ಮಕ್ಕಳನ್ನು ಒಂಟಿಯಾಗಿ ಬಿಟ್ಟು ಹೋಗುವ ಮುನ್ನ!

ಈಗಿನ ಸಂದರ್ಭದಲ್ಲಿ ಪಾಲಕರಿಬ್ಬರೂ ಕೆಲಸಕ್ಕೆ ಹೋಗುವುದು ಅನಿವಾರ್ಯ. ಮಕ್ಕಳನ್ನು ಮನೆಯಲ್ಲಿ ಬಿಟ್ಟು ಕೆಲಸಕ್ಕೆ ಹೋಗುವ ಪಾಲಕರು ಸಾಕಷ್ಟು ಮಂದಿ. ಆದ್ರೆ ಮಕ್ಕಳನ್ನು ಮನೆಯಲ್ಲಿ ಬಿಡುವ ವೇಳೆ ಪಾಲಕರು ಅನೇಕ ಸವಾಲುಗಳನ್ನು ಎದುರಿಸ್ತಾರೆ. ಮಕ್ಕಳಲ್ಲಿ ಕಾಡುವ ಭಯ ಕೂಡ ಇದ್ರಲ್ಲಿ ಒಂದು.
 

What Is Separation Anxiety Disorder In Kids parenting tips

ಪಾಲಕರ ಮಡಿಲು ಮಕ್ಕಳಿಗೆ ಅತ್ಯಂತ ಸುರಕ್ಷಿತ ಸ್ಥಳ. ತಂದೆ – ತಾಯಿ ಜೊತೆಗಿದ್ರೆ ಮಕ್ಕಳು ಆರಾಮವಾಗಿರ್ತಾರೆ. ಕೆಲ ಮಕ್ಕಳಿಗೆ ಪಾಲಕರು ಮನೆಯಿಂದ ಹೊರಗೆ ಹೋದ್ರೆ ಅಥವಾ ಬೇರೆ ಜಾಗಗಳಲ್ಲಿ ಪಾಲಕರು ಕಣ್ಣಿಗೆ ಕಾಣದೆ ಹೋದ್ರೆ ಆತಂಕವಾಗುತ್ತದೆ. ಮಕ್ಕಳು ಅಳಲು ಶುರು ಮಾಡ್ತವೆ. ಶಾಲೆಗೆ ಹೋಗುವಾಗಲೂ ಅನೇಕ ಮಕ್ಕಳು ಇದೇ ವಿಷ್ಯಕ್ಕೆ ಅಳುತ್ತವೆ. ಪಾಲಕರು ಕಚೇರಿಗೆ ಹೋಗ್ತಿದ್ದರೆ ಪ್ರತಿ ದಿನ ಅಳುವ ಮಕ್ಕಳನ್ನು ನೀವು ನೋಡಬಹುದು. ಸಪರೇಷನ್ ಎಕ್ಯಾಯಿಟಿ ಡಿಸಾರ್ಡರ್ ಸಮಸ್ಯೆ ನಿಮ್ಮ ಮಕ್ಕಳಲ್ಲೂ ಇದ್ದರೆ ಇದ್ರ ಬಗ್ಗೆ ಹೆಚ್ಚು ಚಿಂತಿಸುವ ಅಗತ್ಯವಿಲ್ಲ. ಕೆಲ ಸುಲಭ ವಿಧಾನಗಳ ಮೂಲಕ ಮಕ್ಕಳ ಸಪರೇಷನ್ ಎಕ್ಯಾಯಿಟಿ ಡಿಸಾರ್ಡರ್ ದೂರ ಮಾಡಬಹುದು.  

ತಕ್ಷಣ ವಿದಾಯ (Farewell) ಹೇಳುವುದನ್ನು ರೂಢಿಸಿಕೊಳ್ಳಿ : ಸಾಮಾನ್ಯವಾಗಿ ನಾವು ಮನೆಯಿಂದ ಹೊರಗೆ ಹೋಗ್ತಿದ್ದೇವೆ ಎಂಬುದನ್ನು ಬೆಳಿಗ್ಗೆಯಿಂದಲೇ ಮಕ್ಕಳಿ (Children) ಗೆ ಹೇಳಲು ಶುರು ಮಾಡ್ತೇವೆ. ಆಗ ಮಕ್ಕಳು ಈ ಬಗ್ಗೆ ಬಗೆ ಬಗೆಯಾಗಿ ಆಲೋಚನೆ ಮಾಡ್ತಾರೆ. ಅದ್ರ ಬದಲು ನೀವು ಗೇಟ್ ತೆಗೆದ ತಕ್ಷಣ ಅಥವಾ ಹೊರಗಿನ ಕಿಟಕಿ ಮೂಲಕ ಮಕ್ಕಳಿಗೆ ವಿದಾಯ ಹೇಳಿದ್ರೆ ಅವರಿಗೆ ಆಲೋಚನೆ ಮಾಡಲು ಸಮಯ ಸಿಗುವುದಿಲ್ಲ. ಆತಂಕಅನುಭವಿಸಲು ಸಮಯ ಸಿಗುವುದಿಲ್ಲ. ಹಾಗಾಗಿ ಹೊರಡುವ ಕ್ಷಣದಲ್ಲಿ ಮಕ್ಕಳಿಗೆ ವಿದಾಯ ಹೇಳುವುದನ್ನು ರೂಢಿ ಮಾಡಿಕೊಳ್ಳಿ.

ಕೈಗೆ ಸಿಕ್ಕಿದ್ದೆಲ್ಲ ಎಸೆಯುವ ಮಕ್ಕಳನ್ನು ಸಂಭಾಳಿಸುವುದು ಹೇಗೆ?

ಮಕ್ಕಳಿಗೆ ದೂರ ಇರುವುದನ್ನು ಅಭ್ಯಾಸ (Practice) ಮಾಡಿ : ಏಕಾಏಕಿ ಮಕ್ಕಳನ್ನು ನಿಮ್ಮಿಂದ ದೂರವಿಡುವುದು ಕಷ್ಟವಾಗುತ್ತದೆ. ಹಾಗಾಗಿ ಮಕ್ಕಳಿಗೆ ಇದನ್ನು ನಿಧಾನವಾಗಿ ಕಲಿಸಬೇಕು. ಸಂಬಂಧಿಕರು ಅಥವಾ ಸ್ನೇಹಿತರ ಮನೆಯಲ್ಲಿ ಮಕ್ಕಳನ್ನು ಬಿಡಬೇಕು. ಅವರಿಂದ ಸ್ವಲ್ಪ ಸಮಯ ದೂರವಿರಬೇಕು. ಅವರ ಕಣ್ಣಿಗೆ ಕಾಣದಂತೆ ಇರಬೇಕು. ಆಗ ಮಗು ನಿಮ್ಮಿಂದ ದೂರವಿರುವುದನ್ನು ಕಲಿಯುತ್ತದೆ. ನೀವು ಎಲ್ಲೋ ಅವರನ್ನು ಬಿಟ್ಟು ಹೋದಾಗ ಅದು ಆತಂಕಕ್ಕೆ ಒಳಗಾಗುವುದಿಲ್ಲ. ಇದ್ರಿಂದ ಕಚೇರಿಗೆ ಹೋಗುವುದು ಅಥವಾ  ಬೇರೆ ಊರಿಗೆ ಪ್ರಯಾಣ (Travel) ಬೆಳೆಸುವ ಸಂದರ್ಭ ಬಂದ್ರೆ ನಿಮಗೆ ಸಮಸ್ಯೆ ಎನ್ನಿಸುವುದಿಲ್ಲ. 

ನಿದ್ರೆ (Sleep) ಮತ್ತು ಆಹಾರದ ನಂತರವೂ ನಿಮ್ಮ ಮಗುವಿಗೆ ಏಕಾಂಗಿಯಾಗಿರಲು ಕಲಿಸಿ : ಮಗುವು ಹಸಿವಿನಿಂದ ಅಥವಾ ನಿದ್ದೆ ಮಾಡುವ ಮನಸ್ಥಿತಿಯಲ್ಲಿದ್ದಾಗ ಹೆಚ್ಚು ಆತಂಕವನ್ನು ಅನುಭವಿಸುತ್ತದೆ.  ಈ ಸಮಯಸಲ್ಲಿ ನೀವು ಅವರನ್ನು ಬಿಟ್ಟು ಹೋಗ್ಬೇಕಾದ ಸಂದರ್ಭ ಬಂದ್ರೆ ಮೊದಲು ಅವರಿಗೆ ಆಹಾರ ತಿನ್ನಿಸಿ, ನಿದ್ರೆ ಮಾಡಿಸಿ. ಮಲಗಿದ ಮೇಲೆ ನೀವು ಮನೆಯಿಂದ ಹೊರಗೆ ಹೋಗಿ.  ಹೊಟ್ಟೆ ತುಂಬಿದ್ದರಿಂದ ಮಗು ಹೆಚ್ಚು ಕಿರಿಕಿರಿ ಮಾಡುವುದಿಲ್ಲ.

ಭರವಸೆಗಳನ್ನು ಉಳಿಸಿಕೊಳ್ಳಿ : ಯಾವುದಾದರೊಂದು ಭರವಸೆ ನೀಡಿ  ಮುಂಜಾನೆ ಹೊರಟರೆ ಬಂದ ನಂತರ ಆ ಭರವಸೆಗಳನ್ನು ಈಡೇರಿಸಬೇಕು. ಆಗ ಮಗು ನಿಮ್ಮ ಮೇಲೆ ಭರವಸೆ ಇಡುತ್ತದೆ. ಮುಂದಿನ ಬಾರಿ ನೀವು ಹೊರಗೆ ಹೋಗುವಾಗ ಮಗು ಗಲಾಟೆ ಮಾಡುವುದಿಲ್ಲ.

ಮಕ್ಕಳಿಗೆ ಭರವಸೆ ನೀಡಿ : ನೀವು ಶೀಘ್ರದಲ್ಲೇ ಮನೆಗೆ ಹಿಂತಿರುಗುತ್ತೀರಿ ಮತ್ತು ಬಂದ ನಂತರ ನೀವು ಅವರಿಗೆ ಆಹಾರ ಮತ್ತು ಪಾನೀಯವನ್ನು ತರುತ್ತೀರಿ ಎಂದು ಮಗುವಿಗೆ ಭರವಸೆ ನೀಡಿ. ನಿಮ್ಮ ಮೇಲೆ ಭರವಸೆ ಇದ್ದರೂ ಇದ್ರಿಂದ ಆತಂಕ ಸ್ವಲ್ಪ ಕಡಿಮೆಯಾಗುತ್ತದೆ.   

Teenage Love: ಸೂಕ್ಷ್ಮವಾದ ವಿಷ್ಯ, ಪೋಷಕರು ಹುಷಾರಾಗರಿಬೇಕಷ್ಟೇ!

ಭಯ ಹುಟ್ಟಿಸುವ ವಿಷ್ಯ ಹೇಳಬೇಡಿ : ಟಿವಿಯಲ್ಲಿ ಅಥವಾ ಮೊಬೈಲ್ ನಲ್ಲಿ ಮಗುವಿಗೆ ಭಯ ಹುಟ್ಟಿಸುವ ದೃಶ್ಯವನ್ನು ತೋರಿಸಬೇಡಿ. ಹಾಗೆಯೇ ಮಗುವಿಗೆ ಆತಂಕ ಹೆಚ್ಚಾಗುವ ಸಂಗತಿಯನ್ನು ಅವರ ಮುಂದೆ ಮಾತನಾಡಬೇಡಿ. ಮಕ್ಕಳಿಗೆ ಧೈರ್ಯ ತುಂಬುವ ವಿಷ್ಯವನ್ನೇ ಸದಾ ಹೇಳ್ತಿರಿ. ಭಯವಾದ್ರೆ ಏನು ಮಾಡ್ಬೇಕು ಹಾಗೆ ತುರ್ತು ಪರಿಸ್ಥಿತಿಯಲ್ಲಿ ಯಾವ ಕೆಲಸ ಮಾಡ್ಬೇಕು ಎಂಬುದನ್ನು ಕೂಡ ನೀವು ಮಗುವಿಗೆ ಕಲಿಸಬೇಕು. 
 

Latest Videos
Follow Us:
Download App:
  • android
  • ios