ಕೌಟುಂಬಿಕ ಕಿರುಕುಳಕ್ಕೊಳಗಾದ ಇಬ್ಬರು ಮಹಿಳೆಯರು ಪತಿಯಿಂದ ದೂರವಾಗಿ ಪರಸ್ಪರ ವಿವಾಹವಾಗಿದ್ದಾರೆ. ಉತ್ತರ ಪ್ರದೇಶದಲ್ಲಿ ದೇವಸ್ಥಾನದಲ್ಲಿ ವಿವಾಹವಾಗಿ ಒಟ್ಟಿಗೆ ಜೀವನ ನಡೆಸುವ ಸಂಕಲ್ಪ ಮಾಡಿದ್ದಾರೆ. ಕುಡುಕ ಪತಿಯಿಂದ ಬೇಸತ್ತು ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾಗಿ ಆರು ವರ್ಷಗಳ ಪ್ರೀತಿಯ ಬಳಿಕ ಈ ನಿರ್ಧಾರಕ್ಕೆ ಬಂದಿದ್ದಾರೆ.

ಪತಿ ಕಾಟಕ್ಕೆ ಬೇಸತ್ತು ಪತ್ನಿ ತನ್ನ ತವರಿಗೆ ವಾಪಸ್ ಬರೋದು ಇಲ್ಲವೆ ವಿಚ್ಛೇದನ (Divorce) ನೀಡೋದು ಸಾಮಾನ್ಯ. ಮತ್ತೆ ಕೆಲವರು ಆತ್ಮಸ್ಥೈರ್ಯ ಕಳೆದುಕೊಂಡು ಜೀವಕ್ಕೆ ಹಾನಿ ಮಾಡಿಕೊಳ್ಳಲು ಮುಂದಾಗ್ತಾರೆ. ಧೈರ್ಯವಂತ ಮಹಿಳೆಯರು ಪತಿ ವಿರುದ್ಧ ದೂರು ನೀಡಿ, ಹೋರಾಟ ನಡೆಸುತ್ತಾರೆ. ಆದ್ರೆ ಇಲ್ಲಿಬ್ಬರು ಮಹಿಳೆಯರು ಬೇರೆ ದಾರಿಯನ್ನೇ ಹಿಡಿದಿದ್ದಾರೆ. ಪತಿ ತೊಂದ್ರೆ ಕೊಡ್ತಾನೆ ಎಂಬ ಕಾರಣಕ್ಕೆ ಅವನಿಂದ ದೂರವಾದ ಈ ಮಹಿಳೆಯರು ಮತ್ತೊಂದು ಮದುವೆ ಆಗಿದ್ದಾರೆ. ಆದ್ರೆ ಮದುವೆ ಆಗಿದ್ದು ಬೇರೆ ಪುರುಷನಲ್ಲ. ಇಬ್ಬರು ಮಹಿಳೆಯರು ಪರಸ್ಪರ ಮದುವೆ ಆಗಿ ಎಲ್ಲರನ್ನು ಬೆರಗುಗೊಳಿಸಿದ್ದಾರೆ. ಕೊರಳಿಗೆ ಮಾಲೆ ಹಾಕಿಕೊಂಡು, ಹಣೆ ಮೇಲೆ ದೊಡ್ಡ ಸಿಂಧೂರವಿಟ್ಟು ಮದುವೆಯಾಗಿ ದೇವಸ್ಥಾನದಿಂದ ಬರ್ತಿದ್ದ ಮಹಿಳೆಯರು ಮಾಧ್ಯಮದ ಕಣ್ಣಿಗೆ ಬಿದ್ದಿದ್ದಾರೆ. ವಿಚಾರಿಸಿದಾಗ ಪರಸ್ಪರ ಮದುವೆಯಾಗಿರುವ ವಿಷ್ಯವನ್ನು ಅವರು ಹೇಳಿದ್ದಾರೆ. ಒಟ್ಟಿಗೆ ಇರುವ ಸಂಕಲ್ಪ ಮಾಡಿರೋದಾಗಿ ತಿಳಿಸಿದ್ದಾರೆ.

ಘಟನೆ ಉತ್ತರ ಪ್ರದೇಶದ ಗೋರಖ್‌ಪುರ ಜಿಲ್ಲೆಯ ಬನ್ಸ್‌ಗಾಂವ್ ಪ್ರದೇಶದಲ್ಲಿ ನಡೆದಿದೆ. ಜನವರಿ 23ರಂದು ಗೋರಖ್‌ಪುರದಿಂದ ದೇವರಿಯಾದ ರುದ್ರಪುರದಲ್ಲಿರುವ ದೂಧೇಶ್ವರನಾಥ ದೇವಸ್ಥಾನ (temple)ಕ್ಕೆ ಬಂದ ಮಹಿಳೆಯರು ಮದುವೆ ಆಗಿದ್ದಾರೆ. ಪರಸ್ಪರ ವರಮಾಲೆ ಬದಲಿಸಿಕೊಂಡ ಅವರು, ಪರಸ್ಪರ ಸಿಂಧೂರ ಹಚ್ಚಿದ್ದಾರೆ. ಇನ್ಮುಂದೆ ನಮ್ಮನ್ನು ಯಾರಿಂದಲೂ ಬೇರೆ ಮಾಡಲು ಸಾಧ್ಯವಿಲ್ಲ. ನಾವು ಒಟ್ಟಿಗೆ ಜೀವನ ನಡೆಸುವ ನಿರ್ಧಾರ ಕೈಗೊಂಡಿದ್ದೇವೆ ಎಂದಿದ್ದಾರೆ. ಅವರ ಬಳಿ ಸ್ವಂತ ಮನೆಯಿಲ್ಲ. ಬಾಡಿಗೆ ಮನೆಯಲ್ಲಿ ಇಬ್ಬರೂ ಇರೋದಾಗಿ ತಿಳಿಸಿದ್ದಾರೆ.

ಮಕ್ಕಳನ್ನ ಮನೆಯಲ್ಬಿಟ್ಟು ಕೆಲಸಕ್ಕೆ ಹೋಗೋ ಪಾಲಕರಿಗೆ ವಿರುಷ್ಕಾ ಗುರು ಪ್ರೇಮಾನಂದ್‌

ಕುಡುಕ (drunk) ಪತಿಯಿಂದ ಬೇಸತ್ತ ಮಹಿಳೆ : ಪತಿಯಂದಿರ ವರ್ತನೆಯೇ ಇವರಿಬ್ಬರನ್ನು ಹತ್ತಿರ ಮಾಡಿದೆಯಂತೆ. ಇಬ್ಬರು ಮಹಿಳೆಯರು ತಮ್ಮ ಪತಿಯಂದಿರ ಮೇಲೆ ಆರೋಪ ಮಾಡಿದ್ದಾರೆ. ಒಬ್ಬ ಮಹಿಳೆಯ ಪತಿ ವಿಪರೀತ ಕುಡುಕ. ಮದ್ಯಪಾನ ಮಾಡಿ ಪ್ರತಿ ದಿನ ಹೊಡೆಯುತ್ತಿದ್ದ. ನಾಲ್ಕು ಮಕ್ಕಳ ತಾಯಿಯಾಗಿರುವ ಈ ಮಹಿಳೆ, ಪತಿಯ ಈ ವರ್ತನೆಯಿಂದ ಬೇಸತ್ತಿದ್ದಳು. ತನ್ನ ತವರಿಗೆ ಬಂದು ವಾಸ ಶುರು ಮಾಡಿದ್ದಳು. ಮತ್ತೊಬ್ಬ ಮಹಿಳೆ ಸ್ಥಿತಿಯೂ ಭಿನ್ನವಾಗೇನಿಲ್ಲ. ಆಕೆ ಪತಿ ಕೂಡ ಮದ್ಯಪಾನ ಮಾಡಿ ಹಿಂಸೆ ನೀಡುತ್ತಿದ್ದ. ಹಾಗಾಗಿ ಆಕೆ ಕೂಡ ಪತಿಯಿಂದ ದೂರವಾಗಿದ್ದಳು.

14 ನೇ ವಯಸ್ಸಲ್ಲಿ ನಡೆದ ಒಂದು ಘಟನೆಯಿಂದ 88 ಬಾರಿ ಮದ್ವೆಯಾಗಿದ್ದಾನೆ ಈ ಭೂಪ! ಈತನ ಸ್ಟೋ

ಇಬ್ಬರ ಮಧ್ಯೆ ಪ್ರೀತಿ ಚಿಗುರಿದ್ದು ಎಲ್ಲಿ? : ಪತಿಯಿಂದ ಬೇಸತ್ತಿದ್ದ ಇಬ್ಬರು ಮಹಿಳೆಯರು ಪ್ರತ್ಯೇಕವಾಗಿ ಜೀವನ ನಡೆಸುತ್ತಿದ್ದರು. ಈ ಮಧ್ಯೆ ಇಬ್ಬರನ್ನು ಇನ್ಸ್ಟಾಗ್ರಾಮ್ ಸೇರಿಸಿದೆ. ಇನ್ಸ್ಟಾಗ್ರಾಮ್ ಮೂಲಕ ಸ್ನೇಹಿತರಾಗಿದ್ದ ಇವರು ತಮ್ಮ ನೋವುಗಳನ್ನು ಅಲ್ಲಿ ತೋಡಿಕೊಂಡಿದ್ದಾರೆ. ಸ್ನೇಹ ನಿಧಾನವಾಗಿ ಪ್ರೀತಿಗೆ ತಿರುಗಲು ಶುರುವಾಗಿದೆ. ಇಬ್ಬರೂ ಪ್ರೀತಿಯಲ್ಲಿ ಬಿದ್ದ ಮೇಲೆ ಮೊದಲ ಬಾರಿ ಇಬ್ಬರು ಭೇಟಿಯಾಗಿದ್ದಾರೆ. ನಂತ್ರ ಕದ್ದು ಮುಚ್ಚಿ ಆಗಾಗ ಇಬ್ಬರ ಭೇಟಿ ಮುಂದುವರೆದಿತ್ತು. ಇಬ್ಬರದ್ದು ಅಕ್ಕಪಕ್ಕ ಊರು, ಹಾಗಾಗಿ ಭೇಟಿ ಸುಲಭವಾಗಿತ್ತು. ಮನೆಯವರಿಗೆ ಈ ವಿಷ್ಯ ತಿಳಿದಿರಲಿಲ್ಲ. ಕಳೆದ ಆರು ವರ್ಷಗಳಿಂದ ಇವರು ಪ್ರೀತಿ ಮಾಡ್ತಿದ್ದರು. ಈಗ ಅಂತಿಮವಾಗಿ ಮದುವೆ ಆಗುವ ನಿರ್ಧಾರ ತೆಗೆದುಕೊಂಡಿದ್ದಾರೆ. ಇಬ್ಬರು ಒಟ್ಟಿಗೆ ಜೀವನ ನಡೆಸಲಿದ್ದಾರಂತೆ. ಈ ಸುದ್ದಿ ವೈರಲ್ ಆಗ್ತಿದ್ದಂತೆ ಜನರು ಅಚ್ಚರಿಗೊಳಗಾಗಿದ್ದಾರೆ.