Relationship Tips : ಈ ಹುಡುಗಿಗೆ ಮದುವೆ ಆಗೋಕೆ ಭಯವಂತೆ..! ಯಾಕೆ ಗೊತ್ತಾ?
ಮದುವೆ ಜೀವನದ ದೊಡ್ಡ ಬದಲಾವಣೆ. ಜೀವನ ಪರ್ಯಂತ ಒಬ್ಬ ವ್ಯಕ್ತಿ ಜೊತೆ ಬಾಳ್ವೆ ನಡೆಸುವುದು ಸುಲಭದ ಕೆಲಸವಲ್ಲ. ಇಬ್ಬರ ಮಧ್ಯೆ ಹೊಂದಾಣಿಕೆ ಅತ್ಯಗತ್ಯ. ಈ ಮದುವೆ ವಿಷ್ಯ ಬಂದಾಗ ಕೆಲವರು ಹಿಂದೇಟು ಹಾಕ್ತಾರೆ. ಈ ಹುಡುಗಿ ಕೂಡ ಮದುವೆ ಅಂದ್ರೆ ಆತಂಕಗೊಳ್ತಿದ್ದಾಳೆ. ಅದಕ್ಕೆ ಕಾರಣವೂ ಇದೆ.
ಮದುವೆಗಿಂತ ಮೊದಲು ಒಂದು ಭಯ ಸಾಮಾನ್ಯವಾಗಿರುತ್ತದೆ. ಸಿಗುವ ಸಂಗಾತಿ ಹೇಗಿರಬಹುದು? ಸಂಗಾತಿ ಜೊತೆ ಜೀವನ ನಡೆಸುವುದು ಕಷ್ಟವಾದ್ರೆ, ನನ್ನಿಷ್ಟಕ್ಕೆ ಅವರು ವಿರುದ್ಧವಾಗಿದ್ದರೆ ಹೀಗೆ ಅನೇಕ ಪ್ರಶ್ನೆಗಳು ಮನಸ್ಸಿನಲ್ಲಿ ಮೂಡುತ್ತವೆ. ಅದು ಸಣ್ಣದೊಂದು ಭಯವನ್ನುಂಟು ಮಾಡುತ್ತದೆ. ಕೆಲವು ಬಾರಿ ನಮ್ಮ ಹಿಂದಿನ ಜೀವನ ಅಥವಾ ಹಿಂದೆ ನಡೆದ ಕೆಲ ಘಟನೆಗಳು ಇಲ್ಲವೆ ನಮ್ಮ ಸುತ್ತಮುತ್ತ ನಡೆದ ಘಟನೆಗಳು ನಮ್ಮನ್ನು ಮತ್ತಷ್ಟು ಗೊಂದಲ ಹಾಗೂ ಆತಂಕಕ್ಕೆ ನೂಕುತ್ತವೆ. ಇದಕ್ಕೆ ಈ ಹುಡುಗಿ ಸ್ಪಷ್ಟ ನಿದರ್ಶನ. ಮದುವೆಯಾಗುವ ವಯಸ್ಸಾಗಿದೆ, ಮದುವೆಯಾಗುವ ಮನಸ್ಸಿದೆ. ಆದ್ರೆ ಪತಿಯ ಬಗ್ಗೆ ಇರುವ ಭಯವೊಂದು ಆಕೆ ಮದುವೆ ವಿಷ್ಯದಲ್ಲಿ ಹಿಂದೇಟು ಹಾಕುವಂತೆ ಮಾಡ್ತಿದೆ. ಇಷ್ಟಕ್ಕೂ ಆಕೆ ಕಥೆ ಏನು ಎಂಬುದನ್ನು ನಾವು ಹೇಳ್ತೇವೆ.
ಆಕೆಗೆ 26 ವರ್ಷ. ಮದುವೆ (Marriage) ಯಾಗುವ ನಿರ್ಧಾರ ಕೈಗೊಂಡಿದ್ದಾಳೆ. ಈಗಾಗಲೇ ಆಕೆ ಅನೇಕರ ಜೊತೆ ಸಂಬಂಧದಲ್ಲಿದ್ದಳು. ಆದರೆ ಯಾವುದೂ ಸಕ್ಸಸ್ (Success) ಆಗ್ಲಿಲ್ಲ. ಕೆಲವೇ ದಿನಗಳಲ್ಲಿ ಅಂತ್ಯ ಕಂಡ ಸಂಬಂಧಿವಿದೆ. ಒಂದು ಹುಡುಗ ಮಾತ್ರ ಆಕೆ ಆತ್ಮವಿಶ್ವಾಸ (Confidence) ಕ್ಕೆ ಚಾಕು ಇರಿದಿದ್ದಾನೆ. ಆತನ ಜೊತೆ ಅತಿ ಹೆಚ್ಚು ಅಂದ್ರೆ 5 ತಿಂಗಳು ಸಂಬಂಧದಲ್ಲಿದ್ದಳಂತೆ ಹುಡುಗಿ. ಕೊನೆಯಲ್ಲಿ ಆತ ಪ್ರೀತಿಗೆ ಮೋಸ ಮಾಡಿದನಂತೆ. ಹಿಂದಿನ ದಿನಗಳನ್ನು ಮರೆತು ಸಂಸಾರ ಶುರು ಮಾಡುವ ನಿರ್ಧಾರವನ್ನು ಹುಡುಗಿ ಏನೋ ಕೈಗೊಂಡಿದ್ದಾಳೆ. ಆದ್ರೆ ಮದುವೆಯಾಗಲು ಧೈರ್ಯ ಸಾಲ್ತಿಲ್ಲ. ಮಾಜಿ ಪ್ರೇಮಿಯಂತೆ ಪತಿ ಕೂಡ ನನಗೆ ಮೋಸ ಮಾಡಿದ್ರೆ ಎಂಬ ಭಯ ಆಕೆಯನ್ನು ಸದಾ ಕಾಡ್ತಿದೆ. ಇದ್ರ ಬಗ್ಗೆ ಆಲೋಚನೆ ಮಾಡಿದಷ್ಟ ಆತಂಕ ಹೆಚ್ಚಾಗ್ತಿದೆ.
ಇದನ್ನೂ ಓದಿ: ಪುರುಷರು ಸಂಗಾತಿಯನ್ನು ಹೊಗಳೋದು ಸುಮ್ನೆ ಏನಲ್ಲ,ಕಾರಣ ತಿಳ್ಕೊಳ್ಳಿ
ಆಕೆ ಭಯಕ್ಕೆ ಇನ್ನೊಂದು ಕಾರಣವೂ ಇದೆ. ಆಕೆಯ ತಂದೆ – ತಾಯಿ ಸಂಬಂಧ ಕೂಡ ತುಂಬಾ ದಿನ ಸುಖಕರವಾಗಿರಲಿಲ್ಲವಂತೆ. ಒಂದೇ ಮನೆಯಲ್ಲಿ ವಾಸವಾಗಿದ್ದರೂ ಒಟ್ಟಿಗೆ ಸಂಸಾರ ನಡೆಸ್ತಿರಲಿಲ್ಲ ತಂದೆ – ತಾಯಿ. ಹಾಗಾಗಿಯೇ ಆಕೆಗೆ ತನ್ನ ಪ್ರೀತಿ ಹಾಗೂ ಮದುವೆ ಬಗ್ಗೆ ಭಯ ಶುರುವಾಗಿದೆ. ಯಾವುದೇ ಷರತ್ತಿಲ್ಲದೆ ಪ್ರೀತಿ ಮಾಡುವ ವ್ಯಕ್ತಿ ಈ ಜಗತ್ತಿನಲ್ಲಿ ಸಿಗುವುದು ಕಷ್ಟ ಎನ್ನುತ್ತಾಳೆ ಆಕೆ. ನಾನೇನು ಮಾಡ್ಬೇಕು ಎಂಬುದು ನನಗೆ ಗೊತ್ತಾಗ್ತಿಲ್ಲ ಎಂಬುದು ಹುಡುಗಿ ಪ್ರಶ್ನೆಯಾಗಿದೆ.
ತಜ್ಞರ ಅಭಿಪ್ರಾಯ : ಪ್ರತಿಯೊಬ್ಬ ವ್ಯಕ್ತಿಯೂ ತನಗಿಂತ ಎರಡು ಪಟ್ಟು ಹೆಚ್ಚು ಪ್ರೀತಿ ಮಾಡುವ ಸಂಗಾತಿ ಬೇಕೆಂದು ಬಯಸ್ತಾರೆ. ಇದ್ರಲ್ಲಿ ತಪ್ಪೇನಿಲ್ಲ. ಇದು ಸಾಮಾನ್ಯ ಕೂಡ. ನಮ್ಮನ್ನು ಪ್ರೀತಿ ಮಾಡಲು ನಮ್ಮ ಸುತ್ತಮುತ್ತ ಸಾಕಷ್ಟು ಜನರಿರ್ತಾರೆ. ಕುಟುಂಬಸ್ಥರು, ಸ್ನೇಹಿತರು. ಆದ್ರೆ ಸಂಗಾತಿಯಿಂದ ಸಿಗುವ ಪ್ರೀತಿ ಭಿನ್ನವಾಗಿರುತ್ತದೆ. ಇದೇ ಕಾರಣಕ್ಕೆ ನಾವು ಸಂಗಾತಿ ಹುಡುಕಾಟ ನಡೆಸ್ತೇವೆ. ನಾವು ಬಯಸಿದ ಸಂಗಾತಿ ನಮಗೆ ಸಿಕ್ಕಿಲ್ಲವೆಂದಾಗ ಆತಂಕವಾಗುವುದು ಸಹಜ. ಆದ್ರೆ ಅದಕ್ಕೆ ಬೇಸರಪಟ್ಟುಕೊಳ್ಳುವ ಅಗತ್ಯವಿಲ್ಲ.
ನಿಮ್ಮಲ್ಲಿ ಯಾವುದೇ ತಪ್ಪಿಲ್ಲ ಎನ್ನುವ ತಜ್ಞರು, ನಿಮಗೆ ಸೂಕ್ತವಾದ ಸಂಗಾತಿ ಹುಡುಕಲು ನೀವು ವಿಫಲರಾಗಿದ್ದೀರಿ. ಮೊದಲು ನೀವು ನಿಮ್ಮ ಇಷ್ಟ ಹಾಗೂ ಕಷ್ಟದ ಬಗ್ಗೆ ತಿಳಿದುಕೊಳ್ಳಿ. ನಿಮಗೆ ಎಂಥ ಸಂಗಾತಿ ಬೇಕು ಎಂಬುದನ್ನು ನೀವು ಮೊದಲು ನಿರ್ಣಯಿಸಿಕೊಳ್ಳಿ ಎನ್ನುತ್ತಾರೆ ತಜ್ಞರು. ನಿಮಗಾಗಿ ನೀವು ಸಂಪೂರ್ಣ ಸಮಯ ನೀಡಿ. ನಿಮ್ಮನ್ನು ನೀವು ಅರ್ಥ ಮಾಡಿಕೊಳ್ಳಿ. ಇದು ನೀವು ಒಂದೊಳ್ಳೆ ಸಂಬಂಧ ಬೆಳೆಸಲು ನೆರವಾಗುತ್ತದೆ ಎನ್ನುತ್ತಾರೆ ತಜ್ಞರು.
ಇದನ್ನೂ ಓದಿ: ಸ್ಮಾರ್ಟ್ ಹುಡುಗೀರು ಸಂಗಾತಿಯಾಗಿ ಸಿಕ್ರೆ ಲೈಫ್ ಸೂಪರ್ ಆಗಿರುತ್ತೆ
ಒಂದೊಳ್ಳೆ ಸಂಗಾತಿ ಹುಡುಕಲು ಯಾವುದೇ ಒಂದು ಮಾರ್ಗ ಅಥವಾ ವಿಧಾನವಿಲ್ಲ. ನಿಮ್ಮ ಮೇಲೆ ವಿಶ್ವಾಸವಿದ್ರೆ ಎಲ್ಲವೂ ಸಾಧ್ಯ ಎನ್ನುತ್ತಾರೆ ತಜ್ಞರು. ಎಲ್ಲ ಸಂಬಂಧದಲ್ಲೂ ಭಿನ್ನಾಭಿಪ್ರಾಯವಿರುತ್ತದೆ ಎಂಬುದು ಸುಳ್ಳು. ನಿಮ್ಮ ತಂದೆ – ತಾಯಿಗಾದ ಅನುಭವ ನಿಮಗೂ ಆಗುತ್ತೆ ಎಂಬುದು ಸರಿಯಲ್ಲ. ಹಾಗಾಗಿ ಒಳ್ಳೆಯ ಸಂಗಾತಿ ಹುಡುಕಾಟ ನಡೆಸಿ,ಅವರ ಮೇಲೆ ಸಂಪೂರ್ಣ ಭರವಸೆಯಿಡಿ ಎನ್ನುತ್ತಾರೆ ತಜ್ಞರು.