Asianet Suvarna News Asianet Suvarna News

Viral video: ನನ್‌ ಬಿಟ್ ಹೋಗ್ಬೇಡ..ವಧು ಮನೆ ಬಿಟ್ಟು ಹೋಗದಂತೆ ತಡೆದು ನಿಲ್ಲಿಸೋ ಶ್ವಾನ

ಶ್ವಾನ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಎಲ್ಲರೂ ನಾಯಿಯನ್ನು ಸಾಕೋಕೆ, ಮುದ್ದಿಸೋಕೆ ಇಷ್ಟಪಡ್ತಾರೆ. ನಾಯಿ ಸಹ ಅಷ್ಟೇ ನಿಷ್ಠಾವಂತ ಪ್ರಾಣಿಯೆಂದು ಕರೆಸಿಕೊಳ್ಳುತ್ತದೆ.ಮನುಷ್ಯನನ್ನು ಅತಿ ಬೇಗನೇ ಹಚ್ಚಿಕೊಳ್ಳುತ್ತದೆ. ಆದ್ರೆ ಇಲ್ಲೊಂದೆಡೆ ನಾಯಿ ಮತ್ತು ಮನುಷ್ಯನ ಬಾಂಧವ್ಯ ಕಣ್ಣೀರು ತರಿಸುತ್ತದೆ. ವೈರಲ್ ಆಗಿರೋ ವೀಡಿಯೋ ಇಲ್ಲಿದೆ.

Viral video: Pet dog refuses to let go bride during vidai ceremony Vin
Author
First Published Feb 3, 2023, 3:56 PM IST

ನವದೆಹಲಿ: ಪೆಟ್ಸ್‌ ಇದ್ದರೆ ಸಾಕು ಮನೆ ತುಂಬಾ ಖುಷಿಯಿರುತ್ತದೆ. ಹೀಗಾಗಿ ಸಾಕು ಪ್ರಾಣಿಗಳನ್ನು ಮನೆಯಲ್ಲಿ ಇಟ್ಟುಕೊಳ್ಳಲು ಎಲ್ಲರೂ ಇಷ್ಟಪಡುತ್ತಾರೆ. ಮಾತು ಬಾರದ ಮೂಕ ಪ್ರಾಣಿಯಾದರೂ ಸಾಕುಪ್ರಾಣಿಗಳು ಮನುಷ್ಯನ ಭಾವನೆಗಳಿಗೆ ತುಂಬಾ ಚೆನ್ನಾಗಿ ಸ್ಪಂದಿಸುತ್ತವೆ. ಮನುಷ್ಯ ಖುಷಿಯಾದಾಗ ತಾನು ನೆಗೆದು ಖುಷಿ ವ್ಯಕ್ಯಪಡಿಸುತ್ತದೆ. ಬೇಜಾರಾದಾಗ ತಾನು ಸಪ್ಪೆ ಮೋರೆ ಹಾಕಿ ಕುಳಿತುಬಿಡುತ್ತದೆ. ಮನುಷ್ಯನ ಉದಾಸೀ ಭಾವ ಸಾಕುಪ್ರಾಣಿಗಳಿಗೆ ತುಂಬಾ ಚೆನ್ನಾಗಿ ಅರ್ಥವಾಗುತ್ತದೆ. ಹೀಗಾಗಿಯೇ ಹೆಚ್ಚಿನವರು ಪೆಟ್ಸ್ ಜೊತೆ ತುಂಬಾ ಆತ್ಮೀಯತೆಯನ್ನು ಹೊಂದಿರುತ್ತಾರೆ.

ಪೆಟ್ಸ್ ಪ್ರೇಮಿಗಳ ಅವುಗಳ ಜೊತೇನೆ ಊಟ ಮಾಡುವ, ಮಲಗುವ, ಆಟವಾಡುವ ಅಭ್ಯಾಸವನ್ನು ಹೊಂದಿರುತ್ತಾರೆ. ಮನುಷ್ಯರಾದರೂ ಭಾವನೆಗಳೊಂದಿಗೆ ಆಟವಾಡುತ್ತಾರೆ. ಆದ್ರೆ ಪ್ರಾಣಿಗಳಿಗೆ ಹೀಗೆ ಮಾಡಲು ಖಂಡಿತಾ ಸಾಧ್ಯವಿಲ್ಲ ಎಂದು ನಂಬುತ್ತಾರೆ. ಅದರಲ್ಲೂ ನಾಯಿ (Dog) ಮನುಷ್ಯನನ್ನು ಅತಿ ಬೇಗ ಹಚ್ಚಿಕೊಳ್ಳುತ್ತದೆ. ಸ್ಪಲ್ಪ ಪ್ರೀತಿ (Love) ನೀಡಿದರೂ ಸಾಕು, ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತದೆ. ಅದು ನಿಜ ಎಂಬುದನ್ನು ಇಲ್ಲೊಂದು ವೀಡಿಯೋ ಸಾಬೀತುಪಡಿಸಿದೆ.

ಮದುವೆ ಸಂಪ್ರದಾಯ ಆರಂಭವಾಗಿದ್ದು ಯಾವಾಗ? ಅದಕ್ಕೂ ಮುನ್ನ ಏನಾಗ್ತಿತ್ತು…

ವಧುವಿನ ವಿದಾಯದ ಸಂದರ್ಭದಲ್ಲಿ ತಡೆಯುವ ಶ್ವಾನ
ಸಾಕುಪ್ರಾಣಿಗಳನ್ನು ಹೊಂದುವುದು ಅದೃಷ್ಟವೆಂದು ಹೇಳುವುದು ಸುಮ್ಮನೆ ಏನಲ್ಲ. ಮೂಕಪ್ರಾಣಿಗಳ ನಿಷ್ಕಲ್ಮಶ ಪ್ರೀತಿ  ಜೀವನವನ್ನು ಹೆಚ್ಚು ವರ್ಣಮಯವಾಗಿಸುತ್ತದೆ. ಅದು ನಿಜ ಎಂಬುದು ಈ ವೀಡಿಯೋದಿಂದ ತಿಳಿದುಬರುತ್ತದೆ. ವೈರಲ್ ಆಗಿರೋ ವೀಡಿಯೋದಲ್ಲಿ ವಧುವಿನ ವಿದಾಯದ ಸಂದರ್ಭದಲ್ಲಿ ಸಾಕು ನಾಯಿಯೊಂದು ವಧು (Bride) ಮನೆಯಿಂದ ಹೊರಹೋಗಲು ನಿರಾಕರಿಸುವುದನ್ನು ನೋಡಬಹುದು.  @i_love_yau_1430 ಬಳಕೆದಾರರು Instagramನಲ್ಲಿ ಈ ಅದ್ಭುತ ವೀಡಿಯೋವನ್ನು ಹಂಚಿಕೊಂಡಿದ್ದು, ಎಲ್ಲರೂ ಮೆಚ್ಚುಗೆ ಸೂಚಿಸುತ್ತಿದ್ದಾರೆ

ಈಗ ವೈರಲ್ ಆಗಿರುವ ವೀಡಿಯೊದಲ್ಲಿ, ವಧು ತನ್ನ ತವರುಮನೆಗೆ ವಿದಾಯ ಹೇಳಿ ತೆರಳುವ ಸಮಾರಂಭದಲ್ಲಿ ತನ್ನ ನಾಯಿಯನ್ನು ಮುದ್ದಿಸುತ್ತಿರುವುದನ್ನು ಕಾಣಬಹುದು. ಪ್ರತಿಯಾಗಿ ನಾಯಿ ಸಹ ಸ್ಪಂದಿಸುತ್ತದೆ. ಭಾವನಾತ್ಮಕ ಮತ್ತು ಅನೇಕ ಜನರ ಹೃದಯವನ್ನು ಮುಟ್ಟಿದ ಸಂಗತಿಯೆಂದರೆ ನಾಯಿಯು ವಧುವಿನ ಹತ್ತಿರವೇ ಇರುತ್ತದೆ. ಮತ್ತು ಅವಳನ್ನು ಹೋಗಲು ಬಿಡಲು ನಿರಾಕರಿಸುತ್ತದೆ. ಕೆಲ ದಿನಗಳ ಹಿಂದೆ ವಿಡಿಯೋ ಪೋಸ್ಟ್ ಮಾಡಲಾಗಿದ್ದು, ಕ್ಲಿಪ್ 33,000ಕ್ಕೂ ಹೆಚ್ಚು ಲೈಕ್ಸ್‌ಗಳನ್ನು ಗಳಿಸಿದೆ. ಹಲವರು ಹಾರ್ಟ್ ಎಮೋಜಿ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ. ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. 

Married Life ಚೆನ್ನಾಗಿರರ್ಬೇಕಂದ್ರೆ ಇಂಥ ತಪ್ಪುಗಳನ್ನೆಲ್ಲ ಮಾಡ್ಬೇಡಿ

ನೆಟ್ಟಿಗರಿಂದ ಸಾವಿರಾರು ಲೈಕ್ಸ್, ನಾನಾ ರೀತಿಯ ಕಾಮೆಂಟ್
ನಾಯಿಯನ್ನು ಸಹ ಜೊತೆಯಲ್ಲಿ ಕರೆದುಕೊಂಡು ಹೋಗುವಂತೆ ಯಾರೋ ಸಲಹೆ (Suggestion) ನೀಡಿದರು. ಇನ್ನೊಬ್ಬರು ಇದುವೇ ನಿಜವಾದ ಪ್ರೀತಿ ಎಂದು ತಿಳಿಸಿದರು. ನೈಸ್, ಇದು ನಿಜವಾಗಿಯೂ ಮುದ್ದಾದ ವೀಡಿಯೋ ಎಂದು ಮತ್ತೊಬ್ಬರು ಕಾಮೆಂಟಿಸಿದ್ದಾರೆ. 'ನಾಯಿಗಳು ನಿಜವಾಗಿಯೂ ಮನುಷ್ಯನ ಅತ್ಯುತ್ತಮ ಸ್ನೇಹಿತ' ಎಂದು ಮತ್ತೊಬ್ಬರು ಹೇಳಿದರು. ಒಟ್ನಲ್ಲಿ ವಧು ಹಾಗೂ ನಾಯಿಯ ಬಾಂಧವ್ಯ (Relationship) ಎಲ್ಲರ ಮೆಚ್ಚುಗೆಗೆ ಪಾತ್ರವಾಗ್ತಿರೋದಂತೂ ನಿಜ.

Follow Us:
Download App:
  • android
  • ios