Asianet Suvarna News Asianet Suvarna News

ಬಾಯ್ಸ್‌ ಲಾಕರ್‌ ರೂಮ್‌ ಅಡ್ಮಿನ್ ಸೆರೆ! ಆ ಇನ್‌ಸ್ಟಾಪೇಜಲ್ಲಿ ನಿಜಕ್ಕೂ ಏನಾಯಿತು ?

ಮೂರು ದಿನಗಳ ಹಿಂದೆ ಸೋಷಲ್‌ ಮೀಡಿಯಾದಲ್ಲಿ ಬಿರುಗಾಳಿ ಎಬ್ಬಿಸಿದ್ದು ಬಾಯ್ಸ್‌  ಲಾಕರ್‌ ರೂಮ್‌! ಏನು ಈ ಕತೆ? ಟೀನೇಜ್‌ ಹುಡುಗರು ಹೀಗೇಕೆ ಮಾಡಿದರು? ಮುಖ್ಯವಾಗಿ ನಿಮ್ಮನೆ ಹುಡ್ಗನ ಬಗ್ಗೆ ನೀವು ತೆಗೆದುಕೊಳ್ಳಲೇಬೇಕಾದ ಐದು ಕಾಳಜಿಗಳು ಇಲ್ಲಿವೆ.

What is Bois locker room things you need to know about this scandal
Author
Bangalore, First Published May 7, 2020, 10:13 AM IST
  • Facebook
  • Twitter
  • Whatsapp

ಬಾಯ್ಸ್‌  ಲಾಕರ್‌ ರೂಮ್‌ ಘಟನೆ

@BiosLockerRoom ಅನ್ನೋದು ಇನ್‌ಸ್ಟಾಗ್ರಾಮ್‌ನ ಒಂದು ಗ್ರೂಪ್‌. ಹದಿಹರೆಯದ ಹೈಸ್ಕೂಲ್‌, ಪಿಯುಸಿ ಓದೋ ಹುಡುಗರವರು. ಬಹಳ ಸಿರಿವಂತರು. ಹೆಚ್ಚಿನವರು ಸೌತ್‌ ದೆಹಲಿಯವರು. ಬಹಳ ಸೀಕ್ರೆಟ್‌ ಆಗಿ ನಡೀತಿದ್ದ ಈ ಗ್ರೂಪ್‌ನ ಚಟುವಟಿಕೆ ಇತ್ತೀಚೆಗೆ ಬಹಿರಂಗಗೊಂಡು ದೇಶವನ್ನೇ ಬೆಚ್ಚಿಬೀಳಿಸಿತ್ತು. ಈ ಗ್ರೂಪ್‌ನಲ್ಲಿನ ಹುಡುಗರು ಅವರ ಕ್ಲಾಸ್‌ಮೇಟ್‌ ಹುಡುಗಿಯರು, ಗರ್ಲ್ ಫ್ರೆಂಡ್ಸ್‌ ಫೋಟೋಗಳನ್ನು ನಗ್ನ ಚಿತ್ರಗಳ ಮೇಲೆ ಮಾರ್ಕ್ ಮಾಡಿ ಅವರ ಬಗ್ಗೆ ಅಶ್ಲೀಲವಾಗಿ ಮಾತನಾಡಿಕೊಳ್ಳುತ್ತಿದ್ದರು. ಒಬ್ಬ ಹುಡುಗಿಯನ್ನು ಗುರಿಯಾಗಿಟ್ಟುಕೊಂಡು ಆಕೆಯನ್ನು ಅತ್ಯಾಚಾರ ಮಾಡುವ ಹುನ್ನಾರ ನಡೆಸಿದ್ದರು ಎನ್ನಲಾಗಿದೆ. ಈ ದುಷ್ಟಕೂಟದ ವಿಷಯ ಬಹಿರಂಗವಾದದ್ದು ಒಬ್ಬ ಹೆಣ್ಮಗಳ ಮೂಲಕ. ಇನ್‌ಸ್ಟಾಗ್ರಾಂನಲ್ಲಿ ಸ್ಕೊ್ರೕಲ್‌ ಮಾಡುತ್ತಿರುವಾಗ ಸಣ್ಣ ಡೌಟ್‌ ಬಂದು, ಒಂದು ಫೇಕ್‌ ಐಡಿ ಕ್ರಿಯೇಟ್‌ ಮಾಡಿ ಆಕೆ ಈ ಗ್ರೂಪ್‌ ಸೇರಿಕೊಳ್ತಾಳೆ. ಅಲ್ಲಿನ ಚಟುವಟಿಕೆ ನೋಡಿ ದಿಗ್ಬ್ರಾಂತಳಾಗಿ ಈ ವಿಷಯ ಬಹಿರಂಗ ಪಡಿಸುತ್ತಾಳೆ. ಈ ಗ್ರೂಪ್ ಅಡ್ಮಿನ್ ಸೇರಿ ಕೆಲವರನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಇಂಥಾ ಇನ್ನೂ ಹಲವು ಗ್ರೂಪ್‌ಗಳು ಇರುವ ಬಗ್ಗೆ ಅನುಮಾನ ಇದೆ.

ಹೈಸ್ಕೂಲ್‌ ಮಕ್ಕಳಲ್ಲಿ ಈ ಬಗೆಯ ಕ್ರೌರ್ಯ ಯಾಕೆ?

ಈ ಬಗ್ಗೆ ಮನಃಶಾಸ್ತ್ರಜ್ಞೆ ಡಾ. ಕೆಎಸ್‌ ಶುಭ್ರತಾ ಅವರನ್ನು ಮಾತನಾಡಿಸಿದಾಗ ಅವರು ಹೇಳಿದ್ದಿಷ್ಟು:

ಈ ಘಟನೆ ಆಘಾತಕಾರಿಯಾದರೂ ಈ ಬಗ್ಗೆ ಅಚ್ಚರಿ ಇಲ್ಲ. ಸೋಷಲ್‌ ಮೀಡಿಯಾಗಳ ಸುಲಭ ಲಭ್ಯತೆ ಮಕ್ಕಳ ವರ್ತನೆ ಮೇಲೆ ಬಹಳ ಪರಿಣಾಮ ಬೀರುತ್ತಿದೆ, ಹೈ ರಿಸ್ಕ್‌ ತೆಗೆದುಕೊಂಡು ಖುಷಿ ಕಾಣೋ ಹರೆಯದವರನ್ನು ಈ ಸಾಮಾಜಿಕ ತಾಣಗಳು ದಿಕ್ಕೆಡಿಸುತ್ತಿವೆ ಅನ್ನೋದಂತೂ ಸತ್ಯ. ಇದಕ್ಕೆ ಒಂದಿಷ್ಟುಕಾರಣಗಳೂ ಇವೆ.

- ಹದಿಹರೆಯದ ವಯಸ್ಸಲ್ಲಿ ದೈಹಿಕ, ಮಾನಸಿಕ ಹಾಗೂ ಲೈಂಗಿಕ ಬೆಳವಣಿಗೆಗಳು ನಡೆಯುತ್ತಿರುತ್ತವೆ. ಈ ಹಂತದಲ್ಲಿ ಮನಸ್ಸು ಬಿರುಗಾಳಿಗೆ ಸಿಕ್ಕ ಹಾಗೆ ಸದಾ ಕ್ಷೋಭೆಯಿಂದಿರುತ್ತದೆ.

- ಈ ವಯಸ್ಸಿನ ಮಕ್ಕಳ ಮನಸ್ಸು ಹೈ ರಿಸ್ಕ್‌ ತಗೊಳ್ಳೋದಕ್ಕೆ ಚಡಪಡಿಸುತ್ತಾ ಇರುತ್ತದೆ. ಇಲ್ಲಿಯವರೆಗೆ ಹೆತ್ತವರ ಹಿಡಿತದಲ್ಲಿದ್ದವರಿಗೆ ಈಗ ಏಕಾಏಕಿ ಸಾಹಸಕ್ಕೆ ಧುಮುಕುವ ಕ್ರೇಜ್‌. ಹೀಗೆ ಮಾಡಿದರೆ ಮುಂದೇನಾಗಬಹುದು ಅನ್ನೋದರ ಬಗ್ಗೆ ಅವರಿಗೆ ಚಿಂತೆ ಇರಲ್ಲ.

- ಹೈ ಸ್ಪೀಡ್‌ನಲ್ಲಿ ಬೈಕ್‌ ಓಡಿಸೋದು, ಬೇರೆ ಬೇರೆ ಬಗೆಯ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳೋದು, ಚಾಲೆಂಜ್‌ ಹೆಸರಲ್ಲಿ ಏನೇನೋ ಪುಂಡಾಟಿಕೆಯಲ್ಲಿ ತೊಡಗೋದು ಇವೆಲ್ಲ ಈ ಹೈ ರಿಸ್ಕ್‌ ಮೆಂಟಾಲಿಟಿಯ ಪರಿಣಾಮಗಳು.

- ಹದಿಹರೆಯದ ಸಮಯದಲ್ಲಿ ಮಿದುಳು ಇನ್ನೂ ಸಂಪೂರ್ಣವಾಗಿ ಬೆಳವಣಿಗೆಯಾಗಿರುವುದಿಲ್ಲ. ಮಿದುಳಿನ ಮುಂಭಾಗದಲ್ಲಿ ಪ್ರೀಫ್ರಂಟಲ್‌ ಕಾರ್ಟೆಕ್ಸ್‌ (ಪಿಎಫ್‌ ಸಿ) ಇರುತ್ತೆ. ಇದು ಸಾಮಾಜಿಕ ಜವಾಬ್ದಾರಿ, ನಿರ್ಧಾರ ತೆಗೆದುಕೊಳ್ಳೋದು, ನಿರ್ಣಯಕ್ಕೆ ಬರೋದರಲ್ಲಿ ಪ್ರಮುಖ ಪಾತ್ರ ವಹಿಸುತ್ತೆ. ಟೀನೇಜ್‌ ಮಕ್ಕಳಲ್ಲಿ ಈ ಭಾಗ ಇನ್ನೂ ಬೆಳವಣಿಗೆಯ ಹಂತದಲ್ಲಿರುವ ಕಾರಣ ಅವರಿಗೆ ಸ್ಟ್ರಾಂಗ್‌ ನಿರ್ಧಾರ ತೆಗೆದುಕೊಳ್ಳೋದು, ಭವಿಷ್ಯದ ಬಗೆಗೆ ಚಿಂತನೆ ನಡೆಸೋದು ಇತ್ಯಾದಿ ಸಾಧ್ಯವಾಗಲ್ಲ.

ಅವರ ಗ್ರೂಪ್‌ ಚಾಟ್‌ನ ಗುರಿ ಹುಡುಗಿಯರ ಗ್ಯಾಂಗ್‌ರೇಪ್‌ !

- ಯುವಕರು ಹೈ ರಿಸ್ಕ್‌ನಲ್ಲಿ ಖುಷಿ ಕಾಣ್ತಾರೆ. ಯೋಚನಾ ಶಕ್ತಿ ಕಡಿಮೆ ಇರುತ್ತೆ.

- ಹಿಂದೆ ಈ ಸಮಸ್ಯೆ ಇರಲಿಲ್ವಾ, ಈಗ ಮಾತ್ರ ಯಾಕೆ ಅಂದರೆ, ಸುಲಭವಾಗಿ ಸಿಗುವ ಸೋಷಲ್‌ ಮೀಡಿಯಾಗಳಿಂದ ಪ್ರಚೋದನೆಗೊಳಪಟ್ಟು ಹೀಗೆ ಮಾಡುತ್ತಾರೆ ಅನ್ನಬಹುದು.

- ಲಾಕ್‌ಡೌನ್‌ ಟೈಮ್‌ನಲ್ಲಿ ವಿದ್ಯಾರ್ಥಿಗಳ ಸ್ಕ್ರೀನ್‌ ಟೈಮ್‌ ಜಾಸ್ತಿ ಆಗಿರೋದೂ ಕಾರಣವಾಗಿರಬಹುದು.

ನಿಮ್ಮನೆಯಲ್ಲೂ ಹರೆಯದ ಮಕ್ಕಳಿದ್ರೆ ಈ ಐದು ಸೂತ್ರ ಪಾಲಿಸಿ

1. ಮಕ್ಕಳು ರೂಮ್‌ನಲ್ಲಿ ಲಾಕ್‌ ಹಾಕ್ಕೊಂಡು ಕಂಪ್ಯೂಟರ್‌ ನೋಡಲು ಅವಕಾಶ ಕೊಡಬೇಡಿ.

2. ನಿಮ್ಮ ಮೇಲ್ವಿಚಾರಣೆ ಅತ್ಯವಶ್ಯಕ. ಅರ್ಜೆಂಟ್‌ ಅಸೈನ್‌ಮೆಂಟ್‌ ಬಂದಿದೆ ಅಂತ ಹೇಳಿ ಮಕ್ಕಳು ಕಂಪ್ಯೂಟರ್‌ನಲ್ಲಿ ಸೀಕ್ರೆಟ್‌ ಆಗಿ ಏನು ಬೇಕಾದ್ರೂ ಮಾಡಬಹುದು.

3. ಮಕ್ಕಳು ಸಮಾನ ವಯಸ್ಸಿನ ಗುಂಪಿನಲ್ಲಿ ಬೆರೆಯುವಾಗ ಹುಷಾರಾಗಿರಿ. ಒಂಟಿಯಾಗಿದ್ದಾಗ ಎಲ್ಲ ಮಕ್ಕಳೂ ಒಳ್ಳೆಯವರೇ ಆಗಿರುತ್ತಾರೆ. ಗ್ರೂಪ್‌ನಲ್ಲಿ ಸೇರಿದಾಗ ಅವರ ವರ್ತನೆ ಬದಲಾಗುತ್ತೆ. ಸನ್ನಡತೆಯವರ ಜೊತೆಗೆ ಫ್ರೆಂಡ್‌ಶಿಪ್‌ ಮಾಡಿಸಿ,

#FeelFree ಈ ಹುಡುಗನಿಗೆ ಆಂಟಿಯರನ್ನು ಕಂಡ್ರೇ ಆಕರ್ಷಣೆಯಂತೆ!

4. ಮಕ್ಕಳಿಗೆ ಪಾಸಿಟಿವ್‌ ರಿವಾರ್ಡ್‌ ಕೊಡಿ. ಒಳ್ಳೆ ಕೆಲಸ ಮಾಡಲು ಪ್ರಚೋದಿಸಿ. ಗುರಿ ಇಟ್ಟು ಓದಲು, ಗುರಿ ತಲುಪಲು ಚಿಕ್ಕ ವಯಸ್ಸಿಂದಲೇ ಅಭ್ಯಾಸ ಮಾಡಿಸಿ.

5. ಉತ್ತಮ ಹವ್ಯಾಸಗಳನ್ನು ಬೆಳೆಸಿ, ಅದರಲ್ಲಿ ತಲ್ಲೀನವಾಗುವ ಮನಸ್ಸು ಪ್ರಶಾಂತವಾಗಿರುತ್ತದೆ.

Follow Us:
Download App:
  • android
  • ios