Asianet Suvarna News Asianet Suvarna News

ಸಲಿಂಗಕಾಮದ ಬಗ್ಗೆ ಸದ್ಗುರು ಏನ್ ಹೇಳ್ತಾರೆ ಕೇಳಿದ್ದೀರಾ?

''ನಮ್ಮ ವಿವಾಹ ನಂತರದ ಸೆಕ್ಸ್ ಬಗ್ಗೆ ನಮ್ಮ ಮನೆಯಲ್ಲಿ ಯಾವ ಪೋಷಕರಿಗೂ ಯಾವುದೇ ತಕರಾರು ಇಲ್ಲ. ಆದ್ರೆ ನಮ್ಮ ಗೆಳೆಯ/ ಗೆಳತಿಯರ ನಡುವೆ ಸಲಿಂಗಕಾಮ ಇದೆ ಅಂದ್ರೆ ಬೆಚ್ಚಿಬೀಳ್ತಾರೆ. ಅದು ಧರ್ಮಕ್ಕೆ ವಿರುದ್ಧ ಅಂತಾರೆ. ಹಾಗಾದ್ರೆ ಸಲಿಂಗಕಾಮದ ಬಗ್ಗೆ ನಿಮ್ಮ ಅಭಿಪ್ರಾಯ ಏನು?'' ಎಂಬ ವಿದ್ಯಾರ್ಥಿನಿಯೊಬ್ಬಳ ಪ್ರಶ್ನೆಗೆ ಸದ್ಗುರು ಜಗ್ಗಿ ವಾಸುದೇವ್ ಅವರು ಉತ್ತರಿಸಿದ್ದು ಹೀಗೆ.

 

what sadguru jaggi vasudev tells about homosexuality
Author
First Published Oct 31, 2022, 10:57 AM IST

ಸರಕಾರ ಪ್ರಜೆಗಳ ಬೆಡ್‌ರೂಮ್ (bedroom) ಒಳಗೆ ಇಣುಕಿ ನೋಡೋ ಅವಶ್ಯಕತೆ ಇಲ್ಲ! ಹಾಗಂತಾರೆ ಸದ್ಗುರು ಜಗ್ಗಿ ವಾಸುದೇವ್ (Sadguru jaggi vasudev) ಅವರು.

ಸಲಿಂಗಕಾಮ (Homosexuality), ಸೆಕ್ಷನ್ 377 (section 377) ಇದರ ಬಗೆಗೆ ಸರಕಾರ ಕಾನೂನು ಮಾಡಿದ ಬಳಿಕ ಎಲ್ಲರೂ ಅದರ ಪರವಾಗಿ ಅಥವಾ ವಿರುದ್ಧವಾಗಿ ಮಾತಾಡ್ತಿದಾರೆ. ಆದ್ರೆ ನಾವು ಅದರ ಪರವಾಗಿ ಅಥವಾ ವಿರುದ್ಧವಾಗಿ ಮಾತಾಡುವುದು ಬೇಡ. ಅದು ಇದ್ದ ಹಾಗೇ ನೋಡೋಣ. ನಾವು ಲೈಂಗಿಕತೆ (sexuality) ಅಂದರೆ ಅರ್ಥ ಮಾಡಿಕೊಳ್ಬೇಕಾದ್ದು ಏನೆಂದರೆ, ಅದು ಮನುಷ್ಯ ಸಹಜವಾದದ್ದು. ಅಥವಾ ಪ್ರಾಣಿ ಸಹಜವಾದದ್ದು ಅನ್ನೋಣ. ಅಥವಾ ಪ್ರಕೃತಿ ಸಹಜವಾದದ್ದು. ಯಾಕೆಂದರೆ ಪ್ರಕೃತಿ ನಮ್ಮಲ್ಲಿ ಕಾಮವನ್ನು ಇಟ್ಟಿದೆ. ಯಾಕೆಂದರೆ ಪ್ರಕೃತಿಗೆ ಈ ಮಾನವ ಜನಾಂಗ ಮುಂದುವರಿಯಬೇಕಿದೆ. ಎಲ್ಲ ಪ್ರಾಣಿಗಳ ವಿಷಯದಲ್ಲೂ ಹೀಗೇ. ಅವುಗಳ ಸಂತತಿ ಮುಂದುವರಿಯುವುದಕ್ಕಾಗಿ ಸೆಕ್ಸನ್ನು ಪ್ರಕೃತಿ ಅವುಗಳಲ್ಲಿ ಇಟ್ಟಿದೆ.

ಆದರೆ ಮಾನವನಿಗೆ ಮೆದುಳು ಜಾಸ್ತಿ ಇದೆ. ಚಿಂತನೆ ಜಾಸ್ತಿ ಇದೆ. ಹೀಗಾಗಿ ಮನುಷ್ಯ ಸೆಕ್ಸ್‌ನಲ್ಲಿರುವ ಪ್ರಾಕೃತಿಕ ಸಂತಾನೋತ್ಪತ್ತಿ ಅಂಶಕ್ಕಿಂತಲೂ ಅದರ ಸುಖದ ಅಂಶದ ಕಡೆಗೇ ಹೆಚ್ಚು ಒತ್ತು ಕೊಡುತ್ತಿದ್ದಾನೆ. ಪ್ರಕೃತಿ ಸೆಕ್ಸ್‌ನಲ್ಲಿ ಅಷ್ಟೊಂದು ಸುಖವನ್ನು ಯಾಕೆ ಇಟ್ಟಿದೆ? ಯಾಕೆಂದರೆ ನಾವು ಸೆಕ್ಸ್‌ನಲ್ಲಿ ತೊಡಗಬೇಕು ಎಂದೇ ಆಗಿದೆ. ಸೆಕ್ಸ್‌ನಲ್ಲಿ ಸುಖವಿಲ್ಲದಿದ್ದರೆ ನಮ್ಮ ತಂದೆ ತಾಯಂದಿರು ಅದರಲ್ಲಿ ತೊಡಗುತ್ತಲೂ ಇರಲಿಲ್ಲ, ನಾವು ಹುಟ್ಟುತ್ತಲೂ ಇರಲಿಲ್ಲ. ಇದನ್ನು ನಾವು ಮುಕ್ತವಾಗಿ ಒಪ್ಪಿಕೊಳ್ಳಬೇಕು. ಅದರಲ್ಲಿ ಮುಜುಗರ ಬೇಕಿಲ್ಲ.

ಪ್ರತಿ ಮನುಷ್ಯನಿಗೂ ಲೈಂಗಿಕ ಒಲವಿದೆ. ಕೆಲವರಲ್ಲಿ ಸೆಕ್ಸ್‌ನ ಸಂತಾನೋತ್ಪತ್ತಿ ಗುಣದ ಬಗ್ಗೆ ಅಷ್ಟೊಂದು ಒಲವಿಲ್ಲದೆ ಇರಬಹುದು. ಅದರ ಸುಖದ ಅಂಶದ ಕಡೆಗೆ ಮಾತ್ರ ಗಮನವಿರಬಹುದು. ಅದು ಅವರವರ ವೈಯಕ್ತಿಕ ಆಯ್ಕೆ. ನಾವು ಅದನ್ನು ಗೌರವಿಸಬೇಕು. ಯಾಕೆಂದರೆ ಪ್ರತಿಯೊಬ್ಬನಿಗೂ ಅವನ ದೇಹದ ಬಗ್ಗೆ ಸಂಪೂರ್ಣ ಸ್ವಾತಂತ್ರ್ಯವಿದೆ. ನಿಮ್ಮ ದೇಹದ ಮೇಲೆ ನಾನಾಗಲೀ ಸರ್ಕಾರವಾಗಲೀ ಅಧಿಕಾರ ಚಲಾಯಿಸಲು ಸಾಧ್ಯವಿಲ್ಲ. ತನ್ನ ದೇಹದ ಕಾಯಿಲೆಗಳಿಗೆ ವ್ಯಕ್ತಿ ಹೇಗೆ ಬಾಧ್ಯನೋ ಹಾಗೇ ತನ್ನ ದೇಹದ ಸುಖಗಳಿಗೂ ಅವನೇ ಬಾಧ್ಯನು.

ಲೈಂಗಿಕ ಕ್ರಿಯೆಯ ನಂತರ ವಿಪರೀತ ತಲೆನೋವು, ಇದಕ್ಕೇನು ಕಾರಣ ?

ವ್ಯಕ್ತಿಯೊಬ್ಬ ತನಗೂ ಇತರರಿಗೂ ಯಾವುದೇ ಹಾನಿ ಇಲ್ಲದಂತೆ ವೈಯಕ್ತಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳುತ್ತಾನೆ ಎಂದಾದರೆ ನಾವು ಅದನ್ನು ಪ್ರಶ್ನಿಸಬೇಕಿಲ್ಲ. ನೀವು ನಿಮ್ಮ ಮೂಗನ್ನು ಕತ್ತರಿಸಿಕೊಳ್ತೀರಿ ಎಂದಾದರೆ ಪೊಲೀಸರು ಮಧ್ಯ ಪ್ರವೇಶಿಸಬೇಕಾಗುತ್ತದೆ. ಹಾಗೇ ನಿಮ್ಮ ಸೆಕ್ಸ್ ಸುಖಕ್ಕಾಗಿ ಅನ್ಯರನ್ನು ಪೀಡಿಸಿದರೆ ಆಗಲೂ ಕಾನೂನು ಮಧ್ಯ ಪ್ರವೇಶಿಸಬೇಕಾಗುತ್ತದೆ. ಆದರೆ ತನ್ನ ಸುಖಕ್ಕೆ ಯಾರಿಗೂ ಯಾವುದೇ ಹಾನಿಯನ್ನೂ ಮಾಡದವರ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲು ನಮಗೆ ಏನು ಅಧಿಕಾರವಿದೆ? ಏನೂ ಇಲ್ಲ. ಸರ್ಕಾರಕ್ಕೆ ಪ್ರಜೆಗಳ ಬೆಡ್‌ರೂಂನಲ್ಲಿ ಮೂಗು ತೂರಿಸಲು ಅಧಿಕಾರವಿದೆಯೇ? ಇಲ್ಲ!

ಹೀಗಾಗಿ, ನೀವು ಮಾಡಬೇಕಾದ್ದು ಇಷ್ಟೆ. ನಿಮ್ಮ ಹೆತ್ತವರು ನಿಮ್ಮನ್ನು ಸಲಿಂಗಕಾಮದಿಂದ ದೂರ ಸರಿಸಲು ಭಾವನಾತ್ಮಕವಾಗಿ ಯತ್ನಿಸಬಹುದು, ಆಧಾರ್ಮಿಕ ಎಂದು ಹೇಳಬಹುದು. ಅವರ ಮಾತುಗಳನ್ನು ಆಲಿಸಿ, ನಿಮಗದು ಸರಿ ಎನ್ನಿಸಿದರೆ ಆಚರಿಸಿ. ಇಲ್ಲವೇ ಬಿಟ್ಟುಬಿಡಿ. ನಿಮ್ಮ ದೇಹದ ಮಾತನ್ನು ಕೇಳಿ. ಇದರಲ್ಲಿ ಯಾವ ತಪ್ಪೂ ಇಲ್ಲ. ಅನ್ಯರಿಗೂ ನಿಮಗೂ ಹಾನಿ ಮಾಡದ ಕಾಮಪ್ರವೃತ್ತಿಯಿಂದ ಯಾರಿಗೂ ಯಾವುದೇ ತೊಂದರೆ ಇಲ್ಲ. ಹಾಗೇ ನಾವು ಸಲಿಂಗಕಾಮಿಗಳನ್ನು ಅನ್ಯರಂತೆ ಭಾವಿಸಬೇಕಿಲ್ಲ. ಅವರನ್ನು ದೂರವಿಡುವುದು, ಶಿಕ್ಷಿಸುವುದು ಇವೆಲ್ಲ ಮಾಡಬೇಕಿಲ್ಲ. ಮತ್ತೆ ಧರ್ಮಕ್ಕೂ ಧಾರ್ಮಿಕತೆಗೂ ಸೆಕ್ಸ್‌ಗೂ ಯಾವ ಸಂಬಂಧವೂ ಇಲ್ಲ.

Sex Education: ಸಕಾಲಿಕ ಲೈಂಗಿಕ ಶಿಕ್ಷಣ ಹದಿಹರೆಯದವರಿಗೆ ಅಗತ್ಯ ಅನ್ನೋದ್ಯಾಕೆ?
 

Follow Us:
Download App:
  • android
  • ios