Asianet Suvarna News Asianet Suvarna News

Lavender Marriage ಅಂದ್ರೇನು? ಗೇ ಜೊತೆ ನಡೆಯುತ್ತೆ ಲೆಸ್ಬಿಯನ್ ಮದುವೆ

ಸಮಾಜದಲ್ಲಿ ಈಗ್ಲೂ ಅನೇಕ ಸಂಗತಿಗಳನ್ನು ಬಹಿರಂಗಪಡಿಲು ಜನರು ಹೆದರುತ್ತಾರೆ. ಅಂಥಹ ವಿಷ್ಯಗಳನ್ನು ಆರಿಸಿ ಚಿತ್ರೋದ್ಯಮದಲ್ಲಿ ಸಿನಿಮಾ ನಿರ್ಮಾಣ ಮಾಡಲಾಗ್ತಿದೆ. ಅದ್ರಲ್ಲಿ ಬಧಾಯಿ ದೋ ಕೂಡ ಒಂದು. ಅದರಲ್ಲಿರುವ ಲ್ಯಾವೆಂಡರ್ ಮದುವೆ ಬಗ್ಗೆ ನಾವಿಂದು ಹೇಳ್ತೇವೆ.
 

What Is Lavender Marriage Know How This Unique Marriage
Author
Bangalore, First Published Feb 19, 2022, 5:10 PM IST

ಇತ್ತೀಚೆಗೆ ಬಿಡುಗಡೆಯಾದ, ರಾಜಕುಮಾರ್ ರಾವ್ (Rajkumar Rao )ಮತ್ತು ಭೂಮಿ ಪೆಡ್ನೇಕರ್ (Bhumi Pednekar) ಅಭಿನಯದ 'ಬಧಾಯಿ ದೋ' ಚಿತ್ರ ಸಾಕಷ್ಟು ಸುದ್ದಿ ಮಾಡಿದೆ. ಬಿಡುಗಡೆಯಾದಾಗಿನಿಂದ ಈ ಚಿತ್ರ ಜನರಲ್ಲಿ ಚರ್ಚೆಯ ವಿಷಯವಾಗಿದೆ. ಸಮಾಜದ ಮುಂದೆ ಮಾತನಾಡಲು ಜನರು ಹೆದರುವ ವಿಷ್ಯವನ್ನು ಚಿತ್ರದಲ್ಲಿ ತೋರಿಸಲಾಗಿದೆ.  ಈ ಚಿತ್ರದಲ್ಲಿ ರಾಜ್‌ಕುಮಾರ್ ರಾವ್ ಶಾರ್ದೂಲ್ ಠಾಕೂರ್ ಪಾತ್ರದಲ್ಲಿ ಮತ್ತು ಭೂಮಿ ಪೆಡ್ನೇಕರ್ ಸುಮನ್ ಸಿಂಗ್ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಸುಮನ್ ಲೆಸ್ಬಿಯನ್ ಆಗಿದ್ದರೆ ಶಾರ್ದೂಲ್ ಸಲಿಂಗಕಾಮಿ.  ಸಮಾಜಕ್ಕಾಗಿ ಇವರಿಬ್ಬರು ಮದುವೆಯಾಗ್ತಾರೆ. ಆದ್ರೆ ಇವರ ಲೈಂಗಿಕ ಆಸಕ್ತಿ ಭಿನ್ನವಾಗಿರುತ್ತದೆ.  ಇಬ್ಬರ ಈ ಮದುವೆಯನ್ನು ಲ್ಯಾವೆಂಡರ್ ಮ್ಯಾರೇಜ್ (Lavender Marriage) ಎಂದು ಕರೆಯಲಾಗುತ್ತದೆ. ಇಂದಿನ ಕಾಲದಲ್ಲೂ ಲ್ಯಾವೆಂಡರ್ ಮದುವೆಯ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಭಾರತದಲ್ಲಿ ಇಂತಹ ಮದುವೆಗಳು ಅನೇಕ ವರ್ಷಗಳಿಂದ ಇದೆ. ಆದ್ರೆ ಸಮಾಜದ ಭಯಕ್ಕೆ ಜನರು ಇದನ್ನು ಈಗ್ಲೂ ಮುಚ್ಚಿಡುತ್ತಾರೆ. ಲ್ಯಾವೆಂಡರ್ ಮದುವೆ ಎಂದರೇನು ಮತ್ತು ಅದನ್ನು ಏಕೆ ಮಾಡಲಾಗುತ್ತದೆ ಎಂಬುದನ್ನು ನಾವಿಂದು ಹೇಳ್ತೇವೆ.

ಲ್ಯಾವೆಂಡರ್ ಮದುವೆ ಎಂದರೇನು? : ಪುರುಷನ ಲೈಂಗಿಕ ಆಸಕ್ತಿ ಮಹಿಳೆಗಿಂತ ಪುರುಷನ ಕಡೆ ಹೆಚ್ಚಿದ್ದರೆ ಅವರನ್ನು ಸಲಿಂಗಕಾಮಿ ಎಂದು ಕರೆಯುತ್ತಾರೆ. ಅದೇ ಮಹಿಳೆಯ ಲೈಂಗಿಕ ಆಸಕ್ತಿ ಪುರುಷನ ಬದಲು ಮಹಿಳೆ ಮೇಲಿದ್ದರೆ ಅವರನ್ನು ಲೆಸ್ಬಿಯನ್ ಎಂದು ಕರೆಯಲಾಗುತ್ತದೆ. ತಜ್ಞರ ಪ್ರಕಾರ, ಸಲಿಂಗಕಾಮಿ ಹುಡುಗ ಮತ್ತು ಲೆಸ್ಬಿಯನ್ ಹುಡುಗಿ ಸಮಾಜದಲ್ಲಿ ತಾವು ಸಾಮಾನ್ಯ ಜೋಡಿ ಎಂದು ತೋರಿಸಿಕೊಳ್ಳಲು ಮದುವೆಯಾಗುತ್ತಾರೆ. ಅದನ್ನು ಲ್ಯಾವೆಂಡರ್ ಮದುವೆ ಎಂದು ಕರೆಯಲಾಗುತ್ತದೆ.
ಲ್ಯಾವೆಂಡರ್ ಬಣ್ಣವು ಸಲಿಂಗಕಾಮಕ್ಕೆ ಸಂಬಂಧಿಸಿದೆ. ಆದ್ದರಿಂದ ಇದನ್ನು ಲ್ಯಾವೆಂಡರ್ ಮದುವೆ ಎಂದು ಕರೆಯಲಾಗುತ್ತದೆ.

What Is Lavender Marriage Know How This Unique Marriage

RELATIONSHIPI STATUS: ನೀವು ಸಿಂಗಲ್ ಆಗಿರೋದು ಇದೇ ಕಾರಣಕ್ಕೆ !

ಸಾಮಾನ್ಯವಾಗಿ ಲ್ಯಾವೆಂಡರ್ ಮದುವೆಯನ್ನೂ ಭಾರತದಲ್ಲಿ ಒಪ್ಪುವುದಿಲ್ಲ. ಸಮಾಜದಲ್ಲಿ ಗೌರವ ಮತ್ತು ಪ್ರತಿಷ್ಠೆಯನ್ನು ಉಳಿಸಿಕೊಳ್ಳಲು, ಜನರ ಮಾತುಗಳಿಂದ ತಪ್ಪಿಸಿಕೊಳ್ಳಲು ಈ ರೀತಿಯ ಮದುವೆಯನ್ನು ಮಾಡಲಾಗುತ್ತದೆ. ಕುಟುಂಬ,ಸಂಪ್ರದಾಯವಾದಿಗಳಿಂದ ತಪ್ಪಿಸಿಕೊಳ್ಳಲು ಮದುವೆಯಾಗುವ ಜೋಡಿ ಮನೆಯಲ್ಲಿ ಸ್ನೇಹಿತರಂತೆ ಇರುತ್ತಾರೆಯೇ ಹೊರತು  ಸಂಸಾರ ನಡೆಸುವುದಿಲ್ಲ.

ಭಾರತದಲ್ಲಿ ಲ್ಯಾವೆಂಡರ್ ಮದುವೆ : ಭಾರತದಲ್ಲಿ ಸಲಿಂಗಕಾಮಿ ಮದುವೆಗೆ ಕಾನೂನಿನಲ್ಲಿ ಒಪ್ಪಿಗೆ ಸಿಕ್ಕಿದೆ. ಸೆಪ್ಟೆಂಬರ್ 6, 2018 ರಂದು, ನ್ಯಾಯಾಲಯವು ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದೆ. ಸಲಿಂಗಕಾಮದ ಹಳೆಯ ನಿಬಂಧನೆಯನ್ನು ತೆಗೆದುಹಾಕಿದೆ. ವಯಸ್ಕ ಸಲಿಂಗಕಾಮಿಗಳು ಮದುವೆಯಾಗಬಹುದು ಎಂದು ಕಾನೂನಿನಲ್ಲಿ ತಿದ್ದುಪಡಿ ಮಾಡಿದೆ. 377 ಸೆಕ್ಷನ್ ಅಡಿ ಸಲಿಂಗಕಾಮಿಗಳು ವಿವಾಹವಾಗಬಹುದು. ಆದರೆ  ಭಾರತದಲ್ಲಿ ಇನ್ನೂ ಅನೇಕ ಜನರು ತಮ್ಮ ಕುಟುಂಬ ಮತ್ತು ಸಮಾಜಕ್ಕೆ ಹೆದರಿ ಎಲ್ಲರ ಮುಂದೆ ಮದುವೆಯಾಗುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಅಲ್ಲೊಂದು,ಇಲ್ಲೊಂದು  ಸಲಿಂಗಕಾಮಿಗಳ ವಿವಾಹಗಳು ನಡೆಯುತ್ತಿದೆ. ಆದ್ರೆ ಸಮಾಜದಲ್ಲಿ ಚಿಂತನೆ ಬದಲಾಗಲು ಇನ್ನೂ ಸಮಯಬೇಕು. ಮಕ್ಕಳ ಭವಿಷ್ಯ ಹಾಳಾಗುತ್ತದೆ ಎಂದು ಪಾಲಕರು ಭಾವಿಸ್ತಿದ್ದಾರೆ. ಅದೇ ಕಾರಣಕ್ಕೆ ಸಲಿಂಗಕಾಮಿ ವಿವಾಹಕ್ಕೆ ಒಪ್ಪಿಗೆ ನೀಡ್ತಿಲ್ಲ. ಮದುವೆಯಾದವರನ್ನು ಕುಟುಂಬದಿಂದ ಹೊರ ಹಾಕಿದ ಪ್ರಕಣಗಳೂ ಸಾಕಷ್ಟಿದೆ.

Parenting Tips: ಹದಿಹರೆಯದವರು ನಿಮ್ಮ ಮಾತು ಕೇಳಬೇಕು ಅಂದರೆ ಹೀಗೆ ಮಾಡಿ..

ಯಾರಾಗ್ತಾರೆ ಲ್ಯಾವೆಂಡರ್ ಮದುವೆ? : ವಿರುದ್ಧ ಲಿಂಗವನ್ನು ಇಷ್ಟಪಡದ ಇಬ್ಬರು,ಒಂದೇ ಲಿಂಗದ ಮದುವೆಗೆ ಧೈರ್ಯ ಬರದೆ ಹೋದಾಗ ಲ್ಯಾವೆಂಡರ್ ಮದುವೆಗೆ ಮುಂದಾಗ್ತಾರೆ. ಆದ್ರೆ ಈ ಮದುವೆಯಲ್ಲೂ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮೊದಲೇ ಹೇಳಿದಂತೆ ಲ್ಯಾವೆಂಡರ್ ಮದುವೆಯಾದ ಜೋಡಿ ಮಧ್ಯೆ ಯಾವುದೇ ಶಾರೀರಿಕ ಸಂಬಂಧ ಬೆಳೆದಿರುವುದಿಲ್ಲ. ಆದ್ರೆ ಈ ಸಂಗತಿ ಕುಟುಂಬಸ್ಥರಿಗೆ ತಿಳಿದಿರುವುದಿಲ್ಲ. ಅವರು ಮಕ್ಕಳನ್ನು ನೀಡುವಂತೆ ಒತ್ತಡ ಹೇರಲು ಶುರು ಮಾಡ್ತಾರೆ. ಆಗ ದಂಪತಿ ಮಧ್ಯೆ ತಲೆನೋವು ಶುರುವಾಗುತ್ತದೆ. ಈ ಪರಿಸ್ಥಿತಿಯಿಂದ ಹೊರಗೆ ಬರಲು ಅವರು ಸಾಕಷ್ಟು ಕಷ್ಟಪಡಬೇಕಾಗುತ್ತದೆ. ಸಿನಿಮಾದಲ್ಲಿ ಮಾತ್ರವಲ್ಲ ನಿಜ ಜೀವನದಲ್ಲೂ ಇಂಥ ಸಮಸ್ಯೆ ಅನುಭವಿಸುತ್ತಿರುವ ಅನೇಕರಿದ್ದಾರೆ.  

Follow Us:
Download App:
  • android
  • ios