು ಹೋದ್ರೆ ನಿಮಗೆ ಬೇಸರವಾಗೋದಿಲ್ಲ ಎಂಬುದನ್ನು ಗುರುತಿಸಿ ನಂತ್ರ ಹೆಜ್ಜೆ ಇಡಿ.
ಭಾವನಾತ್ಮಕ ಬಾಂಧವ್ಯ (Emotional Bonding) ಗುರುತಿಸಿ : ಯಾರೊಂದಿಗೆ ಹೆಚ್ಚು ಭಾವನಾತ್ಮಕ ಬಾಂಧವ್ಯವಿದೆ ಎಂಬುದನ್ನು ಅರ್ಥಮಾಡಿಕೊಳ್ಳಿ. ನಿಮ್ಮ ಭಾವನೆಗಳಿಗೆ ಸ್ಪಂದಿಸುವ ವ್ಯಕ್ತಿಯನ್ನು ನೀವು ಆರಿಸಿಕೊಳ್ಳಿ. ನಿಮಗೆ ಹೆಚ್ಚು ಹತ್ತಿರವೆನ್ನಿಸುವ, ನಿಮ್ಮ ಮೇಲೆ ಕಾಳಜಿ ತೋರಿಸುವ, ನಿಮ್ಮನ್ನು ಗೌರವಿಸುವ ಹಾಗೂ ಯಾರ ಜೊತೆಗಿದ್ದರೆ ಹೆಚ್ಚು ಸಂತೋಷ ಸಿಗುತ್ತೆ ಅವರನ್ನು ನೀವು ಆಯ್ಕೆ ಮಾಡಿಕೊಳ್ಳಬೇಕು.
ಹಿರಿಯ ವ್ಯಕ್ತಿ ಜೊತೆ ಪ್ರೀತಿಯಲ್ಲಿ ಬಿದ್ದವಳಿಗೆ ಕಾಡುತ್ತಿದೆ ಈ ಸಮಸ್ಯೆ!
ಮಾತುಕತೆ (Chit Chat) ಇಲ್ಲಿ ಮುಖ್ಯ : ನೀವು ಇಬ್ಬರ ಜೊತೆ ಸ್ನೇಹ ಹೊಂದಿದ್ದರೆ ಅವರ ಮುಂದೆ ನೀವು ಇಬ್ಬರನ್ನೂ ಪ್ರೀತಿಸುತ್ತಿದ್ದೀರಿ ಎಂಬ ಸತ್ಯ (True) ಹೇಳಿ. ತಪ್ಪೊಪ್ಪಿಗೆ ಕಷ್ಟವಾಗಬಹುದು, ಆದರೆ ಅದರ ಪರಿಣಾಮಗಳು ಭವಿಷ್ಯದಲ್ಲಿ ನಿಮಗೆ ನೆರವಾಗುತ್ತದೆ. ಸಂಗಾತಿ ನಿಮ್ಮನ್ನು ಪ್ರೀತಿಸುತ್ತಿದ್ದರೆ ನಿಮ್ಮನ್ನು ಅರ್ಥಮಾಡಿಕೊಳ್ಳುತ್ತಾರೆ. ನಿಮ್ಮ ಮುಂದಿನ ನಿರ್ಧಾರಕ್ಕೆ ಅವರು ಬದ್ಧರಾಗಿರ್ತಾರೆ. ನಿರ್ಣಯ ತೆಗೆದುಕೊಳ್ಳಲು ಅವರು ನೆರವಾಗ್ತಾರೆ.