ಜನವರಿ 10, 1913 ರ ದಿನಾಂಕವಿರುವ ಪತ್ರ ಅಮೆರಿಕನ್ ವ್ಯಂಗ್ಯಚಿತ್ರಕಾರ ಪತ್ನಿಗೆ ಬರೆದ ಪತ್ರ ವಿಶಿಷ್ಟತೆಯಿಂದಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್
1913 ರಲ್ಲಿ ಬರೆದ ಪ್ರೇಮಪತ್ರವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಪತ್ರವನ್ನು ಅಮೆರಿಕನ್ ವ್ಯಂಗ್ಯಚಿತ್ರಕಾರ ಮತ್ತು ಚಿತ್ರಕಲಾಕಾರ ಆಲ್ಫ್ರೆಡ್ ಜೋಸೆಫ್ ಫ್ರೂಹ್(Alfred Joseph Frueh) ಅವರು ಜನವರಿ 10, 1913 ರಂದು ಅವರ ಪತ್ನಿ ಗಿಯುಲಿಯೆಟ್ ಫ್ಯಾನ್ಸಿಯುಲ್ಲಿಗೆ ಬರೆದಿದ್ದರು. 1913ರ ಈ ಪ್ರೇಮ ಪತ್ರವು ತನ್ನ ಅನನ್ಯತೆಯಿಂದಾಗಿ ಇಂದಿಗೂ ಹಲವರ ಹೃದಯವನ್ನು ಗೆಲ್ಲುತ್ತಿದೆ.
ಇದು ಡಿಜಿಟಲ್ ಯುಗ ಇಲ್ಲಿ ಈಗ ಪ್ರೇಮ ಪತ್ರಗಳಿಗೆ ಜಾಗವಿಲ್ಲ. ಪತ್ರವನ್ನು ಬರೆಯುವ ತಾಳ್ಮೆ ಇಂದಿನ ಪ್ರೇಮಿಗಳಿಗಿಲ್ಲ. ಅಲ್ಲದೇ ಪತ್ರಗಳ ಜಾಗವನ್ನು ಸ್ಮಾರ್ಟ್‌ಫೋನ್‌ಗಳು ನುಂಗಿ ಹಾಕಿದ್ದು, ಕೇವಲ ಮೆಸೇಜ್, ವಾಟ್ಸಾಪ್, ಫೇಸ್‌ಬುಕ್ ಮೂಲಕ ಇಂದಿನ ಯುವ ಸಮೂಹ ತಮ್ಮ ಪ್ರೀತಿಯನ್ನು ನಿವೇದಿಸಿಕೊಳ್ಳುತ್ತಿದ್ದಾರೆ. ಆದರೆ ಹಿಂದೆ ಹೀಗಿರಲಿಲ್ಲಾ. ಫೋನ್‌ಗಳಿದ್ದರೂ ಊರಲ್ಲಿ ಯಾವುದಾದರೂ ಶ್ರೀಮಂತರ ಮನೆಯಲ್ಲಿ ಇರುತ್ತಿತ್ತೆ ಹೊರತು ಈಗಿನಂತೆ ಪ್ರತಿಯೊಬ್ಬರ ಕೈಯಲ್ಲಿ ಸ್ಮಾರ್ಟ್‌ಫೋನ್‌ಗಳಿರಲಿಲ್ಲ. ತಮ್ಮ ಪ್ರೀತಿ ಪಾತ್ರರ ಒಂದು ಪತ್ರಕ್ಕಾಗಿ ದಿನ ತಿಂಗಳು ವರ್ಷಗಟ್ಟಲೇ ಕಾತುರದಿಂದ ಕಾಯುವ ಕಾಲ ಅದಾಗಿತ್ತು. ಹೀಗಾಗಿ ಆ ಕಾಲದ ಈ ಪ್ರೇಮ ಪತ್ರ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಪತ್ರ ತನ್ನ ವಿಶಿಷ್ಟತೆಯಿಂದಾಗಿ ಅನೇಕ ಹೊಸ ಪೀಳಿಗೆಯ ಜನರ ಮೆಚ್ಚುಗೆಯನ್ನು ಗಳಿಸಿದೆ. ಕಾಗದದ ಮೇಲೆ ಬರೆದ ಶೈಲಿಯು ಆಕರ್ಷಕವಾಗಿದ್ದು, ಪತ್ರದ ವಿನ್ಯಾಸ ಮತ್ತು ಪ್ರಸ್ತುತಿಯಿಂದ ಹೆಚ್ಚು ಭವ್ಯವಾಗಿದೆ. ಅದರಲ್ಲಿರುವ ಸೂಚನೆಗಳ ಪ್ರಕಾರ ಮಾಡಿಸಿದರೆ, ಪತ್ರವು ಆರ್ಟ್ ಗ್ಯಾಲರಿಯ ಮಿನಿ ಮಾದರಿಯಾಗಿ ರೂಪಾಂತರಗೊಳ್ಳುತ್ತದೆ.
ಪತ್ರವು ವರ್ಣಚಿತ್ರಗಳೊಂದಿಗೆ ನೇತುಹಾಕಲಾದ ಗ್ಯಾಲರಿಯ ಮಾದರಿಯೊಂದಿಗೆ ತೆರೆದುಕೊಳ್ಳುತ್ತದೆ. ಆಕೆಯ ಭೇಟಿಗೂ ಮೊದಲು ನಿರ್ದಿಷ್ಟ ಕಲಾ ಗ್ಯಾಲರಿಯ ವಿವರಗಳ ಬಗ್ಗೆ ತನ್ನ ಹೆಂಡತಿಗೆ ತಿಳಿಸಲು ಫ್ರೂಹ್ ಈ ಮಾದರಿಯನ್ನು ಮಾಡಿದ್ದಾರೆ ಎಂದು ಪತ್ರದ ಫೋಟೋಗಳೊಂದಿಗೆ ಟ್ವಿಟ್ಟರ್ ಬಳಕೆದಾರರೊಬ್ಬರು ಟ್ವೀಟ್ ಮಾಡಿದ್ದಾರೆ. ಬರೆದ ಅಕ್ಷರವನ್ನು ಸರಿಯಾಗಿ ಮಡಚಿದರೆ, ಹೊರಭಾಗವು ಬರವಣಿಗೆಯಲ್ಲಿ ಮುಚ್ಚಲ್ಪಡುತ್ತದೆ ಆದರೆ ಒಳಭಾಗವು ಆರ್ಟ್ ಗ್ಯಾಲರಿಯನ್ನು ಪ್ರದರ್ಶಿಸುತ್ತದೆ, ಇದು ಛಾಯಾಚಿತ್ರಗಳು ಮತ್ತು ಗೋಡೆಗಳ ಮೇಲಿನ ವರ್ಣಚಿತ್ರಗಳೊಂದಿಗೆ ಪೂರ್ಣಗೊಂಡಿದೆ.
Boyfriend On Rent... ಪ್ರೇಮಿಗಳ ದಿನ BE ವಿದ್ಯಾರ್ಥಿಯ ವಿಭಿನ್ನ ಪ್ಲೇಕಾರ್ಡ್
2020 ರಲ್ಲಿ ಮಹಿಳೆಯೊಬ್ಬರು 52 ವರ್ಷಗಳ ಹಿಂದೆ ವಿಯೆಟ್ನಾಂ ಯುದ್ಧದಲ್ಲಿ ಸೇವೆ ಸಲ್ಲಿಸುತ್ತಿರುವಾಗ ತನ್ನ ಸಹೋದರ ಕಳುಹಿಸಿದ ಪತ್ರವನ್ನು ಸ್ವೀಕರಿಸಿದಾಗ ಆಶ್ಚರ್ಯಚಕಿತರಾಗಿದ್ದರು.ಮೇ 10, 2020 ರ ಪೋಸ್ಟ್ ಮಾರ್ಕ್ ಇರುವಂತಹ ಲಕೋಟೆಯನ್ನು ಜಾನಿಸ್ ಟಕ್ಕರ್(Janice Tucker) ಸ್ವೀಕರಿಸಿದ್ದರು. ಆದಾಗ್ಯೂ ಅದರೊಳಗೆ ಇದ್ದ ವಿವರಗಳು 1968ರ ಸಂದರ್ಭದಾಗಿದ್ದವು. ಲಕೋಟೆಯು ಐದು ಪುಟಗಳ ಪತ್ರವನ್ನು ಹೊಂದಿತ್ತು. ಅದರಲ್ಲಿ 'ಹಾಯ್ ಸಹೋದರಿ. ನಾನು ಈಗಷ್ಟೇ ನಿನ್ನ ಪತ್ರವನ್ನು ಓದಿದೆ' ಎಂಬ ಆರಂಭದ ಸಾಲುಗಳನ್ನು ಓದಿದ ಆಕೆ ತಾನು ಏನು ಸ್ವೀಕರಿಸಿದೆ ಎಂಬ ಗೊಂದಲಕ್ಕೊಳಗಾಗಿದ್ದಳು.
ಬಳಿಕ ಮುಂದೆ ಓದುತ್ತಿದ್ದಂತೆ, ಅದು ತನ್ನ ಸಹೋದರ ವಿಲಿಯಂ ಲೋನ್(William Lone) ವಿಯೆಟ್ನಾಂ ಯುದ್ಧದಲ್ಲಿ (Vietnam war) ಸೇವೆ ಸಲ್ಲಿಸುತ್ತಿರುವಾಗ ತನಗೆ ಬರೆದ ಪತ್ರ ಎಂದು ಅವರಿಗೆ ಅರಿವಾಗಿದೆ. ಈ ಪತ್ರದಲ್ಲಿ ಲೋನ್ ತನ್ನ ಸಹೋದರ ಮತ್ತು ತನ್ನನ್ನು ಕಾಡಿದ ಹೆಲಿಕಾಪ್ಟರ್‌ನಲ್ಲಿನ ಅನುಭವಗಳ ಬಗ್ಗೆ ಈ ಪತ್ರದಲ್ಲಿ ಬರೆದಿದ್ದರು. ಒಂದು ದಿನ ನಾನು ಕೆಳಗುರುಳಬಹುದು. ನಿಮ್ಮ ವಿಮಾನವು ನಿಮ್ಮ ಕಣ್ಣುಗಳ ಮುಂದೆಯೇ ರಂಧ್ರವಾಗಲು ಪ್ರಾರಂಭಿಸಿದಾಗ, ವಿಚಿತ್ರವಾದ ವಿಷಯ ನಿಮ್ಮ ತಲೆಯಲ್ಲಿ ಹಾದು ಹೋಗುತ್ತದೆ ಎಂದು ಅವರು ಪತ್ರದಲ್ಲಿ ಬರೆದಿದ್ದರು.
Relationship Tips: ನಿಮ್ಮ ಸ್ಥಾನಕ್ಕೆ ಬೇರೊಬ್ಬಳು ಬಂದರೆ ನೀವೇನು ಮಾಡಬೇಕು?