Long Distance Relationship: ದೂರವಿದ್ದೇ ಹತ್ತಿರ ಎನಿಸುವಂತೆ ಪ್ರೇಮಿಗಳ ದಿನ ಆಚರಿಸಿ
ಪರಸ್ಪರ ದೂರವಿರುವ ಪ್ರೇಮಿಗಳ ವಿರಹ ವಿವರಿಸಲು ಸಾಧ್ಯವಿಲ್ಲ. ವಿಶೇಷ ಸಂದರ್ಭದಲ್ಲಿ ಸಂಗಾತಿಯನ್ನು ಅವರು ಹೆಚ್ಚು ಮಿಸ್ ಮಾಡಿಕೊಳ್ತಾರೆ. ಪ್ರೇಮಿಗಳ ದಿನದಂದು ಬೇಸರ ದುಪ್ಪಟ್ಟಾಗುತ್ತದೆ. ನಿಮ್ಮ ಪ್ರೇಮಿಯೂ ನಿಮ್ಮಿಂದ ದೂರವಿದ್ರೆ ಏನು ಮಾಡ್ಬೇಕು ಗೊತ್ತಾ?
ಪ್ರೇಮಿ (Lover) ಗಳ ದಿನವು ಪ್ರೀತಿಯ ದಂಪತಿ (Couple)ಗೆ ಹಾಗೂ ಪ್ರೇಮಿಗಳಿಗೂ ಬಹಳ ವಿಶೇಷವಾಗಿರುತ್ತದೆ. ಈ ದಿನ ಪ್ರೇಮಿಗಳು ಪರಸ್ಪರ ಒಟ್ಟಿಗೆ ಸಮಯ ಕಳೆಯಲು ಬಯಸುತ್ತಾರೆ. ಪ್ರೇಮಿಗಳ ದಿನದಂದು ಪ್ರೀತಿಯನ್ನು ವ್ಯಕ್ತಪಡಿಸಲು ಒಳ್ಳೆ ಅವಕಾಶವಿರುತ್ತದೆ. ಜೀವನದಲ್ಲಿ ಸಂಗಾತಿಗೆ ಎಷ್ಟು ಪ್ರಾಮುಖ್ಯತೆ ನೀಡಲಾಗಿದೆ ಎಂಬುದನ್ನು ಈ ದಿನ ತೋರಿಸಬಹುದು. ಕೆಲಸ ಅಥವಾ ಬೇರೆ ಯಾವುದೋ ಕಾರಣಕ್ಕೆ ಅನೇಕ ಜೋಡಿ ಬೇರೆ ಬೇರೆಯಾಗಿ ವಾಸಿಸುತ್ತಿರುತ್ತಾರೆ. ಪತಿ ಒಂದೂರಿನಲ್ಲಿದ್ದರೆ ಪತ್ನಿ ಇನ್ನೊಂದು ಊರಿನಲ್ಲಿರುತ್ತಾರೆ. ಅಥವಾ ನಿಮ್ಮ ಪ್ರೇಮಿ ಬೇರೆ ಊರಿನಲ್ಲಿರುತ್ತಾರೆ. ಲಾಂಗ್ ಡಿಸ್ಟೆನ್ಸ್ ರಿಲೇಷನ್ಶಿಪ್ (Long Distance Relationship) ನಲ್ಲಿರುವುದೇ ಒಂದು ದೊಡ್ಡ ಬೇಸರದ ವಿಷ್ಯ. ಅದ್ರಲ್ಲೂ ಪ್ರೇಮಿಗಳ ದಿನ (Valentine's Day )ದಂತಹ ವಿಶೇಷ ಸಂದರ್ಭದಲ್ಲಿ ಸಂಗಾತಿ ಇಲ್ಲವೆಂದ್ರೆ ಅದರ ನೋವನ್ನು ಹೇಳಲು ಸಾಧ್ಯವಿಲ್ಲ. ಇಂಥ ಸಂದರ್ಭದಲ್ಲಿ ದೂರದಲ್ಲಿಯೇ ಇದ್ದು ನೀವು ಪರಸ್ಪರ ಖುಷಿಯಿಂದ ಪ್ರೇಮಿಗಳ ದಿನವನ್ನು ಆಚರಿಸಬಹುದು. ಇಂದು ದೂರವಿದ್ದರೂ ಹತ್ತಿರವಿದ್ದಂತೆ ಹೇಗೆ ವ್ಯಾಲಂಟೈನ್ ಡೇ ಆಚರಿಸಬೇಕೆಂಬುದನ್ನು ನಾವು ಹೇಳ್ತೆವೆ.
ಉಡುಗೊರೆ ಕಳುಹಿಸಿ : ಪ್ರೇಮಿಗಳ ದಿನದಂದು ಪ್ರೇಮಿಗಳು ತಮ್ಮ ಸಂಗಾತಿಗೆ ಉಡುಗೊರೆಯನ್ನು ನೀಡುವುದು ಸರ್ವೆ ಸಾಮಾನ್ಯ. ಪರಸ್ಪರ ದೂರವಿದ್ದರೆ ಅವಶ್ಯಕವಾಗಿ ಉಡುಗೊರೆ ನೀಡಬೇಕು. ಇತ್ತೀಚಿನ ದಿನಗಳಲ್ಲಿ ಆನ್‌ಲೈನ್‌ನಲ್ಲಿ ಉಡುಗೊರೆಗಳನ್ನು ಆರ್ಡರ್ ಮಾಡಬಹುದು. ಅದನ್ನು ನೇರವಾಗಿ ಪಾಲುದಾರರ ವಿಳಾಸಕ್ಕೆ ತಲುಪಿಸುವುದು ಸಾಧ್ಯ. ಅವರ ವಿಳಾಸ, ಕಚೇರಿ ವಿಳಾಸಕ್ಕೆ ಅಥವಾ ಸ್ನೇಹಿತರ ವಿಳಾಸಕ್ಕೆ ಉಡುಗೊರೆಯನ್ನು ಕಳುಹಿಸುವ ಮೂಲಕ ನೀವು ಅವರನ್ನು ಆಶ್ಚರ್ಯಗೊಳಿಸಬಹುದು. ನೀವು ಉಡುಗೊರೆಯೊಂದಿಗೆ ಪ್ರೀತಿಯ ಸಂದೇಶವನ್ನು ಕಳುಹಿಸಿದರೆ, ಆಗ ಅವರು ನಿಮ್ಮಿಂದ ದೂರವಿರುವ ನೋವನ್ನು ಸ್ವಲ್ಪಮಟ್ಟಿಗೆ ಮರೆಯುತ್ತಾರೆ.
ದೂರದ ಅನುಭವವಾಗಲು ಬಿಡಬೇಡಿ : ಸಾಮಾನ್ಯವಾಗಿ, ಪ್ರೇಮಿಗಳ ದಿನವನ್ನು ರೋಮ್ಯಾಂಟಿಕ್ ಗೊಳಿಸಲು ದಂಪತಿ ಬಯಸ್ತಾರೆ. ಸಿನಿಮಾ, ಕ್ಯಾಂಡಲ್ ಲೈಟ್ ಡಿನ್ನರ್ ಹೀಗೆ ಇಡೀ ದಿನ ವಿಶೇಷವಾಗಿರಲೆಂದುಕೊಳ್ತಾರೆ. ಆದರೆ ಸಂಗಾತಿ ಅನುಪಸ್ಥಿತಿಯಲ್ಲಿ ಇದು ಸಾಧ್ಯವಾಗುವುದಿಲ್ಲ. ಬೇರೆಯವರನ್ನು ನೋಡಿ ಬೇಸರಗೊಳ್ಳುವ ಜೊತೆಗೆ ಏಕಾಂಗಿತನ ಅನುಭವಿಸಲು ಸಂಗಾತಿಗೆ ಬಿಡಬೇಡಿ. ವರ್ಚುವಲ್ ಡೇಟ್ ಪ್ಲಾನ್ ಮಾಡಬಹುದು. ಪರಸ್ಪರ ಅವರ ಆಯ್ಕೆಯ ಆಹಾರವನ್ನು ಬೇಯಿಸಿ ಅಥವಾ ಅದೇ ಆಹಾರವನ್ನು ಪರಸ್ಪರರ ವಿಳಾಸಕ್ಕೆ ಆರ್ಡರ್ ಮಾಡಿ. ಸಮಯಕ್ಕೆ ಸರಿಯಾಗಿ ವೀಡಿಯೊ ಕರೆಗಳನ್ನು ಮಾಡಿ ಮತ್ತು ವರ್ಚುವಲ್ ಡಿನ್ನರ್ ಮಾಡಿ.
ಹಳಸದಿರಲಿ ಬಂಧ, ಕಡೇವರೆಗೂ ಉಳಿದುಕೊಳ್ಳಲಿ ಸಂಬಂಧ!
ಒಟ್ಟಿಗೆ ಸಿನಿಮಾ ವೀಕ್ಷಿಸಿ : ಈಗ ಜಗತ್ತು ಬದಲಾಗಿದೆ. ಮೊದಲಿನಂತೆ ಪತ್ರ ವ್ಯವಹಾರವಿಲ್ಲ. ಆನ್ಲೈನ್ ನಲ್ಲಿಯೇ ಅವರ ಮುಖ ನೋಡಿ ಮಾತನಾಡಹುದು. ಹಾಗೆಯೇ ದೂರವಿದ್ದರೂ ಒಟ್ಟಿಗೆ ಸಿನಿಮಾ ವೀಕ್ಷಣೆ ಮಾಡಬಹುದು. ಪ್ರೇಮಿಗಳ ದಿನದಂದು ನಿಮ್ಮ ಸಂಗಾತಿಯೊಂದಿಗೆ ನೀವು ರೋಮ್ಯಾಂಟಿಕ್ ಚಲನಚಿತ್ರವನ್ನು ವೀಕ್ಷಿಸಬಹುದು. ಸಿನಿಮಾ ವೀಕ್ಷಿಸುತ್ತಲೇ ನೀವು ಚಾಟ್ ಮಾಡಬಹುದು.ಸಂಗಾತಿ ಸಿನಿಮಾ ವೀಕ್ಷಿಸುತ್ತಿರುವಾಗ, ನೀವು ಅವರ ವಿಳಾಸಕ್ಕೆ ತಿಂಡಿಗಳನ್ನು ಕಳುಹಿಸಬಹುದು. ಇದರಿಂದ ನೀವು ಅವರೊಂದಿಗೆ ಇದ್ದೀರಿ ಎಂಬ ಭಾವನೆ ಅವರಲ್ಲಿ ಮೂಡುತ್ತದೆ.
ಹೃದಯದ ಮಾತು : ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರೂ ಅನೇಕ ಬಾರಿ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸುವ ಅಗತ್ಯವಿರುತ್ತದೆ. ಹಾಗಾಗಿ ಪ್ರೇಮಿಗಳ ದಿನದಂದು ನಿಮ್ಮ ಪ್ರೀತಿಯನ್ನು ಸಂಗಾತಿ ಮುಂದೆ ಹೇಳಿ. ವಿಡಿಯೋ ಕರೆ ಮೂಲಕ,ಚಾಟ್ ಮೂಲಕ ಇಲ್ಲವೆ ಮೇಲ್ ಮೂಲಕ ನಿಮ್ಮ ಹೃದಯದ ಮಾತನ್ನು ಅವರ ಮುಂದೆ ಹಂಚಿಕೊಳ್ಳಿ.
ಪ್ರತಿ ದಿನವೂ ವೀರ್ಯ ಹೊರಹಾಕುವುದು ಆರೋಗ್ಯಕ್ಕೆ ಎಷ್ಟು ಒಳಿತು?
ಲೈಂಗಿಕ ಆಟಿಕೆಯೊಂದಿಗೆ ಆನಂದ : ಅನೇಕ ಅಪ್ಲಿಕೇಷನ್ ಗಳ ಮೂಲಕ ಸೆಕ್ಸ್ ಟಾಯ್ಸ್ ಗಳನ್ನು ಖರೀದಿ ಮಾಡಬಹುದು. ಕೆಲವು ಅಪ್ಲಿಕೇಷನ್ ಗಳು ಟಾಯ್ಸ್ ಕಂಟ್ರೋಲ್ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತವೆ. ನಿಮ್ಮ ಸಂಗಾತಿ, ಫೋನ್ ಮೂಲಕವೇ ಟಾಯ್ಸ್ ಕಂಟ್ರೋಲ್ ಮಾಡಬಹುದು. ಆಗ ಇಬ್ಬರೂ ದೂರವಿದ್ದೂ ಲೈಂಗಿಕ ಆನಂದ ಪಡೆಯಬಹುದು.