Parallel Parenting: ಮಾತನಾಡ್ದೆ ಮಗು ನೋಡಿಕೊಳ್ಳುವ ವಿಧಾನ ಇದು
ಮಕ್ಕಳನ್ನು ಹೇಗೆ ಪಾಲನೆ ಮಾಡ್ಬೇಕು ಎಂಬುದನ್ನು ಈಗಿನ ಯುವಜನತೆಗೆ ಹೇಳಿಕೊಡಬೇಕಾಗಿಲ್ಲ. ನಾನಾ ಕಾರಣಕ್ಕೆ ವಿಚ್ಛೇದನ ಪಡೆಯುವ ದಂಪತಿ, ಮಕ್ಕಳನ್ನು ತಮ್ಮದೆ ವಿಧಾನದಲ್ಲಿ ನೋಡಿಕೊಳ್ತಾರೆ. ಈಗಿನ ದಿನಗಳಲ್ಲಿ ಪ್ಯಾರಲಲ್ ಪೇರೆಂಟಿಂಗ್ ಹೆಚ್ಚು ಪ್ರಸಿದ್ಧಿ ಪಡೆದಿದೆ.
ಸಂಬಂಧದಲ್ಲಿ ಕಹಿ ಕಾಣಿಸಿಕೊಂಡಾಗ, ಇಬ್ಬರು ಜೊತೆಯಾಗಿ ಬದುಕಲು ಸಾಧ್ಯವಿಲ್ಲ ಎಂದಾಗ ದಂಪತಿ ದೂರವಾಗಲು ಬಯಸ್ತಾರೆ. ಕೆಲವರು ವಿಚ್ಛೇದನ ಪಡೆದ್ರೆ ಮತ್ತೆ ಕೆಲವರು ದೂರ ವಾಸಿಸಲು ಶುರು ಮಾಡ್ತಾರೆ. ಮಕ್ಕಳನ್ನು ಪಡೆದಿರುವ ದಂಪತಿಗೆ ವಿಚ್ಛೇದನ ಪಡೆಯುವುದು ಸುಲಭವಲ್ಲ. ಆದ್ರೆ ವಿಚ್ಛೇದನ ಪಡೆದ ನಂತ್ರವೂ ಅವರು ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಇಬ್ಬರೂ ಸಮಾನಾಂತರವಾಗಿ ಹಂಚಿಕೊಳ್ತಾರೆ. ಇದನ್ನು ಪ್ಯಾರಲಲ್ ಪೇರೆಂಟಿಂಗ್ ಎಂದು ಕರೆಯಲಾಗುತ್ತದೆ. ನಾವಿಂದು ಪ್ಯಾರಲಲ್ ಪೇರೆಂಟಿಂಗ್ ನಿಂದಾಗು ಲಾಭವೇನು ಎಂಬುದನ್ನು ಹೇಳ್ತೇವೆ.
ಪ್ಯಾರಲಲ್ ಪೇರೆಂಟಿಂಗ್ (Parallel Parenting) ಅಂದ್ರೇನು ? : ಕೋ ಪೇರೆಂಟಿಂಗ್ (Co Parenting) ಗಿಂತ ಇದು ಸ್ವಲ್ಪ ಭಿನ್ನವಾಗಿದೆ. ಕೋ ಪೇರೆಂಟಿಂಗ್ ನಲ್ಲಿ ದಂಪತಿ ಒಟ್ಟಿಗೆ ಸಮಸ್ಯೆ ಬಗೆಹರಿಸುತ್ತಾರೆ. ಮಕ್ಕಳ (Children) ಭವಿಷ್ಯದ ಬಗ್ಗೆ ಚರ್ಚೆ ನಡೆಸುತ್ತಾರೆ. ಶಾಲೆ ಕಾರ್ಯಕ್ರಮವಿರಲಿ ಇಲ್ಲವೆ ಮಕ್ಕಳ ಯಾವುದೇ ಕಾರ್ಯಕ್ರಮ (Program) ವಿರಲಿ ಇಬ್ಬರು ಒಟ್ಟಿಗೆ ಹೋಗ್ತಾರೆ. ಇಲ್ಲಿ ಪೋಷಕರ ಮಧ್ಯೆ ಸಂವಹನವಿರುತ್ತದೆ. ಆದ್ರೆ ಪ್ಯಾರಲಲ್ ಪೇರೆಂಟಿಂಗ್ ನಲ್ಲಿ ಮಾಜಿ ದಂಪತಿ ಮಧ್ಯೆ ಮಾತು ಕಡಿಮೆಯಿರುತ್ತದೆ. ಮಕ್ಕಳ ವಿಷ್ಯದಲ್ಲಿ ಕೂಡ ಕೆಲವು ನಿಯಮಗಳನ್ನು ಹಾಕಿಕೊಂಡಿರುತ್ತಾರೆ. ಎಲ್ಲ ವಿಷ್ಯದ ಬಗ್ಗೆ ಇವರು ಚರ್ಚೆ ನಡೆಸುವುದಿಲ್ಲ. ಧರ್ಮ, ಶಾಲೆ, ಪಠ್ಯೇತರ ವಿಷ್ಯದ ಬಗ್ಗೆ ಮಾತ್ರ ಸಣ್ಣಪುಟ್ಟ ಚರ್ಚೆ ಇಬ್ಬರ ಮಧ್ಯೆ ನಡೆಯುತ್ತದೆ. ಮಾತಿಗಿಂತ ಇಮೇಲ್, ಮೆಸ್ಸೇಜ್ ನಲ್ಲಿಯೇ ಇದ್ರ ಬಗ್ಗೆ ನಿರ್ಧಾರವಾಗಿರುತ್ತದೆ. ಇದ್ರಲ್ಲಿ ಒಬ್ಬರಿಗೊಬ್ಬರು ಮುಖ ನೋಡುವುದಿಲ್ಲ. ಒಬ್ಬರು ಮಕ್ಕಳ ಪಾಲನೆ ಜವಾಬ್ದಾರಿ ತೆಗೆದುಕೊಳ್ತಾರೆ. ಮತ್ತೊಬ್ಬರು ಆಗಾಗ ಮಕ್ಕಳನ್ನು ಭೇಟಿಯಾಗ್ತಾರೆ. ಯಾವಾಗ ಮಕ್ಕಳನ್ನು ಭೇಟಿಯಾಗ್ಬೇಕು ಎನ್ನುವ ಬಗ್ಗೆಯೂ ನಿರ್ಧಾರವಾಗಿರುತ್ತದೆ.
ಪ್ಯಾರಲಲ್ ಪೇರೆಂಟಿಂಗ್ ನಿಂದ ಪ್ರಯೋಜನ : ಮಕ್ಕಳು ಪೋಷಕರ ಜೊತೆ ಬೆಳೆಯಬೇಕು. ಇದ್ರಿಂದ ಮಕ್ಕಳ ಭವಿಷ್ಯ ಚೆನ್ನಾಗಿರುತ್ತದೆ. ಮಕ್ಕಳು ಶೇಕಡಾ 35ರಷ್ಟು ಭಾಗವನ್ನು ಪೋಷಕರ ಜೊತೆ ಕಳೆಯಬೇಕೆಂದು ಅಧ್ಯಯನ ಹೇಳುತ್ತದೆ. ಸಿಂಗಲ್ ಪೇರೆಂಟಿಂಗ್ ಗಿಂತ ಪ್ಯಾರಲಲ್ ಪೇರೆಂಟಿಂಗ್ ಒಳ್ಳೆಯದು. ಇದ್ರಲ್ಲಿ ಮಕ್ಕಳಿಗೆ ಅಪ್ಪ, ಅಮ್ಮನ ಪ್ರೀತಿ ಸಿಗುತ್ತದೆ.
ಮಕ್ಕಳಾದ್ಮೇಲೆ ದಾಂಪತ್ಯವನ್ನೇ ಮರೆತಿದ್ದ ಜೋಡಿ ಮತ್ತೆ ಒಂದಾದ್ರು!
ಸ್ವತಂತ್ರ್ಯ ಇಲ್ಲಿದೆ : ಸಂಗಾತಿ ಜೊತೆ ಸಮಯ ಕಳೆಯಲು ಸಾಧ್ಯವೇ ಇಲ್ಲ, ಅವರ ಮೇಲಿನ ಭರವಸೆ ಕಳೆದುಕೊಂಡಿದ್ದೇವೆ ಎನ್ನುವಾಗ ಈ ಪ್ಯಾರಲಲ್ ಪೇರೆಂಟಿಂಗ್ ನೆರವಿಗೆ ಬರುತ್ತದೆ. ಇದ್ರಲ್ಲಿ ಪೋಷಕರಿಬ್ಬರೂ ಮಕ್ಕಳನ್ನು ಬೆಳೆಸಲು ಸಂಪೂರ್ಣ ಸ್ವಾತಂತ್ರರಾಗಿರುತ್ತಾರೆ.
ಇಲ್ಲಿ ಇರುತ್ತೆ ಕಡಿಮೆ ಹಸ್ತಕ್ಷೇಪ : ಪ್ಯಾರಲಲ್ ಪೇರೆಂಟಿಂಗ್ ಇಬ್ಬರು ಪೋಷಕರಿಗೂ ತಮ್ಮ ಸ್ವಂತ ಪೋಷಕರ ಶೈಲಿಯನ್ನು ಹೊಂದಲು ಅವಕಾಶ ನೀಡುತ್ತದೆ. ಪರಸ್ಪರ ಹಸ್ತಕ್ಷೇಪ ಇಲ್ಲಿರುವುದಿಲ್ಲ. ಅವರು ತಾವು ಮಾಡಿದ ಕೆಲಸದ ಬಗ್ಗೆ ಇನ್ನೊಬ್ಬ ಸಂಗಾತಿಗೆ ವಿವರಿಸಬೇಕಾಗಿಲ್ಲ. ಮಕ್ಕಳಿಗೆ ಯಾವ ವಿಷ್ಯ ಕಳಿಸ್ತಾರೆ ಹಾಗೆ ಮಕ್ಕಳಿಗೆ ಏನು ಹೇಳಿಕೊಡ್ತಾರೆ ಎಂಬುದನ್ನು ಇನ್ನೊಬ್ಬರಿಗೆ ಹೇಳುವ ಅಗತ್ಯವಿರುವುದಿಲ್ಲ.
ಮಾತು ಮಾತಿಗೆ ಮಕ್ಕಳ ಮೇಲೆ ಸಿಟ್ಟು ಬರುತ್ತಾ ? ಕಂಟ್ರೋಲ್ ಮಾಡದಿದ್ರೆ ಕಷ್ಟ
ಒತ್ತಡ ಇಲ್ಲಿರೋದಿಲ್ಲ : ಪ್ಯಾರಲಲ್ ಪೇರೆಂಟಿಂಗ್ ನಲ್ಲಿ ಒತ್ತಡವಿರುವುದಿಲ್ಲ. ಬಹುತೇಕ ವಿಚ್ಛೇದನ ದಂಪತಿ ಇದನ್ನೇ ಆಯ್ದುಕೊಳ್ತಾರೆ. ಯಾಕೆಂದ್ರೆ ಇದ್ರಲ್ಲಿ ಗಲಾಟೆ, ಜಗಳಗಳು ಕಡಿಮೆ ಇರುತ್ತವೆ. ಸಾಮಾನ್ಯವಾಗಿ ದಂಪತಿ ಮಧ್ಯೆ ಗಲಾಟೆ ನಡೆಯುತ್ತಿದ್ದರೆ, ಸಣ್ಣ ವಿಷ್ಯಕ್ಕೂ ಪಾಲಕರು ಕಚ್ಚಾಡುತ್ತಿದ್ದರೆ ಅದು ಮಕ್ಕಳ ಭಾವನೆ ಮೇಲೆ ಪ್ರಭಾವ ಬೀರುತ್ತದೆ. ಮಕ್ಕಳು ಇದ್ರಿಂದ ಒತ್ತಡಕ್ಕೆ ಒಳಗಾಗ್ತಾರೆ. ಆದ್ರೆ ಪ್ಯಾರಲಲ್ ಪೇರೆಂಟಿಂಗ್ ನಲ್ಲಿ ಗಂಡ – ಹೆಂಡತಿ ಮಧ್ಯೆ ಮಾತುಕತೆ ಕಡಿಮೆ ಇರುತ್ತದೆ. ಇಬ್ಬರ ಜಗಳ ಮಕ್ಕಳಿಗೆ ತಿಳಿಯುವುದಿಲ್ಲ. ಮಕ್ಕಳ ಮುಂದೆ ಇಬ್ಬರೂ ಜಗಳವಾಡುವುದಿಲ್ಲ. ಇದ್ರಿಂದ ಮಕ್ಕಳಿಗೆ ಮಾತ್ರವಲ್ಲದೆ ಪತಿ – ಪತ್ನಿ ಕೂಡ ಒತ್ತಡಕ್ಕೊಳಗಾಗುವುದು ಕಡಿಮೆ.