ಇಬ್ಬರು ಪತ್ನಿಯರು.. ಭರ್ಜರಿ ಕರ್ವಾ ಚೌತ್.. 3 ತಿಂಗಳ ಹಿಂದೆ ಎರಡನೇ ಮದುವೆ!
ಎರಡು ಮದುವೆ ಕಾನೂನು ಬಾಹಿರವಾದ್ರೂ ಅನೇಕರು ಮೊದಲ ಪತ್ನಿ ಒಪ್ಪಿಗೆ ಮೇರೆಗೆ ಮದುವೆಯಾಗ್ತಾರೆ. ಒಂದು ಏರಿಗೆಳೆದರೆ ಮತ್ತೊಂದು ನೀರಿಗೆಳೆಯಿತು ಎನ್ನುವ ಸ್ಥಿತಿ ಕೊನೆಗೆ ನಿರ್ಮಾಣವಾಗುತ್ತದೆ. ಕೆಲವರು ಎರಡೂ ಇಟ್ಕೊಂಡು ಸುಖ ಸಂಸಾರ ಮಾಡೋರಿದ್ದಾರೆ.
ದಾಂಪತ್ಯ ಮುರಿದು ಬೀಳಲು ದಾಂಪತ್ಯ ದ್ರೋಹವೇ ಈಗಿನ ದಿನಗಳಲ್ಲಿ ಮುಖ್ಯ ಕಾರಣವಾಗ್ತಿದೆ. ವಿವಾಹೇತರ ಸಂಬಂಧದಿಂದಾಗಿ ಅನೇಕ ಮದುವೆಗಳು ವಿಚ್ಛೇದನಕ್ಕೆ ಬಂದು ನಿಂತಿವೆ. ಪತಿ ಅಥವಾ ಪತ್ನಿ ಇನ್ನೊಬ್ಬರ ತೆಕ್ಕೆಯಲ್ಲಿದ್ದಾರೆ ಎಂಬುದನ್ನು ಸಹಿಸಲು ಸಾಧ್ಯವಿಲ್ಲ. ಇಡೀ ಜೀವನವನ್ನು ಸಂಗಾತಿ ಜೊತೆ ಬದುಕುವ ನಿರ್ಣಯ ಮಾಡ್ಕೊಂಡು ಅವರನ್ನು ಸಂಪೂರ್ಣವಾಗಿ ನಂಬಿದ್ದ ಸಂಗಾತಿಗೆ ಮೋಸವಾದ್ರೆ ಆಕೆ ಅಥವಾ ಆತ ಅದನ್ನು ಸಹಿಸೋದಿಲ್ಲ. ದಾಂಪತ್ಯದಲ್ಲಿ ದೊಡ್ಡ ಯುದ್ಧವೆ ನಡೆದು ಹೋಗುತ್ತದೆ. ಪತಿ, ಪತ್ನಿ ಮತ್ತು ಇನ್ನೊಬ್ಬರ ಅನೇಕ ಕಥೆಗಳನ್ನು ನೀವು ಕೇಳಿರ್ತೀರಿ. ಕೆಲ ದಿನಗಳ ಹಿಂದಷ್ಟೆ ಇಬ್ಬರು ಪತ್ನಿಯರು ಪತಿ ಮುಂದೆ ಬಡಿದಾಡಿಕೊಂಡ ಘಟನೆ ರಾಜಸ್ತಾನದಲ್ಲಿ ನಡೆದಿತ್ತು. ಆದ್ರೆ ಕೆಲವರು ವಿಶೇಷತೆಯನ್ನು ಹೊಂದಿರ್ತಾರೆ. ಇಬ್ಬರು ಪತ್ನಿಯರು ಕೂಡಿ ಬಾಳಿದ ಅನೇಕ ಉದಾಹರಣೆಗಳು ನಮ್ಮ ಮುಂದಿದೆ. ಈಗ ಮತ್ತೊಂದು ಆದರ್ಶ ಅಕ್ಕ – ತಂಗಿಯರ ಸುದ್ದಿ ಹೊರ ಬಿದ್ದಿದೆ.
ಎರಡು ಪತ್ನಿಯರ ಮುದ್ದಿನ ಗಂಡ : ಉತ್ತರ ಪ್ರದೇಶ (Uttar Pradesh) ದ ಆಗ್ರಾದಲ್ಲಿ ವಾಸಿಸುತ್ತಿರುವ ರಾಮಬಾಬು ನಿಶಾದ್ ಇಬ್ಬರು ಪತ್ನಿಯರನ್ನು ಹೊಂದಿದ್ದಾನೆ. ಇಬ್ಬರು ಪತ್ನಿ (Wife) ಯರ ಜೊತೆ ರಾಮಬಾಬು ವಾಸವಾಗಿದ್ದು, ಸದ್ಯದ ಮಟ್ಟಿಗೆ ಸಂಸಾರ ಸುಗಮವಾಗಿ ಸಾಗ್ತಿದೆ. ಮಂಗಳವಾರ ನಡೆದ ಕರ್ವಾ ಚೌತ್ ದಿನ ಇವರಿಬ್ಬರ ಕಥೆ ಚರ್ಚೆಗೆ ಬಂದಿದೆ. ಕರ್ವಾ ಚೌತ್ ವ್ರತಕೈಗೊಂಡ ಇಬ್ಬರು ಪತ್ನಿಯರು ಒಟ್ಟಿಗೆ ವ್ರತವನ್ನು ಮುರಿದಿದ್ದಾರೆ.
ರಾಮಬಾಬು ಎಂಟು ವರ್ಷಗಳ ಹಿಂದೆ ಶೀಲಾದೇವಿ ಎಂಬಾಕೆಯನ್ನು ಮದುವೆಯಾಗಿದ್ದ. ಅವರಿಬ್ಬರಿಗೆ ಮಕ್ಕಳಿದ್ದಾರೆ. ವರ್ಷದ ಹಿಂದೆ ಮನ್ನು ದೇವಿ ಹೆಸರಿನ ಮಹಿಳೆ ಮೇಲೆ ರಾಮಬಾಬುಗೆ ಲವ್ ಶುರುವಾಗಿದೆ. ಇಬ್ಬರು ಆಗಾಗ ಭೇಟಿಯಾಗಿ ಮಾತನಾಡ್ತಿದ್ದರು. ಈ ವಿಷ್ಯ ರಾಮಬಾಬು ಮನೆಯವರಿಗೆ ಗೊತ್ತಾಗಿದೆ. ಮೂರು ತಿಂಗಳ ಹಿಂದೆ ರಾಮಬಾಬು, ಮನ್ನು ದೇವಿಯನ್ನು ದೇವಸ್ಥಾನದಲ್ಲಿ ಮದುವೆಯಾಗಿದ್ದಾನೆ. ರಾಮಬಾಬು, ಮನ್ನು ದೇವಿ ಮದುವೆಯಾಗಲು ಮೊದಲ ಪತ್ನಿ ಶೀಲಾದೇವಿ ಒಪ್ಪಿಗೆ ನೀಡಿದ್ದಳು.
ಹಣದಾಸೆಗೆ 91 ವರ್ಷದ ದೊಡ್ಡಮ್ಮನನ್ನು ಮದುವೆಯಾದ 23ರ ಯುವಕ!
ಮನ್ನು ದೇವಿಗೆ ಇದು ಮೊದಲ ಕರ್ವಾ ಚೌತ್ ಆಗಿತ್ತು. ಪತಿ ಆಯಸ್ಸು ವೃದ್ಧಿಗೆ ಆಕೆ ವ್ರತ ಕೈಗೊಂಡಿದ್ದಳು. ಶೀಲಾದೇವಿ ಮಕ್ಕಳನ್ನೇ ಮನ್ನು ದೇವಿ ತನ್ನ ಮಕ್ಕಳೆಂದು ಪ್ರೀತಿಸುತ್ತಿದ್ದಾಳೆ. ಶೀಲಾ ದೇವಿ ಹಾಗೂ ಮನ್ನು ದೇವಿ ತಾವು ಸಹೋದರಿಯರಂತೆ ಪ್ರೀತಿ ಮಾಡೋದಾಗಿ ಹೇಳಿದ್ದಾರೆ. ಇಬ್ಬರೂ ಮನೆಯಲ್ಲಿ ಖುಷಿ ಖುಷಿಯಾಗಿ ವಾಸ ಮಾಡ್ತಿದ್ದೇವೆ ಎಂದಿದ್ದಾರೆ. ಮೊದಲೇ ಹೇಳಿದಂತೆ ರಾಮಬಾಬು ಮಾತ್ರವಲ್ಲ ಎರಡು ಮದುವೆಯಾಗಿ ಸಂಸಾರ ನಡೆಸುತ್ತಿರುವ ಅನೇಕರು ನಮ್ಮಲ್ಲಿದ್ದಾರೆ. ಈ ಹಿಂದೆ ರಾಜಸ್ಥಾನದಲ್ಲಿ ಯುವಕನೊಬ್ಬ ಇಬ್ಬರು ಸಹೋದರಿಯರನ್ನು ಮದುವೆಯಾಗಿದ್ದ. ಹರಿಓಂ ಮದುವೆ ವಿವಾಹಪತ್ರವನ್ನು ಎಲ್ಲರಿಗೂ ಹಂಚಿದ್ದು ಸುದ್ದಿಯಾಗಿತ್ತು.
ಮಹಿಳೆಯರು ತಮಗಿಂತ ಚಿಕ್ಕ ವಯಸ್ಸಿನ ಹುಡುಗರನ್ನೇ ಹೆಚ್ಚು ಇಷ್ಟಪಡೋದು ಯಾಕೆ?
ಇನ್ನು ಮುರಾದಾಬಾದ್ ನಲ್ಲಿ ಇಬ್ಬರನ್ನು ಮದುವೆಯಾದ ವ್ಯಕ್ತಿ ಶಿಫ್ಟ್ ಪ್ರಕಾರ ಕೆಲಸ ಮಾಡ್ಬೇಕಾಗಿದೆ. ಮೊದಲ ಪತ್ನಿಯಿಂದ ಮೂರು ಮಕ್ಕಳನ್ನು ಪಡೆದಿದ್ದ ವ್ಯಕ್ತಿ ಯಾರಿಗೂ ತಿಳಿಯದೆ ಇನ್ನೊಂದು ಮದುವೆಯಾಗಿದ್ದ. ಎರಡನೇ ಪತ್ನಿಗೂ ಪತಿಯ ಮೊದಲ ಮದುವೆ ವಿಷ್ಯ ಗೊತ್ತಿರಲಿಲ್ಲ. ಗಂಡ ತನ್ನನ್ನು ಅತ್ತೆ ಮನೆಗೆ ಕರೆದುಕೊಂಡು ಹೋಗ್ತಿಲ್ಲ ಎಂಬ ದೂರನ್ನು ಹಿಡಿದು ಪೊಲೀಸ್ ಠಾಣೆಗೆ ಬಂದಾಗ ಸತ್ಯಗೊತ್ತಾಗಿತ್ತು. ಮಧ್ಯ ಪ್ರವೇಶ ಮಾಡಿದ ಪೊಲೀಸರು ಇಬ್ಬರನ್ನು ಒಂದೇ ಮನೆಯಲ್ಲಿ ಬೇರೆ ಬೇರೆ ವಾಸಿಸಲು ಒಪ್ಪಿಸಿದ್ದರು. ಅಲ್ಲದೆ ಪತಿಯನ್ನು ಶಿಫ್ಟ್ ಪ್ರಕಾರ ಹಂಚಿದ್ದರು. ಇಬ್ಬರಿಗೂ ಆತ ಸಮಯ ನೀಡ್ಬೇಕು, ಖರ್ಚಿಗೆ ಹಣ ನೀಡ್ಬೇಕು. ಒಬ್ಬಳ ಜೊತೆ ಮೂರು ದಿನ ಇನ್ನೊಬ್ಬಳ ಜೊತೆ ಮೂರು ದಿನ ಇರ್ಬೇಕು. ಒಂದು ದಿನ ಆತನ ಇಷ್ಟಕ್ಕೆ ಬಿಟ್ಟಿದ್ದು ಎಂಬ ತೀರ್ಪು ನೀಡಿ ಪೊಲೀಸರು ದಂಪತಿಯನ್ನು ಮನೆಗೆ ಕಳುಹಿಸಿದ್ರು.