ಮ್ಯಾಟ್ರಿಮೋನಿ ಎಚ್ಚರ,  ಈ ರೀತಿಯೂ ವಂಚನೆ ಮಾಡ್ತಾರೆ ಹುಷಾರ್!

ಮ್ಯಾಟ್ರಿಮೋನಿ ಸೈಟ್ ಪರಿಚಯ ಎಚ್ಚರ/ ವಿವಿಧ  ಕಾರಣ ಹೇಳಿ ಹಣ ಕೇಳ್ತಾರೆ/ ಮಹಿಳೆಗೆ ಮಹಾ ಮೋಸ/ ಎರಡನೇ ಮದುವೆಯಾಗಬಯಸಿದ್ದರು

Cyber crook dupes software engineer of Rs 10 lakh after befriending her through matrimonial site mah

ಹೈದರಾಬಾದ್(ಮೇ 04)  ಒಂದು ಕಡೆ ಕೊರೋನಾ ದೇಶವನ್ನು ಕಾಡುತ್ತಿದ್ದರೆ ವಂಚಕರು ಬೇರೆ  ಬೇರೆ  ಮಾರ್ಗ ಹುಡುಕಿಕೊಳ್ಳುತ್ತಿದ್ದಾರೆ.  ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ  34 ವರ್ಷದ ಮಹಿಳೆ ಮ್ಯಾಟ್ರಿಮೋನಿಯಲ್  ಸೈಟ್ ಮೂಲಕ ಪರಿಚಯ ಮಾಡಿಕೊಂಡ ವ್ಯಕ್ತಿ  ತನಗೆ 10 ಲಕ್ಷ ರೂ. ವಂಚನೆಯಾಗಿದೆ ಎಂದು ಆರೋಪಿಸಿದ್ದಾರೆ.

ಹೈದರಾಬಾದ್‌ನ ಬೇಗಂಪೆಟ್ ಪ್ರದೇಶದ ನಿವಾಸಿ ದೂರು ನೀಡಿದ್ದಾರೆ.  ಗಂಡನಿಂದ ಬೇರೆಯಾಗಿದ್ದ ಮಹಿಳೆ ಬೇರೆ ಮದುವೆಯಾಗಲು ಬಯಸುತ್ತಿದ್ದರು. ಈಕೆಗೆ ಆರು ವರ್ಷ  ಮಗ ಇದ್ದಾನೆ.

ಮಗ್ಗಿ ಹೇಳಲು ವರನ ಬಳಿ ಸಾಧ್ಯವಾಗಲಿಲ್ಲ, ಮದುವೆ ಮುರಿದು ಬಿತ್ತು

ಮ್ಯಾಟ್ರಿಮೋನಿಗೆ  ಜಾಯಿನ್ ಆದ ಮಹಿಳೆ ಸಂಗಾತಿಗೆ ಸರ್ಚ್ ಮಾಡಿದ್ದಳು.  ನಾನು ಯುಎಸ್  ನ  ಕಂಪನಿಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದೇನೆ..ನನ್ನ ಹೆಸರು ಮೆಹುಲ್ ಕುಮಾರ್  ಗುಜರಾತ್‌ನಲ್ಲಿ ಮನೆ ಹೊಂದಿದ್ದೇನೆ ಎಂದು ಪರಿಚಯ ಮಾಡಿಕೊಂಡಿದ್ದಾನೆ. ಗುಜರಾತ್‌ನಲ್ಲಿರುವ  ಆಸ್ತಿಯನ್ನು ಯ ಕಾಗದ ಪತ್ರದ ಕೆಲ ಸಮಸ್ಯೆಯಾಗಿದ್ದು ತುರ್ತಾಗಿ 1.5 ಲಕ್ಷ ರೂ.   ಬೇಕಿದೆ ಎಂದು ಪಡೆದುಕೊಂಡಿದ್ದಾನೆ.

ಇದಾದ ಮೇಲೆ ಆತ ಕೆಲವು ಆಭರಣ,  ದುಬಾರಿ ಗಿಫ್ಟ್ ಗಳ ಪೋಟೋವನ್ನು ಕಳಿಸಿಕೊಟ್ಟಿದ್ದಾನೆ.  ಇದನ್ನು ನಿನಗೋಸ್ಕರ ತರುತ್ತಿದ್ದೇನೆ ಎಂದು ಹೇಳಿ ನಂಬಿಸಿದ್ದಾನೆ.  ಆದರೆ ಏಪ್ರಿಲ್ ಮಧ್ಯ ಭಾಗದಲ್ಲಿ ಕರೆ ಮಾಡಿದ್ದು ಅಧಿಕಾರಿಗಳು ಎಲ್ಲ ಆಭರಣ ಸೀಜ್ ಮಾಡಿದ್ದು ಟ್ಯಾಕ್ಸ್ ಕಟ್ಟಲು ಪೀಡಿಸುತ್ತಿದ್ದಾರೆ ತುರ್ತಾಗಿ ಆರು ಲಕ್ಷ ರೂ. ಬೇಕಿದೆ ಎದು ಹಾಕಿಸಿಕೊಂಡಿದ್ದಾನೆ.

ಇದಾದ ಮೇಲೆಯೂ  ವಿವಿಧ   ಕಾರಣ ನೀಡಿ ಮಹಿಳೆಗೆ ವಂಚಿಸಿರುವ ಯುವಕ ಹಣ ಹಾಕಿಸಿಕೊಂಡಿದ್ದಾನೆ. ಕೊನೆ ಸಂಪರ್ಕಕ್ಕೆ ಸಿಗದೇ ಹೋದಾಗ ಅನುಮಾನಗೊಂಡ ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ. 

 

Latest Videos
Follow Us:
Download App:
  • android
  • ios