ಒಂದು ಚಿತ್ರ, ನೂರೊಂದು ಕಣ್ಣೀರ ಕಥೆ: ಶಾಲೆ ಟ್ರಿಪ್ಗೆಂದು ವೃದ್ಧಾಶ್ರಮಕ್ಕೆ ಹೋಗಿದ್ದ ಬಾಲಕಿಗೆ ಕಂಡಿದ್ದೇನು?
ಮುತ್ತು ಕೊಡೋಳು ಬಂದಾಗ ತುತ್ತು ಕೊಡೋಳು ಬೇಡವಾಗ್ತಾಳೆ ಅನ್ನೋ ಗಾದೆ ಮಾತು ಅದೆಷ್ಟು ನಿಜವಾಗ್ತಿದೆ? ಈ ವೈರಲ್ ಫೋಟೋ ಹಿಂದಿದೆ ಸಾವಿರಾರು ಕುಟುಂಬಗಳ ಕಥೆ-ವ್ಯಥೆ!
ಈ ಒಂದು ಚಿತ್ರವು ಚಿತ್ರವು ಸಾವಿರ ಪದಗಳಿಗೆ ಸಮನಾಗಿದೆ. ಆದರೂ ಕೆಲವೊಮ್ಮೆ ಚಿತ್ರದ ಹಿಂದಿನ ಕಥೆಗಳು ಹೃದಯ ವಿದ್ರಾವಕವಾಗಿರುತ್ತದೆ. ಈ ಚಿತ್ರದಲ್ಲಿ ಶಾಲಾ ಬಾಲಕಿಯೊಬ್ಬಳು ಅಳುತ್ತಿರುವ ದೃಶ್ಯ ಕಾಣಿಸುತ್ತದೆ. ಅಲ್ಲಿ ಇರುವ ವೃದ್ಧೆ ಕೂಡ ಕಣ್ಣೀರು ಹಾಕುವುದನ್ನು ನೋಡಿದರೆ ಇದರ ಹಿಂದಿನ ಕಥೆ ಸುಲಭವಾಗಿಯೇ ಅರ್ಥವಾಗುತ್ತದೆ. ತನ್ನ ಶಾಲಾ ಪ್ರವಾಸದ ಭಾಗವಾಗಿ ವೃದ್ಧಾಶ್ರಮಕ್ಕೆ ಭೇಟಿ ನೀಡಿದ್ದಳು ಈ ಬಾಲಕಿ. ಆದರೆ ಅಲ್ಲಿ ಅವಳಿಗೆ ಕಂಡದ್ದು ತನ್ನದೇ ಸ್ವಂತ ಅಜ್ಜಿ! ಬಾಲಕಿಗೆ ತನ್ನ ಕಣ್ಣುಗಳನ್ನೇ ನಂಬಲು ಆಗಲಿಲ್ಲ. ಈಕೆ ನನ್ನನ್ನು ಮುದ್ದಿಸಿ, ಆಡಿಸಿ ಬೆಳೆಸಿದ ಅಜ್ಜಿ ಹೌದೋ ಅಲ್ಲವೋ ಎನ್ನುವುದು ತಿಳಿದುಕೊಳ್ಳುವಷ್ಟರಲ್ಲಿಯೇ ಆ ಅಜ್ಜಿ ತನ್ನ ಮೊಮ್ಮಗಳನ್ನು ನೋಡಿ ಓಡೋಡಿ ಬಂದು ಎದೆಗವಚಿಕೊಂಡು ಒಂದೇ ಸಮನೆ ಕಣ್ಣೀರು ಹಾಕಿದಳು. ಬಾಲಕಿಗೆ ಆಕಾಶವೇ ಕುಸಿದ ಅನುಭವ!
ಹೌದು. ಈ ಬಾಲಕಿಯ ಅಪ್ಪ-ಅಮ್ಮ ಅವಳಿಗೆ ಸುಳ್ಳು ಹೇಳಿದ್ದರು. ಅಜ್ಜಿ ಸಂಬಂಧಿಕರ ಮನೆಯಲ್ಲಿ ಇದ್ದಾಳೆ ಎಂದು ಹೇಳಿದ್ದರು. ತನ್ನ ಅಜ್ಜಿಯನ್ನು ನೋಡಬೇಕು ಎಂದು ಬಾಲಕಿ ಪಟ್ಟುಹಿಡಿದಾಗಲೆಲ್ಲಾ ಏನೇನೋ ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಿದ್ದರು. ಆದರೆ ಸತ್ಯ ಬೇರೆಯದ್ದೇ ಆಗಿತ್ತು. ಅಜ್ಜಿಯನ್ನು ನಿರ್ದಯಿಗಳು ವೃದ್ಧಾಶ್ರಮಕ್ಕೆ ಸೇರಿಸಿದ್ದರು. ಈ ವಿಡಿಯೋ ವೈರಲ್ ಆಗುತ್ತಲೇ ಇಂಥ ಮಕ್ಕಳನ್ನು ಕೊಡುವ ಬದಲು ಮಕ್ಕಳೇ ಹುಟ್ಟದಿರುವುದು ಎಷ್ಟೋ ಲೇಸು ಎನ್ನುತ್ತಿದ್ದಾರೆ. ಮಗಳಿಗೆ ಈಗ ಸತ್ಯ ಗೊತ್ತಾಗಿದೆ. ಮುಂದೊಂದು ದಿನ ಅವಳೂ ಅಪ್ಪ-ಅಮ್ಮನನ್ನು ಹೀಗೆಯೇ ಮಾಡಬೇಕು ಎಂದು ಹಲವರು ಶಪಿಸುತ್ತಿದ್ದಾರೆ. ತಾವೂ ಮುಂದೊಂದು ದಿನ ವೃದ್ಧರಾಗುತ್ತೇವೆ ಎನ್ನುವ ಅರಿವೇ ಇಲ್ಲದೇ ಈ ರೀತಿಯ ವೃದ್ಧಾಶ್ರಮಕ್ಕೆ ತಳ್ಳುವವರ ಬಗ್ಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮನಸಿಗೆ ವಯಸ್ಸಿನ ಹಂಗೇಕೆ? ಬೆಳಗಾವಿಯ ವೃದ್ಧಾಶ್ರಮದ ಮಹಿಳೆಯರ ಕ್ಯೂಟ್ ಸ್ಟೆಪ್: ಮನಸೋತ ನಟ ವಿಕ್ಕಿ ಕೌಶಲ್
ಅಷ್ಟಕ್ಕೂ, ಇಂದು ವೃದ್ಧಾಶ್ರಮಗಳು ಗಲ್ಲಿಗೊಂದರಂತೆ ತಲೆ ಎತ್ತಿವೆ. 2021 ರಲ್ಲಿ ಭಾರತದಲ್ಲಿ ಸರಿಸುಮಾರು 138 ಮಿಲಿಯನ್ ವೃದ್ಧರು ಇದ್ದರು. ಇವರ ಸಂಖ್ಯೆ 2031 ರಲ್ಲಿ ಸರಿಸುಮಾರು 56 ಮಿಲಿಯನ್ಗೆ ತಲುಪಲಿದೆ. ಭಾರತದಲ್ಲಿ ಸದ್ಯದ ಮಟ್ಟಿಗೆ 18 ಮಿಲಿಯನ್ ನಿರಾಶ್ರಿತ ವೃದ್ಧರಿದ್ದಾರೆ. ಇವರಲ್ಲಿ ಹಲವರು ಮಕ್ಕಳು, ಮೊಮ್ಮಕ್ಕಳು ಅಥವಾ ಕುಟುಂಬವನ್ನು ಹೊಂದಿರುವವರೇ. ಆದರೆ ಅವರಿಗೆ ಇದು ಬೇಡ ಅಷ್ಟೇ. ಇಂದು ಹಲವು ಮಕ್ಕಳಿಗೆ ಅಪ್ಪ-ಅಮ್ಮ ತಮ್ಮನ್ನು ಸಾಕಿ ಸಲಹುವ ವಸ್ತು ಮಾತ್ರ. ತಮ್ಮ ಕಾಲ ಮೇಲೆ ತಾವು ನಿಂತ ತಕ್ಷಣ ಅಪ್ಪ-ಅಮ್ಮ ಹೊರೆಯಾಗಿಬಿಡುತ್ತಾರೆ. ಅದಕ್ಕಾಗಿಯೇ ವೃದ್ಧಾಶ್ರಮಗಳು ಇಂದು ತುಂಬಿ ತುಳಕಾಡುತ್ತಿವೆ. ಈ ಆಶ್ರಮದಲ್ಲಿ ಇರುವ ವಯೋ ವೃದ್ಧರನ್ನು ಮಾತನಾಡಿದರೆ, ಒಬ್ಬೊಬ್ಬರದ್ದು ಒಂದೊಂದು ನೋವಿನ ಕಥೆ.
ಅವರಲ್ಲಿ ಬಹುತೇಕ ಮಂದಿ ಮಕ್ಕಳಿಗೆ ತ್ಯಜಿಸಲ್ಪಟ್ಟವರೇ ಹೆಚ್ಚು. ಮದುವೆಯಾದ ಮೇಲೆ ಅಪ್ಪ-ಅಮ್ಮ ಮಕ್ಕಳಿಗೆ ಬೇಡ, ಇನ್ನು ಕೆಲವರು ವಿದೇಶಗಳಲ್ಲಿ ಉದ್ಯೋಗ ಸಿಕ್ಕರೆ, ಅಲ್ಲಿ ಹೆತ್ತವರನ್ನು ಕರೆದುಕೊಂಡು ಹೋಗುವುದು ಭಾರವಾಗುತ್ತದೆ.... ಹೀಗೆ ಒಬ್ಬೊಬ್ಬರದ್ದು ಒಂದು ಕಥೆ-ವ್ಯಥೆ. ಈ ವೈರಲ್ ವಿಡಿಯೋಗೆ ಹರಿದು ಬರುತ್ತಿರುವ ಕಮೆಂಟ್ಸ್ ನೋಡಿದರೆ, ಇನ್ನೂ ಮನುಷ್ಯತ್ವ ಎನ್ನುವುದು ಹಲವರ ಹೃದಯದಲದಲ್ಲಿ ಜಾಗೃತವಾಗಿದೆ ಎಂದು ಗೊತ್ತಾಗುತ್ತದೆ. ಕೆಲವರು ತಮ್ಮ ಕಥೆಗಳನ್ನೂ ಬರೆದುಕೊಂಡಿದ್ದಾರೆ. ಮತ್ತೆ ಕೆಲವರು ತಮ್ಮ ಅರಿವಿಗೆ ಬಂದಿರುವವರ ಕಥೆಯನ್ನು ಹೇಳಿದ್ದಾರೆ. ಈ ಪ್ರಪಂಚ ಎಷ್ಟು ಕ್ರೂರಿ ಎಂದು ಮತ್ತೆ ಕೆಲವರು ಕಮೆಂಟ್ ಮಾಡಿದ್ದಾರೆ.
ಲಕ್ಷ್ಮೀ ನಿವಾಸದ ವಿಲನ್ ಕಾವೇರಿ ಡಾನ್ಸ್ ನೋಡಿರುವಿರಾ? ಸೈಂಟಿಸ್ಟ್ ಆದಾಕೆ ನಟಿಯಾದ ರಿಯಲ್ ಸ್ಟೋರಿ ಇಲ್ಲಿದೆ...