ಟೀನಾ ದಾಬಿ ಮಾಜಿ ಪತಿ ಅಥರ್ ಅಮೀರ್ ಖಾನ್ ಈ ತಿಂಗಳು ನಿಶ್ಚಿತಾರ್ಥ ಮಾಡಿಕೊಂಡರು. ಅವರು ಡಾ. ಮೆಹ್ರೀನ್ ಖಾಜಿ ಅವರನ್ನು ಮದುವೆಯಾಗಲಿದ್ದಾರೆ. ಅಥರ್ ಮತ್ತು ಮೆಹ್ರೀನ್ ಇಬ್ಬರೂ ಇದೇ ತಿಂಗಳ ಆರಂಭದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈಗ ಮದುವೆಗೂ ಮುನ್ನ ರೊಮ್ಯಾಂಟಿಕ್ ಫೋಟೋಶೂಟ್‌ನಲ್ಲಿ ಈ ಜೋಡಿ ಭಾಗಿಯಾಗಿದೆ.

ಶ್ರಿನಗರ (ಜುಲೈ 30): ತಮ್ಮ ಮದುವೆಯಿಂದಲೇ ದೇಶಾದ್ಯಂತ ದೊಡ್ಡ ಸುದ್ದಿಯಾಗಿದ್ದ ಐಎಎಸ್ ಅಧಿಕಾರಿ ಟೀನಾ ದಾಬಿ ಮೂರು ತಿಂಗಳ ಹಿಂದೆ ತಮ್ಮ 2ನೇ ಮದುವೆಯಾಗಿದ್ದರು. 2013ರ ಬ್ಯಾಚ್‌ನ ಐಎಎಸ್ ಅಧಿಕಾರಿ ಡಾ.ಪ್ರದೀಪ್‌ ಗಾವಂಡೆಯನ್ನು ಅವರು ವರಿಸಿದ್ದರು. ಇದರ ಬೆನ್ನಲ್ಲಿಯೇ ಟೀನಾ ದಾಬಿ ಅವರ ಮಾಜಿ ಪತಿ ಅಥರ್ ಅಮೀರ್ ಖಾನ್ ಈ ತಿಂಗಳ ಆರಂಭದಲ್ಲಿ ತಮ್ಮ 2ನೇ ಮದುವೆಯ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅವರು ಡಾ. ಮೆಹ್ರೀನ್ ಖಾಜಿ ಅನ್ನು ವರಿಸಲಿದ್ದಾರೆ. ಈ ತಿಂಗಳ ಆರಂಭದಲ್ಲಿ ಇವರಿಬ್ಬರ ನಿಶ್ಚಿತಾರ್ಥ ಸಮಾರಂಭ ಆಪ್ತ ಜನರ ಸಮ್ಮುಖದಲ್ಲಿ ನಡೆದಿತ್ತು. ನಿಶ್ಚಿತಾರ್ಥದ ಬೆನ್ನಲ್ಲಿಯೇ ಮೆಹ್ರೀನ್ ತನ್ನ ಇನ್ಸ್‌ಟಾಗ್ರಾಮ್‌ ಖಾತೆಯಲ್ಲಿ ಪ್ರತಿ ದಿನ ಹಹೊಸ ಪೋಸ್ಟ್‌ ಅನ್ನು ಹಾಕುತ್ತಲೇ ಇದ್ದಾರೆ. ಇತ್ತೀಚೆಗೆ ತಮ್ಮ ಇನ್ಸ್‌ಟಾಗ್ರಾಮ್‌ ಖಾತೆಯಲ್ಲಿ ಹೊಸ ಫೋಟೋಅನ್ನು ಪೋಸ್ಟ್‌ ಮಾಡಿದ್ದು, ಇದರಲ್ಲಿ ಭಾವಿ ಪತಿಯೊಂದಿಗೆ ಕಾಶ್ಮೀರದ ಉದ್ಯಾನವನದ ಫೋಟೋಶೂಟ್‌ನ ಆಕರ್ಷಕ ಚಿತ್ರಗಳನ್ನು ಪೋಸ್ಟ್‌ ಮಾಡಿದ್ದಾರೆ. ಇವರು ಶೇರ್‌ ಮಾಡಿರುವ ಚಿತ್ರಗಳು ವೈರಲ್‌ ಆಗಿವೆ. ಅಥರ್ ಅವರ ಭಾವಿ ಪತ್ನಿ ಫೋಟೋಶೂಟ್: ಟೀನಾ ದಾಬಿ ಅವರ ಮಾಜಿ ಪತಿ ಅಥರ್ ಅಮೀರ್ ಖಾನ್ ಅವರು ತಮ್ಮ ಭಾವಿ ಪತ್ನಿ ಡಾ. ಮೆಹ್ರೀನ್ ಖಾಜಿ ಅವರೊಂದಿಗೆ ಅನೇಕ ಚಿತ್ರಗಳನ್ನು ಹಂಚಿಕೊಳ್ಳುತ್ತಾರೆ. ಈ ಬಾರಿ ಅವರ ಭಾವಿ ಪತ್ನಿಯ ಜೊತೆಗಿನ ಕಾಶ್ಮೀರದ ಕಣಿವೆಗಳಲ್ಲಿ ಫೋಟೋಶೂಟ್‌ನ ಚಿತ್ರವನ್ನು ಹಂಚಿಕೊಂಡಿದ್ದಾರೆ, ಇದನ್ನು ಜನರು ತುಂಬಾ ಇಷ್ಟಪಟ್ಟಿದ್ದಾರೆ. 

ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋವನ್ನು ಹಂಚಿಕೊಂಡ ಮೆಹ್ರೀನ್ (Mehreen Qazi), 'ಎಂದೆಂದಿಗೂ ಮತ್ತು ಅಗಣಿತ' (ಫಾರೆವರ್‌ ಆಂಡ್‌ ಬಿಯಾಂಡ್‌) ಎಂದು ಬರೆದಿದ್ದಾರೆ. ಒಂದೇ ದಿನದಲ್ಲಿ ಈ ಚಿತ್ರವನ್ನು 23 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಅತ್ಯಂತ ಸುಂದರ ಐಎಎಸ್ ಜೋಡಿ ಎಂದು ಹೆಸರು ಮಾಡಿದ್ದ ಟೀನಾ ದಾಬಿ (Tina Dabi) ಹಾಗೂ ಅಥರ್‌ ಅಮೀರ್‌ ಖಾನ್‌ (Athar Aamir Khan), ಕೆಲ ವರ್ಷದ ದಾಂಪತ್ಯದ ಬಳಿಕ ವಿಚ್ಛೇದನ ಪಡೆದುಕೊಂಡಿದ್ದರು. ಪರಸ್ಪರ ವೈಮನಸ್ಸಿನ ಕಾರಣದಿಂದ ವೈವಾಹಿಕ ಜೀವನ ನಡೆಸಲು ಸಾಧ್ಯವಾಗದ ಕಾರಣ, ಇಬ್ಬರೂ ಪರಸ್ಪರ ದೂರವಿರಲು ನಿರ್ಧರಿಸಿದರು. ವಿಚ್ಛೇದನ ಪಡೆದ ಕೆಲ ತಿಂಗಳ ಬಳಿಕ ಟೀನಾ ದಾಬಿ, ಪ್ರವೀಣ್‌ ಅವರನ್ನು ವಿವಾಹವಾಗಿದ್ದರು.

View post on Instagram

ವೈರಲ್‌ ಆದ ಚಿತ್ರಗಳು: ಡಾ. ಮೆಹ್ರೀನ್ ಖಾಜಿ ಅವರ ಪೋಸ್ಟ್‌ಗೆ ಜನರು ವಿಭಿನ್ನ ರೀತಿಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. "ಎರಡು ಶ್ರೇಷ್ಠ ವ್ಯಕ್ತಿತ್ವಗಳ ಆಕರ್ಷಕ ಜೋಡಿಗೆ ಪಕೃತಿಯ ಆಶೀರ್ವಾದವನ್ನು ರಚಿಸಿದಂತಿದೆ' ಎಂದು ಈ ಚಿತ್ರಗಳಿಗೆ ಒಬ್ಬರು ಕಾಮೆಂಟ್‌ ಮಾಡಿದ್ದಾರೆ. ಅದಲ್ಲದೆ, ನೂರಾರು ಜನರು ಕಾಮೆಂಟ್‌ ಬಾಕ್ಸ್‌ನಲ್ಲಿ ಹಾರ್ಟ್‌ ಇಮೋಜಿ ಹಾಕಿ ಖುಷಿ ಪಟ್ಟಿದ್ದಾರೆ. 

ಟೀನಾ ದಾಬಿ ಜೊತೆ ಡೈವೋರ್ಸ್‌ ಬಳಿಕ 2ನೇ ಮದುವೆಗೆ ಸಜ್ಜಾದ ಅಥರ್ ಅಮೀರ್ ಖಾನ್, ಇವರೇ ವಧು!

ಟೀನಾ ದಾಬಿ, ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಯಾದ ಐಎಎಸ್ ಅಧಿಕಾರಿ. ಅವರು ತಮ್ಮ ಬ್ಯಾಚ್‌ನ ಟಾಪರ್‌ ಆಗಿದ್ದರು. ಇತ್ತೀಚೆಗೆ ಅವರಿಗೆ ಬಡ್ತಿ ಕೂಡ ಸಿಕ್ಕಿದ್ದು, ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದು ಕಲೆಕ್ಟರ್‌ ಆಗಿ ಅವರ ಮೊದಲ ಪೋಸ್ಟಿಂಗ್‌ ಆಗಿದೆ. ಟೀನಾ ರಾಜಸ್ಥಾನ ಕೇಡರ್‌ನ 2016ರ ಬ್ಯಾಚ್‌ನ ಐಎಎಸ್ ಅಧಿಕಾರಿ.

ಸೋಶಿಯಲ್ ಮೀಡಿಯಾದಲ್ಲಿ ಮದುವೆ ಫೋಟೋ ಶೇರ್ ಮಾಡಿಕೊಂಡ IAS ಟೀನಾ ದಾಬಿ!

ಟೀನಾ ದಾಬಿ ಮೊದಲಿನಿಂದಲೂ ಓದುವ ವಿಚಾರದಲ್ಲಿ ಉತ್ತಮವಾಗಿದ್ದಳು. 12ನೇ ತರಗತಿಯಲ್ಲಿ ಶೇ 96.25 ಅಂಕ ಪಡೆದಿದ್ದರು. ಟೀನಾ ದಾಬಿ ಅವರ ಶಾಲಾ ಶಿಕ್ಷಣವನ್ನು ಕಾನ್ವೆಂಟ್ ಆಫ್ ಜೀಸಸ್ ಮತ್ತು ಮೇರಿ ಸ್ಕೂಲ್, ನವದೆಹಲಿಯಲ್ಲಿ ಮಾಡಿದ್ದರ. ಅಲ್ಲಿದ್ದಾಗ ಅವರು ನವದೆಹಲಿಯ ಲೇಡಿ ಶ್ರೀ ರಾಮ್ ಮಹಿಳಾ ಕಾಲೇಜಿನಲ್ಲಿ ಪದವಿಯನ್ನು ಪೂರ್ಣಗೊಳಿಸಿದರು. ಟೀನಾ ರಾಜಕೀಯ ವಿಜ್ಞಾನದಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್‌ನಲ್ಲಿ ಪದವಿ ಪಡೆದಿದ್ದಾರೆ.