ಮಕ್ಕಳಾದ್ಮೇಲೆ ದಾಂಪತ್ಯವನ್ನೇ ಮರೆತಿದ್ದ ಜೋಡಿ ಮತ್ತೆ ಒಂದಾದ್ರು!

ಮಕ್ಕಳು ಮನೆಯ ಸಂತೋಷವನ್ನು ಹೆಚ್ಚಿಸುತ್ತಾರೆ. ಆದ್ರೆ ಮಕ್ಕಳೇ ಸರ್ವಸ್ವವಾದಾಗ ದಾಂಪತ್ಯ ಹಳ್ಳ ಹಿಡಿಯುತ್ತದೆ. ಇವೆರಡನ್ನೂ ಬ್ಯಾಲೆನ್ಸ್ ಮಾಡಲು ಆಗ್ತಿಲ್ಲ ಎನ್ನುವವರು ಸೋಲ್ತಾರೆ. ಮುಂದೆ ಒಳ್ಳೆ ಭವಿಷ್ಯವಿದೆ ಎಂಬ ನಂಬಿಕೆ ಮೇಲೆ ಒಂದಾಗಿ ನಡೆಯುವ ಜೋಡಿ ಯಶಸ್ವಿಯಾಗ್ತಾರೆ. 
 

Marriage Turned For The Better After Kids Moved Out

ಇಬ್ಬರ ಮಧ್ಯೆ ಪ್ರೀತಿ ಜೊತೆ ನಂಬಿಕೆ, ತಾಳ್ಮೆ ಇದ್ದಾಗ ಮಾತ್ರ ದಾಂಪತ್ಯ ಹಸನಾಗಲು ಸಾಧ್ಯ. ಮದುವೆಯಾದ ನಂತ್ರ ಅನೇಕ ಬದಲಾವಣೆಯಾಗುತ್ತದೆ. ಮಕ್ಕಳಾದ್ಮೇಲೆ ಮತ್ತೊಂದಿಷ್ಟು ಬದಲಾವಣೆಯಾಗುತ್ತದೆ. ಜೀವನದ ಪ್ರತಿ ಹಂತದಲ್ಲಿ ನಡೆಯುವ ಬದಲಾವಣೆಯನ್ನು ಅರ್ಥ ಮಾಡಿಕೊಂಡು ಮುನ್ನಡೆದಾಗ ಮಾತ್ರ ಬಾಳು ಸಂತೋಷದಿಂದಿರಲು ಸಾಧ್ಯ. ಇತ್ತೀಚಿನ ದಿನಗಳಲ್ಲಿ ಜನರು ತಾಳ್ಮೆ ಕಳೆದುಕೊಳ್ತಿದ್ದಾರೆ. ಬಯಸಿದ್ದು ಸಿಗಲಿಲ್ಲ ಎನ್ನುವ ಕಾರಣಕ್ಕೆ ವಿಚ್ಛೇದನ ನೀಡುವವರ ಸಂಖ್ಯೆ ಹೆಚ್ಚಾಗಿದೆ. ದಾಂಪತ್ಯದಲ್ಲಿ ಸಣ್ಣ ಸಮಸ್ಯೆ ಬಂದ್ರೂ ಅವರು ಸಹಿಸಿಕೊಳ್ಳೋದಿಲ್ಲ. ಆದ್ರೆ ಈ ದಂಪತಿ ತಾಳ್ಮೆ ಹಾಗೂ ಪ್ರೀತಿಗೆ ಭೇಷ್ ಎನ್ನಲೇಬೇಕು.

ಮದುವೆ (Marriage) ಯಾದ್ಮೇಲೆ ಜನರು ಕೇಳುವ ಒಂದೇ ಪ್ರಶ್ನೆ ಮಕ್ಕಳು (Children) ಯಾವಾಗ?  ಒಂದು ಮಗು ದೊಡ್ಡದಾಗ್ತಿದೆ ಎಂದ ತಕ್ಷಣ ಇನ್ನೊಂದು ಯಾವಾಗ  ಎಂಬ ಪ್ರಶ್ನೆ ಬರುತ್ತದೆ. ಮನೆಯಲ್ಲಿ ಮಕ್ಕಳಿರಬೇಕು. ಮಕ್ಕಳು ದಂಪತಿಯನ್ನು ಮತ್ತಷ್ಟು ಹತ್ತಿರಕ್ಕೆ ತರ್ತಾರೆ ಎನ್ನಲಾಗುತ್ತದೆ. ಇದು ಸತ್ಯ. ಆದ್ರೆ ಮಕ್ಕಳಾದ್ಮೇಲೆ ಜೀವನದಲ್ಲಿ ದೊಡ್ಡ ಬದಲಾವಣೆಯಾಗುತ್ತದೆ. ಅದನ್ನು ಇಬ್ಬರೂ ಸಹಿಸಿಕೊಂಡು ಜೀವನ ನಡೆಸಬೇಕಾಗುತ್ತದೆ.

ಈ ವ್ಯಕ್ತಿ ಕೂಡ ಮದುವೆಯಾದ ಹೊಸದರಲ್ಲಿ ಸ್ವರ್ಗಕ್ಕೆ ಮೂರೇ ಗೇಣು ಎನ್ನುವ ರೀತಿ ಬದುಕಿದ್ದ. ಪತಿ – ಪತ್ನಿ ಒಟ್ಟಿಗೆ ಸಮಯ ಕಳೆಯಲು ಸಾಕಷ್ಟು ಸಮಯ (Time) ವಿತ್ತು. ಆದ್ರೆ ಮೊದಲ ಮಗು ಹುಟ್ಟುತ್ತಿದ್ದಂತೆ ಆದ್ಯತೆ ಮಗುವಿನ ಮೇಲೆ ಹೋಯ್ತು. ವ್ಯಕ್ತಿ ಆಗಷ್ಟೆ ಹೊಸ ಬ್ಯುಸಿನೆಸ್  ಶುರು ಮಾಡಿದ್ದರಿಂದ ಆರ್ಥಿಕ (Financial ) ಸಮಸ್ಯೆ ಕೂಡ ಎದುರಾಗಿತ್ತು. ಪತಿಗೆ ನೆರವಾಗಲು ನಿರ್ಧರಿಸಿದ ಪತ್ನಿ ಟೀಚರ್ ಕೆಲಸಕ್ಕೆ ಸೇರಿದ್ದಳು. ಇಬ್ಬರು ದುಡಿಮೆ ಹಾಗೂ ಮಗುವಿನ ಆರೈಕೆಯಲ್ಲಿ ಬ್ಯುಸಿಯಾದ್ರು.

ಲೈಂಗಿಕ ಜೀವನದಲ್ಲಿ ಖುಷೀನೆ ಇಲ್ವಾ ? ಇದೇ ಕಾರಣವಿರಬಹುದು!

ಮಗುವಿನ ಕೆಲಸದ ಮುಂದೆ ಮತ್ತೆ ಯಾವುದೂ ಮಹತ್ವ ಪಡೆದಿರಲಿಲ್ಲ. ನೈಟ್ ಪಾರ್ಟಿಯಿಂದ ಹಿಡಿದು ಹಬ್ಬ, ಟ್ರಿಪ್ ವರೆಗೆ ಎಲ್ಲಿಗೆ ಹೋದ್ರೂ ಮಗು ಜೊತೆಯಲ್ಲಿರಬೇಕೆಂದು ದಂಪತಿ ನಿರ್ಧರಿಸಿದ್ದರು. ಅದರಂತೆ ನಡೆದುಕೊಳ್ಳುತ್ತಿದ್ದರು.

ಒಂದು ಮಗುವಿನ ನಂತ್ರ ಇನ್ನೊಂದು ಮಗು. ಇಬ್ಬರ ಆರೈಕೆಯಲ್ಲಿ ದಂಪತಿ ಮಧ್ಯೆ ಸಮಯವೇ ಇರಲಿಲ್ಲ. ನೋಡುವವರ ಕಣ್ಣಿಗೆ ಗಂಡ – ಹೆಂಡತಿ ಅಷ್ಟೆ. ಇಬ್ಬರ ಮಧ್ಯೆ ಮತ್ತೆ ಯಾವುದೇ ಸಂಬಂಧವಿರಲಿಲ್ಲ. ಆದ್ರೆ ಇಬ್ಬರ ಮಧ್ಯೆ ಅಪಾರ ಪ್ರೀತಿಯಿತ್ತು.
ಮಕ್ಕಳು ನೋಡ್ತಾ ನೋಡ್ತಾ ದೊಡ್ಡವರಾಗಿದ್ದರು. ಒಂದು ಮಗಳು ವಿದ್ಯಾಭ್ಯಾಸಕ್ಕೆಂದು ಬೇರೆ ಊರಿಗೆ ಹೊರಟಿದ್ದಳು. ಇನ್ನೊಬ್ಬಳು ಇನ್ನೆರಡು ವರ್ಷದಲ್ಲಿ ಹೊರಡುವವಳಿದ್ದಳು. ಈ ಮಧ್ಯೆ ಪತಿ – ಪತ್ನಿ ವಿದೇಶ ಪ್ರವಾಸದ ಪ್ಲಾನ್ ಮಾಡಿದ್ರು.

ಗಂಡ ಹಾಗೂ ಹೆಂಡತಿ ಇಬ್ಬರೂ ಕೂಡಿಟ್ಟ ಹಣದಲ್ಲಿ ಮಕ್ಕಳ ಜೊತೆ ವಿದೇಶಕ್ಕೆ ತೆರಳಿದ್ದರು. ಅಲ್ಲಿ ಕುಟುಂಬದವರೆಲ್ಲ ಸುಂದರ ಸಮಯ ಕಳೆದ್ರು. ಈ ವೇಳೆ ಒಂದೇ ರೂಮಿನಲ್ಲಿ ಪತಿ – ಪತ್ನಿ ಇಬ್ಬರೇ ಒಟ್ಟಿಗೆ ಕಳೆಯುವ ಅವಕಾಶ ಸಿಕ್ಕಿತ್ತು. ಇದನ್ನು ಸದುಪಯೋಗಪಡಿಸಿಕೊಂಡೆವು ಎನ್ನುತ್ತಾನೆ ಈತ. ಮಕ್ಕಳಾಗುವ ಮೊದಲು ನಮ್ಮ ಜೀವನ ಹೇಗಿತ್ತು ಎಂಬುದನ್ನು ನಾವು ಮೆಲಕು ಹಾಕಿದ್ದೆವು. ಮತ್ತೆ ಹಳೆ ಜೀವನ ಬಯಸಿದ್ದೆವು. ಮಕ್ಕಳು ಬೆಳೆದು ದೊಡ್ಡವರಾಗ್ತಿದ್ದಂತೆ, ಅವರ ಕಾಲಿನ ಮೇಲೆ ಅವರು ನಿಲ್ಲುತ್ತಿದ್ದಂತೆ ನಾವು ಮತ್ತೆ ಒಂದಾದ್ವಿ ಎನ್ನುತ್ತಾನೆ ಆತ. 

ಮದ್ವೆಯಾಗಿ ಎರಡು ವರ್ಷವಾಯ್ತು, ಲೈಂಗಿಕತೆ ಬೇಡ ಅಂತಿದ್ದಾರೆ ಹ್ಯಾಪಿ ಕಪಲ್‌ !

ಇಬ್ಬರೂ ಮಕ್ಕಳನ್ನು ಮಿಸ್ ಮಾಡಿಕೊಳ್ತೇವೆ. ಆದ್ರೆ ನಮಗಿಬ್ಬರಿಗೆ ಸಮಯ ಸಿಕ್ಕಿದ್ದು ಖುಷಿ ಕೂಡ ನೀಡಿದೆ. ನಾವಿಬ್ಬರು ಸಿನಿಮಾ, ಪಾರ್ಕ್, ಟ್ರಿಪ್ ಹೀಗೆ ಅಲ್ಲಿ ಇಲ್ಲಿ ಓಡಾಡುತ್ತಿರುತ್ತೇವೆ. ಬ್ಯುಸಿನೆಸ್ ಕೂಡ ಚೆನ್ನಾಗಿ ನಡೆಯುತ್ತಿದೆ ಎನ್ನುವ ವ್ಯಕ್ತಿ, ಇಷ್ಟೊಂದು ವರ್ಷಗಳ ನಂತ್ರ ಮತ್ತೆ ನಾವು ಒಂದಾಗಲು ಕಾರಣ  ನಮ್ಮಿಬ್ಬರ ಮಧ್ಯೆ ಇದ್ದ ಪ್ರೀತಿ ಎನ್ನುತ್ತಾನೆ. ಕೆಲವೇ ದಿನಗಳ ಹಿಂದೆ 28ನೇ ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರಂತೆ ದಂಪತಿ.

Latest Videos
Follow Us:
Download App:
  • android
  • ios