Asianet Suvarna News Asianet Suvarna News

ಲೈಂಗಿಕ ಕ್ರಿಯೆ ವೇಳೆ ಗಾತ್ರಕ್ಕಿಂತ ಮುಖ್ಯವಾದುದು ಬೇರೆಯೇ ಇದೆ

ಸೆಕ್ಸ್ ಬಗ್ಗೆ ಜನರು ತಿಳಿದುಕೊಳ್ಳುವುದು ಸಾಕಷ್ಟಿದೆ. ಇದಕ್ಕೆ ಸಂಬಂಧಿಸಿದಂತೆ ಅನೇಕ ಅಧ್ಯಯನಗಳು ನಡೆಯುತ್ತಿರುತ್ತವೆ. ಸಂಭೋಗ ಬೆಳೆಸುವಾಗ ಗಾತ್ರಕ್ಕಿಂತ ಮಹತ್ವದ ವಿಷ್ಯಗಳು ಸಾಕಷ್ಟಿವೆ ಎಂದು ತಜ್ಞರು ಹೇಳಿದ್ದಾರೆ.
 

3 Factors That May Be More Important Than Size During Sex
Author
Bangalore, First Published Aug 12, 2022, 4:49 PM IST

ಸಾಮಾನ್ಯವಾಗಿ ಸೆಕ್ಸ್ ವಿಷ್ಯ ಬಂದಾಗ ಜನರು ಗಾತ್ರದ ಬಗ್ಗೆ ಆಲೋಚನೆ ಮಾಡ್ತಾರೆ. ಪುರುಷರು ಈ ವಿಷ್ಯದಲ್ಲಿ ಗಂಭೀರವಾಗಿರ್ತಾರೆ. ಪೋರ್ನ್ ಚಿತ್ರಗಳಲ್ಲೂ ಇದಕ್ಕೆ ಆದ್ಯತೆ ನೀಡುವುದ್ರಿಂದ ಸಂಭೋಗದಲ್ಲಿ ಹೆಚ್ಚು ಸುಖ ಸಿಗೋದು ಗಾತ್ರದಿಂದ ಎಂದು ಭಾವಿಸ್ತಾರೆ. ಇದೇ ಕಾರಣಕ್ಕೆ ಕೆಲವರು ಆರಾಮವಾಗಿ ಶಾರೀರಿಕ ಸಂಬಂಧ ಬೆಳೆಸಲು ಸಾಧ್ಯವಾಗುವುದಿಲ್ಲ. ಖಾಸಗಿ ಅಂಗದ ಗಾತ್ರ ಚಿಕ್ಕದಿದೆ, ಸಂಗಾತಿಗೆ ಸಂಪೂರ್ಣ ಸುಖ ನೀಡಲು ಸಾಧ್ಯವಾಗದೆ ಇರಬಹುದು ಎಂಬ ಪ್ರಶ್ನೆ ಕೆಲವರನ್ನು ಕಾಡುತ್ತದೆ. ಇದೇ ಆತಂಕ ಇಬ್ಬರ ಸಂತೋಷಕ್ಕೆ ಅಡ್ಡಿಯಾಗಬಹುದು. ಅಪರೂಪಕ್ಕೆ ಎನ್ನುವಂತೆ ಖಾಸಗಿ ಅಂಗದ ಗಾತ್ರವೇ ಇಬ್ಬರನ್ನು ದೂರ ಮಾಡಿದ್ದಿದೆ. ಗಾತ್ರಕ್ಕೆ ಸಂಬಂಧಿಸಿದಂತೆ ಅನೇಕ ಅಧ್ಯಯನಗಳು ಕೂಡ ನಡೆದಿವೆ. ಆದ್ರೆ ಹಿಂದಿನ ಅಧ್ಯಯನಗಳು ಗಾತ್ರಕ್ಕೆ ಹೆಚ್ಚು ಮಹತ್ವ ನೀಡಿಲ್ಲ. ಲೈಂಗಿಕ ಆನಂದ ಸಂಪೂರ್ಣವಾಗಿ ಜನರ ವೈಯಕ್ತಿಕ ವಿಷ್ಯವಾಗಿದೆ. ಗಾತ್ರಕ್ಕೂ ಇದಕ್ಕೂ ಯಾವುದೇ ಸಂಬಂಧವಿರುವುದಿಲ್ಲ. ಶಾರೀರಿಕ ಸಂಬಂಧದಲ್ಲಿ ಆನಂದ ಸಂಪೂರ್ಣವಾಗಿ ಸಿಗಲು ಯಾವ ಅಂಶಗಳು ಕಾರಣವಾಗುತ್ತವೆ ಎಂಬುದನ್ನು ನಾವಿಂದು ಹೇಳ್ತೇವೆ.

ಲೈಂಗಿಕ ಸುಖಕ್ಕೆ ಇವು ಮುಖ್ಯ : 
ಪ್ರೀತಿ (Love) ಯ ಬಂಧ :
ಪ್ರೀತಿಯು ಯಾವುದೇ ಸಂಬಂಧ (Relationship) ದ ಅಡಿಪಾಯವಾಗಿದೆ. ಪ್ರಣಯದ ವಿಷ್ಯ ಬಂದಾಗ ಪ್ರೀತಿ ಬಹಳ ಮುಖ್ಯ ಪಾತ್ರವನ್ನು ವಹಿಸುತ್ತದೆ. ಪ್ರೀತಿಸುವ ವ್ಯಕ್ತಿ ಜೊತೆ ವಾಸಿಸುವಾಗ ಸಿಗುವ ಖುಷಿ, ಸಂತೋಷ (Happiness), ನೆಮ್ಮದಿ ಎಲ್ಲಕ್ಕಿಂತ ಭಿನ್ನವಾಗಿರುತ್ತದೆ. ಒತ್ತಡದ ಜೀವನದಲ್ಲಿ ಪಾಲುದಾರರ ನಡುವಿನ ಉತ್ಸಾಹ ಮತ್ತು ಸಂತೋಷಕ್ಕೆ ಪ್ರೀತಿ ಇಂಧನವಾಗಿ ಕಾರ್ಯನಿರ್ವಹಿಸುತ್ತದೆ. ಸಂಬಂಧಕ್ಕೆ ಹೊಸ ಪರಿಮಳವನ್ನು ನೀಡುವ ಪ್ರೇಮದಲ್ಲಿ ತೀವ್ರತೆಯೂ ಇದೆ. ಇಬ್ಬರ ಮಧ್ಯೆ ಪ್ರೀತಿಯಿದ್ದಾಗ ಶಾರೀರಿಕ ಸಂಬಂಧದಲ್ಲಿ ಸುಖ ತಾನಾಗಿಯೇ ಸಿಗುತ್ತದೆ. ಅದಕ್ಕೆ ಪ್ರತ್ಯೇಕ ಗಮನ ನೀಡುವ ಅಥವಾ ಗಾತ್ರದ ಬಗ್ಗೆ ಚಿಂತೆ ಮಾಡುವ ಅಗತ್ಯವಿರುವುದಿಲ್ಲ.

ಇದನ್ನೂ ಓದಿ: Relationship Tips : ಈ ಹುಡುಗಿಗೆ ಮದುವೆ ಆಗೋಕೆ ಭಯವಂತೆ..! ಯಾಕೆ ಗೊತ್ತಾ?

ಮೆದುಳು (Brain) ನಮ್ಮ ದೇಹದಲ್ಲಿನ ಅತ್ಯಂತ ಪ್ರಮುಖ ಲೈಂಗಿಕ ಅಂಗವಾಗಿದೆ ಎಂದು ಹಿಂದೆ ನಡೆದ ಅಧ್ಯಯನವೊಂದು ಹೇಳಿದೆ. ಇದೇ ಮೆದುಳು ನಾವು ಪಡೆಯುವ ಆನಂದಕ್ಕೆ ಕಾರಣವಾಗಿದೆ ಎಂದು ಅಧ್ಯಯನ (Study) ದಲ್ಲಿ ತೋರಿಸಲಾಗಿದೆ. ಪ್ರೀತಿಯಲ್ಲಿ ಸುಖ ಸಿಕ್ಕಾಗ ಸಂಭೋಗದಲ್ಲಿಯೂ ಸುಖ ಸಿಗುತ್ತದೆ. 

ವಿಶ್ವಾಸ (Confidence) : ದಾಂಪತ್ಯದಲ್ಲಿ ವಿಶ್ವಾಸ ಬಹಳ ಮುಖ್ಯ ಪಾತ್ರವಹಿಸುತ್ತದೆ.  ನೀವು ವಿಶ್ವಾಸವಿಡುವ  ಸಂಗಾತಿಯೊಂದಿಗೆ ಇರುವುದು ಜೀವನದಲ್ಲಿ ಹೊಸದನ್ನು ಪ್ರಯತ್ನಿಸುವ ವಿಶ್ವಾಸವನ್ನು ನೀಡುತ್ತದೆ. ಇದು ಭಯವಿಲ್ಲದೆ ನಮ್ಮ ವ್ಯಕ್ತಿತ್ವವನ್ನು ಪ್ರಯೋಗಿಸಲು ಮತ್ತು ನಿರ್ಣಯಿಸಲು ನೆರವಾಗುತ್ತದೆ. ಹೊರ ಪ್ರಪಂಚದಲ್ಲಿ ಮಾತ್ರವಲ್ಲದೆ ಹಾಸಿಗೆಯಲ್ಲಿಯೂ ಸ್ಥಿರವಾದ ಸಂಬಂಧವನ್ನು ಹೊಂದಲು ನಂಬಿಕೆಯು ಪ್ರಮುಖ ಅಂಶವಾಗಿದೆ. ಇದು ನಿಮ್ಮ ಅಭಿಪ್ರಾಯಗಳನ್ನು ಮಿತಿಗೊಳಿಸುವುದಿಲ್ಲ.  ನಿಮ್ಮ ಅಗತ್ಯತೆಗಳು ಮತ್ತು ಅವಶ್ಯಕತೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ನಂಬಿಕೆ ಅವಕಾಶ ನೀಡುತ್ತದೆ. ಸಂಗಾತಿ ಮಧ್ಯೆ ವಿಶ್ವಾಸವಿದ್ರೆ ಯಾವುದೇ ಅನುಮಾನವಿಲ್ಲದೆ ಶಾರೀರಿಕ ಸುಖವನ್ನು ದಂಪತಿ ಪಡೆಯುತ್ತಾರೆ. 

ಇದನ್ನೂ ಓದಿ: ಪುರುಷರು ಸಂಗಾತಿಯನ್ನು ಹೊಗಳೋದು ಸುಮ್ನೆ ಏನಲ್ಲ,ಕಾರಣ ತಿಳ್ಕೊಳ್ಳಿ

ವೈಯಕ್ತಿಕ ಜಾಗ : ನಿಮ್ಮ ಸಂಗಾತಿಯನ್ನು ನೀವು ಎಷ್ಟೇ ಪ್ರೀತಿ ಮಾಡ್ಬಹುದು, ಇಲ್ಲ ನಿಮ್ಮ ಸಂಗಾತಿ ಮೇಲೆ ನೀವು ಎಷ್ಟೇ ಕಾಳಜಿವಹಿಸಬಹುದು ಆದ್ರೂ ನಿಮ್ಮ ಸಂಗಾತಿಗೊಂದು ವೈಯಕ್ತಿಕ ಜಾಗ ನೀಡುವ ಅವಶ್ಯಕತೆಯಿರುತ್ತದೆ. ಪ್ರತಿಯೊಬ್ಬರಿಗೂ ತಮ್ಮದೇ ಆದ ಸ್ಪೇಸ್ ಬೇಕಾಗುತ್ತದೆ. ನಮ್ಮ ಪ್ರೀತಿಗೂ ಒಂದು ಗಡಿ ಇರಬೇಕು. ಹಾಗಂತ ನಾವು ಏನು ಮಾಡ್ತಿದ್ದೇವೆ, ಏನು ಮಾಡ್ತಿಲ್ಲ ಎಂಬ ವಿಷ್ಯವನ್ನು ಸಂಗಾತಿ ಮುಂದೆ ಮುಚ್ಚಿಡಬೇಕು ಎಂದಲ್ಲ. ಹಾಗೆ ಎಲ್ಲವನ್ನೂ ಹೇಳಬೇಕು ಎಂದೂ ಅಲ್ಲ. ಸಂಬಂಧ ಯಾವಾಗ್ಲು ಮುಕ್ತವಾಗಿರಬೇಕು. ಉಸಿರುಗಟ್ಟಿಸಿದ ಸ್ಥಿತಿಯಿದ್ರೆ ಸಂಭೋಗ, ಸುಖ ನೀಡುವ ಬದಲು ಹಿಂಸೆ ಎನ್ನಿಸಲು ಶುರುವಾಗುತ್ತದೆ. 

Follow Us:
Download App:
  • android
  • ios