ಇಲ್ಲಿವೆ ಪತಿಗೆ ಸರ್ಪ್ರೈಸ್ ನೀಡುವ ಸೀಕ್ರೆಟ್ಸ್

ಆಪ್ತ ಸಂದರ್ಭದಲ್ಲಿ ಪುರುಷರು ತಮ್ಮ ಸಂಗಾತಿಯಿಂದ ಏನನ್ನು ನಿರೀಕ್ಷೆ ಮಾಡ್ತಾರೆ ಅಂತ ಇಲ್ಲಿದೆ ನೋಡಿಕೊಳ್ಳಿ...
 

What Men expect from women in Bed?

ಪತಿ ಪತ್ನಿ ನಡುವಿನ ಅತಿ ಆಪ್ತ ಸಮಯದ ಬಗ್ಗೆ ಅರಿವು ಹೊಂದಿರುವ ಹೆಚ್ಚಿನ ಗಂಡಸರು ತಮ್ಮ ಸಂಗಾತಿಯನ್ನು ಹಾಸಿಗೆಯಲ್ಲಿ ಖುಷಿಪಡಿಸಲು ಸಾಕಷ್ಟು ಪ್ರಯತ್ನ ಮಾಡುತ್ತಾರೆ. ಕೆಲವೊಮ್ಮೆ ತಮ್ಮ ಸಂಗಾತಿ ಕೂಡ ತಮಗೆ ಹೆಚ್ಚಿನ ಸುಖ ಸಿಗುವಂತೆ ನಿಯಂತ್ರಣ ತೆಗೆದುಕೊಳ್ಳಲಿ ಎಂದು ಅಪೇಕ್ಷೆ ಪಡುತ್ತಾರೆ. ಆದರೆ, ಸ್ತ್ರೀಯರು ತಾವಾಗಿಯೇ ಮುಂದುವರಿಯುವುದು ಬಹಳ ಅಪರೂಪ. ತಾವು ಸರ್ಪ್ರೈಸ್ ನೀಡಲು ಹೋಗಿ ಅದರಿಂದ ಪತಿಯು ತಮ್ಮ ಬಗ್ಗೆ ಕ್ಷುಲ್ಲಕವಾಗಿ ಯೋಚಿಸಬಹುದೇನೋ ಎಂಬ ಆತಂಕ ಅವರದಾಗಿರುತ್ತದೆ. ಹಾಗೇನೂ ಇಲ್ಲ. ತನ್ನ ಹುಡುಗಿ ಮದನ ಕಲೆಯಲ್ಲಿ ಪಳಗಿದ್ದರೆ ಪುರುಷನಿಗೆ ಅತ್ಯಂತ ಸಂತೋಷವಾಗುತ್ತದೆ. 

1. ನೀವೇ ಮುಂದಾಗಿ ಶುರು ಮಾಡಿ (First move)
ಏಕಾಂತದ ಸಮಯದಲ್ಲಿ ಹುಡುಗಿ ಮೊದಲ ನಡೆಯನ್ನು ಇಟ್ಟರೆ ಪುರುಷರು ಹೆಚ್ಚು ಸಂತೋಷಪಡುತ್ತಾರೆ. ಇದರಿಂದ ಅವರಲ್ಲಿ ತಮ್ಮ ಬಗ್ಗೆ ಆತ್ಮವಿಶ್ವಾಸವೂ ಮೂಡುತ್ತದೆ. ಪತ್ನಿ ತನ್ನನ್ನು ಬಯಸುತ್ತಾಳೆ ಎಂಬ ಖುಷಿ ಅವರದಾಗುತ್ತದೆ. ಹೀಗಾಗಿ, ಅವರನ್ನು ಸೆಳೆಯಲು ನಿಮಗೆ ಗೊತ್ತಿರುವ ಇಲ್ಲವೇ ಎಲ್ಲೋ ನೋಡಿ ಕಲಿತಿರುವ ತಂತ್ರಗಳ ಪ್ರಯೋಗಿಸಿ. ಇದರಲ್ಲೇ ಅವರಿಗೆ ಮುಂದಿನ ವಿಷಯಗಳ ಬಗ್ಗೆ ಕುತೂಹಲ ಮೂಡುತ್ತದೆ. 

2. ರೊಮ್ಯಾಂಟಿಂಕ್ ಮಾತುಗಳು
ಗಂಡಸರು ಪೋಲಿ ಮಾತಾಡುವುದು ಸಹಜ. ಮಹಿಳೆಯರು ಹಾಗೆ ಮಾತಾಡಬಾರದು ಎಂದು ಕೆಲವರು ಭಾವಿಸಿರುತ್ತಾರೆ. ಆದರೆ ಪತಿ ಪತ್ನಿಯ ನಡುವೆ ಅಂಥ ಯಾವುದೇ ಮುಜುಗರಕ್ಕೂ ಅವಕಾಶವಿರಬಾರದು. ಆಪ್ತ ಕ್ಷಣಗಳಲ್ಲಿ ನೀವು ಖಂಡಿತಾ ಅಂಥ ಸ್ವಾತಂತ್ರ್ಯ ತೆಗೆದುಕೊಳ್ಳಬೇಕು. ಆತ ಅದನ್ನು ಖಂಡಿತ ಇಷ್ಟಪಡುತ್ತಾನೆ. ಪ್ರಚೋದನಕಾರಿಯಾದ, ಪೋಲಿಯಾದ ವಿಷಯವನ್ನು ಮಧ್ಯೆ ಆಡಿ ನೋಡಿ, ಅವನ ಅಚ್ಚರಿ, ಸಂತೋಷಕ್ಕೆ ಕಾರಣರಾಗಿ. 

Self Marriage Trend: ನನ್ನನ್ನೇ ನಾನು ಮದುವೆಯಾದೆ ! ಸೆಲ್ಫ್ ಮ್ಯಾರೇಜ್ ಟ್ರೆಂಡ್ ಬಗ್ಗೆ ಗೊತ್ತಾ ?

3. ನೀವೇ ಕಂಟ್ರೋಲ್ ಮಾಡಿ 
ಹೌದು, ಪುರುಷ ಹಾಸಿಗೆಯಲ್ಲಿ ಹಿಡಿತ ಸಾಧಿಸಲು ಇಷ್ಟಪಡುತ್ತಾನೆ. ಆದರೆ ನೀವು ಮುಂದಾಳತ್ವ ವಹಿಸಿದರೆ ಏನಾಗುತ್ತದೆ ಎಂದು ಎಂದಾದರೂ ಯೋಚಿಸಿದ್ದೀರಾ? ಅದು ನಿಮ್ಮ ಗಂಡನನ್ನು ಹೆಚ್ಚು ಸಂತೋಷಪಡಿಸುತ್ತದೆ. ಹಾಸಿಗೆಯ ಮೇಲೆ ಪ್ರಾಬಲ್ಯ ಸಾಧಿಸುವ ಮಹಿಳೆಗಿಂತ ಹಾಟ್ ಹಾಟ್ ಬೇರೇನೂ ಇಲ್ಲ. ಜಸ್ಟ್ ನೀವೇ ಆತನನ್ನು ಹಾಸಿಗೆಗೆ ತಳ್ಳಿ, ಇಂದು ನಿಮ್ಮದೇ ಹವಾ ಎಂದು ಹೇಳಿ ಮುಂದುವರಿಯಿರಿ. 

4. ಚಕಿತಗೊಳಿಸಿ 
ಲೈಂಗಿಕತೆಯ ವಿಷಯಕ್ಕೆ ಬಂದಾಗ ಪುರುಷರೂ ನಿಮ್ಮಂತೆಯೇ ಆಶ್ಚರ್ಯಚಕಿತಗೊಳಿಸುವ ಅಂಶಗಳನ್ನು ಪ್ರೀತಿಸುತ್ತಾರೆ. ಅವರು ನಿರೀಕ್ಷಿಸಿರದಂಥ ಏನೆಲ್ಲವನ್ನು ಮಾಡಬಹುದೋ ಅವುಗಳಲ್ಲಿ ಒಮ್ಮೊಮ್ಮೆ ಒಂದನ್ನು ಹೊರ ಹಾಕಿ ಅಚ್ಚರಿಗೊಳಿಸಿ. ಇದರಿಂದ ಅವನು ಎಂದಿಗಿಂತಲೂ ಹೆಚ್ಚಾಗಿ ನಿಮಗಾಗಿ ಹೇಗೆ ಹಂಬಲಿಸಲು ಪ್ರಾರಂಭಿಸುತ್ತಾನೆ ಎಂಬುದನ್ನು ನೋಡಿ. 

Sex Life : ಲೈಂಗಿಕ ಜೀವನದ ಪ್ರಯೋಜನ ತಿಳಿದ್ರೆ ಅಚ್ಚರಿ ಪಡುತ್ತೀರಿ!

5. ಪ್ರೋತ್ಸಾಹಿಸಿ
ಪುರುಷರು ಮಂಚದಲ್ಲಿ ಮಾಡುವ ಹೊಸ ಸಾಹಸಗಳನ್ನು ಪ್ರೋತ್ಸಾಹಿಸುವುದು ತುಂಬಾ ಮುಖ್ಯ. ಮದುವೆಯಾದ ಹೊಸದರಲ್ಲಿ ಹಾಗೂ ಮಧ್ಯವಯಸ್ಸಿನ ನಂತರ, ಹೊಸ ಲೈಂಗಿಕ ಸಾಹಸಗಳನ್ನು ಮಾಡಲು ಗಂಡಸು ಮುಂದಾಗುತ್ತಾನೆ. ಆಗ ಆತನಿಗೆ ಸೂಕ್ತ ಪ್ರೋತ್ಸಾಹ ಸಿಗದೇ ಹೋದರೆ ನಿರುತ್ಸಾಹಿಯಾಗುತ್ತಾನೆ. ಪುರುಷ ಮಾಡುವ ಪ್ರತಿಯೊಂದು ಹೊಸಚಲನೆಗೆ ಮಹಿಳೆ ಪೂರಕವಾಗಿ, ಪ್ರೀತಿಯಿಂದ ಸ್ಪಂದಿಸಿದರೆ ಅದು ಮತ್ತೊಂದು ಮಧುಚಂದ್ರವೇ ಆಗುತ್ತದೆ. 

6. ಆರಂಭದ ಆಟ
ಆರಂಭದ ಆಟ ಸ್ತ್ರೀಪುರಷರಿಬ್ಬರಿಗೂ ಇಷ್ಟ. ಪುರುಷರು ಕೂಡಾ ನಿಧಾನ ಮತ್ತು ಮಾದಕ ಮೂವ್‌ಮೆಂಟ್‌ಗಳನ್ನು ಪ್ರೀತಿಸುತ್ತಾರೆ. ಮುಂದಿನ ಬಾರಿ ಅವನಿಗೆ ಸಾಕಷ್ಟು ಫೋರ್‌ಪ್ಲೇ ನೀಡಿ. 

Relationship Tips: ನೀವು ಹೀಗಿದ್ದರೆ ಗಂಡ ಬೇರೆ ಹೆಣ್ಣನ್ನುಕಣ್ಣೆತ್ತಿ ಸಹ ನೋಡಲ್ಲ !

7. ಬೆಳಕಿರಲಿ
ನೀವು ಆತನನ್ನೀನು ಬಯಸುವುದನ್ನು, ಪ್ರೀತಿಸುವುದನ್ನು ನೋಡಲು ಅವಕಾಶ ನೀಡದಿದ್ದರೆ ಅರ್ಧಕ್ಕರ್ಧ ಸಂತೋಷ ಹಾಳು ಮಾಡಿದ ಹಾಗೆ. ಪುರುಷರು ನಿಜವಾಗಿಯೂ ದೃಶ್ಯ ಪ್ರಚೋದನೆಯನ್ನು ಪ್ರೀತಿಸುತ್ತಾರೆ. ಹಾಗಾಗಿ, ಉತ್ತಮ ಬೆಳಕಿನ ಸಂಯೋಜನೆ ಸಿದ್ಧಪಡಿಸಿಕೊಂಡು ಬೋಲ್ಡ್ ಆಗಿ ಮುಂದುವರಿಯಿರಿ.


 

Latest Videos
Follow Us:
Download App:
  • android
  • ios