ಟಿಂಡರ್ ಡೇಟಿಂಗ್ ಪ್ರೇಮಿಗಳಿಗೆ ಹೊಸ ಫೀಚರ್ ಶುರು ಮಾಡಿದೆ. ಇದ್ರಲ್ಲಿ ನೀವು ಮಾತ್ರ ಅಲ್ಲ ನಿಮ್ಮ ಸ್ನೇಹಿತರೂ ಡೇಟ್ ಗೆ ಬರ್ಬಹುದು. ಅದ್ರ ವಿಶೇಷ ಏನು ಗೊತ್ತಾ?
ಹುಡುಗಿ ಇಷ್ಟವಾದ್ರೂ ಅವಳನ್ನು ಮೀಟ್ ಮಾಡೋವಾಗ ಹುಡುಗ್ರು ಬೆವರ್ತಾರೆ. ಇನ್ನೂ ಒಮ್ಮೆಯೂ ನೋಡೇ ಇಲ್ಲ ಎನ್ನುವ ಹುಡುಗಿಯನ್ನು ಭೇಟಿಯಾಗೋವಾಗ ಸ್ಥಿತಿ ಮತ್ತಷ್ಟು ಹದಗೆಟ್ಟಿರುತ್ತೆ. ಬರೀ ಹುಡುಗ್ರು ಮಾತ್ರವಲ್ಲ ಹುಡುಗಿಯರಿಗೂ ಇರುಸು ಮುರುಸಾಗೋದಿದೆ. ಒಬ್ಬರೇ ಹೋಗೋದೇ ಇಲ್ಲಿ ದೊಡ್ಡ ಸಮಸ್ಯೆ. ಡೇಟಿಂಗ್ ಮಾಡೋರು ನೀವಾದ್ರೆ ನಿಮ್ಮ ಜೊತೆ ನಿಮ್ಮ ಸ್ನೇಹಿತರನ್ನು ಕರೆದುಕೊಂಡು ಹೋಗೋದು ಎಷ್ಟು ಸರಿ. ಇದು ಸಂಗಾತಿಗೆ ಇಷ್ಟವಾಗದೆ ಇರ್ಬಹುದು. ಇದಕ್ಕೀಗ ಡೇಟಿಂಗ್ ಆಪ್ ಟಿಂಡರ್ ಒಳ್ಳೆ ಪ್ಲಾನ್ ಮಾಡಿದೆ. ಹೊಸ ಫೀಚರ್ ಜೊತೆ ಬಂದಿದೆ. ಇನ್ಮುಂದೆ ಒಂಟಿಯಾಗಿ ಡೇಟಿಂಗ್ ಗೆ ಹೋಗೋ ಟೆನ್ಷನ್ ಇಲ್ಲ. ನಿಮ್ಮ ಫ್ರೆಂಡ್ಸ್ ಕೂಡ ನಿಮ್ಮ ಜೊತೆಗೆ ಬರ್ಬಹುದು. ಇದನ್ನು ಟಿಂಡರ್ ಡಬಲ್ ಡೇಟ್ (Tinder double date) ಅಂತ ನಾಮಕರಣ ಮಾಡಿದೆ.
ಡಬಲ್ ಡೇಟ್ ಎಂದ್ರೇನು? : ಡಬಲ್ ಡೇಟ್ ಅಂದ್ರೆ ಒಬ್ಬರೇ ಇಬ್ಬರ ಜೊತೆ ಹೋಗೋದಲ್ಲ. ನೀವು ನಿಮ್ಮ ಹುಡುಗಿ ಜೊತೆ ಹೋದ್ರೆ ನಿಮ್ಮ ಸ್ನೇಹಿತ ಅವನ ಹುಡುಗಿ ಜೊತೆ ಬರ್ತಾನೆ. ಆದ್ರೆ ನಿಮ್ಮ ಹುಡುಗಿ ಜೊತೆ ಅವನ ಹುಡುಗಿಯನ್ನೂ ನೀವು ಟಿಂಡರ್ ನ ಡಬಲ್ ಡೇಟ್ ನಲ್ಲಿ ಸರ್ಚ್ ಮಾಡ್ಬಹುದು. ನಿಮ್ಮಿಬ್ಬರ ಜೋಡಿ, ಡಬಲ್ ಡೇಟ್ ಗೆ ಸಿದ್ಧವಾದ ಇನ್ನೊಂದು ಜೋಡಿಯನ್ನು ಸರ್ಚ್ ಮಾಡ್ಬಹುದು. ಇದ್ರಲ್ಲಿ ನಾಲ್ವರು ಒಟ್ಟಿಗೆ ಚಾಟ್ ಮಾಡ್ಬಹುದು, ಒಟ್ಟಿಗೆ ಡೇಟ್ ಹೋಗ್ಬಹುದು.
ಟಿಂಡರ್ ನಲ್ಲಿ ಎಲ್ಲಿ ಸಿಗ್ತಿದೆ ಈ ಆಪ್ಷನ್? : ಟಿಂಡರ್ ಅಪ್ಲಿಕೇಶನ್ ಓಪನ್ ಮಾಡಿದ ನಂತ್ರ ಮೇಲಿನ ಬಲಭಾಗದಲ್ಲಿ ಡಬಲ್ ಡೇಟ್ ಐಕಾನ್ ನಿಮಗೆ ಸಿಗಲಿದೆ. ಇಲ್ಲಿ ನೀವು ನಿಮ್ಮ ಯಾವುದೇ ಸ್ನೇಹಿತರನ್ನು ಆಹ್ವಾನಿಸಬಹುದು. ಇಬ್ಬರೂ ಸ್ನೇಹಿತರು ಟಿಂಡರ್ಗೆ ಲಾಗಿನ್ ಮಾಡಿದಾಗ ಒಟ್ಟಿಗೆ ಪ್ರೊಫೈಲ್ಗಳನ್ನು ನೋಡ್ಬಹುದು. ಇಬ್ಬರಿಗೂ ಇಷ್ಟಪಡುವ ಪ್ರೊಫೈಲ್ಗಳೊಂದಿಗೆ ಮ್ಯಾಚ್ ಮಾಡ್ಬಹುದು.
ಮ್ಯಾಚ್ ಆದ್ಮೇಲೆ ಏನು ಮಾಡ್ಬೇಕು? : ಎರಡೂ ಗ್ರೂಪ್ ಪರಸ್ಪರ ಸ್ವೈಪ್ ಮಾಡಿದಾಗ, ಟಿಂಡರ್, ಗ್ರೂಪ್ ಚಾಟ್ ಕ್ರಿಯೆಟ್ ಮಾಡುತ್ತದೆ. ಇದ್ರಲ್ಲಿ ನಾಲ್ವರೂ ಪರಸ್ಪರ ಮಾತನಾಡ್ಬಹುದು, ಒಬ್ಬರನ್ನೊಬ್ಬರು ತಿಳಿದುಕೊಳ್ಬಹುದು ಮತ್ತು ಎಲ್ಲವೂ ಸರಿಯಾಗಿದ್ದರೆ ಡಬಲ್ ಡೇಟಿಂಗ್ ಟೈಂ ಫಿಕ್ಸ್ ಮಾಡ್ಬಹುದು.
ಟಿಂಡರ್ ಈ ಫೀಚರ್ ಶುರು ಮಾಡಲು ಕಾರಣ ಏನು? : ಟಿಂಡರ್ನ ಪ್ರಾಜೆಕ್ಟ್ ಮಾರ್ಕೆಟಿಂಗ್ ಮುಖ್ಯಸ್ಥ ಕ್ಲಿಯೊ ಲಾಂಗ್ ಪ್ರಕಾರ, ಈ ಫೀಚರ್ ಉದ್ದೇಶ ಡೇಟಿಂಗ್ ವೇಳೆ ಮಾನಸಿಕ ಒತ್ತಡವನ್ನು ಕಡಿಮೆ ಮಾಡೋದಾಗಿದೆ. ಒಂಟಿಯಾಗಿ ಹೊಸಬರನ್ನು ಭೇಟಿಯಾಗಲು ಹೆದರುವ ಯುವಕರು ಫ್ರೆಂಡ್ಸ್ ಜೊತೆಯಲ್ಲಿದ್ರೆ ಅದನ್ನು ಹಗುರವಾಗಿ ತೆಗೆದುಕೊಳ್ತಾರೆ. ಮೀಟಿಂಗ್ ಕೂಲ್ ಆಗಿ ನಡೆಯುತ್ತೆ. ಮೋಜಿನಿಂದ ಕೂಡಿರುತ್ತೆ ಎನ್ನುತ್ತಾರೆ ಕ್ಲಿಯೊ ಲಾಂಗ್. Gen-Z ಬಳಕೆದಾರರಿಗೆ ಇದು ಹೆಚ್ಚು ಆರಾಮದಾಯಕವಾಗಿರಲಿದೆ ಎಂದು ಕ್ಲಿಯೊ ಲಾಂಗ್ ಹೇಳಿದ್ದಾರೆ. ಟಿಂಡರ್ ಈ ಫೀಚರ್ ಸದ್ಯ ಯುಎಸ್ ನಲ್ಲಿ ಶುರುವಾಗಿದೆ. ಆದ್ರೆ ಜುಲೈ 2025 ರ ವೇಳೆಗೆ ಇದನ್ನು ಪ್ರಪಂಚದಾದ್ಯಂತ ಬಿಡುಗಡೆ ಮಾಡಲು ಕಂಪನಿ ಮುಂದಾಗಿದೆ. ಶೀಘ್ರವೇ ಭಾರತದ ಬಳಕೆದಾರರಿಗೂ ಈ ಸೌಲಭ್ಯ ಲಭ್ಯವಾಗಲಿದೆ.
ಭಾರತದಲ್ಲಿ ಡೇಟಿಂಗ್ ಅಪ್ಲಿಕೇಷನ್ ಬಳಕೆದಾರರ ಸಂಖ್ಯೆ ಹೆಚ್ಚಿದೆ. 2023ರಲ್ಲಿ ಟಿಂಡರ್ ಭಾರತದಲ್ಲಿಅತಿ ಹೆಚ್ಚು ಮಾಸಿಕ ಸಕ್ರಿಯ ಬಳಕೆದಾರರನ್ನು ಹೊಂದಿರುವ ಡೇಟಿಂಗ್ ಅಪ್ಲಿಕೇಶನ್ ಆಗಿತ್ತು. ಒಂಬತ್ತು ಮಿಲಿಯನ್ ಗಿಂತಲೂ ಹೆಚ್ಚು ಬಳಕೆದಾರರು ಇದ್ರಲ್ಲಿದ್ದರು. ಸದ್ಯ ಬಂಬಲ್, ಶಾದಿ.ಕಾಮ್ ಮತ್ತು ಜೀವನಸಾಥಿ ಸೇರಿದಂತೆ ಅನೇಕ ಡೇಟಿಂಗ್ ಅಪ್ಲಿಕೇಷನ್ ಸಾಕಷ್ಟು ಜನಪ್ರಿಯವಾಗಿದೆ.
