ಭಕ್ತೆಯ ಜೊತೆ ಅಫೇರ್‌ ಇರಿಸಿಕೊಂಡಿದ್ದ ಪೂಜಾರಿ ಇದನ್ನು ಬಚ್ಚಿಡುವ ಸಲುವಾಗಿ ಆಕೆಯನ್ನೇ ಕೊಲೆ ಮಾಡಿದ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಬಳಿಕ ಅಕೆಯ ಶವವನ್ನು ಮ್ಯಾನ್‌ಹೋಲ್‌ಗೆ ಎಸೆದು ಹೋಗಿದ್ದಾನೆ. 

ಹೈದರಬಾದ್‌ (ಜೂ.10): ಶಂಶಾಬಾದ್‌ ಪ್ರದೇಶದಿಂದ ಜೂನ್‌ 4 ರಂದು 30 ವರ್ಷದ ಮಹಿಳೆ ಕಾಣೆಯಾಗಿರುವ ಪ್ರಕರಣವು ಕೊಲೆ ಮತ್ತು ವಂಚನೆ ಪ್ರಕರಣ ಎನ್ನುವುದು ಗೊತ್ತಾಗಿದೆ. ಸರೂರ್‌ನಗರದ ಮಾಯ್‌ಸಮ್ಮ ದೇವಸ್ಥಾನದ ಅರ್ಚಕ ಅಯ್ಯಗಾರಿ ವೆಂಕಟ್‌ ಸೂರ್ಯ ಸಾಯಿಕೃಷ್ಣ ಎಂಬಾತನನ್ನು ಮಹಿಳೆಯನ್ನು ಹತ್ಯೆಗೈದ ಆರೋಪದ ಮೇಲೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ತಾನು ಕೆಲಸ ಮಾಡುತ್ತಿದ್ದ ದೇವಸ್ಥಾನದ ಹಿಂಭಾಗದಲ್ಲಿರುವ ಮಂಡಲ ಕಂದಾಯ ಅಧಿಕಾರಿ ಕಚೇರಿಯ ಹೊರಗಿನ ಮ್ಯಾನ್‌ಹೋಲ್‌ಗೆ ಮಹಿಳೆಯ ಶವವನ್ನು ಎಸೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪೂಜಾರಿ ಕೃಷ್ಣನಿಗೆ ಮದುವೆಯಾಗಿದ್ದರೂ ಅಪ್ಸರಾ ಎನ್ನುವ ಮಹಿಳೆಯ ಜೊತೆ ವಿವಾಹೇತರ ಸಂಬಂಧ ಹೊಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಪತ್ನಿಯನ್ನು ಬಿಟ್ಟು ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದ ಕಾರಣ ಮಹಿಳೆಯನ್ನು ಕೊಂದಿದ್ದಾನೆ ಎಂದು ಹೇಳಲಾಗಿದೆ. ಆರೋಪಿಯು ಜೂನ್‌ 3 ರಂದು ಮಹಿಳೆಯ ತಲೆಯನ್ನು ಬಂಡೆಗೆ ಬಡಿದು ಸಾಯಿಸಿದ್ದರು. ಬಳಿಕ ತನ್ನ ಕೃತ್ಯವನ್ನು ಮುಚ್ಚಿಡುವ ಸಲುವಾಗಿ ಜೂನ್‌ 5 ರಂದು ಆರ್‌ಜಿಐಎ ಪೊಲೀಸರಿಗೆ ದೂರು ಕೂಡ ನೀಡಿದ್ದರು. ಜೂನ್ 3 ರಂದು ಶಂಶಾಬಾದ್‌ನಲ್ಲಿ ಆಕೆಯನ್ನು ಡ್ರಾಪ್ ಮಾಡಿದ ನಂತರ ಅಪ್ಸರಾ ನಾಪತ್ತೆಯಾಗಿದ್ದಾಳೆ ಎಂದು ದೂರು ಕೂಡ ದಾಖಲು ಮಾಡಿದ್ದರು.

ಅವಳು ತನ್ನ ಸ್ನೇಹಿತರೊಂದಿಗೆ ಭದ್ರಾಚಲಂಗೆ ಹೊರಡಬೇಕಿತ್ತು. ದೂರಿನ ಪ್ರಕಾರ ಜೂನ್‌ 4 ರಂದೇ ಆಕೆ ದೂರವಾಣಿ ಕರೆ ಸ್ವೀಕಾರ ಮಾಡುವುದನ್ನು ನಿಲ್ಲಿಸಿದ್ದರು ಮತ್ತು ಅವರ ಫೋನ್‌ ಸ್ವಿಚ್‌ ಆಫ್‌ ಕೂಡ ಆಗಿತ್ತು. 

ಅಪ್ಸರಾ ನಾಪತ್ತೆಯ ಕುರಿತು ಅವರು ನೀಡಿದ ಹಲವು ವಿವರಗಳು ಕಾಲ್ ಡೇಟಾದಂತಹ ತಾಂತ್ರಿಕ ಪುರಾವೆಗಳೊಂದಿಗೆ ಹೊಂದಿಕೆಯಾಗದ ಕಾರಣ ಅವರು ಗುರುವಾರ ಕೃಷ್ಣನನ್ನು ಕರೆದುಕೊಂಡು ಹೋಗಿ ವಿಚಾರಣೆ ಮಾಡಲು ಪ್ರಾರಂಭಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ. ವಿಚಾರಣೆಯ ನಂತರ ಕೃಷ್ಣ ಅಪ್ಸರಾನನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ದೇವಸ್ಥಾನದ ಹಿಂಭಾಗದಲ್ಲಿರುವ ಮ್ಯಾನ್‌ಹೋಲ್‌ನಲ್ಲಿ ಶವವನ್ನು ಎಸೆದಿರುವುದಾಗಿಯೂ ಆತ ಬಹಿರಂಗಪಡಿಸಿದ್ದಾನೆ.

ಶುಕ್ರವಾರ ಬೆಳಗ್ಗೆ ವೆಂಕಟೇಶ್ವರ ಕಾಲೋನಿಗೆ ಆಗಮಿಸಿದ ಪೊಲೀಸರು ಮ್ಯಾನ್‌ಹೋಲ್‌ ತೆಗೆದು ಅದರಿಂದ ಕೊಳೆತ ಶವವನ್ನು ಹೊರತೆಗೆದಿದ್ದಾರೆ. ಸಂತ್ರಸ್ತೆ ತನ್ನನ್ನು ಮದುವೆಯಾಗುವಂತೆ ಒತ್ತಾಯಿಸುತ್ತಿದ್ದಳು ಎಂದು ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಈ ಹಿಂದೆಯೂ ಆಕೆ ಗರ್ಭಪಾತ ಮಾಡಿಸಿಕೊಂಡಿದ್ದಳು ಎಂದು ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದರು. ಜೂನ್ 3 ರಂದು ಮನೆಯಿಂದ ಹೊರಟಿದ್ದ ಅಪ್ಸರಾ, ಕೊಯಮತ್ತೂರಿಗೆ ಬಸ್ ನಲ್ಲಿ ಹೋಗುವುದಾಗಿ ತಾಯಿಗೆ ತಿಳಿಸಿದ್ದಳು. ಆದರೆ, ಆಕೆ ಕೊಯಮತ್ತೂರಿಗೆ ಹೋಗುವ ಬದಲು ಕೃಷ್ಣನನ್ನು ಭೇಟಿಯಾಗಿದ್ದಳು. ಈ ವೇಳೆ ಪೂಜಾರಿ, ಅವಳನ್ನು ಶಂಶಾಬಾದ್‌ನ ನಾರ್ಖೋಡಾ ಗ್ರಾಮಕ್ಕೆ ಕರೆದೊಯ್ದಿದ್ದ. ಆಕೆಯನ್ನು ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ದು ಕೊಂದು ಹಾಕಿದ್ದಾನೆ. ಮತ್ತೆ ಸರೂರನಗರಕ್ಕೆ ತಂದು ಮ್ಯಾನ್ ಹೋಲ್ ನಲ್ಲಿ ಎಸೆದಿದ್ದಾನೆ.

Scroll to load tweet…

2ನೇ ಮಗುವಿನ ಜನ್ಮ ನೀಡಿದ ಒಂದು ತಿಂಗಳಲ್ಲೇ ಸೆಕ್ಸ್‌ಗೆ ಒತ್ತಾಯಿಸಿದ ಪತಿ, ಮುಂದಾಗಿದ್ದು ಘನಘೋರ!

ನ್ಯಾಯಾಂಗ ಬಂಧನ ವಿಧಿಸಿದ ಕೋರ್ಟ್: ಶನಿವಾರ ಬೆಳಗ್ಗೆ ವೆಂಕಟ ಸೂರ್ಯ ಸಾಯಿಕೃಷ್ಣನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಈ ವೇಳೆ ಕೋರ್ಟ್‌ ಈತನನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಅದರ ಬೆನ್ನಲ್ಲಿಯೇ ಈತನನ್ನು ಚೇರ್ಲಪಲ್ಲಿ ಜೈಲಿಗೆ ಶಿಫ್ಟ್‌ ಮಾಡಲಾಗಿದೆ. 37 ವರ್ಷದ ಸೂರ್ಯ ಸಾಯಿ ಕೃಷ್ಣಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ದೇವಸ್ಥಾನಕ್ಕೆ ಪ್ರತಿನಿತ್ಯ ಬರುತ್ತಿದ್ದ ಅಪ್ಸರಾ ಹೆಸರಿನ ಮಹಿಳೆಯ ಜೊತೆ ಆತ್ಮೀಯ ಸಂಭಂಧ ಹೊಂದಿದ್ದರು.

ಪ್ರೇಯಸಿಯನ್ನು ಕೊಂದು ವಾಟರ್‌ಟ್ಯಾಂಕ್‌ನಲ್ಲಿ ಬಚ್ಚಿಟ್ಟ ಪಾತಕಿ!