Textationship : ಮೆಸೇಜ್‌ನಲ್ಲಿ ಹುಟ್ಟಿ, ಅಲ್ಲಿಯೇ ಸಾಯೋ ಪ್ರೀತಿ ಇದು!
ಜನರು ತಮಗನ್ನಿಸಿದ್ದನ್ನು ಮೆಸ್ಸೇಜ್ ನಲ್ಲಿ ಹೇಳ್ತಾರೆ. ಮಾತಿಗಿಂತ ಅದು ಬೆಸ್ಟ್ ಅಂತಾ ಭಾವಿಸ್ತಾರೆ. ಪ್ರೀತಿಯಿಂದ ಬ್ರೇಕ್ ಅಪ್ ವರೆಗೆ ಎಲ್ಲವೂ ಮೆಸ್ಸೇಜ್ ನಲ್ಲಿಯೇ ಮುಗಿದಿರುತ್ತೆ. ನೀವು ಇದ್ರಲ್ಲಿ ಸಿಕ್ಕಿರಬಹುದು ಅಲ್ವಾ?
ರಿಲೇಶನ್‌ಶಿಪ್ ಭಿನ್ನ ಭಿನ್ನವಾಗಿರುತ್ತದೆ. ಸಂಬಂಧ ಬೆಳೆಸಲು ಜನರು ಬೇರೆ ಬೇರೆ ವಿಧಾನಗಳನ್ನು ಕೂಡ ಬಳಸ್ತಾರೆ. ರಿಲೇಶನ್‌ಶಿಪ್‌ನಲ್ಲೂ ಸಾಕಷ್ಟು ವಿಧಾನಗಳನ್ನು ನಾವು ನೋಡ್ಬಹುದು. ಕೆಲವರದ್ದು ಸೀರಿಯಸ್ ರಿಲೇಶನ್ಶಿಪ್ ಆದ್ರೆ ಮತ್ತೆ ಕೆಲವರು ತಮಾಷೆಗೆ ಸಂಬಂಧ ಬೆಳೆಸಿರ್ತಾರೆ. ಇನ್ನು ಕೆಲವರು ಫ್ರೆಂಡ್ ವಿತ್ ಬೆನಿಫಿಟ್ಸ್ ವಿಧಾನ ಅನುಸರಿಸ್ತಾರೆ. ಬೆನಿಫಿಟ್ಸ್, ಸಿಚ್ಯುವೇಷನ್ಶಿಪ್ ಕೂಡ ಇದೆ. ಈಗ ಟೆಕ್ಸ್ಟ್ ಟೇಷನ್ಶಿಪ್ ಪ್ರಸಿದ್ಧವಾಗ್ತಿದೆ. ಇದು ಒಂದು ರೀತಿಯ ಸಂಬಂಧವಾಗಿದ್ದು, ಜನರು ತಿಳಿದೋ ತಿಳಿಯದೆಯೋ ಇದ್ರಲ್ಲಿ ಬರ್ತಾರೆ. ನಾವಿಂದು ಟೆಕ್ಸ್ಟ್ ಟೇಷನ್ಶಿಪ್ ಅಂದ್ರೇನು ಎಂಬುದನ್ನು ನಿಮಗೆ ಹೇಳ್ತೇವೆ.
ಟೆಕ್ಸ್ಟ್ ಟೇಷನ್ಶಿಪ್ (Textationship) ಅಂದ್ರೇನು? : ಇದ್ರಲ್ಲಿ ಮಾತನಾಡಲು ಮೆಸ್ಸೇಜ (Message) ನ್ನು ಮುಖ್ಯ ವಿಧಾನವಾಗಿ ಬಳಸಲಾಗುತ್ತದೆ. ಜನರು ಪಠ್ಯ ಸಂದೇಶದ ಮೂಲಕ ಸ್ನೇಹಪರ, ಪ್ರಣಯ, ನಿಕಟ ಅಥವಾ ಲೈಂಗಿಕ ಸಂಬಂಧವನ್ನು ಬೆಳೆಸ್ತಾರೆ. ಭಾವನೆಗಳನ್ನು ಮಾತಿನ ಮೂಲಕ ವ್ಯಕ್ತಪಡಿಸಲು ಸಾಧ್ಯವಾಗದೆ ಹೋದಾಗ, ಯಾರ ಮುಂದೆಯೂ ಹೇಳಲು ಅವಕಾಶ ಸಿಗದೆ ಹೋದಾಗ ಜನರು ಟೆಕ್ಸ್ಟ್ ಟೇಷನ್ಶಿಪ್ ಆಯ್ಕೆ ಮಾಡಿಕೊಳ್ತಾರೆ. ಅಂದ್ರೆ ತಮ್ಮ ಭಾವನೆಗಳನ್ನು ಮೆಸ್ಸೇಜ್ ಮೂಲಕ ತಿಳಿಸುತ್ತಾರೆ. ಇದು Gen Z ಅಂದ್ರೆ ಯುವಜನರಲ್ಲಿ ಇದು ಹೆಚ್ಚಾಗಿದೆ.
Real Story : ಜೂಜಾಡಿ ಮೂರು ವರ್ಷದಲ್ಲಿ 1 ಕೋಟಿ ಕಳೆದಿದ್ದಾನೆ ಪತಿ, ಹೀಗ್ ಮಾಡಿದ್ರೆ ಸಂಸಾರದ ಕಥೆ?
ಟೆಕ್ಸ್ಟ್ ಟೇಷನ್ಶಿಪ್ ಹಳೆಯದು : ಯುವಜನತೆ ಬಳಸ್ತಿರುವ ಈ ಟೆಕ್ಸ್ಟ್ ಟೇಷನ್ಶಿಪ್ ಹೊಸದೇನಲ್ಲ. ಹಿಂದೆ ಜನರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಅಕ್ಷರದ ನೆರವು ಪಡೆಯುತ್ತಿದ್ದರು. ಪತ್ರಗಳನ್ನು ಕಳುಹಿಸುತ್ತಿದ್ದರು. ಆದ್ರೆ ಆಗ ಇದಕ್ಕೊಂದು ಹೆಸರಿರಲಿಲ್ಲ. ಆಧುನಿಕ ಡೇಟಿಂಗ್ (Dating) ಬಗ್ಗೆ ಹೇಳೋದಾದ್ರೆ, ಇಲ್ಲಿ ಜನರು ಸಂಬಂಧ (Relationship) ವನ್ನು ಮಾತನಾಡುವ ಬದಲು ಸಂದೇಶ ಕಳುಹಿಸುವ ಮೂಲಕ ಶುರು ಮಾಡ್ತಾರೆ. ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ (Application) ಗಳಲ್ಲಿ ಸಂದೇಶ ವಿಭಾಗದಲ್ಲಿ ಚಾಟ್ ಮಾಡ್ತಾರೆ. ಪ್ರೀತಿ, ಜಗಳ ಸೇರಿ ಯಾವುದೇ ವಿಷ್ಯವಿರಲಿ ಅದನ್ನು ಅವರು ಚರ್ಚೆ ಮಾಡ್ತಾರೆ.
ಕೆಲವೊಮ್ಮೆ ಇಬ್ಬರೂ ಒಟ್ಟಿಗೆ ಇರ್ತಾರೆ ಆದ್ರೆ ಮಾತಿನಲ್ಲಿ ಭಾವನೆ (Feeling) ಹಂಚಿಕೊಳ್ಳೋದಿಲ್ಲ. ಪರಸ್ಪರ ಏನು ಮಾತನಾಡ್ಬೇಕು ಎಂಬುದು ತಿಳಿಯೋದಿಲ್ಲ. ದಾಂಪತ್ಯದಲ್ಲಿ ಮಕ್ಕಳ ಮುಂದೆ ಜಗಳ, ಗಲಾಟೆ ಮಾಡೋದು ಕಷ್ಟ. ಆ ಸಂದರ್ಭದಲ್ಲಿ ಕೂಡ ದಂಪತಿ ಟೆಕ್ಸ್ಟ್ ಸಹಾಯ ಪಡೆಯುತ್ತಾರೆ. ಒಂದೇ ಮನೆಯ ಬೇರೆ ಬೇರೆ ರೂಮಿನಲ್ಲಿ ಕುಳಿತು ಸಂದೇಶದ ಮೂಲಕ ಚರ್ಚೆ, ಜಗಳ ಮಾಡೋರಿದ್ದಾರೆ. ಚಾಟ್ ಮೂಲಕವೇ ಸಂಬಂಧ ಶುರುವಾಗಿ, ಚಾಟ್ ನಲ್ಲಿಯೇ ಸಂಬಂಧ ಮುಗಿಯುವುದಿದೆ. ಬ್ರೇಕ್ ಅಪ್ ಎನ್ನುವ ಒಂದು ಪದವನ್ನು ಟೈಪ್ ಮಾಡಿ ಜನರು ಸಂಬಂಧವನ್ನು ಮುರಿದುಕೊಳ್ತಾರೆ.
ಹಳೆ ಲವ್ ಬಗ್ಗೆ ಜೀವನ ಸಂಗಾತಿ ಬಳಿ ಹೇಳಬೇಕೇ? ಬೇಡವೇ?
ಟೆಕ್ಸ್ಟ್ ಟೇಷನ್ಶಿಪ್ ಬಗ್ಗೆ ಓದಿದ ನಂತ್ರ ನೀವೂ ಯಸ್, ನನ್ನ ಲೈಫ್ ನಲ್ಲೂ ಹೀಗೆ ಆಗಿದೆ ಎನ್ನಬಹುದು. ಈಗಿನ ದಿನಗಳಲ್ಲಿ ಬಹುತೇಕರು ಈ ವಿಧಾನ ಅನುಸರಿಸುತ್ತಿದ್ದಾರೆ. ಆದ್ರೆ ಜನರಿಗೆ ಇದನ್ನು ಟೆಕ್ಸ್ಟ್ ಟೇಷನ್ಶಿಪ್ ಎಂದು ಕರೆಯುತ್ತಾರೆ ಅನ್ನೋದು ತಿಳಿದಿಲ್ಲ. ಇದು ಪ್ರೇಮಿಗಳು, ದಂಪತಿ ಮಧ್ಯೆ ಮಾತ್ರವಲ್ಲ ಸ್ನೇಹಿತರು, ಸಹೋದ್ಯೋಗಿಗಳ ಜೊತೆ ಕೂಡ ಇರುತ್ತದೆ. ಸ್ನೇಹಿತರು ತಮ್ಮ ಮಾತನ್ನು ಪಠ್ಯದ ರೂಪದಲ್ಲಿ ಹೇಳ್ತಿರುತ್ತಾರೆ.
ನೀವು ಮೆಸ್ಸೇಜ್ ನಲ್ಲಿಯೇ ಎಲ್ಲವನ್ನೂ ಮಾಡ್ತಿದ್ದರೆ, ನಿಮ್ಮಿಬ್ಬರ ಭೇಟಿಗಿಂತ ಮೆಸ್ಸೇಜ್ ನಲ್ಲಿ ಮಾತುಕತೆ ಹೆಚ್ಚಾಗಿದ್ದರೆ, ಇಬ್ಬರು ನೋವು, ಸಂತೋಷವನ್ನು ಮೆಸ್ಸೇಜ್ ನಲ್ಲಿ ಹೇಳ್ತಿದ್ದರೆ, ಎಲ್ಲ ಪ್ಲಾನ್ ಮೆಸ್ಸೇಜ್ ಮೂಲಕ ಆಗ್ತಿದ್ದರೆ, ದಿನದ ಎಲ್ಲ ವಿಷ್ಯವನ್ನು ಮೆಸ್ಸೇಜ್ ನಲ್ಲಿ ಹಂಚಿಕೊಳ್ತಿದ್ದು, ನಿಮಗೆ ಮಾತಿಗಿಂತ ಮೆಸ್ಸೇಜ್ ಮಾಡೋದು ಇಷ್ಟವಾಗ್ತಿದೆ ಎಂದ್ರೆ ನೀವು ಟೆಕ್ಸ್ಟ್ ಟೇಷನ್ಶಿಪ್ ನಲ್ಲಿದ್ದೀರಿ ಎಂದೇ ಅರ್ಥ.