Relationship Tips : ಮೊದಲ ಬಾರಿ ಸೆಕ್ಸ್ ವೇಳೆ ನೋವಾಗೋದನ್ನು ಹೀಗೆ ತಪ್ಪಿಸಿ
ಎಲ್ಲ ಮೊದಲಿನಲ್ಲೂ ಸ್ವಲ್ಪ ಭಯವಿರುತ್ತದೆ. ಅದ್ರಲ್ಲೂ ಸಂಭೋಗದ ಭಯ ಸ್ವಲ್ಪ ಹೆಚ್ಚಿರುತ್ತದೆ. ಇದಕ್ಕೆ ಮುಖ್ಯ ಕಾರಣ ಸೆಕ್ಸ್ ವೇಳೆ ನೋವಾಗುವುದು. ಆದ್ರೆ ಮೊದಲ ಬಾರಿ ಸಂಭೋಗ ಸುಖಕರವಾಗಿರ್ಬೇಕೆಂದ್ರೆ ಕೆಲವೊಂದು ಟಿಪ್ಸ್ ಪಾಲನೆ ಮಾಡ್ಬೇಕು.
ಮೊದಲ ಬಾರಿ ಸಂಭೋಗ ಬೆಳೆಸುವುದು ಯಾವಾಗ್ಲೂ ವಿಶೇಷವಾಗಿರುತ್ತದೆ. ಅದ್ರ ಬಗ್ಗೆ ಜನರು ಅನೇಕ ತಯಾರಿ ನಡೆಸ್ತಾರೆ. ಸೆಕ್ಸ್ ಬಗ್ಗೆ ಒಂದು ರೀತಿಯ ಭಯ ಜನರಲ್ಲಿ ಇರುತ್ತದೆ. ವಿಶೇಷವಾಗಿ ಮಹಿಳೆಯರು ಒಂದು ರೀತಿಯ ಭಯ ಹೊಂದಿರ್ತಾರೆ. ಮೊದಲ ಬಾರಿ ಸಂಭೋಗ ಬೆಳೆಸುವ ವೇಳೆ ಸ್ವಲ್ಪ ನೋವಾಗುವುದು ಸಾಮಾನ್ಯ. ಇದೇ ನೋವು ಮಹಿಳೆಯರ ಭಯಕ್ಕೆ ಕಾರಣವಾಗಿರುತ್ತದೆ. ಆದರೆ ಕೆಲವು ಸಲಹೆಗಳನ್ನು ಪಾಲಿಸುವ ಮೂಲಕ ಲೈಂಗಿಕ ನೋವನ್ನು ಮಹಿಳೆಯರು ಕಡಿಮೆ ಮಾಡ್ಬಹುದು. ಇಂದು ನಾವು ಮೊದಲ ಬಾರಿ ಸಂಭೋಗ ಬೆಳೆಸುವ ವೇಳೆ ಕಾಡುವ ನೋವನ್ನು ಹೇಗೆ ಕಡಿಮೆ ಮಾಡ್ಬೇಕು ಎಂಬುದನ್ನು ಹೇಳ್ತೇವೆ.
ಸಂಭೋಗ (Intercourse)ದ ವೇಳೆ ನೋವಾ (Hurt) ಗದಂತೆ ಹೀಗೆ ಮಾಡಿ :
ನಯಗೊಳಿಸುವಿಕೆ : ನಿಮ್ಮ ಸಂಗಾತಿ ನಿಮ್ಮೊಂದಿಗೆ ಸಂಭೋಗ ಬೆಳೆಸುವ ಮೊದಲು ಖಾಸಗಿ ಭಾಗವನ್ನು ನಯಗೊಳಿಸಬೇಕು. ಯೋನಿ (Vagina) ನಯವಾದಾಗ ಸಂಭೋಗ ಬೆಳೆಸುವುದು ಸುಲಭವಾಗುತ್ತದೆ. ಇದ್ರಿಂದ ಯಾವುದೇ ನೋವು ನಿಮ್ಮನ್ನು ಕಾಡುವುದಿಲ್ಲ. ಇದಕ್ಕೆ ಪೋರ್ ಫ್ಲೇ ಬೆಸ್ಟ್. ಶಾರೀರಿಕ ಸಂಬಂಧ (Physical Relationship ) ಬೆಳೆಸುವ ಮೊದಲು ಪೋರ್ ಫ್ಲೇ ಮಾಡಿದಲ್ಲಿ ಯೋನಿ ನಯಗೊಳ್ಳುತ್ತದೆ. ಚುಂಬಿಸುವುದು, ಅಪ್ಪಿಗೆ ಸೇರಿದಂತೆ ಕೆಲ ಅಂಗಗಳ ಸ್ಪರ್ಶವನ್ನು ಪೋರ್ ಫ್ಲೇ ಎನ್ನುತ್ತಾರೆ.
ಸುಲಭ ಭಂಗಿ : ಪೋರ್ ಫ್ಲೇ ಜೊತೆ ಭಂಗಿ ಕೂಡ ಇಲ್ಲಿ ಮಹತ್ವ ಪಡೆಯುತ್ತದೆ. ನೀವು ಮೊದಲ ಬಾರಿ ಶಾರೀರಿಕ ಸಂಬಂಧ ಬೆಳೆಸಲು ಬಯಸಿದ್ರೆ ಸಾಧ್ಯವಾದಷ್ಟು ಸುಲಭವಾದ ಭಂಗಿಯನ್ನು ಪ್ರಯತ್ನಿಸಿ. ಇದಕ್ಕಾಗಿ, ನೀವು ಮಿಷನರಿ ಅಥವಾ ಸ್ಪೂನ್ ನಂತಹ ಸರಳ ಭಂಗಿಯನ್ನು ಪ್ರಯತ್ನಿಸಬಹುದು . ಈ ಭಂಗಿಗಳು ಮಹಿಳೆಯರ ನೋವನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡುತ್ತವೆ.
ಇದನ್ನೂ ಓದಿ: ಲೈಂಗಿಕ ಕ್ರಿಯೆ ವೇಳೆ ಗಾತ್ರಕ್ಕಿಂತ ಮುಖ್ಯವಾದುದು ಬೇರೆಯೇ ಇದೆ
ಮಾನಸಿಕವಾಗಿ ಸಿದ್ಧರಾಗಿ : ಮೊದಲ ಬಾರಿ ಶಾರೀರಿಕ ಸಂಬಂಧ ಬೆಳೆಸುವ ವೇಳೆ ಎಲ್ಲವೂ ಮೃದುವಾಗಿರುತ್ತದೆ ಎಂದು ನಿರೀಕ್ಷಿಸಬೇಡಿ. ಈ ವೇಳೆ ನಿಮಗೆ ವಿಚಿತ್ರ ಅನುಭವವಾಗುತ್ತದೆ. ಬೆವರಿನ ವಾಸನೆ ಕೂಡ ನಿಮಗೆ ವಿಚಿತ್ರವೆನ್ನಿಸಬಹುದು. ಮಹಿಳೆಯರ ಕನ್ಯಾಪೊರೆ ಹರಿಯುವ ಸಾಧ್ಯತೆಯಿರುತ್ತದೆ. ಈ ವೇಳೆ ಸಾಕಷ್ಟು ನೋವುಂಟಾಗುವ ಸಂಭವವಿದೆ. ಆದ್ದರಿಂದ ಇದಕ್ಕಾಗಿ ಮಾನಸಿಕವಾಗಿ ನಿಮ್ಮನ್ನು ಮುಂಚಿತವಾಗಿ ಸಿದ್ಧಪಡಿಸುವುದು ಉತ್ತಮ. ಚಿತ್ರವಿಚಿತ್ರ ಕನಸು ಕಾಣುವ ಬದಲು ನೀವು ವಾಸ್ತವವನ್ನು ಅರಿಯಬೇಕು.
ಸಂಭೋಗಕ್ಕೆ ಸೂಕ್ತ ಜಾಗ : ಮೊದಲ ಬಾರಿ ಶಾರೀರಿಕ ಸಂಬಂಧ ಬೆಳೆಸುತ್ತಿದ್ದರೆ ನೀವು ಎಲ್ಲಿ ಸಂಭೋಗ ಬೆಳೆಸುತ್ತಿದ್ದೀರಿ ಎಂಬುದು ಮುಖ್ಯವಾಗುತ್ತದೆ. ಲೈಂಗಿಕತೆಗೆ ಆರಾಮದಾಯಕವಾದ ಸ್ಥಳದ ಅಗತ್ಯವಿರುತ್ತದೆ. ಆಗ ಸಂಭೋಗದ ವೇಳೆ ಸಂಪೂರ್ಣವಾಗಿ ಆರಾಮವಾಗಿರಬಹುದು. ಬಾತ್ರೂಮ್ ನಲ್ಲಿ ಅಥವಾ ಕಾರಿನಲ್ಲಿ ಲೈಂಗಿಕತೆಯನ್ನು ಹೊಂದುವುದು ಅತ್ಯಂತ ಅಹಿತಕರವಾಗಿರುತ್ತದೆ. ಹಾಗಾಗಿ ಮೊದಲ ಬಾರಿ ಸಂಭೋಗ ಬೆಳೆಸಲು ಬಾತ್ ರೂಮ್ ಅಥವಾ ಕಾರನ್ನು ಆಯ್ಕೆ ಮಾಡಿಕೊಳ್ಳಬೇಡಿ. ಬೆಡ್ ರೂಮ್ ಮೊದಲ ಬಾರಿ ಸಂಭೋಗಕ್ಕೆ ಸೂಕ್ತವಾದ ಜಾಗ.
ಇದನ್ನೂ ಓದಿ: Relationship Tips : ಈ ಹುಡುಗಿಗೆ ಮದುವೆ ಆಗೋಕೆ ಭಯವಂತೆ..! ಯಾಕೆ ಗೊತ್ತಾ?
ನೋವು ನಿವಾರಕ ಮಾತ್ರೆಗಳ ಪ್ರಯೋಗ ಬೇಡ : ಮೊದಲ ಬಾರಿಗೆ ಶಾರೀರಿಕ ಸಂಬಂಧ ಬೆಳೆಸುವ ವೇಳೆ ನೋವಾಗುವುದು ಸಾಮಾನ್ಯ ಸಂಗತಿ. ಆದರೆ ಈ ನೋವನ್ನು ಕಡಿಮೆ ಮಾಡಲು ಅಥವಾ ನೋವು ಗೊತ್ತಾಗದಿರಲಿ ಎನ್ನುವ ಕಾರಣಕ್ಕೆ ಕೆಲವರು ನೋವಿನ ಮಾತ್ರೆಯ ಮೊರೆ ಹೋಗ್ತಾರೆ. ಆದ್ರೆ ನೋವು ನಿವಾರಣೆಗೆ ನೋವಿನ ಮಾತ್ರೆ ಉತ್ತಮ ಆಯ್ಕೆಯಲ್ಲ ಎಂಬುದನ್ನು ನೆನಪಿನಲ್ಲಿಡಿ. ಒಂದು ವೇಳೆ ವಿಪರೀತ ನೋವಾಗ್ತಿದೆ ಎಂದಾದ್ರೆ ಸಂಭೋಗದ ನಂತ್ರ ನೀವು ಸ್ತ್ರೀರೋಗ ತಜ್ಞರ ಸಲಹೆ ಮೇರೆಗೆ ನೋವಿನ ಮಾತ್ರೆಯನ್ನು ಪಡೆಯಬಹುದು. ನೀವೇ ನೋವಿನ ಮಾತ್ರೆ ಸೇವಿಸುವ ಪ್ರಯೋಗಕ್ಕೆ ಇಳಿಯಬೇಡಿ.