Asianet Suvarna News Asianet Suvarna News

Valentine's day: ಪ್ರೇಮಿ ಇಲ್ಲವೇ? ಗೆಳೆಯರ ಜೊತೆಗೇ ಆಚರಿಸಿ!

ವ್ಯಾಲೆಂಟೈನ್ಸ್ ಡೇ ಯನ್ನು ಪ್ರೇಮಿ ಇಲ್ಲದೆ ಇರುವವರು ಕೂಡ ಹೇಗೆ ವಿಶೇಷವಾಗಿ ಆಚರಿಸಬಹುದು, ನಿಮ್ಮ ಬೆಸ್ಟ್ ಫ್ರೆಂಡ್ ಜೊತೆಗೆ ಈ ಪ್ರೇಮಿಗಳ ದಿನವನ್ನು ಹೇಗೆ ನೆನಪಿನಲ್ಲಿ ಉಳಿಯುವಂತೆ ಕಳೆಯಬಹುದು ಎಂಬುದನ್ನು ನೀವು ಇಂದು ತಿಳಿದುಕೊಳ್ಳಲಿದ್ದೀರಿ.

 

ways to spend valentines day with friends
Author
Bangalore, First Published Feb 6, 2022, 5:52 PM IST | Last Updated Feb 6, 2022, 5:52 PM IST

ವ್ಯಾಲೆಂಟೈನ್ಸ್ ಡೇ ಅಂದ ಕೂಡಲೇ ಪ್ರೇಮಿಗಳು (Lovers) ನೆನಪಾಗುತ್ತಾರೆ. ಇದು ಖಂಡಿತವಾಗ್ಲೂ ಪ್ರೇಮಿಗಳಿಗೆ ಬಹಳ ವಿಶೇಷವಾದ ದಿನ. ಎಲ್ಲರಿಗೂ ಗೊತ್ತಿದೆ ವ್ಯಾಲೆಂಟೈನ್ಸ್ ಡೇ ಇರುವುದು ಪ್ರೇಮಿಗಳಿಗಾಗಿಯೆಂದು. ಆದರೆ, ಸಿಂಗಲ್ ಹಾಗೆಯೇ ಉಳಿದಿರುವವರು ಪಾಡೇನು?

ನಿಮ್ಮ ಸೋಲ್ ಮೇಟ್ (Sole mate) ಅಂದ ಕೂಡಲೇ ಅದು ಹುಡುಗರಿಗೆ ಹುಡುಗಿಯರು ಆಗಿರಬೇಕು ಅಥವಾ ಹುಡುಗಿಯರಿಗೆ ಹುಡುಗರು ಆಗಿರಬೇಕು ಎಂದೇನಿಲ್ಲ. ಕೆಲವೊಮ್ಮೆ ನಮ್ಮ ಮನಸ್ಸಿನ ಭಾವನೆಯನ್ನು ಅರ್ಥ ಮಾಡಿಕೊಳ್ಳುವ ಸೋಲ್ ಮೇಟ್ ನಮ್ಮ ಬೆಸ್ಟ್ ಫ್ರೆಂಡ್ ಆಗಿರುತ್ತಾರೆ. ನಿಮ್ಮ ಪ್ರತಿಯೊಂದು ಸುಖ, ಕಷ್ಟದಲ್ಲಿ ಜೊತೆಗೆ ಉಳಿಯುವವರು ನಿಮ್ಮ ಆತ್ಮ ಸ್ನೇಹಿತರು ಅಂದಮೇಲೆ ಅವರೊಂದಿಗೆ ನಿಮ್ಮ ವಾಲೆಂಟೈನ್ಸ್ ಡೇ ಆಚರಿಸಿ ಕೊಳ್ಳುವುದರಲ್ಲಿ ತಪ್ಪೇನಿದೆ?

ನಿಮ್ಮ ಬೆಸ್ಟ್ ಫ್ರೆಂಡ್ (Best friend) ಜೊತೆಗೆ ಈ ಇಡೀ ದಿನವನ್ನು ಹೇಗೆ ಕಳೆಯಬಹುದು ಎಂಬುದಕ್ಕೆ ನಮ್ಮಲ್ಲಿ ಕೆಲವು ಸಲಹೆಗಳಿವೆ.

ಹರಟೆ ಹೊಡೆಯುವುದು

ಬೆಸ್ಟ್ ಫ್ರೆಂಡ್ ಜೊತೆಗೆ ಹರಟೆ ಹೊಡೆಯುವುದರಲ್ಲಿ ಇರುವ ಖುಷಿಯೇ ಬೇರೆ. ನಿಮಗೆ ಮನಸ್ಸಿಗೆ ತುಂಬಾ ಹತ್ತಿರವಾದವರು ಜೊತೆ ಕುಳಿತು ಮಾತನಾಡುತ್ತಿದ್ದರೆ ಸಮಯ ಹೇಗೆ ಕಳೆದು ಹೋಗುತ್ತದೆ ಎಂಬುದೇ ತಿಳಿಯುವುದಿಲ್ಲ ಅಲ್ಲವೇ, ಆ ನಿಮ್ಮ ಸ್ನೇಹಿತರೊಂದಿಗೆ ಕುಳಿತು ಬಹಳ ಹೊತ್ತು ಹರಟೆ ಹೊಡೆಯುತ್ತಾ ನೀವು ನೋಡಿದ ಸಿನಿಮಾಗಳ ಬಗ್ಗೆ ಮಾತನಾಡಿ ಅಥವಾ ನೀವು ಕೇಳಿದ ಗಾಸಿಪ್ (gossips) ಗಳ ಬಗ್ಗೆ ಚರ್ಚೆ ಕೂಡ ನಡೆಸಬಹುದು. ಹೀಗೆ ಮಾತನಾಡಲು ಬೇಕಾದಷ್ಟು ವಿಷಯಗಳು ಸಿಗುತ್ತವೆ. 

Valentines Day: ಮನೆಯಲ್ಲೇ ದಿನವನ್ನು ವಿಶೇಷವಾಗಿಸುವುದು ಹೇಗೆ?

ಅಡುಗೆ ಮಾಡುವುದು (Cooking)

ನಿಮ್ಮ ಗೆಳೆಯರಿಗೆ ಇಷ್ಟವಾಗುವಂತಹ ಅಡುಗೆಗಳನ್ನು ಮಾಡಿ ಇಬ್ಬರೂ ಒಟ್ಟಿಗೆ ಕುಳಿತುಕೊಂಡು ಆ ರುಚಿಯನ್ನು ಸವಿಯಿರಿ. ನೀವು ಕಲಿತಿರುವ ಹೊಸ ಹೊಸ ಅಡುಗೆಯ ಎಕ್ಸ್ಪೆರಿಮೆಂಟ್ (Experiment) ಮಾಡುವುದಕ್ಕೆ ಗೆಳೆಯರಿಗಿಂತ ಬೇರೆ ಒಳ್ಳೆಯ ವ್ಯಕ್ತಿ ಯಾರು ಸಿಗುತ್ತಾರೆ ಅಲ್ಲವೇ? ಇಬ್ಬರೂ ಒಟ್ಟಿಗೆ ಸೇರಿಕೊಂಡು ಮಾತನಾಡುತ್ತಾ ಅಡುಗೆ ಮಾಡುತ್ತಿದ್ದರೆ ಸಮಯ ಕಳೆಯುವುದೇ ತಿಳಿಯುವುದಿಲ್ಲ. ಇಂತಹ ಒಂದು ದಿನವನ್ನು ನೀವು ಯಾವಾಗಲೂ ನೆನಪಿಸಿಕೊಳ್ಳುತ್ತಾ ಇರಬಹುದು.

ಆಟವಾಡುವುದು (Playing) 

ನಿಮ್ಮ ಟೆನ್ಶನ್, ಸ್ಟ್ರೆಸ್ ಹಾಗೂ ಬೇರೆ ಎಲ್ಲಾ ಕೆಲಸಗಳನ್ನು ಸ್ವಲ್ಪ ಸಮಯಗಳ ಕಾಲ ಬದಿಗಿಟ್ಟು ನಿಮ್ಮ ಗೆಳೆಯರೊಂದಿಗೆ ಆಟವಾಡಿ. ಯಾವ ಆಟವನ್ನು ಬೇಕಾದರೂ ಆಡಬಹುದು. ಸಣ್ಣಪುಟ್ಟ ಆಟಗಳನ್ನು ಆಡಿದರೂ ಕೂಡ ನಿಮ್ಮ ಮನಸ್ಸು ತಿಳಿಯಾಗುತ್ತದೆ. ಅದರಲ್ಲಿಯೂ ನೀವು ನೆಚ್ಚಿನ ವ್ಯಕ್ತಿಯೊಂದಿಗೆ ಆಟವಾಡುತ್ತಿದ್ದೀರಿ ಎಂದಾಗ ಆಟದಲ್ಲಿ ಇಬ್ಬರಲ್ಲಿ ಯಾರೊಬ್ಬರೂ ಗೆದ್ದರೂ ಕೂಡ ಆ ಗೆಲುವು (Winning) ಇಬ್ಬರಿಗೂ ಸೇರುತ್ತದೆ. ಹೀಗೆ ಆಡುವುದರಿಂದ ಮನಸ್ಸು ಮತ್ತು ದೇಹ ಎರಡರ ಆರೋಗ್ಯವೂ ಹೆಚ್ಚಿಸುತ್ತದೆ. ಹೊರಗೆ ಹೋಗಿ ಆಟವಾಡಲು ಕಷ್ಟವೆನಿಸಿದರೆ ಮನೆ ಒಳಗಡೆ ಆಡುವಂತಹ ಆಟವನ್ನು ಕೂಡ ಆಡಬಹುದು.

Valentines Day: ಮನೆಯಲ್ಲೇ ದಿನವನ್ನು ವಿಶೇಷವಾಗಿಸುವುದು ಹೇಗೆ?

ಸಿನಿಮಾ ನೋಡಿ ಅಥವಾ ಸುತ್ತಾಡಿ 

ಸಿನಿಮಾ ನೋಡುವುದು ಎಲ್ಲರಿಗೂ ಇಷ್ಟವಾಗಬಹುದು. ನಿಮ್ಮ ಗೆಳೆಯರೊಂದಿಗೆ ಥಿಯೇಟರಿಗೆ ಹೋಗಿ ಯಾವುದೇ ಒಂದು ಸಿನೆಮಾವನ್ನು ನೋಡಿ. ಇಬ್ಬರು ಒಟ್ಟಿಗೆ ಎಂಜಾಯ್ (Enjoy) ಮಾಡಿ ಹೊರಗೆ ಹೋಗಲು ಕಷ್ಟವಾದರೆ ಮನೆಯಲ್ಲಿಯೇ ಕೂಡ ಸಿನಿಮಾ ನೋಡಬಹುದು. ಈಗಂತೂ ಆನ್ಲೈನಲ್ಲಿ ಸಿನಿಮಾ ನೋಡುವುದಕ್ಕೆ ಹಲವಾರು ಅವಕಾಶಗಳಿವೆ. ನಿಮ್ಮ ಗೆಳೆಯರೊಂದಿಗೆ ಈ ಅವಕಾಶದ ಸದುಪಯೋಗ ಪಡೆದುಕೊಳ್ಳಿ. ಸಂಜೆಯ ಸಮಯದಲ್ಲಿ ನಿಮ್ಮ ಪ್ರೀತಿಯ ಸ್ನೇಹಿತರೊಂದಿಗೆ ಹೊರಗೆ ಸುತ್ತಾಡಿಕೊಂಡು ಬರಲು ಹೋಗಿ ಶಾಪಿಂಗ್ (Shopping) ಕೂಡ ಮಾಡಬಹುದು. ಹೇಗಿದ್ದರೂ ಅವರಿಗೆ ಯಾವ ರೀತಿಯ ವಸ್ತುಗಳು ಇಷ್ಟವಾಗುತ್ತದೆ ಎಂಬ ವಿಷಯ ನಿಮಗೆ ತಿಳಿದಿರುತ್ತದೆ, ಹೀಗೆ ಹೋಗುವುದರಿಂದ ಇನ್ನೂ ಕೆಲವು ವಿಷಯಗಳು ತಿಳಿದುಕೊಳ್ಳಬಹುದು. ಇದರಿಂದಾಗಿ ನಿಮ್ಮಿಬ್ಬರ ನಡುವಿನ ಬಾಂಧವ್ಯ ಹೆಚ್ಚುತ್ತದೆ.

ಸ್ನೇಹಿತರೊಂದಿಗೆ ವ್ಯಾಲೆಂಟೈನ್ಸ್ ಡೇ ಆಚರಿಸಲು ಎಷ್ಟೆಲ್ಲಾ ಮಾರ್ಗಗಳಿವೆ ಅಂದಮೇಲೆ ನೀವು ಇನ್ನು ಸಿಂಗಲ್ ಆಗಿ ಉಳಿದಿರುವ ಕಾರಣವನ್ನು ದೂಷಿಸಬೇಡಿ. ಬದಲಿಗೆ ನಿಮ್ಮ ನೆಚ್ಚಿನ ಸ್ನೇಹಿತರೊಂದಿಗೆ ಈ ದಿನವನ್ನು ವಿಶೇಷವಾಗಿ ಆಚರಿಸಿಕೊಳ್ಳಿ.

 

Latest Videos
Follow Us:
Download App:
  • android
  • ios