Asianet Suvarna News Asianet Suvarna News

Unhealthy Habits: ಪುರುಷರ ಇಂಥಾ ಕೆಟ್ಟ ಅಭ್ಯಾಸ ವೀರ್ಯದ ಗುಣಮಟ್ಟ ಕಡಿಮೆ ಮಾಡುತ್ತೆ !

ಬಂಜೆತನ (Infertility)ವು ಮಹಿಳೆಯರಲ್ಲಿ ಮಾತ್ರ ಕಾಣಿಸಿಕೊಳ್ಳುತ್ತದೆ ಎಂಬುದು ತಪ್ಪು ಕಲ್ಪನೆ. ಪುರುಷ (Men)ರಲ್ಲೂ ಬಂಜೆತನ ಕಾಣಿಸಿಕೊಳ್ಳುತ್ತದೆ. ಅದಕ್ಕೆ ಕಾರಣವಾಗೋದು ಗಂಡಸರ ಈ ಕೆಲವೊಂದು ಕೆಟ್ಟ ಅಭ್ಯಾಸಗಳು (Unhealthy Habits).

Unhealthy Habits Of Men Can Reduce Sperm Quality
Author
Bengaluru, First Published Mar 13, 2022, 9:49 PM IST

ಸುಖವಾದ ಸಾಂಪತ್ಯಕ್ಕೆ ಲೈಂಗಿಕ (Sex) ಜೀವನ ಸಹ ಸರಿಯಾಗಿರಬೇಕಾದುದು ಅತ್ಯಗತ್ಯ. ಮಗು ಜನಿಸಲು ವೀರ್ಯ ಪ್ರಮಾಣ ಹಾಗೂ ಆರೋಗ್ಯಕರ ವೀರ್ಯ (Sperm) ಸರಿಯಾಗಿರಬೇಕಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಪುರುಷರಲ್ಲಿ ಬಂಜೆತನ (Infertility)ದ ಸಮಸ್ಯೆ ಹೆಚ್ಚಾಗುತ್ತಿದೆ. ಪುರುಷರಲ್ಲಿ ವೀರ್ಯದ ಗುಣಮಟ್ಟ ಕಡಿಮೆಯಾಗೋದ್ರಿಂದ ಸಂಗಾತಿಗೆ ಗರ್ಭಿಣಿಯಾಗಲು ಸಾಧ್ಯವಾಗುವುದಿಲ್ಲ. ಇದರಿಂದ ಮಕ್ಕಳನ್ನು ಪಡೆಯಲು ಸಹ ಸಾಧ್ಯವಾಗುವುದಿಲ್ಲ. ಪುರುಷರಲ್ಲಿ ವೀರ್ಯ ಕಡಿಮೆಯಾಗಲು ಅವರು ದಿನನಿತ್ಯ ಜೀವನದಲ್ಲಿ ಮಾಡುವ ಸಣ್ಣಪುಟ್ಟ ತಪ್ಪುಗಳೇ ಸಾಕಾಗುತ್ತವೆ. ತಿಳಿಯದೆ ಮಾಡುವ ಈ ತಪ್ಪುಗಳು ವೀರ್ಯದ ಗುಣಮಟ್ಟವನ್ನು ಕಡಿಮೆ ಮಾಡುತ್ತವೆ. 

ಪುರುಷರು ಅನುಸರಿಸುವ ಕೆಲವು ಅನಾರೋಗ್ಯಕರ ಅಭ್ಯಾಸಗಳು ಬಂಜೆತನಕ್ಕೆ ಕಾರಣವಾಗುತ್ತವೆ. ಅಥವಾ ವೀರ್ಯದ ಸಂಖ್ಯೆ ಕಡಿಮೆಯಾಗಿ ಮಕ್ಕಳಾಗದಿರಲು ಕಾರಣವಾಗುತ್ತವೆ. ಕಳಪೆ ವೀರ್ಯದ ಗುಣಮಟ್ಟದಿಂದಾಗಿ ಪುರುಷ (Men)ರಲ್ಲಿ ಬಂಜೆತನದ ಸಮಸ್ಯೆ ಹೆಚ್ಚಾಗುತ್ತದೆ. ಇದರಿಂದಾಗಿ ತಂದೆಯಾಗಲು ಹಲವು ಅಡೆತಡೆಗಳು ಎದುರಾಗುತ್ತವೆ. ಕಳಪೆ ಜೀವನಶೈಲಿ, ಅನಾರೋಗ್ಯಕರ ಆಹಾರ ಪದ್ಧತಿ ಮುಂತಾದ ಹಲವು ಕಾರಣಗಳಿಂದ ವೀರ್ಯದ ಗುಣಮಟ್ಟವು ಕಳಪೆಯಾಗಿರಬಹುದು. ಆಗಾಗ, ಕೆಲವು ಪುರುಷರ ತಪ್ಪು ಅಭ್ಯಾಸಗಳಿಂದಾಗಿ, ಅವರ ವೀರ್ಯ ಅಥವಾ ವೀರ್ಯದಲ್ಲಿನ ಇಳಿಕೆ, ಕಳಪೆ ಗುಣಮಟ್ಟದಂತಹ ಸಮಸ್ಯೆ ಇರುತ್ತದೆ. ನೀವು ಪ್ರತಿದಿನ ಮಾಡುವ ತಪ್ಪುಗಳು ನಿಮ್ಮ ವೀರ್ಯದ ಮೇಲೆ ಪರಿಣಾಮ ಬೀರುತ್ತವೆ 

Sexual Health : ಪುರುಷ ಬಂಜೆತನ? ತಪ್ಪಾದ ಒಳಉಡುಪು ಕಾರಣವಿರಬಹುದು!

ವೀರ್ಯದ ಗುಣಮಟ್ಟವನ್ನು ಕಡಿಮೆ ಮಾಡುವ ಅನಾರೋಗ್ಯಕರ ಅಭ್ಯಾಸಗಳು

ಬಿಗಿಯಾದ ಜೀನ್ಸ್ ಪ್ಯಾಂಟ್ ಧರಿಸಬೇಡಿ
ನಿಮಗೆ ಬಿಗಿಯಾದ ಜೀನ್ಸ್, ಪ್ಯಾಂಟ್ ಧರಿಸುವ ಅಭ್ಯಾಸವಿದ್ದರೆ, ನಿಮ್ಮ ಫ್ಯಾಶನ್ ಶೈಲಿಯನ್ನು ಬದಲಿಸಿ. ಅಧ್ಯಯನವೊಂದರ ಪ್ರಕಾರ, ಸ್ಲಿಮ್ ಫಿಟ್ ಪ್ಯಾಂಟ್, ಜೀನ್ಸ್ ಅನ್ನು ನಿರಂತರವಾಗಿ ಧರಿಸುವುದು ವೀರ್ಯದ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ. ಬಿಗಿಯಾದ ಪ್ಯಾಂಟ್ ಧರಿಸುವುದರಿಂದ ವೃಷಣಗಳು ದೇಹಕ್ಕೆ ಹತ್ತಿರವಾಗುತ್ತವೆ, ಅದು ಬೆಚ್ಚಗಿರುತ್ತದೆ. ಇದು ವೀರ್ಯಕ್ಕೆ ಒಳ್ಳೆಯದಲ್ಲ.

ಕಾರ್ಬೋನೇಟೆಡ್ ಪಾನೀಯಗಳನ್ನು ಕಡಿಮೆ ಸೇವಿಸಿ
ಕಾರ್ಬೋನೇಟೆಡ್ ಪಾನೀಯಗಳನ್ನು ಹೆಚ್ಚಾಗಿ ಸೇವಿಸಿದರೆ, ವೀರ್ಯದ ಗುಣಮಟ್ಟವು ಹದಗೆಡಬಹುದು. ವೀರ್ಯಾಣುಗಳ ಸಂಖ್ಯೆಯಲ್ಲಿಯೂ ಇಳಿಕೆಯಾಗಬಹುದು. ಕಾರ್ಬೋನೇಟೆಡ್ ಪಾನೀಯ ಅತಿಯಾಗಿ ಕುಡಿಯುವುದು. ವೀರ್ಯ ಚಲನಶೀಲತೆಯ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೆ, ಹೆಚ್ಚು ಬಿಯರ್ ಕುಡಿಯುವುದು ಸಹ ವೀರ್ಯವನ್ನು ಅನಾರೋಗ್ಯಕರ ಮತ್ತು ದುರ್ಬಲಗೊಳಿಸಬಹುದು.

ಮೊಬೈಲ್ ಫೋನ್ ಪ್ಯಾಂಟ್ ಜೇಬಿನಲ್ಲಿ ಇಡಬೇಡಿ
ಮೊಬೈಲ್ ಫೋನ್ ಅನ್ನು ಪ್ಯಾಂಟ್ ಜೇಬಿನಲ್ಲಿ ನಿರಂತರವಾಗಿ ಇರಿಸಿದರೆ, ಅದು ವೀರ್ಯದ ಗುಣಮಟ್ಟದ ಮೇಲೆ ಸಹ ಪರಿಣಾಮ ಬೀರಬಹುದು. ಸೆಲ್ ಫೋನ್ ವಿಕಿರಣವು ವೀರ್ಯವನ್ನು ಹಾನಿಗೊಳಿಸುತ್ತದೆ. ಅಧ್ಯಯನದ ಪ್ರಕಾರ, ಫೋನ್‌ನ್ನು ಜೇಬಿನಲ್ಲಿ ಇಟ್ಟುಕೊಳ್ಳುವುದರಿಂದ ವೀರ್ಯದ ಸಂಖ್ಯೆಯನ್ನು 9% ರಷ್ಟು ಕಡಿಮೆ ಮಾಡಬಹುದು.

Sperm Count Increase: ವೀರ್ಯ ಸಂಖ್ಯೆ ಹೆಚ್ಚಲು ಬಳಸಿ ಈ ಪುಟಾಣಿ ಲವಂಗ

ಲ್ಯಾಪ್‌ಟಾಪ್ ಮಡಿಲಲ್ಲಿಟ್ಟು ಕೆಲಸ ಮಾಡಬೇಡಿ
ಲ್ಯಾಪ್‌ಟಾಪ್ ಅನ್ನು ನಿಮ್ಮ ಮಡಿಲಲ್ಲಿ ಇಟ್ಟುಕೊಂಡು ನೀವು ಹೆಚ್ಚು ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದರೆ, ತಕ್ಷಣ ಈ ಅಭ್ಯಾಸವನ್ನು ಬದಲಾಯಿಸಿ. ಇಲ್ಲದಿದ್ದರೆ ನೀವು ತಂದೆಯಾಗುವ ಸಾಧ್ಯತೆ ಬಹಳ ಮಟ್ಟಿಗೆ ಕಡಿಮೆಯಾಗುತ್ತದೆ. ವೃಷಣಗಳನ್ನು ತಂಪಾಗಿ ಇಡಬೇಕು ಮತ್ತು ಲ್ಯಾಪ್‌ಟಾಪ್ ಅನ್ನು ಪಾದ ಅಥವಾ ತೊಡೆಯ ಮೇಲೆ ದೀರ್ಘಕಾಲ ಇಡುವುದರಿಂದ ಈ ಪ್ರದೇಶವು ಬಿಸಿಯಾಗಬಹುದು, ಇದು ವೀರ್ಯ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ.

ಪ್ರತಿದಿನ 7ರಿಂದ 8 ಗಂಟೆಗಳ ನಿದ್ದೆ ಮಾಡಿ
ನೀವು ದಿನಕ್ಕೆ 6 ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡುತ್ತಿದ್ದರೆ, ಇದು ವೀರ್ಯದ ಎಣಿಕೆ, ಗುಣಮಟ್ಟವನ್ನು ಸಹ ಪರಿಣಾಮ ಬೀರುತ್ತದೆ. ದೇಹ ಮತ್ತು ಮನಸ್ಸಿಗೆ ಹೇಗೆ ವಿಶ್ರಾಂತಿ ಬೇಕೋ ಅದೇ ರೀತಿ ವೀರ್ಯಾಣುಗಳು ಸಹ ವಿಶ್ರಾಂತಿ ಪಡೆಯಬೇಕು, ಇದರಿಂದ ಅವು ಸರಿಯಾಗಿ ಸಕ್ರಿಯವಾಗಿರುತ್ತವೆ. ಪ್ರತಿದಿನ 7ರಿಂದ 8 ಗಂಟೆಗಳ ನಿದ್ದೆ ಮಾಡಿ ಇದರಿಂದ ವೀರ್ಯವು ಸಕ್ರಿಯವಾಗಿರುತ್ತದೆ. ಒತ್ತಡ, ಅಲ್ಕೋಹಾಲ್ ಸೇವನೆ, ಧೂಮಪಾನ, ಅತಿಯಾದ ಸನ್‌ಸ್ಕ್ರೀನ್ ಬಳಕೆ ಮುಂತಾದ ಹಲವು ಕಾರಣಗಳು ವೀರ್ಯದ ಸಂಖ್ಯೆಯನ್ನು ಕಡಿಮೆ ಮಾಡಬಹುದು.

Follow Us:
Download App:
  • android
  • ios