ಮದುವೆ ಆದ ಬಳಿಕ ಮಾವ ಹಾಕಿದ ಮೂರು ಕಂಡೀಷನ್‌ಗೆ ಕಂಗಾಲಾದ ವರ, ನಿನ್‌ ಮಗಳೇ ಬೇಡ ಎಂದು ಎಸ್ಕೇಪ್‌ ಆಗಿರುವ ಘಟನೆ ಉತ್ತರ ಪ್ರದೇಶದ ಜಾನ್ಸಿಯಲ್ಲಿ ವರದಿಯಾಗಿದೆ. ಬಳಿಕ ಪೊಲೀಸ್‌ ಠಾಣೆ ಮೆಟ್ಟಿಲೇರಿದ ವರ ಈ ಕುರಿತಾಗಿ ನ್ಯಾಯ ಕೊಡಿಸುವಂತೆ ಹೇಳಿದ್ದಾರೆ. 

ನವದೆಹಲಿ (ಜೂ.10): ಮದುವೆ ಅನ್ನೋದು ಸಂತೋಷದ ಆಚರಣೆ. ಇಲ್ಲಿಯೂ ಕೂಡ ಅದೇ ರೀತಿಯಲ್ಲಿ ಮದುವೆ ಸಮಾರಂಭ ವಿಜೃಂಭಣೆಯಿಂದ ನೆರವೇರಿದೆ. ರಾತ್ರಿಯ ಬಾರಾತ್‌ನಲ್ಲೂ ಭರ್ಜರಿ ಮೆರವಣಿಗೆ ಕೂಡ ಆಯೋಜನೆ ಮಾಡಲಾಗಿತ್ತು.ವಧುವನ್ನು ವರನ ಮನೆಗೆ ಬೀಳ್ಕೊಡುವ ಕಾರ್ಯಕ್ರಮ ಕೂಡ ನೆರವೇರಿತ್ತು. ಮದುವೆಯ ಮರುದಿನ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮ ಕೂಡ ಆಯೋಜನೆ ಮಾಡಲಾಗಿತ್ತು. ಈ ವೇಳೆ ವಧುವಿನ ಮಲತಂದೆ ವರನಿಗೆ ಮೂರು ವಿಚಿತ್ರ ಕಂಡೀಷನ್‌ಗಳನ್ನು ಹಾಕಿದ್ದಾನೆ. ಈ ಷರತ್ತುಗಳನ್ನು ಕೇಳಿದ ವರ ಆರತಕ್ಷತೆ ವೇದಿಕೆಯಿಂದಲೇ ನಿನ್‌ ಮಗಳೇ ಬೇಡ ಎಂದು ಎಸ್ಕೇಪ್‌ ಆಗಿದ್ದಾನೆ. ನನಗೆ ಈ ಮದುವೆಯ ಅಗತ್ಯವೇ ಇಲ್ಲ ಎಂದು ವರ ಹೇಳಿದ್ದಾನೆ ಎನ್ನಲಾಗಿದೆ. ಬಳಿಕ ಪೊಲೀಸ್‌ ಠಾಣೆಗೆ ತೆರಳಿ ದೂರು ದಾಖಲು ಮಾಡಿದ್ದಾರೆ. ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ಜಾನ್ಸಿ ಜಿಲ್ಲೆಯಲ್ಲಿ ಮದುವೆಯಾಗಿ 24 ಗಂಟೆ ಕಳೆಯುವ ಮುನ್ನವೇ ಮದುವೆ ಮುರಿದುಹೋಗಿದೆ.

ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಯ ಬರುಸಾಗರದ ಯುವಕ ಮನ್ವೀಂದ್ರ, ಸಮೀಪದ ಹಳ್ಳಿಯ ಜ್ಯೋತಿ ಎಂಬ ಯುವತಿಯನ್ನು ಮದುವೆಯಾಗಿದ್ದರು. ಜೂನ್ 6 ರಂದು ಮನ್ವಿಂದ್ರ ಮತ್ತು ಜ್ಯೋತಿ ಅವರ ವಿವಾಹ ಅದ್ದೂರಿಯಾಗಿ ನೆರವೇರಿತ್ತು. ವಧು-ವರರ ಇಬ್ಬರು ಬಂಧುಗಳು ಮದುವೆ ಮೆರವಣಿಗೆಯಲ್ಲಿ ಉತ್ಸಾಹದಿಂದಲೇ ಪಾಲ್ಗೊಂಡು ಕುಣಿದು ಕುಪ್ಪಳಿಸಿದ್ದಾರೆ. ವಧುವನ್ನು ವರನ ಮನೆಗೆ ಕಳಿಸಿಕೊಳ್ಳುವ ಕಾರ್ಯಕ್ರಮ ಕೂಡ ನೆರವೇರಿದ ಬಳಿಕ ವಧುವನ್ನು ವರನ ಮನೆಗೆ ಕರೆದುಕೊಂಡು ಹೋಗಲಾಗಿತ್ತು. ಅದರ ಮರುದಿನ ಭರ್ಜರಿಯಾಗಿ ಆರತಕ್ಷತೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಆರತಕ್ಷತೆ ಕಾರ್ಯಕ್ರಮ ಮುಗಿಯುವ ವೇಳೆ ವಧುವಿನ ಮಲತಂದೆ ಎಲ್ಲರಿಗೂ ಆಘಾತ ನೀಡುವಂಥ ಕಂಡೀಷನ್‌ಗಳನ್ನು ಹೇರಿದ್ದರು. ವರನಿಗೆ ವಿಧಿಸಿದ್ದ ಆ ಮೂರು ವಿಚಿತ್ರ ಕಂಡೀಷನ್‌ ಯಾವುದು?

ಮೂರು ಷರತ್ತುಗಳು: ಮೊದಲನೆಯದಾಗಿ ಮದುವೆಯ ನಂತರ ಗಂಡ-ಹೆಂಡತಿ ಇಬ್ಬರೂ ಯಾವುದೇ ಕಾರಣಕ್ಕೂ ಸೆಕ್ಸ್‌ ಮಾಡುವಂತಿಲ್ಲ. ಮದುವೆಯ ಬಳಿಕ ಹುಡುಗಿಯ ತಂಗಿ ಕೂಡ ಅಕ್ಕನೊಂದಿಗೆ ಅಲ್ಲಿಯೇ ಇರುತ್ತಾಳೆ. ಮೂರನೆಯದಾಗಿ ಮಗಳ ಮನೆಗೆ ನಾನು (ತಂದೆ) ಯಾವಾಗ ಬೇಕಾದರೂ ಬರಬಹುದು. ಇದನ್ನು ಮನೆಯಲ್ಲಿ ಇದ್ದವರು ಯಾರೂ ಪ್ರಶ್ನೆ ಮಾಡುವಂತಿಲ್ಲ ಎಂದು ಹೇಳಿದ್ದರು.

ವಧುವಿನ ಮಲತಂದೆ ವಿಧಿಸಿದ ಷರತ್ತುಗಳಿಂದ ವರನಿಗೆ ಆಘಾತವಾಗಿದೆ. ಇದರ ಬಗೆಗ ಎರಡೂ ಕುಟುಂಬದವರ ನಡುವೆ ದೊಡ್ಡ ಮಟ್ಟದ ಚರ್ಚೆಯಾಗಿದೆ. ವಧುವಿನ ತಂದೆ ಮಾತ್ರ ಯಾವುದೇ ಕಾರಣಕ್ಕೂ ಷರತ್ತನ್ನು ಬದಲಾವಣೆ ಮಾಡೋದಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಈ ಕಂಡೀಷನ್‌ಗಳಿಗೆ ಒಪ್ಪದ ಕಾರಣ, ಆರತಕ್ಷತೆ ಕಾರ್ಯಕ್ರಮವನ್ನೂ ಕೂಡ ಅರ್ಧದಲ್ಲಿಯೇ ನಿಲ್ಲಿಸಲಾಗಿದೆ. ವರ 'ನಿನ್‌ ಮಗಳೇ ಬೇಡ..' ಎಂದು ಆರತಕ್ಷತೆ ಕಾರ್ಯಕ್ರಮದಿಂದಲೇ ಎಸ್ಕೇಪ್‌ ಆಗಿದೆ. ಆ ಬಳಿಕ ವಧು ತನ್ನ ಸಹೋದರಿ ಹಾಗೂ ತಂದೆಯೊಂದಿಗೆ ತನ್ನ ಮನೆಗೆ ಹೋಗಿದ್ದಾಳೆ. ಈ ಘಟನೆಯಿಂದ ಕೋಪಗೊಂಡ ವರನ ಕುಟುಂಬಸ್ಥರು ಸ್ಥಳೀಯ ಬರುಸಾಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಭಕ್ತೆಯ ಜೊತೆ ಅಫೇರ್‌, ಬಚ್ಚಿಡುವ ಸಲುವಾಗಿ ಆಕೆಯನ್ನೇ ಕೊಂದು ಮ್ಯಾನ್‌ಹೋಲ್‌ಗೆ ಎಸೆದ ಪೂಜಾರಿ!

ಮದುವೆಗಾಗಿ ಅಂದಾಜು 10 ಲಕ್ಷ ರೂಪಾಯಿ ಖರ್ಚಾಗಿದೆ. ವಧುವಿಗೆ ಅಂದಾಜು ಮೂರು ಲಕ್ಷ ರೂಪಾಯಿಯ ಚಿನ್ನಾಭರಣ ಹಾಗೂ ಬೆಳ್ಳಿ ಆಭರಣಗಳನ್ನು ಹಾಕಲಾಗಿದೆ ಎಂದು ವರನ ಕಡೆಯವರು ತಿಳಿಸಿದ್ದಾರೆ. ವಧುವನ್ನು ಮನೆಗೆ ಕರೆದುಕೊಂಡು ಹೋಗಿರುವ ತಂದೆ, ಆಕೆಯ ಮೈಮೇಲಿದ್ದ ಚಿನ್ನ, ಬೆಳ್ಳಿಯನ್ನು ತೆಗೆದುಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ. ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶೀಘ್ರದಲ್ಲಿಯೇ ತನಿಖೆ ಪೂರ್ಣಗೊಳ್ಳಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಪ್ಪಗಿರುವ ಹುಡುಗ ಬೇಡ, ತಾಳಿ ಕಟ್ಟೋ ಕೊನೆಯ ಕ್ಷಣದಲ್ಲಿ ಮದ್ವೆ ಕ್ಯಾನ್ಸಲ್ ಮಾಡಿದ ವಧು!