Asianet Suvarna News Asianet Suvarna News

ಸಿಕ್ಕಾಪಟ್ಟೆ ಪ್ರಾಬ್ಲಂ ಇದ್ರೂ ಪಾಸಿಟಿವ್ ಮೈಂಡ್ ಬೆಳೆಸಿಕೊಳ್ಳೋದು ಹೇಗೆ ?

ಸಮಸ್ಯೆ  (Problem) ಯಾರಿಗೆ ತಾನೇ ಇರಲ್ಲ ಹೇಳಿ. ಎಲ್ಲರ ಜೀವನದಲ್ಲೂ ಒಂದಲ್ಲಾ ಒಂದು ರೀತಿಯಲ್ಲಿ ಸಮಸ್ಯೆಗಳು ಇದ್ದೇ ಇರುತ್ತೆ. ಒಮ್ಮೊಮ್ಮೆ ಸಮಸ್ಯೆಗಳನ್ನು ಬಗೆಹರಿಸಲಾಗದೆ ಅದರೊಳಗೇ ಒದ್ದಾಡಬೇಕಾಗುತ್ತೆ. ಇಂಥಾ ಸಂದರ್ಭದಲ್ಲಿ ಕೆಲವೊಮ್ಮೆ ಜೀವನಾನೇ (Life) ಬೇಡ ಅಂತಾನೂ ಅನಿಸೋದಿದೆ. ಹೀಗಿರುವಾಗ ಧನಾತ್ಮಕ ಮನಸ್ಥಿತಿ (Positive mentality)ಯನ್ನು ಬೆಳೆಸಿಕೊಳ್ಳೋದು ಹೇಗೆ ತಿಳ್ಕೊಳ್ಳಿ.

Tips To Develop Positive Mindset While Facing Challenges Vin
Author
Bengaluru, First Published Jun 14, 2022, 3:50 PM IST

ಥತ್ತೇರಿಕೆ, ಏನಪ್ಪಾ ಇದು ಜೀವನ (Life)ದಲ್ಲಿ ಮೇಲಿಂದ ಮೇಲೆ ಸಮಸ್ಯೆನೇ. ಒಂದು ಮುಗಿದ್ರೆ ಇನ್ನೊಂದು ರೆಡಿ ಇರುತ್ತೆ. ಎಲ್ಲಾ ಸಮಸ್ಯೆ (Problem)ಗಳ ಜೊತೆ ಗುದ್ದಾಡಿ, ಒದ್ದಾಡಿ ಸಾಕಾಗಿ ಹೋಯ್ತು ಅನ್ನೋರೆ ಹಲವರು. ಮನೆ ಕಿರಿಕಿರಿ, ಆಫೀಸ್ ಟೆನ್ಶನ್‌ (Tension), ಎತ್ತರೆತ್ತರಕ್ಕೆ ಬೆಳೀತಿರುವ ಬ್ಯಾಂಕ್ ಸಾಲ, ವೆಹಿಕಲ್ ಲೋನ್‌ ಹೀಗೆ ಎಲ್ರಿಗೂ ಸಾವಿರ ಸಮಸ್ಯೆ ಇರುತ್ತೆ. ಕೆಲವೊಮ್ಮೆ ಜೀವನದ ಬಗ್ಗೆನೆ ರೇಜಿಗೆ ಬಂದ್ ಬಿಡುತ್ತೆ. ಜೀವನ ಇಷ್ಟೇನೆ ಅನ್ನೋ ಮನಸ್ಥಿತಿ ಇರುತ್ತೆ. ಇನ್ನು ಕೆಲವೊಬ್ಬರಿಗೆ ಎಲ್ರೂ ಎಷ್ಟು ಆರಾಮವಾಗಿದ್ದಾರಲ್ಲ. ನಂಗೇ ಮಾತ್ರ ಯಾಕೆ ಈ ಕಷ್ಟ ಅಂತನಿಸುತ್ತಿರುತ್ತೆ. ಆದ್ರೆ ವಾಸ್ತವ ಹಾಗಲ್ಲ. ಸಮಸ್ಯೆ ಎಲ್ಲರಿಗೂ ಇರುತ್ತದೆ. ಕೆಲವೊಬ್ಬರು ಅದನ್ನು ಈಝಿಯಾಗಿ ಎದುರಿಸುತ್ತಾರೆ. ಇನ್ನು ಕೆಲವರು ಕಡ್ಡಿಯನ್ನೇ ಗುಡ್ಡವನ್ನಾಗಿ ಮಾಡಿಕೊಂಡು ತಲೆಕೆಡಿಸಿಕೊಂಡು ಹೈರಾಣಾಗ್ತಾರೆ.

ಸಮಸ್ಯೆಗಳ ಮಧ್ಯೆನೂ ಸಕಾರಾತ್ಮಕ ಯೋಚನೆ (Positive thinking)ಗಳಿದ್ರೆ ಜೀವನ ಸುಗಮವಾಗಿ ಸಾಗುತ್ತೆ. ಸಕಾರಾತ್ಮಕ ಮನಸ್ಥಿತಿ, ಅಥವಾ ಹರ್ಷಚಿತ್ತದಿಂದ ವರ್ತನೆ, ಯಾವುದೇ ಸಂದರ್ಭದಲ್ಲಿ ಒಳ್ಳೆಯದನ್ನು ಕೇಂದ್ರೀಕರಿಸುವ ಅಭ್ಯಾಸವಾಗಿದೆ. ಸವಾಲುಗಳನ್ನು ಎದುರಿಸುವಾಗ ಧನಾತ್ಮಕ ಮನಸ್ಥಿತಿಯನ್ನು ಹೇಗೆ ಬೆಳೆಸಿಕೊಳ್ಳಬೇಕು ಎಂಬುದರ ಕುರಿತು ಪರಿಣಿತರು ಏನ್ ಹೇಳಿದ್ದಾರೆ ತಿಳ್ಕೊಳ್ಳೋಣ. ನವದೆಹಲಿಯ ಶ್ರೀ ಬಾಲಾಜಿ ಆಕ್ಷನ್ ಮೆಡಿಕಲ್ ಇನ್‌ಸ್ಟಿಟ್ಯೂಟ್‌ನ ಸಮಾಲೋಚಕ ಮನಶ್ಶಾಸ್ತ್ರಜ್ಞ ಡಾ.ಪಲ್ಲವಿ ಜೋಶಿ ಸಮಸ್ಯೆಗಳಿಂದ ಪಾಸಿಟಿವ್ ಮೈಂಡ್ ಬೆಳೆಸಿಕೊಳ್ಳೋದ್ರಿಂದ ಏನೆಲ್ಲಾ ಪ್ರಯೋಜನವಿದೆ ಎಂಬುದನ್ನು ತಿಳಿಸಿದ್ದಾರೆ.

ನಿಮ್ಮ ನೆಚ್ಚಿನ ಬಣ್ಣ ನಿಮ್ಮ ವ್ಯಕ್ತಿತ್ವದ ಬಗ್ಗೆ ಸಾಕಷ್ಟು ಹೇಳುತ್ತೆ!

ಒತ್ತಡ ನಿರ್ವಹಿಸಲು ಸಹಾಯ ಮಾಡುತ್ತದೆ: ಸಮಸ್ಯೆಗಳಿಂದ ಹೈರಾಣಾಗಿರುವ ಸಕಾರಾತ್ಮಕ ಮನಸ್ಥಿತಿಯನ್ನು ಇಟ್ಟುಕೊಳ್ಳುವುದರಿಂದ ಅನೇಕ ಪ್ರಯೋಜನಗಳಿವೆ. ಯಾವುದೇ ಪರಿಸ್ಥಿತಿಯಲ್ಲಿ ಒಳ್ಳೆಯದನ್ನು ಕೇಂದ್ರೀಕರಿಸುವುದು ಸಮಸ್ಯೆಯ ಮೇಲೆ ಹಿಡಿತ ಸಾಧಿಸಲು ಅನುವು ಮಾಡಿಕೊಡುತ್ತದೆ. ಜೊತೆಗೆ ಒತ್ತಡವನ್ನು ನಿರ್ವಹಿಸುವಲ್ಲಿ ಸಹಾಯ ಮಾಡುತ್ತದೆ. ಒಟ್ಟಾರೆ ಆರೋಗ್ಯ (Health) ಮತ್ತು ಯೋಗಕ್ಷೇಮದಲ್ಲಿ ಸಕಾರಾತ್ಮಕ ಚಿಂತನೆಯು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಸಂಶೋಧನೆ ಕಂಡುಹಿಡಿದಿದೆ. 

ಉತ್ತಮ ವಿಷಯಗಳ ಮೇಲೆ ಗಮನ ಕೇಂದ್ರೀಕರಿಸಿ: ಜೀವನದಲ್ಲಿ ಒಳ್ಳೆಯದು, ಕೆಟ್ಟದ್ದು ಎರಡೂ ಇರುತ್ತದೆ. ನಾವು ಜೀವನದಲ್ಲಿ ಯಾವುದರ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸುತ್ತೇವೆ ಅನ್ನೋದು ಮುಖ್ಯವಾಗುತ್ತದೆ. ಯಾಕೆಂದರೆ ನಾವು ಯಾವುದರತ್ತ ಹೆಚ್ಚು ಗಮನಹರಿಸುತ್ತೇವೋ ಆ ವಿಚಾರ ಹೆಚ್ಚು ಹೈಲೈಟ್ ಆಗುತ್ತದೆ. ಸವಾಲಿನ ಸಂದರ್ಭಗಳು ಮತ್ತು ಅಡೆತಡೆಗಳು ಜೀವನದ ಒಂದು ಭಾಗವಾಗಿದೆ. ನೀವು ಒಂದನ್ನು ಎದುರಿಸುತ್ತಿರುವಾಗ, ಒಳ್ಳೆಯ ವಿಷಯಗಳು ಎಷ್ಟೇ ಚಿಕ್ಕದಾಗಿದ್ದರೂ ಅಥವಾ ಸ್ಪಷ್ಟವಾಗಿ ಅತ್ಯಲ್ಪವೆಂದು ತೋರಿದರೂ ಅವುಗಳ ಮೇಲೆ ಗಮನ ಕೇಂದ್ರೀಕರಿಸಿ. ಖುಷಿಯ ವಿಚಾರದಿಂದ ಮನಸ್ಸು ಖುಷಿಗೊಳ್ಳುವುದರಿಂದ ನಿಮಗೆ ಪಾಸಿಟಿವ್ ಥಿಂಕಿಂಗ್ ಹೆಚ್ಚಾಗಿ ಬರುತ್ತವೆ.

ಖುಷಿಯ ಕ್ಷಣಗಳನ್ನು ನೆನಪಿಸಿಕೊಳ್ಳಿ: ಎಲ್ಲರ ಜೀವನದಲ್ಲೂ ಕೆಟ್ಟ ಘಟನೆಗಳಿರುವಂತೆಯೇ ಒಳ್ಳೆಯ ಘಟನೆಗಳೂ ಇರುತ್ತವೆ. ಹೀಗಾಗಿ ಅಂಥಾ ಕ್ಷಣಗಳನ್ನು ನೆನಪಿಸಿಕೊಂಡು ಖುಷಿ (Happy) ಪಡಿ. ಇದು ಸಮಸ್ಯೆಯನ್ನು ಸುಲಭವಾಗಿ ಬಗೆಹರಿಸಲು ನಿಮಗೆ ನೆರವಾಗುತ್ತದೆ. ಕೃತಜ್ಞತೆಯನ್ನು ಅಭ್ಯಾಸ ಮಾಡುವುದು ಯಾವಾಗಲೂ ಒತ್ತಡವನ್ನು ಕಡಿಮೆ ಮಾಡಲು, ಸ್ವಾಭಿಮಾನವನ್ನು ಸುಧಾರಿಸಲು ಮತ್ತು ತುಂಬಾ ಕಷ್ಟಕರ ಸಂದರ್ಭಗಳಲ್ಲಿ ಸಹ ಸ್ಥಿತಿಸ್ಥಾಪಕತ್ವವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ನಿಮಗೆ ಕೆಲವು ರೀತಿಯ ಆರಾಮ, ಸಂತೋಷ ಅಥವಾ ಪ್ರೀತಿಯನ್ನು ತರುವ ಜನರು, ಕ್ಷಣಗಳು ಅಥವಾ ವಸ್ತುಗಳ ಬಗ್ಗೆ ಯೋಚಿಸಿ.

ನೀವು ಬಾಯ್ಬಿಟ್ಟು ಏನು ಹೇಳ್ಬೇಕಾಗಿಲ್ಲ, ನೀವು ನಿಂತುಕೊಳ್ಳೋ ರೀತಿನೇ ನಿಮ್ಮ ಬಗ್ಗೆ ಎಲ್ಲಾ ಹೇಳುತ್ತೆ !

ನಗ ನಗುತ್ತಾ ಆರಾಮವಾಗಿರಿ: ನಗುವು ಒತ್ತಡ, ಆತಂಕ ಮತ್ತು ಖಿನ್ನತೆ (Anxiety)ಯನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನಗಳು ತೋರಿಸುತ್ತವೆ. ನಗು, ಕೆಟ್ಟ ಮನಸ್ಥಿತಿಯನ್ನು ಸುಧಾರಿಸಲು ಸಹಾಯಕವಾಗಿದೆ. ಎಲ್ಲಾ ಸಂದರ್ಭಗಳಲ್ಲಿ, ವಿಶೇಷವಾಗಿ ಕಷ್ಟಕರ ಸಂದರ್ಭಗಳಲ್ಲಿ ಹಾಸ್ಯಕ್ಕೆ ಮುಕ್ತವಾಗಿರಿ. ನಗು ನಿಮಗೆ ರಿಲೀಫ್ ನೀಡುತ್ತದೆ. ಸಮಸ್ಯೆಯನ್ನು ಸುಲಭವಾಗಿ ಬಗೆಹರಿಸಲು ನೆರವಾಗುತ್ತದೆ.

ನಕಾರಾತ್ಮಕ ಜನರಿಂದ ಅಂತರ ಕಾಯ್ದುಕೊಳ್ಳಿ: ನಕಾರಾತ್ಮಕತೆ ಮತ್ತು ಧನಾತ್ಮಕತೆಯು ಸುಲಭವಾಗಿ ಒಬ್ಬರಿಂದ ಒಬ್ಬರಿಗೆ ವರ್ಗಾಯಿಸಲ್ಪಡುತ್ತದೆ. ಸಕಾರಾತ್ಮಕ ವ್ಯಕ್ತಿಯೊಂದಿಗೆ ಸಮಯ ಕಳೆಯುವುದು ಒಬ್ಬರ ಮೇಲೆ ಉತ್ತಮ ಮತ್ತು ಸಂತೋಷದ ಪರಿಣಾಮವನ್ನು ಬೀರುತ್ತದೆ, ಕೆಟ್ಟ ಮನಸ್ಥಿತಿ ಹೊಂದಿರುವ ವ್ಯಕ್ತಿಯು ಪ್ರತಿಯೊಬ್ಬರ ಮನಸ್ಥಿತಿಯನ್ನು ಹಾಳುಮಾಡಬಹುದು. ಹೀಗಾಗಿ ಸಕಾರಾತ್ಮಕ ಜನರೊಂದಿಗೆ ಹೆಚ್ಚು ಸಮಯ ಕಳೆಯಿರಿ. ನೀವೂ ಸಹ ಸಕಾರಾತ್ಮ ಮನೋಭಾವ ಬೆಳೆಸಿಕೊಳ್ಳಿ.

Follow Us:
Download App:
  • android
  • ios