ತಂಗಿ ಸೈಕಲ್‌ನಿಂದ ಕೆಳಕ್ಕೆ ಬೀಳದಿರಲೆಂದು ಅಣ್ಣನ ಪ್ರಯತ್ನ ನೋಡಿ: ವಿಡಿಯೋ ವೈರಲ್..!
22 ಸೆಕೆಂಡುಗಳ ಈ ವಿಡಿಯೋ ಕ್ಲಿಪ್‌ನಲ್ಲಿ, ಹುಡುಗನೊಬ್ಬ ತನ್ನ ಚಿಕ್ಕ ತಂಗಿಯೊಂದಿಗೆ ಸೈಕಲ್‌ನಲ್ಲಿ ಪ್ರಯಾಣಿಸುತ್ತಿರುವುದನ್ನು ಕಾಣಬಹುದು. ಆತ ತನ್ನ ಸಹೋದರಿಯ ಪುಟ್ಟ ಕಾಲುಗಳನ್ನು ಸೈಕಲ್‌ಗೆ ಕಟ್ಟಿದ್ದಾನೆ.
ಅಣ್ಣ - ತಮ್ಮ ಅಥವಾ ಅಣ್ಣ - ತಂಗಿ ನಡುವಿನ ಬಂಧವನ್ನು ವರ್ಣಿಸಲು ಅಸಾಧ್ಯ. ಏಕೆಂದರೆ, ಒಡಹುಟ್ಟಿದವರ (Siblings) ನಡುವಿನ ಬಂಧವು (Bond) ಅಸ್ತಿತ್ವದಲ್ಲಿರುವ ಪ್ರೀತಿಯ ಶುದ್ಧ ರೂಪವಾಗಿದೆ (Purest Form of Love) ಮತ್ತು ಈ ಸತ್ಯವನ್ನು ನಿರಾಕರಿಸಲಾಗುವುದಿಲ್ಲ. ಮತ್ತು, ನಾವು ಪುರಾವೆಗಳಿಲ್ಲದೆ ಮಾತನಾಡುವುದಿಲ್ಲ. ಅಣ್ಣ ತನ್ನ ಚಿಕ್ಕ ತಂಗಿಯನ್ನು ಕೂರಿಸಿಕೊಂಡು ಅತ ಸೈಕಲ್ಲನ್ನು ತಳ್ಳಿಕೊಂಡು ಹೋಗ್ತಿದ್ದಾನೆ. ಈ ಮಧ್ಯೆ, ತನ್ನ ಸೈಕಲ್‌ನಲ್ಲಿ (Bicycle) ಆಕೆ ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಮಾಡಿರುವ ಪ್ರಯತ್ನದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ (Video Viral) ಆಗಿದೆ. ಅವನು ತನ್ನ ಸಹೋದರಿಯ ಬಗ್ಗೆ ಹೊಂದಿದ್ದ ಪ್ರೀತಿ ಮತ್ತು ರಕ್ಷಣೆಯ ಭಾವವು ಈ ವಿಡಿಯೋ ಕ್ಲಿಪ್‌ನಲ್ಲಿ ಸಾಕಷ್ಟು ಗೋಚರಿಸುತ್ತದೆ ಮತ್ತು ಅದು ಖಂಡಿತವಾಗಿಯೂ ನಿಮ್ಮ ಹೃದಯವನ್ನು ಕರಗಿಸುತ್ತದೆ. ಅಥವಾ ನಿಮ್ಮ ಕಣ್ಣಾಲಿಯಲ್ಲಿ ಒಂದು ಹನಿಯಾದರೂ ಕಣ್ಣೀರು ಬರುವಂತೆ ಮಾಡುತ್ತದೆ.
‘’Urdu Novels’’ ಎಂಬ ಟ್ವಿಟ್ಟರ್ ಪೇಜ್ ಈ ವೈರಲ್ ಆಗಿರುವ ವಿಡಿಯೋವನ್ನು ಹಂಚಿಕೊಂಡಿದೆ. 22 ಸೆಕೆಂಡುಗಳ ಈ ವಿಡಿಯೋ ಕ್ಲಿಪ್‌ನಲ್ಲಿ, ಹುಡುಗನೊಬ್ಬ ತನ್ನ ಚಿಕ್ಕ ತಂಗಿಯೊಂದಿಗೆ ಸೈಕಲ್‌ನಲ್ಲಿ ಪ್ರಯಾಣಿಸುತ್ತಿರುವುದನ್ನು ಕಾಣಬಹುದು. ಆತ ತನ್ನ ಸಹೋದರಿಯ ಪುಟ್ಟ ಕಾಲುಗಳನ್ನು ಸೈಕಲ್‌ಗೆ ಕಟ್ಟಿದ್ದಾನೆ, ಅದೂ ಬಟ್ಟೆಯ ತುಂಡಿನ ಮೂಲಕ. ಈ ವೇಳೆ, ಅವಳು ಅದನ್ನು ನೋಡುತ್ತಲೇ ಕುಳಿತಲ್ಲೇ, ತಾಳ್ಮೆಯಿಂದ ಕುಳಿತಿದ್ದಳು. ಅವಳು ಸುರಕ್ಷಿತವಾಗಿರಲು ಮತ್ತು ಸೈಕಲ್‌ನಿಂದ ಬೀಳದಂತೆ ಅಣ್ಣ ಹಾಗೆ ಮಾಡಿದ್ದಾನೆ. ಅದರ ನಂತರ, ಬಾಲಕ ತನ್ನ ಅಂಬೆಗಾಲಿಡುವ ಸಹೋದರಿಯೊಂದಿಗೆ ತನ್ನ ಪ್ರಯಾಣವನ್ನು ಮುಂದುವರೆಸಿದನು. ತುಂಬಾ ಸ್ವೀಟ್ ಅಲ್ಲವೇ..?
ಇದನ್ನು ಓದಿ: Viral Video: ನೃತ್ಯ ಮಾಡಿದ ಬಾಲಕಿಯ ತಲೆ ಮೇಲೆ ಸೊಂಡಿಲಿಟ್ಟು ಆಶೀರ್ವದಿಸಿದ ಆನೆ
ಅಂದ ಹಾಗೆ, ‘’Urdu Novels’’ ಎಂಬ ಟ್ವಿಟ್ಟರ್ ಖಾತೆ ಈ ವಿಡಿಯೋ ಕ್ಲಿಪ್‌ಗೆ "ಸಹೋದರನ ಪ್ರೀತಿ," ಎಂಬ ಕ್ಯಾಪ್ಷನ್ ಅನ್ನು ನೀಡಿದೆ.
ಈ ವೈರಲ್ ವೀಡಿಯೊವನ್ನು ಇಲ್ಲಿ ನೋಡಿ:
ಇದನ್ನು ನೋಡಿ ನಿಮಗೂ ಖುಷಿ ಆಯ್ತೇ.. ಈ ಮಧ್ಯೆ, ಮೈಕ್ರೋಬ್ಲಾಗಿಂಗ್ ಜಾಲತಾಣದಲ್ಲಿ ಶೇರ್ ಆದ ಬಳಿಕ ಈ ವಿಡಿಯೋ ಈವರೆಗೆ 15 ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ. ಇನ್ನು, ಈ ವಿಡಿಯೋ ನೋಡಿದ ಟ್ವಿಟ್ಟರ್ ಬಳಕೆದಾರರು, ಸಹೋದರ ಮತ್ತು ಸಹೋದರಿ ಜೋಡಿಯನ್ನು ಮೆಚ್ಚಿಕೊಂಡರು ಮತ್ತು ಅವರ ಬಂಧವನ್ನು ಸುಂದರ ಎಂದು ಕರೆದರು.
ಇದನ್ನು ಓದಿ: ಕಾಣೆಯಾಗಿದ್ದ ಹೆಂಡ್ತಿ, ಒಂಭತ್ತು ವರ್ಷಗಳ ಬಳಿಕ ಪತಿ ಪತ್ನಿಯ ಅಪೂರ್ವ ಸಂಗಮ
ಇನ್ನೊಂದೆಡೆ, ಈ ವಿಡಿಯೋಗೆ ಸಾಕಷ್ಟು ಕಮೆಂಟ್‌ಗಳು ಹರಿದುಬಂದಿದ್ದು, ಇದನ್ನು ಸಾವಿರಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದು ಹಾಗೂ 150 ಕ್ಕೂ ಹೆಚ್ಚು ನೆಟ್ಟಿಗರು ರೀಟ್ವೀಟ್ ಮಾಡಿದ್ದಾರೆ. ಬಹುತೇಕರು ಹೃದಯಸ್ಪರ್ಶಿ ವಿಡಿಯೋಗೆ ಹೃದಯಸ್ಪರ್ಶಿ ಮೆಚ್ಚುಗೆಯನ್ನೇ ವ್ಯಕ್ತಪಡಿಸಿ ಕಾಮೆಂಟ್ ಮಾಡಿದ್ದಾರೆ.
"ಸಹೋದರನ ಶುದ್ಧ ಪ್ರೀತಿ" ಎಂದು ಒಬ್ಬರು ಕಮೆಂಟ್ ಮಾಡಿದ್ದರೆ, ಎಷ್ಟು ಪ್ರೀತಿಯನ್ನು ಹೊಂದಿದೆ ಎಂದು ಇನ್ನೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು, ಕೆಲವರು ಭಾವನಾತ್ಮಕ ಎಮೋಜಿಗಳನ್ನೂ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ, ಈ ವಿಡಿಯೋಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗ್ತಿದೆ.
ಇದನ್ನೂ ಓದಿ: Parenting Tips: ದೊಡ್ಡವರ ಈ ವರ್ತನೆ ಮಕ್ಕಳ ಭವಿಷ್ಯಕ್ಕೆ ಮಾರಕ