Mind Your Tongue: ಬೇಕಾಬಿಟ್ಟಿ ಮಾತನಾಡೋ ಮುನ್ನ ಹೋಲ್ಡ್ ಆನ್
ದೊಣ್ಣೆಯಲ್ಲಿ ಹೊಡೆದ್ರೂ ನೋವಾಗಲ್ಲ, ಮಾತಿನ ಪೆಟ್ಟು ಅದಕ್ಕಿಂತಲೂ ತೀವ್ರವಾಗಿರುತ್ತದೆ. ಮನಸ್ಸನ್ನು ಘಾಸಿಗೊಳಿಸುತ್ತದೆ. ಆದರೆ ಕೆಲವೊಬ್ಬರು ಮಾತನಾಡುವ ಧಾಟಿಯೇ ಹಾಗಿರುತ್ತದೆ. ಸಾದಾ ಮಾತಿನ ಮಧ್ಯೆಯೇ ವ್ಯಂಗ್ಯ ನುಡಿಗಳು ಹಾದುಹೋಗುತ್ತವೆ. ನಿಮಗೂ ಹೀಗೆ ಆಗಿದೆಯೇ ? ಹಾಗಿದ್ರೆ ಇಂಥಾ ನಿಂದನೆಯ ನುಡಿಗಳಿಂದ ತಪ್ಪಿಸಿಕೊಳ್ಳುವುದು ಹೇಗೆ ?
ಮಾತಿಗೆ ಅದ್ಭುತ ಶಕ್ತಿಯಿದೆ. ಮಾತಿನ ಮೂಲಕವೇ ಒಬ್ಬನ ಮನಸ್ಸನ್ನು ಗೆಲ್ಲಬಹುದು. ಹಾಗೆಯೇ ಒಬ್ಬನನ್ನು ಕೊಲ್ಲಬಹುದು ಸಹ. ಪ್ರೀತಿಯ ಮಾತಿಗೆ ಮನಸ್ಸು ಶರಣಾದರೆ, ಕೆಟ್ಟ ಮಾತು ಮನಸ್ಸಿಗೆ ನೋವನ್ನುಂಟು ಮಾಡಬಹುದು. ಎಲುಬಿಲ್ಲದ ನಾಲಗೆ ಎಂಬ ಮಾತೇ ಇದೆ. ಮನುಷ್ಯ ಮಾತನಾಡುವಾಗ ಯೋಚಿಸುವುದಿಲ್ಲ. ತೋಚಿದ್ದನ್ನು ಹೇಳುತ್ತಾ ಹೋಗುತ್ತಾನೆ. ಇದು ಅದೆಷ್ಟೋ ಬಾರಿ ಅವಾಂತರಕ್ಕೆ, ಅನಾಹುತಕ್ಕೆ ಕಾರಣವಾಗುತ್ತದೆ. ಕೆಲವು ಪದಗಳು ನಮ್ಮ ಕ್ರಿಯೆಗಿಂತಲೂ ಹೆಚ್ಚು ತೀವ್ರವಾಗಿರುತ್ತದೆ. ನಮ್ಮ ದೇಹದ ಈ ಅನೈಚ್ಛಿಕ ಪ್ರತಿಕ್ರಿಯೆಯನ್ನು ನಾವು ಸಾಮಾನ್ಯವಾಗಿ ಅರ್ಥಮಾಡಿಕೊಳ್ಳುವುದಿಲ್ಲ. ಪದಗಳು ನಮ್ಮ ಮೇಲೆ ಅಷ್ಟು ಶಕ್ತಿಯನ್ನು ಹಿಡಿದಿಟ್ಟುಕೊಳ್ಳುವುದು ಹೇಗೆ? ಭಾವನೆಗಳು ಮತ್ತು ಭಾಷೆಯ ನಡುವಿನ ಸಂಬಂಧವನ್ನು ಕಂಡುಹಿಡಿಯುವ ಗುರಿಯನ್ನು ಹೊಂದಿರುವ ಫ್ರಾಂಟಿಯರ್ಸ್ ಇನ್ ಕಮ್ಯುನಿಕೇಶನ್ ಎಂಬ ಜರ್ನಲ್‌ನಲ್ಲಿ ಪ್ರಕಟವಾದ ಇತ್ತೀಚಿನ ಅಧ್ಯಯನದಲ್ಲಿ ಈ ಪ್ರಶ್ನೆಗೆ ಉತ್ತರಿಸಲಾಗಿದೆ.
ಮೌಖಿಕ ನಿಂದನೆ ಮತ್ತು ವ್ಯಕ್ತಿತ್ವ
ಮೌಖಿಕ ನಿಂದನೆಗಳು ಸಂಪೂರ್ಣ ವ್ಯಕ್ತಿತ್ವ (Personality) ವವನ್ನು ಪ್ರತಿಬಿಂಬಿಸುತ್ತದೆ ಎಂದು ಅಧ್ಯಯನವು ಕಂಡುಹಿಡಿದಿದೆ. ಹೀಗಿದ್ದೂ ಹೆಚ್ಚಿನವರು ಮಾತನಾಡುವಾಗ ಯೋಚಿಸುವುದಿಲ್ಲ. ಮನಸ್ಸಿಗೆ ಬಂದಂತೆ ಮಾತನಾಡಿಬಿಡುತ್ತಾರೆ. ಅದರಿಂದಾಗುವ ಪರಿಣಾಮಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಮತ್ತೊಬ್ಬರು ಮಾತನಾಡುವಾಗ ಮನಸ್ಸಿಗೆ ನೋವಾಯ್ತು ಅನ್ನೋದನ್ನು ಬಿಟ್ಟುಬಿಡುವುದಿಲ್ಲ. ಇನ್ನೊಬ್ಬರ ಮಾತಿನಿಂದ ನಮಗೆ ಬೇಸರವಾಗುವಂತೆಯೇ, ನಮ್ಮ ಮಾತಿನಿಂದ ಅವರಿಗೂ ಬೇಸರವಾಗುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕು. ನಾಲಗೆಗೆ (Tounge) ಲಗಾಮು ಹಾಕಲು ಗೊತ್ತಿರಬೇಕು.
General Knowledge : ನೀವು ಕುಳಿತುಕೊಳ್ಳುವ ಭಂಗಿ ಹೇಳುತ್ತೆ ನಿಮ್ಮ ಸ್ವಭಾವ
ಮೌಖಿಕ ಅವಮಾನಗಳು ಮನಸ್ಸನ್ನು ಅಸ್ತವ್ಯಸ್ತಗೊಳಿಸಬಹುದು. ಕೆಲವೊಮ್ಮೆ ಸಂಪೂರ್ಣ ಜೀವನದ ಬಗ್ಗೆಯೇ ಜಿಗುಪ್ಸೆ ಮೂಡಿಸಬಹುದು. ಫೋರ್ಟಿಸ್ ಹೆಲ್ತ್‌ಕೇರ್‌ನ ಮನಶ್ಶಾಸ್ತ್ರಜ್ಞ ಡಾ.ಕಾಮ್ನಾ ಛಿಬರ್, ಯಾವುದೇ ಮಾತಿನಿಂದ ನೋವುಂಟು ಮಾಡಿಕೊಳ್ಳುವ ಮೊದಲು ಏನು ಮಾಡಬಹುದು ಎಂಬುದನ್ನು ತಿಳಿಸಿದ್ದಾರೆ.
ಮೌಖಿಕ ಅವಮಾನಗಳನ್ನು ನಿಯಂತ್ರಿಸುವುದು ಹೇಗೆ ?
1. ಜಾಗೃತರಾಗಿರಿ: ಸಾಮಾನ್ಯವಾಗಿ ಒಡನಾಟದಲ್ಲಿರುವ ಜನರಾಗಿದ್ದರೆ ಯಾರು ಹೇಗೆ ಮಾತನಾಡುತ್ತಾರೆ ಎಂಬುದನ್ನು ನಾವು ಸ್ಪಷ್ಟವಾಗಿ ತಿಳಿದಿರುತ್ತೇವೆ. ಹೀಗಿದ್ದಾಗ ಇಂಥಾ ವ್ಯಕ್ತಿಗಳಿಂದ ಆದಷ್ಟು ದೂರವಿರುವ ಅಭ್ಯಾಸ ಒಳ್ಳೆಯದು. ಇಂಥವರ ಜೊತೆ ಮಿತವಾಗಿ ಮಾತನಾಡುವ ಅಭ್ಯಾಸ ರೂಢಿಸಿಕೊಳ್ಳಬೇಕು. ಹೊಸಬರ ಮಾತನಾಡುವ ಸಂದರ್ಭದಲ್ಲಿ ಆರಂಭಿಕ ಮಾತುಗಳಲ್ಲೇ ಅವರು ಎಂಥಾ ವ್ಯಕ್ತಿತ್ವದವರು ಎಂದು ಅರಿತುಕೊಳ್ಳಬೇಕು. ಒಳ್ಳೆಯ ರೀತಿಯಲ್ಲಿ ಮಾತನಾಡುತ್ತಿದ್ದರೆ ಮಾತ್ರ ಮಾತುಕತೆ ಮುಂದುವರಿಸಬೇಕು. ಇಲ್ಲವಾದಲ್ಲಿ ಚುಟುಕು ಮಾತಿನಲ್ಲಿ ಮುಗಿಸಿ ಬಿಡಬೇಕು. ಯಾರಾದರೂ ನಿಂದನೆಯ ಮಾತನಾಡಿದಾಗ, ದೀರ್ಘವಾಗಿ ಉಸಿರನ್ನು ತೆಗೆದುಕೊಂಡು ನಿಮ್ಮ ಕಣ್ಣುಗಳನ್ನು ಮುಚ್ಚಿಕೊಳ್ಳಿ. ಇದು ಕೋಪವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
2. ವ್ಯಕ್ತಿಯ ಮೌಲ್ಯಮಾಪನ: ಎದುರಿಗಿರುವ ವ್ಯಕ್ತಿ ಅದೆಷ್ಟೇ ಪ್ರಚೋದನಾತ್ಮಕವಾಗಿ ಮಾತನಾಡಿದರೂ ನಿಮ್ಮ ಮಾತುಗಳನ್ನು ಸೂಕ್ಷ್ಮವಾಗಿ ಉಪಯೋಗಿಸಿ. ವ್ಯಕ್ತಿಯು ಏನನ್ನು ಹಂಚಿಕೊಳ್ಳಲು ಬಯಸುತ್ತಾನೆ ಎಂಬುದನ್ನು ಹೆಚ್ಚು ಸಂಪೂರ್ಣವಾಗಿ ಕೇಳಲು ಸಂಘಟಿತ ಪ್ರಯತ್ನವನ್ನು ಮಾಡಿ. ಪ್ರಬುದ್ಧ ಸಂಭಾಷಣೆಗಳನ್ನು ನಡೆಸುವ ಮೂಲಕ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಿ.
ಸಿಕ್ಕಾಪಟ್ಟೆ ಪ್ರಾಬ್ಲಂ ಇದ್ರೂ ಪಾಸಿಟಿವ್ ಮೈಂಡ್ ಬೆಳೆಸಿಕೊಳ್ಳೋದು ಹೇಗೆ ?
3. ಅವಮಾನಿಸುವ ಅಭ್ಯಾಸ ಬಿಟ್ಟುಬಿಡಿ: ಮತ್ತೊಬ್ಬರನ್ನು ನಿಂದಿಸುವ ಅಭ್ಯಾಸ (Habit) ನಿಮ್ಮದಾಗಿದ್ದರೆ ಅದನ್ನು ಬಿಟ್ಟು ಬಿಡಲು ಯತ್ನಿಸಿ. ನೀವು ಯಾರನ್ನಾದರೂ ಅವಮಾನಿಸುವುದನ್ನು ತಡೆಯುವಿರಿ ಎಂದು ನಿಮ್ಮೊಳಗೆ ನಿರ್ಧರಿಸಲು ಪೂರ್ವಭಾವಿ ಪ್ರಯತ್ನವನ್ನು ಮಾಡಿ. ನಿಮ್ಮ ಸುತ್ತಲಿರುವವರ ಮೇಲೆ ನೀವು ಅವಮಾನಿಸುವ ವಿವಿಧ ವಿಧಾನಗಳನ್ನು ಗುರುತಿಸುವ ಮೂಲಕ ಮತ್ತು ಅವುಗಳನ್ನು ತೊಡೆದುಹಾಕಲು ವ್ಯವಸ್ಥಿತವಾಗಿ ಕೆಲಸ ಮಾಡುವ ಮೂಲಕ ಅದರ ಕಡೆಗೆ ಕೆಲಸ ಮಾಡಿ. ಒಟ್ಟಿನಲ್ಲಿ ಸೌಹಾರ್ದಯುತವಾಗಿ, ಸಮುದಾಯವಾಗಿ ಬಾಳುವ ಅಭ್ಯಾಸ ರೂಢಿಸಿಕೊಳ್ಳಿ.
4. ಡೋಂಟ್ ಕೇರ್ ಮೆಂಟಾಲಿಟಿ: ಮನುಷ್ಯ ಇರೋದೆ ಮಾತನಾಡೋಕೆ ಕೆಲವೊಬ್ಬರು ಸರಿಯಾಗಿ ಮಾತನಾಡಿದರೆ, ಇನ್ನು ಕೆಲವೊಬ್ಬರು ಮಾತೆತ್ತಿದರೇನೆ ನಿಂದಿಸಲು ಆರಂಭಿಸುತ್ತಾರೆ. ಹೀಗಳೆಯುತ್ತಾರೆ. ನಿಮಗೂ ಯಾರಾದರೂ ಹೀಗೆ ಮಾಡುತ್ತಿದ್ದರೆ ಕೊರಗುವುದನ್ನು ಬಿಟ್ಟು ಐ ಡೋಂಟ್ ಕೇರ್ ಮೆಂಟಾಲಿಟಿ ರೂಢಿಸಿಕೊಳ್ಳಿ. ನೀವೇನಾದರೂ ಹೇಳುತ್ತೀರಿ, ನಿಮ್ಮ ಮಾತುಗಳು ನನ್ನ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರುವುದಿಲ್ಲ ಎಂಬುದನ್ನು ಅವರಿಗೆ ತೋರಿಸಿ.'ನಿಂದಕರಿರಬೇಕು ಹಂದಿಗಳಂತೆ' ಎಂಬ ಸರ್ವಜ್ಞನ ನಡಿಯನ್ನು ನೀವು ಕೇಳಿರಬಹುದು. ಆ ಮಾತಿನಂತೆ ನಿಂದಕರ ಮಾತನ್ನು ಹಗುರವಾಗಿ ತೆಗೆದುಕೊಂಡು ಬದುಕಿನಲ್ಲಿ ಮುಂದೆ ಸಾಗಬೇಕು.