2016ರ ಸಂಶೋಧನೆಯೊಂದರ ಪ್ರಕಾರ, 1920ರಿಂದೀಚಿನ ತಲೆಮಾರುಗಳನ್ನು ಲೆಕ್ಕಕ್ಕೆ ತೆಗೆದುಕೊಂಡರೆ, ಪ್ರಸ್ತುತದ ತಲೆಮಾರು ಉಳಿದವರೆಲ್ಲರಿಗಿಂತ ಕಡಿಮೆ ಬಾರಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದೆ. ಹಾಗಾಗಿ, ಸೆಕ್ಸ್‌ನಿಂದ ಸಿಗುತ್ತಿದ್ದ ಹಲವಾರು ಆರೋಗ್ಯ ಲಾಭಗಳಿಂದಲೂ ಈ ತಲೆಮಾರು ಹೆಚ್ಚು ವಂಚಿತವಾಗುತ್ತಿದೆ. ಸಂಗಾತಿ ಊರಿನಲ್ಲಿಲ್ಲದ ಕಾರಣವೋ ಅಥವಾ ಮತ್ತಿನ್ಯಾವುದೋ ಕಾರಣಕ್ಕಾಗಿ ಲೈಂಗಿಕ ಕ್ರಿಯೆಯಿಂದ ಧೀರ್ಘಕಾಲ ದೂರವುಳಿಯಬೇಕಾಗಿ ಬಂದಾಗ ಪುರುಷರ ದೇಹದಲ್ಲಿ ಏನೆಲ್ಲ ಬದಲಾಗಬಹುದು, ಏನೆಲ್ಲ ಅಡ್ಡ ಪರಿಣಾಮಗಳಾಗಬಹುದು ಎಂಬುದು ಇಲ್ಲಿವೆ ನೋಡಿ. 

ಲೈಂಗಿಕ ಕ್ರಿಯೆಯಿಂದ ಕೊರೋನಾ ಹರಡುತ್ತಾ? ಸಿಕ್ಕಿತು ಉತ್ತರ

- ಮುಂದಿನ ಬಾರಿಗೆ ರಿದಂ ಸಿಗುವುದು ಡೌಟ್

ಬಳಸದಿದ್ದರೆ ಕಳೆದುಕೊಳ್ಳುವಿರಿ ಎಂಬ ಮಾತೊಂದಿದೆಯಲ್ಲ... ಅದು ಈ ವಿಷಯದಲ್ಲಿ ಒಂದು ಮಟ್ಟಿಗೆ ನಿಜ. 2008ರಲ್ಲಿ ಅಮೆರಿಕನ್ ಜರ್ನಲ್ ಆಫ್ ಮೆಡಿಸಿನ್‌ನಲ್ಲಿ ಪ್ರಕಟವಾದ ವರದಿಯೊಂದರ ಪ್ರಕಾರ, 50ರ ನಂತರದ ವಯೋಮಾನದ ಪುರುಷರಲ್ಲಿ ಲೈಂಗಿಕವಾಗಿ ಸಕ್ರಿಯವಾಗಿಲ್ಲದವರು ಹೆಚ್ಚು ಎರೆಕ್ಟೈಲ್ ಡಿಸ್‌ಫಂಕ್ಷನ್‌ನಿಂದ ಬಳಲುತ್ತಾರಂತೆ. 

- ಪ್ರೊಸ್ಟೇಟ್ ಕ್ಯಾನ್ಸರ್ ರಿಸ್ಕ್ ಹೆಚ್ಚು

ಸಂಗಾತಿ ಇಲ್ಲ ಸರಿ, ಸ್ವಯಂ ಸಂತೋಷ ಕಂಡುಕೊಳ್ಳಬಹುದಲ್ಲ... ನೀವು ಹಸ್ತಮೈಥುನವೂ ಮಾಡಿಕೊಳ್ಳದೆ ಲೈಂಗಿಕ ಚಟುವಟಿಕೆಯಿಂದ ದೂರವುಳಿದರೆ ಇದು ಬಹಳ ಅನಾರೋಗ್ಯಕಾರಿ ಅಭ್ಯಾಸ ಎನ್ನುತ್ತದೆ ವಿಜ್ಞಾನ. ವಾರಕ್ಕೆ ಕನಿಷ್ಠ ಆರೇಳು ಬಾರಿ ಸೆಕ್ಸ್ ಅಥವಾ ಹಸ್ತಮೈಥುನ ಇಲ್ಲದಿದ್ದಲ್ಲಿ ಪ್ರೊಸ್ಟೇಟ್ ಕ್ಯಾನ್ಸರ್ ರಿಸ್ಕ್ ಹೆಚ್ಚುತ್ತದೆ ಎಂಬುದನ್ನು ಬಹಳಷ್ಟು ಅಧ್ಯಯನಗಳು ಸಾರಿ ಹೇಳಿವೆ. 

- ರಕ್ತದೊತ್ತಡ ಹೆಚ್ಚುತ್ತದೆ

ಲವ್‌ಮೇಕಿಂಗ್‌ನ ಚೆಂದದ ರಾತ್ರಿಯೊಂದು ಜಗತ್ತಿನ ಎಲ್ಲವನ್ನೂ ಸರಿ ಮಾಡಿದಂತೆನಿಸುತ್ತದೆ. ಬಾಸ್‌ನ ಕಿರಿಕಿರಿ, ಮುಗಿಯದ ಪ್ರಾಜೆಕ್ಟ್, ಡೆಡ್‌ಲೈನ್‌ಗಳ ಭರಾಟೆ- ಎಲ್ಲವನ್ನೂ ನಿಭಾಯಿಸಬಹುದು ಎಂಬ ಆಶಾಭಾವ ಹುಟ್ಟಿಸುತ್ತದೆ. ಇದೇನು ಕಾಕತಾಳೀಯವಲ್ಲ. ಬಯೋಲಜಿಕಲ್ ಸೈಕಾಲಜಿ ಎಂಬ ಮೆಡಿಕಲ್ ಜರ್ನಲ್‌ನಲ್ಲಿ 2006ರಲ್ಲಿ ಪ್ರಕಟವಾದ ಅಧ್ಯಯನ ವರದಿಯಂತೆ, ನಿಯಮಿತವಾಗಿ ಸೆಕ್ಸ್ ಹೊಂದುವವರ ರಕ್ತದೊತ್ತಡ ಇತರರಿಗಿಂತ ಕಡಿಮೆ ಇರುತ್ತದೆ. 

ಮೊಸಳೆ, ಹೈನಾ, ಹಾವು ಸತ್ತರೆ ಅವರು ಸೆಕ್ಸ್‌ಗೆ ಹೇಳಬೇಕು ಗುಡ್‌ ಬೈ; ಏನ ...

- ಹೆಚ್ಚು ಒತ್ತಡ

ಧೀರ್ಘಕಾಲದಲ್ಲಿ ಸೆಕ್ಸ್ ಹೊಂದದಿದ್ದಲ್ಲಿ ಒತ್ತಡಕ್ಕೊಳಗಾಗುತ್ತೀರಿ. ಇದಕ್ಕೆ ಕೂಡಾ ವಿಜ್ಞಾನದ ಬೆಂಬಲವಿದೆ. ಲೈಂಗಿಕ ಕ್ರಿಯೆ ಸಂದರ್ಭದಲ್ಲಿ ದೇಹದಲ್ಲಿ ಎಂಡೋರ್ಫಿನ್ ಹಾರ್ಮೋನ್‌ಗಳು ಬಿಡುಗಡೆಯಾಗುತ್ತವೆ. ಇವು ನಮ್ಮ ಮೂಡನ್ನು ಚೆನ್ನಾಗಿರಿಸುತ್ತವೆ. ಇದರಿಂದ ಒತ್ತಡ ಬಹಳಷ್ಟು ಕಡಿಮೆಯಾಗುತ್ತದೆ. 

- ರೋಗ ನಿರೋಧಕ ಶಕ್ತಿ ಕುಗ್ಗುತ್ತದೆ

ಸೈಕಾಲಜಿಸ್ಟ್‌ಗಳಾದ ಕಾರ್ಲ್ ಚಾರ್ನೆಟ್‌ಸ್ಕಿ ಹಾಗೂ ಫ್ರಾನ್ಸಿಸ್ ಬ್ರೆನ್ನನ್ ಪ್ರಕಾರ, ನಮ್ಮ ರೋಗ ನಿರೋಧಕ ಶಕ್ತಿಗೂ ಸೆಕ್ಸ್‌ಗೂ ಹತ್ತಿರದ ಸಂಬಂಧವಿದ್ದು,  ಪರಸ್ಪರ  ಲಾಭಕಾರಿಯಾಗಿವೆ.  ವಾರದಲ್ಲಿ ಕನಿಷ್ಠ ಎರಡು ಬಾರಿ ಸೆಕ್ಸ್ ಹೊಂದುವವರ ಸಲೈವಾ ಸ್ಯಾಂಪಲ್ ಸಂಗ್ರಹಿಸಿ ಪರೀಕ್ಷಿಸಿದಾಗ ಅವರಲ್ಲಿ ಕಾಮನ್ ಕೋಲ್ಡ್ ವಿರುದ್ಧ ಹೋರಾಡುವ ಆ್ಯಂಟಿಬಾಡಿ ಇಮ್ಯುನೋಗ್ಲೊಬುಲಿನ್ ಎ ಹೆಚ್ಚಿನ ಮಟ್ಟದಲ್ಲಿ ಇರುವುದು ಕಂಡುಬಂದಿದೆ. 

- ಕಾರ್ಯಕ್ಷಮತೆ ಕುಗ್ಗುತ್ತದೆ

ಓರೆಗಾವ್ ಸ್ಟೇಟ್ ಯೂನಿವರ್ಸಿಟಿ ನಡೆಸಿದ ಅಧ್ಯಯನದಲ್ಲಿ ಆ್ಯಕ್ಟಿವ್ ಸೆಕ್ಸ್ ಲೈಫ್ ಹೊಂದಿರುವವರು ಉದ್ಯೋಗದಲ್ಲಿ ಹೆಚ್ಚು ಸಂತೋಷವಾಗಿದ್ದು, ಹೆಚ್ಚಿನ ಕಾರ್ಯಕ್ಷಮತೆ ತೋರುತ್ತಾರೆ. ಆರೋಗ್ಯವಂತ ಸಂಬಂಧ ಹಾಗೂ ಆರೋಗ್ಯಕಾರಿ ಸೆಕ್ಸ್ ಲೈಫ್ ಹೊಂದಿರುವ ಉದ್ಯೋಗಿಗಳು ಕೆಲಸದಲ್ಲಿ ಸಂಪೂರ್ಣ ಎಂಗೇಜ್ ಆಗಬಲ್ಲರು ಎಂದು ತಿಳಿದುಬಂದಿದೆ.