ಮಕ್ಕಳ ಜೊತೆ ವೃತ್ತಿ ಸಂಭಾಳಿಸೋದು ಸವಾಲಲ್ಲ ಅಂತಾರೆ Mrs. India ಸತ್ಯ ಪ್ರಿಯಾ

ಕೆಲಸ ಮಾಡಬೇಕೆಂಬ ಆಸೆ ಅನೇಕ ಮಹಿಳೆಯರಿಗಿರುತ್ತದೆ. ಆದ್ರೆ ಮಕ್ಕಳ ಲಾಲನೆ-ಪಾಲನೆ ಇದಕ್ಕೆ ಅಡ್ಡಿಯಾಗುತ್ತದೆ. ಮಕ್ಕಳಿಗಾಗಿ ತಮ್ಮ ಕನಸುಗಳನ್ನು ಬದಿಗೊತ್ತುತ್ತಾರೆ. ಆದ್ರೆ ಕೆಲ ಟಿಪ್ಸ್ ಅನುಸರಿಸಿದ್ರೆ ಎರಡೂ ಕೆಲಸ ಸುಲಭವಾಗುತ್ತದೆ.
 

Tips To Working Mothers from Mrs India Satya Priya

ಪೋಷಕ (Parent)ರ ಜವಾಬ್ದಾರಿ ಸುಲಭಲ್ಲ. ತಂದೆ (Father )-ತಾಯಿ (Mother) ಇಬ್ಬರೂ ನಮ್ಮ ಕನಸ (Dream)ನ್ನು ಸಾಕಾರಗೊಳಿಸಲು ಕೆಲಸಕ್ಕೆ ಹೋಗ್ತಿದ್ದರೆ ಮತ್ತಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅದ್ರಲ್ಲೂ ವೃತ್ತಿಯಲ್ಲಿರುವ ಮಹಿಳೆಗೆ ಸವಾಲು,ತೊಂದರೆಗಳು ಹೆಚ್ಚು. ಮಗುವಿನ ಆರೈಕೆಯ ಜವಾಬ್ದಾರಿಯನ್ನು ತಾಯಿಗೆ ನೀಡಲಾಗಿದೆ. ಹಿಂದೆ ಮಹಿಳೆಯರು ಮನೆಯಲ್ಲಿಯೇ ಇದ್ದು ಮಗುವಿನ ಲಾಲನೆ ಪಾಲನೆ ಮಾಡುತ್ತಿದ್ದರು. ಈಗ ಕಚೇರಿ ಕೆಲಸ, ಮನೆಯ ಜವಾಬ್ದಾರಿಯ ಜತೆಗೆ ಮಗುವಿನ ಆರೈಕೆಯನ್ನೂ ಮಹಿಳೆಯರು ಮಾಡ್ತಿದ್ದಾರೆ. ಇದರಿಂದಾಗಿ ಮಹಿಳೆಯರ ಜೀವನದಲ್ಲಿ ಕೆಲವು ಹೊಸ ಸವಾಲುಗಳು ಸೇರಿಕೊಂಡಿವೆ.

ಮಹಿಳೆಯರು ಈಗ ಎಲ್ಲ ಕ್ಷೇತ್ರಗಳಲ್ಲೂ ಮಿಂಚುತ್ತಿದ್ದಾರೆ. ಅವರ ಗುರಿ ಬದಲಾಗಿದೆ. ಮಹಿಳೆಯರು ಮನೆ ಮತ್ತು ಕಚೇರಿ ಎರಡನ್ನೂ ನಿಭಾಯಿಸಬಲ್ಲರು ಎಂದು ಸಾಬೀತುಪಡಿಸಿದ್ದಾರೆ. 2021 ರಲ್ಲಿ ಮಿಸೆಸ್ ಇಂಡಿಯಾ ಸ್ಪರ್ಧೆಯನ್ನು ಗೆದ್ದ ಸತ್ಯ ಪ್ರಿಯಾ ಅವರು ಉದ್ಯಮಿ ಮತ್ತು ತಾಯಿ ಎರಡೂ ಹೌದು. ಪ್ರಿಯಾ ತಾಯಿ ಜವಾಬ್ದಾರಿ ಜೊತೆ ವೃತ್ತಿಯನ್ನು ಹೇಗೆ ಸಂಭಾಳಿಸುತ್ತಾರೆ ಎಂಬುದನ್ನು ಹೇಳಿದ್ದಾರೆ.

ಕನಸುಗಳನ್ನು ತ್ಯಾಗ ಮಾಡುವ ಅಗತ್ಯವಿಲ್ಲ : ಪೋಷಕರಿಗೆ ಮಕ್ಕಳನ್ನು ಬೆಳೆಸಲು ಸಮರ್ಪಣಾ ಮನೋಭಾವ ಬೇಕು. ಆದರೆ ಪ್ರಿಯಾ ಪ್ರಕಾರ,ಮಕ್ಕಳ ಪಾಲನೆಗಾಗಿ ತಾಯಂದಿರುವ ಕನಸುಗಳನ್ನು ತ್ಯಾಗ ಮಾಡುವ ಅಗತ್ಯವಿಲ್ಲ. ಯಶಸ್ವಿ ಉದ್ಯಮಿಯಾಗಿದ್ದು, ನಾನು ನನ್ನ ಕೆಲಸದಲ್ಲಿ ಬ್ಯುಸಿಯಾಗಿರ್ತೇನೆ. ವಿದೇಶಿ ಪ್ರಯಾಣವನ್ನೂ ಮಾಡ್ತಿರುತ್ತೇನೆ. ಅದ್ರ ಮಧ್ಯೆಯೇ ನನ್ನ ಮಕ್ಕಳ ಪಾಲನೆ ಜವಾಬ್ದಾರಿಯನ್ನೂ ನಿಭಾಯಿಸುತ್ತೇನೆ ಎನ್ನುತ್ತಾರೆ.

Parenting Tips: ಮಕ್ಕಳು, ಪೋಷಕರ ನಡುವಿನ ಸಂಬಂಧ ಹೇಗಿರಬೇಕು? ಬಿಲ್‌ಗೇಟ್ಸ್ ಏನ್ ಹೇಳ್ತಾರೆ ಕೇಳಿ

ಮಕ್ಕಳಿಗೆ ಕಲಿಸಿ : ನಿಮ್ಮ ಜೊತೆ ನಿಮ್ಮ ಕೆಲಸವೇನು ಎಂಬುದು ಮಕ್ಕಳಿಗೆ ತಿಳಿದಿರಬೇಕು ಎನ್ನುತ್ತಾರೆ ಪ್ರಿಯಾ. ಅನೇಕ ಬಾರಿ ಮಗಳ ಜೊತೆ ಪ್ರಿಯಾ ಪ್ರಯಾಣ ಬೆಳೆಸುತ್ತಾರಂತೆ. ನನ್ನ ಆದ್ಯತೆ ಏನೆಂದು ನನ್ನ ಒಂಬತ್ತು ವರ್ಷದ ಮಗಳು ಅರ್ಥಮಾಡಿಕೊಳ್ಳುತ್ತಾಳೆ ಮತ್ತು  ನನಗೆ ಬೆಂಬಲ ನೀಡ್ತಾಳೆಂದು ಪ್ರಿಯಾ ಹೇಳ್ತಾರೆ.  

ಮಕ್ಕಳ ಜೊತೆ ಮಾತುಕತೆ : ಮಕ್ಕಳ ಮುಂದೆ ಕೆಲವೊಂದು ವಿಷ್ಯಗಳನ್ನು ಚರ್ಚಿಸಬೇಕು. ಅವರೊಂದಿಗೆ ಸ್ನೇಹದಿಂದ ಮಾತನಾಡಬೇಕು. ನಿಮ್ಮ ಕನಸುಗಳ ಬಗ್ಗೆ ಅವರಿಗೆ ಹೇಳಿದಾಗ ಅವರು ಪೋಷಕರನ್ನು ಅರ್ಧಮಾಡಿಕೊಳ್ಳುವ ಪ್ರಯತ್ನ ನಡೆಸುತ್ತಾರೆ ಎನ್ನುತ್ತಾರೆ ಪ್ರಿಯಾ. 

ಮಕ್ಕಳು ಹೊರೆಯೆಂದು ಭಾವಿಸಬೇಡಿ : ವೃತ್ತಿ ಜೊತೆ ಮಗುವನ್ನು ಸಂಭಾಳಿಸುವ ತಾಯಂದಿರಲ್ಲಿ ಪ್ರಿಯಾ ಕೂಡ ಒಬ್ಬರು. ತಾಯಿಯಾಗಿ ನಾನು ನನ್ನ ಮಗಳನ್ನು ತುಂಬಾ ಪ್ರೀತಿಸುತ್ತೇನೆ ಮತ್ತು ಅವಳ ಕನಸುಗಳು ಅಥವಾ ಆಸಕ್ತಿಗಳು ನನ್ನ ವೇಳಾಪಟ್ಟಿಯಲ್ಲಿ ಹೊರೆ ಎಂದು  ಎಂದಿಗೂ ಭಾವಿಸುವುದಿಲ್ಲ ಎನ್ನುತ್ತಾರೆ ಪ್ರಿಯಾ. ಮಕ್ಕಳಿಗೆ ಸಮಯ ನೀಡುವುದು ಬಹಳ ಮುಖ್ಯ. ಅವರ ಕೆಲಸದ ಜೊತೆ ನಿಮ್ಮ ಕೆಲಸ ಮಾಡುವುದು ಆರಂಭದಲ್ಲಿ ಕಷ್ಟವಾಗ್ಬಹುದು. ಆದ್ರೆ ವೇಳಾಪಟ್ಟಿ ಮಾಡಿಕೊಂಡು, ಮನಸ್ಸನ್ನು ಶಾಂತವಾಗಿಟ್ಟು ನಡೆದ್ರೆ ಕೆಲಸ ಸುಲಭ ಎನ್ನುತ್ತಾರೆ ಪ್ರಿಯಾ. 

Relationship Tips: ನೀವು ಅವರ ಮೊದಲ ಪ್ರಾಮುಖ್ಯತೆ ಹೌದೋ ಅಲ್ವೋ? ತಿಳಿಯೋದು ಹೇಗೆ?

ಪ್ರಿಯಾ ನೀಡುವ ಸಲಹೆ ಏನು ? : ಸಂದರ್ಶನವೊಂದರಲ್ಲಿ ಮಾತನಾಡಿದ ಪ್ರಿಯಾ, ಪೋಷಕರಿಗೆ ಕೆಲವು ಸಲಹೆ ನೀಡಿದ್ದಾರೆ. ಮಕ್ಕಳಲ್ಲಿ ಸಹಾನುಭೂತಿಯ ಭಾವನೆಯನ್ನು ತುಂಬುವುದು ಬಹಳ ಮುಖ್ಯ ಎಂದಿದ್ದಾರೆ. ಮಗು ಇತರರ ವಿಷಯವನ್ನು ಅರ್ಥಮಾಡಿಕೊಳ್ಳಲು ಮತ್ತು ತನ್ನ ಸ್ವಂತ ಕನಸುಗಳನ್ನು  ಈಡೇರಿಸಿಕೊಳ್ಳಲು ಅವರಿಗೆ ಪಾಲಕರು ನೆರವಾಗಬೇಕು. 
ಪ್ರಿಯಾ ಪ್ರಕಾರ, ಮಕ್ಕಳಿಗೆ ಸ್ವಂತಿಕೆ ಕಲಿಸಬೇಕು. ಅವರು ತಮ್ಮ ಬುದ್ದಿ ಉಪಯೋಗಿಸಿ ಕಲಿಯಲು ಪ್ರಯತ್ನಿಸಬೇಕು. ಇದರಿಂದ ಅವರು ಇತರರ ಮೇಲೆ ಅವಲಂಬಿತರಾಗುವುದಿಲ್ಲ. ಆಗ ಪೋಷಕರ ಕೆಲಸ ಮತ್ತಷ್ಟು ಸುಲಭವಾಗುತ್ತದೆ ಎನ್ನುತ್ತಾರೆ.
ಹೊಂದಾಣಿಕೆಯನ್ನು ಪೋಷಕರು ಮಕ್ಕಳಿಗೆ ಕಲಿಸಬೇಕೆಂದು ಪ್ರಿಯಾ ಹೇಳುತ್ತಾರೆ. ಬದಲಾವಣೆಯನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಮಕ್ಕಳಿಗೆ ಹೇಳಬೇಕು. ಹಾಗೆಯೇ ಹೊಂದಾಣಿಕೆಗೆ ಹೊಂದಿಕೊಳ್ಳಲು ಮಕ್ಕಳಿಗೆ ಕಲಿಸಬೇಕು ಎನ್ನುತ್ತಾರೆ ಪ್ರಿಯಾ.

Latest Videos
Follow Us:
Download App:
  • android
  • ios