ಎರಡು ವರ್ಷ ಮೋದಿ ಹಿಮಾಲಯದಲ್ಲಿ ಏನು ಮಾಡ್ತಿದ್ರು ಗೊತ್ತಾ?
ಇಂದು ಪ್ರಧಾನ ಮಂತ್ರಿ ಮೋದಿ ಅವರ ಎಪ್ಪತ್ತನೇ ಜನ್ಮದಿನ. ಮೋದಿ ಇಂದು ತಲುಪಿರುವ ಎತ್ತರಕ್ಕೆ ಎರಡು ವರ್ಷ ಅವರ ಯವ್ವನದಲ್ಲಿ ಹಿಮಾಲಯದಲ್ಲಿ ಮಾಡಿರುವ ಸಾಧನೆಯೇ ಕಾರಣ,
ಎಷ್ಟೊಂದು ಸಮಸ್ಯೆಗಳು, ಸವಾಲುಗಳು, ಚೀನಾದಂಥ ದೇಶಗಳಿಂದ ಕಿರುಕುಲಗಳು- ಇವೆಲ್ಲದರ ನಡುವೆ ಪ್ರಧಾನಿ ಮೋದಿ ವಿಚಲಿತರಾಗದೆ ದೇಶದ ಹೊಣೆಗಾರಿಕೆಯನ್ನು ಮುನ್ನಡೆಸಿದ್ದಾರೆ. ಅಳ್ಳೆದೆಯವರಾದರೆ ಇಷ್ಟು ಹೊತ್ತಿಗೆ ರಾಜೀನಾಮೆ ಬಿಸಾಡಿ ಓಡಿಹೋಗಿರುತ್ತಿದ್ದರು. ಆದರೆ ಮೋದಿಯವರನ್ನು ಅವರಿದ ಬೇರೆ ಮಾಡಿರುವುದು ಅವರ ಇಚ್ಛಾಶಕ್ತಿ, ದೃಢತೆ, ತಾರುಣ್ಯದಲ್ಲಿ ಹಿಮಾಲಯದಲ್ಲಿ ಓಡಾಡಿ ಸಾಧು ಸಂತರ ಸಂಸರ್ಗದಲ್ಲಿ ಗಳಿಸಿದ ಒಂದು ಬಗೆಯ ಸನ್ಯಾಸಿ ವ್ಯಕ್ತಿತ್ವ.
ಹೌದು, ಮೋದಿಯವರು ಅವರ ತಾರುಣ್ಯದಲ್ಲಿ ಎರಡು ವರ್ಷ ಹಿಮಾಲಯದಲ್ಲಿದ್ದರು. ಅಲ್ಲಿ ಅವರು ಏನು ಮಾಡುತ್ತಿದ್ದರು ಅನ್ನುವ ಬಗ್ಗೆ ಕುತೂಹಲಕಾರಿ ಕತೆಗಳಿವೆ. ಅದೇನೇ ಇರಲಿ, ಅವರು ಸಾಧು ಸಂತರ ಒಡನಾಟದಲ್ಲಿ ಇದ್ದದ್ದಂತೂ ನಿಜ.
ಅವರಿಗೆ ಹನ್ನೆರಡು ವರ್ಷ ವಯಸ್ಸಾದಾಗ, ಸನ್ಯಾಸಿಯೊಬ್ಬ ಮೋದಿಯವರನ್ನು ಕಂಡು, ಈತ ಮುಂದೆ ದೇಶವನ್ನಾಳುವ ದೊರೆಯಾಗಲಿದ್ದಾನೆ, ಅಥವಾ ದೊಡ್ಡ ಸನ್ಯಾಸಿ ಆಗಲಿದ್ದಾನೆ ಎಂದು ಹೇಳಿದರು. ಇದರಿಂದ ಭಯಗೊಂಡ ಮೋದಿಯವರ ತಾಯಿ ಹೀರಾಬೆನ್, ಮೋದಿಯವರಿಗೆ ಮದುವೆ ಮಾಡಿಸಿದರು. ಅವರ ಪತ್ನಿ ಯಶೋದಾಬೆನ್ ಇನ್ನೂ ಬಾಲಕಿಯಾಗಿದ್ದರು. ಅವರು ವಯಸ್ಸಿಗೆ ಬಂದ ಮೇಲೆ ಆಕೆಯನ್ನು ತವರಿನಿಂದ ಕರೆಸಿಕೊಳ್ಳುವುದು ಎಂದು ನಿಶ್ಚಯವಾಯಿತು. ಆದರೆ ಮೋದಿಗೆ ಮಾಮೂಲಿ ಸಂಸಾರದ ಬದುಕು ಒಂದು ಚೂರೂ ಇಷ್ಟವಿರಲಿಲ್ಲ. ಹೀಗಾಗಿ ಅವರು ಹಿಮಾಲಯಕ್ಕೆ ಹೋಗುತ್ತೇನೆ ಎಂದರು. ಕುಟುಂಬದವರ್ಯಾರಿಗೂ ಇದು ಇಷ್ಟವಿರಲಿಲ್ಲ. ಹಾಗಾಗಿ ಒಂದು ರಾತ್ರಿ ಅವರು ಯಾರಿಗೂ ಹೇಳದೆ ಕೇಳದೆ ಹಿಮಾಲಯಕ್ಕೆ ಹೊರಟುಬಿಟ್ಟರು.
ಹಿಮಾಲಯದಲ್ಲಿ ಅವರು ತಿರುಗಾಡದ ಜಾಗವಿಲ್ಲ. ಭೇಟಿ ಕೊಡದ ಆಶ್ರಮಗಳಿಲ್ಲ. ಅವರು ಹೃಷಿಕೇಶ, ಹರಿದ್ವಾರ, ಕೇದಾರನಾಥ, ಬದರಿನಾಥ ಮುಂತಾದ ಎಲ್ಲ ಪವಿತ್ರ ಧಾಮಗಳಿಗೂ ಭೇಟಿ ಕೊಟ್ಟರು. ಅಲ್ಲಿ ಇದ್ದ ಸಾಧು ಸಂತರನ್ನೆಲ್ಲ ಭೇಟಿಯಾದರು. ಈ ಬದುಕಿನ ಅರ್ಥವೇನು? ಇದರಿಂದ ನಮಗೆ ಏನು ಪ್ರಯೋಜನ? ನಮ್ಮಿಂದ ನಾಲ್ಕು ಜನರಿಗೆ ಏನಾದರೂ ಪ್ರಯೋಜನ ಆಗದೆ ಇದ್ದರೆ ನಾವು ಬದುಕಿ ಪ್ರಯೋಜನವೇನು? ನಮ್ಮ ಜೀವನ ನಾವು ನೋಡಿದಷ್ಟೇನಾ, ಇದರಿಂದ ಆಚೆಗೂ ಏನಾದರೂ ಇದೆಯಾ? ಪುನರ್ಜನ್ಮ ಎಂಬುದು ಇದೆಯಾ? ಈ ಜನ್ಮ ಜನ್ಮಾಂತರಗಳ ಅರ್ಥವೇನು? ಮನುಷ್ಯ ಇಷ್ಟೊಂದು ಕಷ್ಟಗಳನ್ನು ಅನುಭವಿಸುತ್ತಾನಲ್ಲ, ಇದಕ್ಕೆಲ್ಲ ಏನರ್ಥ? ಇಂಥ ಪ್ರಶ್ನೆಗಳು ಯುವಕ ನರೇಂದ್ರನನ್ನು ಕೊರೆಯುತ್ತಿದ್ದವು. ಅದಕ್ಕೆ ಉತ್ತರ ಹುಡುಕುತ್ತಿದ್ದರು. ಆಗಿನ್ನೂ ನರೇಂದ್ರನಿಗೆ ಹದಿನೇಳು ವರ್ಷ.
ಪ್ರಧಾನಿ ಮೋದಿಗೆ ಕಂಗನಾ ಸ್ಪೆಷಲ್ ವಿಶ್: ಏನ್ ಹೇಳಿದ್ದಾರೆ ನೋಡಿ
ಇದೇ ಸಂದರ್ಭದಲ್ಲಿ ಮೋದಿ, ಹಲವಾರು ಯೋಗಿಗಳನ್ನು, ಸಂತರನ್ನು ಭೇಟಿಯಾದರು. ಅವರೆಲ್ಲರೂ ಈ ಯುವಕನಲ್ಲಿ ಮೊಳೆಯುತ್ತಿದ್ದ ಪ್ರಶ್ನೆಗಳನ್ನು ಕಂಡು ಮೂಕವಿಸ್ಮಿತರಾದರು. ಮೋದಿ ಕೆಲವು ಯೋಗಿಗಳ ಶಿಷ್ಯತ್ವವನ್ನೂ ಸ್ವೀಕರಿಸಿದರು. ಆ ಯೋಗಿಗಳು ಮೋದಿಗೆ ಯೋಗ, ಪ್ರಾಣಾಯಾಮ, ಧ್ಯಾನದ ನಾನಾ ಕ್ರಮಗಳು ಇತ್ಯಾದಿಗಳನ್ನು ಹೇಳಿಕೊಟ್ಟರು. ಕೆಲವು ಯೋಗಿಗಳು ಅವರಿಗೆ ಪವಾಡಗಳನ್ನೂ ಮಾಡಿ ತೋರಿಸಿದರು. ತರುಣ ಮೋದಿ, ಸನ್ಯಾಸಿ ನರೇಂದ್ರನಾಗಿ ಹಿಮಾಲಯದ ಗುಹೆಗಳಲ್ಲಿ ಧ್ಯಾನನಿರತರಾದರು. ಎಲ್ಲವನ್ನೂ ಮೀರಿದ, ಎಲ್ಲವನ್ನೂ ಒಳಗೊಳ್ಳಬಲ್ಲ ಅಚಿಂತ್ಯ, ಅಗಮ್ಯ ಬ್ರಹ್ಮಾಂಡ ಶಕ್ತಿಯ ಅನ್ವೇಷಣೆಯಲ್ಲಿ ಅವರು ನಿರತರಾದರು.
ನಮೋ 70: ನವಭಾರತಕ್ಕೆ ನರೇಂದ್ರ ಮೋದಿ ಎಂಬ ಹೆದ್ದಾರಿ!
ಅಷ್ಟರಲ್ಲಿ ಅವರಿಗೆ ಒಬ್ಬ ನಿಗೂಢ ಸನ್ಯಾಸಿಯ ಪರಿಚಯವಾಯಿತು. ಮೋದಿ ಧ್ಯಾನ ಮಾಡುತ್ತಿದ್ದ ಗುಹೆಗೆ ಆ ಸನ್ಯಾಸಿ ಬಂದಿದ್ದ. ಒಂದು ಸಂಜೆ ಆತ ಇದ್ದಕ್ಕಿದ್ದಂತೆ ಪ್ರತ್ಯಕ್ಷನಾದ. ಎಲ್ಲಿಂದ ಬಂದನೋ ತಿಳಿಯಲಿಲ್ಲ. ಆತ ಹೇಳಿದ- ನೀನು ಈ ಕಗ್ಗಾಡಿನಲ್ಲಿ ನಿನ್ನ ಕರ್ತೃತ್ವಶಕ್ತಿಯನ್ನು ವ್ಯರ್ಥ ಮಾಡುತ್ತಿದ್ದೀಯ. ಬೇಲೂರು ಮಠಕ್ಕೆ ಹೋಗು. ಅಲ್ಲಿ ನಿನಗೆ ಸೂಕ್ತ ಗುರು, ಮಾರ್ಗದರ್ಶಕರು ಸಿಗುತ್ತಾರೆ. ಅವರು ಹೇಳಿದಂತೆ ಮುನ್ನಡೆ. ಆ ಸನ್ಯಾಸಿಯ ಮಾತುಗಳಲ್ಲಿ ಮೀರಲಾಗದ ಯಾವುದೋ ಆಕರ್ಷಣೆ ಇತ್ತು.
ಮೊಬೈಲ್ ಕಸಿದು ಮಕ್ಕಳಿಗೆ ಸಾಧಕರ ಜೀವನ ಪರಿಚಯ... ಮೋದಿಯ ಒಂದು ಗೊಂಬೆಯ ಕತೆ!
ಮೋದಿ ಹಾಗೇ ಮಾಡಿದರು. ಬೇಲೂರು ಮಠಕ್ಕೆ ಆಗಮಿಸಿ, ಅಲ್ಲಿದ್ದ ಸ್ವಾಮಿ ಮಾಧವಾನಂದರ ಶಿಷ್ಯರಾದರು. ಮಾಧವಾನಂದರು ಮೋದಿಗೆ ದ್ಯಾನ ಯೋಗಗಳ ಜೊತೆಗೆ ಸಮಾಜಸೇವೆ, ಲೋಕಕಲ್ಯಾಣಗಳ ಕೈಂಕರ್ಯವನ್ನೂ ಹೇಳಿಕೊಟ್ಟರು. ಅದರ ಫಲವೇ ಇಂದು ನಮಗೆ ಸಿಕ್ಕಿರುವ ರಾಜಕಾರಣಿ, ಮುತ್ಸದ್ಧಿ, ಪ್ರಧಾನಿ ಮೋದಿ.