ಅಲಿಗಢದಲ್ಲಿ ನಾಲ್ಕು ವರ್ಷಗಳಿಂದ ಲಿವ್‌ ಇನ್‌ ಸಂಬಂಧದಲ್ಲಿದ್ದ ಗೆಳತಿಯ ಮದುವೆ ತಪ್ಪಿಸಿದ ಘಟನೆ ನಡೆದಿದೆ. ವೇದಿಕೆಯ ಮೇಲೆಯೇ ಬೀನಾ ಎಂಬ ಯುವತಿ ಮದುವೆ ನಿಲ್ಲಿಸಿ, ತಮ್ಮಿಬ್ಬರ ನಡುವಿನ ಸಂಬಂಧ ಬಹಿರಂಗಪಡಿಸಿದ್ದಾಳೆ. ಪರಸ್ಪರ ಮದುವೆಯಾಗದಿರಲು ಒಪ್ಪಂದವಿದ್ದರೂ ಗೆಳತಿ ಮದುವೆಯಾಗುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾಳೆ. ಪೊಲೀಸರು ಬೀನಾಳನ್ನು ವಶಕ್ಕೆ ಪಡೆದಿದ್ದಾರೆ.

ತನ್ನ ಸ್ನೇಹಿತ ಬೇರೆ ಮದ್ವೆಯಾಗ್ತಿದ್ರೆ ಸ್ನೇಹಿತೆ ಬಂದು ಮದ್ವೆ ತಪ್ಪಿಸಿರೋದನ್ನು ಕೇಳಿರ್ತೀರಿ, ಹಾಗೆನೇ ಸ್ನೇಹಿತೆ ಬೇರೊಬ್ಬನ ಜೊತೆ ಹೋದ್ರೆ ಸ್ನೇಹಿತ ಗಲಾಟೆ ಮಾಡುವುದೂ ಗೊತ್ತು. ಆದರೆ ಇಲ್ಲಿ ಆಗಿದ್ದೇ ಬೇರೆ. ತನ್ನ ಸ್ನೇಹಿತೆ ಮದ್ವೆಯಾಗಿದ್ದಾಳೆ ಎಂದು ಆಕೆಯ ಸ್ನೇಹಿತೆಯೇ ಬಂದು ಮದ್ವೆ ತಪ್ಪಿಸಿದ್ದಾಳೆ. ಹಾಗಂತ ಆಕೆ ಮದ್ವೆಯಾಗ್ತಿರೋ ಹುಡುಗ ತನಗೆ ಬೇಕಾದವರ ಅಂತಲ್ಲ, ಆದ್ರೆ ಆ ಸ್ನೇಹಿತೆ ತನ್ನ ಲಿವ್​ ಇನ್​ ಪಾರ್ಟನರ್​ ಎನ್ನುವ ಕಾರಣಕ್ಕೆ!! ಹೌದು. ಕೇಳಲು ಸ್ವಲ್ಪ ಕನ್​ಫ್ಯೂಸ್​​ ಎನ್ನಿಸಿದರೂ ಇದು ನಿಜ. ನಾಲ್ಕು ವರ್ಷ ಲಿವ್​ ಇನ್​ನಲ್ಲಿ ಇದ್ದ ತನ್ನ ಗೆಳತಿ ಇದೀಗ ಹುಡುಗನ ಜೊತೆ ಮದ್ವೆಯಾಗ್ತಿರೋದಕ್ಕೆ ಯುವತಿಯೇ ಗಲಾಟೆ ಮಾಡಿ ಮದ್ವೆ ನಿಲ್ಲಿಸಿರೋ ಘಟನೆ ನಡೆದಿದೆ. 

ಉತ್ತರ ಪ್ರದೇಶದ ಅಲಿಗಢದಲ್ಲಿ ಈ ಘಟನೆ ನಡೆದಿದೆ. ಆಗಿದ್ದೇನೆಂದರೆ, ಬುಲಂದ್‌ಶಹರ್‌ನ ಪಹಸು ಪೊಲೀಸ್ ಠಾಣೆ ಪ್ರದೇಶದ ಎಂ.ಎ ಪಾಸ್ ಆಗಿರುವ ಯುವತಿಯ ವಿವಾಹವು ಅಲಿಗಢದ ಕ್ವಾರ್ಸಿ ಪ್ರದೇಶದ ಯುವಕನೊಂದಿಗೆ ನಿಶ್ಚಯಿಸಲಾಗಿತ್ತು. ಇಬ್ಬರ ಎಂಗೇಜ್​ಮೆಂಟ್​ ನಡೆಯುತ್ತಿತ್ತು. ವರ ಮತ್ತು ವಧು ಇಬ್ಬರೂ ವೇದಿಕೆಯ ಮೇಲೆ ನಿಂತಿದ್ದರು. ಅಷ್ಟರಲ್ಲಿ ಪ್ಯಾಂಟ್ ಮತ್ತು ಶರ್ಟ್ ಧರಿಸಿದ ಮತ್ತೊಬ್ಬ ಹುಡುಗಿ ಬೀನಾ ಅಲ್ಲಿಗೆ ಬಂದು ವಧುವಿನ ಕೈ ಹಿಡಿದು ತನ್ನೊಂದಿಗೆ ಎಳೆದೊಯ್ದಳು. ಈ ವಿಷಯಕ್ಕೆ ಇಬ್ಬರ ನಡುವೆ ಜಗಳ ನಡೆದಿತ್ತು. ಸ್ಥಳದಲ್ಲಿ ಗದ್ದಲ ಉಂಟಾಯಿತು. ಆರಂಭದಲ್ಲಿ ಎಲ್ಲರಿಗೂ ಯುವಕನ ಮೇಲೆ ಡೌಟ್​ ಬಂತು. ಆ ಯುವಕ, ಈ ಯುವತಿಯ ಲವರ್​ ಇರಬಹುದು ಎಂದು. ಆದರೆ ಅಲ್ಲಿ ಆಗಿದ್ದೇ ಬೇರೆ. ಬೀನಾ ಮತ್ತು ವಧುವಾಗಿದ್ದ ಯುವತಿ ಇಬ್ಬರೂ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿರುವುದಾಗಿ ಗೊತ್ತಾಗಿದೆ. ಆದರೆ, ವಧುವಿನ ವೇಷ ಧರಿಸಿದ್ದ ಹುಡುಗಿ ಇದನ್ನು ನಿರಾಕರಿಸಿದಳು. ಇಬ್ಬರ ನಡುವೆ ಮಾತಿನ ಚಕಮಕಿಯಾಗಿ ಪೊಲೀಸರ ಪ್ರವೇಶವಾಯಿತು.

ಮದ್ವೆ ಆಗಲೇಬೇಕಾ? ಹೆಣ್ಣು ಬೇಕೇ ಬೇಕಾ? ನಟ ರವಿಚಂದ್ರನ್ ಅದ್ಭುತ ಮಾತು ಕೇಳಿ... ​

ಕೊನೆಗೆ ಬೀನಾಳನ್ನು ಪೊಲೀಸರು ಕರೆದುಕೊಂಡು ಹೋಗಿದ್ದಾರೆ. ಆಗ ಆಕೆ, ತಮ್ಮಿಬ್ಬರ ಲವ್​ ಸ್ಟೋರಿ ತೆರೆದಿಟ್ಟಿದ್ದಾಳೆ. ಇಬ್ಬರೂ ಕೋಚಿಂಗ್ ಸೆಂಟರ್‌ನಲ್ಲಿ ಒಟ್ಟಿಗೆ ಓದಿದ್ದರು. ಬೀನಾ ಬಿಎ ಪಾಸ್ ಆಗಿದ್ದರೆ, ವಧು ಎಂಎ ಪಾಸ್ ಆಗಿದ್ದಾಳೆ. ಅವರು ಒಂದು ತರಬೇತಿ ಕೇಂದ್ರದಲ್ಲಿ ಸ್ನೇಹಿತರಾದರು. 2021 ರಲ್ಲಿ ನಡೆದ ವಿವಾಹದ ಸಮಯದಲ್ಲಿ ಇಬ್ಬರ ನಡುವಿನ ಆತ್ಮೀಯತೆ ಹೆಚ್ಚಾಯಿತು. ಕುಟುಂಬ ಸದಸ್ಯರು ಬೀನಾಳ ಮದುವೆಯನ್ನು ಮೂರು ಬಾರಿ ನಿಶ್ಚಯಿಸಿದ್ದರು. ಆದರೆ ಸ್ನೇಹಿತೆಗಾಗಿ ಆಕೆ ತನ್ನ ಮದುವೆಯನ್ನು ಮೂರು ಬಾರಿಯೂ ಏನೆನೋ ನೆಪ ಹೇಳಿ ತಪ್ಪಿಸಿದಳು. ಆದರೆ ಈಗ ಈಕೆ ಆರಾಮಾಗಿ ಮದುವೆಯಾಗುತ್ತಿದ್ದಾಳೆ. ಅವಳಿಗಾಗಿ ನಾನು ಮದುವೆಯಾಗಲಿಲ್ಲ, ಈಗ ಅವಳು ನನ್ನನ್ನು ಬಿಟ್ಟು ಪುರುಷನನ್ನು ಮದ್ವೆಯಾಗುತ್ತಿದ್ದಾಳೆ ಎಂದು ಹೇಳಿದ್ದಾಳೆ.

 ಇದಾಗಲೇ ತಮ್ಮಿಬ್ಬರ ನಡುವೆ ಒಪ್ಪಂದ ಆಗಿದೆ. ಯಾರೂ ಬೇರೆ ಮದುವೆಯಾಗಬಾರದು ಎಂದು ಒಪ್ಪಂದ ಮಾಡಿಕೊಂಡಿದ್ದೇವೆ. ನನ್ನ ಅಮ್ಮ, ಅಪ್ಪ ಮತ್ತು ಅಣ್ಣ ಹುಡುಗನನ್ನು ಹುಡುಕಲು ಪ್ರಾರಂಭಿಸಿದಾಗ, ನಾನು ಅವಳಿಗೆ ಈ ವಿಷಯ ತಿಳಿಸಿದ್ದಾರೆ. ಅದಕ್ಕೆ ಅವಳು ಹೇಗಾದರೂ ಮಾಡಿ ಮದುವೆಯನ್ನು ಮುರಿದುಬಿಡು ಎಂದು ಹೇಳಿದಳು. ಯಾವುದೇ ಸಂಬಂಧ ನಮ್ಮಿಬ್ಬರ ದಾರಿಗೆ ಬಂದರೂ, ನಾವು ಅದನ್ನು ಮುರಿಯಬೇಕು ಎಂದು ಒಪ್ಪಂದ ಮಾಡಿಕೊಳ್ಳಲಾಗಿತ್ತು. ನನಗೆ ಒಂದು ಸಂಬಂಧವನ್ನು ಮನೆಯಲ್ಲಿ ಅಂತಿಮಗೊಳಿಸಿದ್ದಕ್ಕೆ ಆ ಹುಡುಗನಿಗೆ ನಾನು ಬೇರೆಯವರ ಜೊತೆ ಸಂಬಂಧ ಹೊಂದಿರುವುದಾಗಿ ಹೇಳಿ ತಪ್ಪಿಸಿಕೊಂಡಿದ್ದೇನೆ. ಇಷ್ಟೆಲ್ಲಾ ಇವಳಿಗಾಗಿ ಮಾಡಿರುವಾಗ ಈಗ ಇವಳು ಬೇರೆ ಮದ್ವೆಯಾಗಲು ಹೊರಟಿದ್ದಾಳೆ ಎಂದು ಪತ್ರಿಕಾಗೋಷ್ಠಿಯಲ್ಲಿಯೂ ಬೀನಾ ತಿಳಿಸಿದ್ದಾಳೆ!

ಅಯ್ಯೋ ಕಂಗನಾ, ಡ್ರೆಸ್​ ಸರಿಮಾಡಿಕೊಂಡ್ರೂ ಕಾಣಬಾರದ್ದೆಲ್ಲಾ ಕಂಡೋಯ್ತಲಮ್ಮಾ... ಬಿಡ್ತಾರಾ ಟ್ರೋಲಿಗರು?

View post on Instagram