Relationship Tips: ನಿಮ್ಮ ಸ್ಥಾನಕ್ಕೆ ಬೇರೊಬ್ಬಳು ಬಂದರೆ ನೀವೇನು ಮಾಡಬೇಕು?
ನೀವು ಆತನನ್ನು ತುಂಬಾ ಪ್ರೀತಿ ಮಾಡುತ್ತೀರಿ.. ಆತನೇ ನಿಮ್ಮ ಪ್ರಪಂಚ ಎಂದು ಭಾವಿಸಿರುತ್ತೀರಿ. ಆದರೆ, ಆತ ನಿಮ್ಮ ಬದಲಿಗೆ ಬೇರೊಬ್ಬ ಹುಡುಗಿಯನ್ನು ತನ್ನ ಸಂಗಾತಿಯನ್ನಾಗಿ ಆರಿಸಿಕೊಂಡರೆ! ಇಂತಹ ಪರಿಸ್ಥಿತಿಯನ್ನು ನೀವು ಹೇಗೆ ಎದುರಿಸುತ್ತೀರ?
ಪ್ರೀತಿಯಲ್ಲಿ ಬಿದ್ದವರು ಪ್ರಪಂಚವನ್ನೇ ಮರೆತಿರುತ್ತಾರೆ ಎಂದು ಹೇಳುತ್ತಾರೆ. ಹಾಗೆಯೇ ನೀವು ಕೂಡ ನಿಮ್ಮ ಮನಸ್ಸನ್ನು ಗೆದ್ದಿರುವ ವ್ಯಕ್ತಿಯ ಬಗ್ಗೆ ಸದಾ ಕಾಲ ಯೋಚಿಸುತ್ತಿರಬಹುದು. ಆತನಿಲ್ಲದ ಪ್ರಪಂಚದ ಬಗ್ಗೆ ನಿಮಗೆ ಊಹೆ ಮಾಡಿಕೊಳ್ಳಲೂ ಕಷ್ಟವಾಗುತ್ತದೆ. ಆದರೆ, ಆತನ ಮನಸ್ಸಿನಲ್ಲಿ ಏನಿದೆ ಎಂಬುದರ ಬಗ್ಗೆ ಕೂಡ ನೀವು ಯೋಚಿಸಬೇಕಲ್ಲವೇ. ನಿಮ್ಮದೇ ಕಲ್ಪನೆಯಲ್ಲಿ (Imagine) ಆತ ಕೂಡ ನಿಮ್ಮನ್ನು ಪ್ರೀತಿಸುತ್ತಾನೆ ಎಂಬ ಭ್ರಮೆಯಲ್ಲಿ ಲೋಕ ಮರೆತಿರಬೇಡ. ವಾಸ್ತವ ಸಂಗತಿ ಬೇರೆಯಾಗಿದ್ದರೆ ಆಗ ಅದನ್ನು ಎದುರಿಸುವುದು ನಿಮಗೆ ಕಷ್ಟವಾಗುತ್ತದೆ.
ನೀವು ಮನಸಾರೆ ಪ್ರೀತಿಸುವ (Love) ವ್ಯಕ್ತಿ ನಿಮ್ಮನ್ನೇ ಪ್ರೀತಿಸಿದರೆ ಅದು ಸಂತೋಷದ ವಿಷಯ. ಆದರೆ, ಪರಿಸ್ಥಿತಿ ಬದಲಾದರೆ ಆತ ನಿಮ್ಮ ಬದಲಿಗೆ ಬೇರೆ ಹುಡುಗಿಯನ್ನು ತನ್ನ ಸಂಗಾತಿಯನ್ನಾಗಿ ಆರಿಸಿಕೊಂಡರೆ ನೀವೇನು ಮಾಡುತ್ತೀರಿ? ಎಂದಾದರೂ ಯೋಚಿಸಿದ್ದೀರಾ.. ನಿಮ್ಮ ಬದಲು ಬೇರೆ ವ್ಯಕ್ತಿಯನ್ನು ಆರಿಸಿಕೊಳ್ಳಲು ಕಾರಣ (Reason) ಇರಬಹುದು. ಇದು ಸಂಪೂರ್ಣ ಆತನದೇ ತಪ್ಪು ಎಂದು ಹೇಳಲು ಸಾಧ್ಯವಿಲ್ಲ ಹಾಗಂದ ಮಾತ್ರಕ್ಕೆ ಇದು ನಿಮ್ಮ ತಪ್ಪೂ ಅಲ್ಲ. ಇದಕ್ಕೆ ಪರಿಸ್ಥಿತಿಗಳು ಕಾರಣ. ಇಂತಹ ಸಂದರ್ಭವನ್ನು ನೀವು ಹೀಗೆ ಎದುರಿಸಬಹುದು..
Valentine's day ಆಚರಿಸಲು ನಿಮ್ಮ ಹಳೆ ಪ್ರೇಮಿ ಬಂದ್ರೆ ಏನ್ ಮಾಡ್ಬೇಕು?
ಮನಸಾರೆ ಅತ್ತು (Cry) ಬಿಡಿ
ಇಂಥ ಸಂದರ್ಭಗಳು ಎದುರಾದಾಗ ಮನಸ್ಸಿಗೆ ಬಹಳ ನೋವಾಗುತ್ತದೆ. ಆದರೆ ನೀವು ಆ ನೋವನ್ನೆಲ್ಲಾ ಮುಚ್ಚಿಟ್ಟುಕೊಂಡು ಮನಸಲ್ಲಿ ಕೊರಗುವ ಅಗತ್ಯವಿಲ್ಲ. ನಿಮ್ಮ ಮನಸ್ಸಿನ ನೋವನ್ನು (Pain) ಹೊರ ಹಾಕಿಕೊಳ್ಳಿ. ಎಷ್ಟು ಅಳಬೇಕೆನಿಸುತ್ತದೆ ಅಷ್ಟು ಅತ್ತು ಬಿಡಿ. ನೀವು ಆತನೊಂದಿಗೆ ಜೀವನ ಮಾಡಬೇಕು ಎಂದು ನೂರಾರು ಕನಸು ಕಂಡಿರುತ್ತೀರಿ. ಆದರೆ ಆತ ಬೇರೆಯವರೊಂದಿಗೆ ಬಾಳುವ ಕನಸು ಕಂಡಿರಬಹುದು. ಇದು ಇಂದಲ್ಲ ನಾಳೆ ನೀವು ಎದುರಿಸಲೇಬೇಕಾದ ಸಂದರ್ಭ. ಮನಸ್ಸನ್ನು ಕಲ್ಲಾಗಿಸಿಕೊಳ್ಳಬೇಡಿ, ನಿಮಗಿನ್ನೂ ಜೀವನವಿದೆ ಒಳ್ಳೆಯ ಸಂಗಾತಿ ಸಿಗುವ ಅವಕಾಶವಿದೆ, ಈ ನೋವನ್ನು ಮನಸ್ಸಿನಲ್ಲಿ ಉಳಿಸಿಕೊಂಡರೆ ಅದು ನಿಮ್ಮ ಮುಂದಿನ ಜೀವನಕ್ಕೆ ತೊಂದರೆ ನೀಡಬಹುದು. ಅದಕ್ಕಾಗಿ ಅತ್ತು ಮನಸ್ಸು ಹಗುರ ಮಾಡಿಕೊಳ್ಳಿ.
ನಿಮಗಾಗಿ ಸಮಯ (Time) ಮಾಡಿಕೊಳ್ಳಿ
ನೀವು ಈಗಾಗಲೇ ಒಬ್ಬ ವ್ಯಕ್ತಿಗೋಸ್ಕರ ನಿಮ್ಮ ಸಮಯ, ನಿಮ್ಮ ಯೋಚನೆಗಳನ್ನು ಮೀಸಲಾಗಿಟ್ಟಿದ್ದಿರಿ. ಆದರೆ, ಇನ್ನು ಈ ಸಂಪೂರ್ಣ ಸಮಯ ನಿಮ್ಮದು. ನೀವು ನಿಮ್ಮ ಬಗ್ಗೆ ಹೆಚ್ಚಿನ ವಿಷಯಗಳನ್ನು ತಿಳಿದುಕೊಳ್ಳಲು ಆರಂಭಿಸಿ. ಬೇರೆ ಎಲ್ಲರಿಗಿಂತ ನಿಮ್ಮನ್ನು ನೀವು ಹೆಚ್ಚು ಪ್ರೀತಿಸಿ. ನಿಮಗೆ ಯಾವೆಲ್ಲಾ ವಿಷಯಗಳು ಹೆಚ್ಚು ಆಸಕ್ತಿ (Interest) ನೀಡುತ್ತವೆಯೇ ಅವುಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ. ನಿಮ್ಮ ಜೀವನದ ಗುರಿಯನ್ನು (Goal) ಸಾಧಿಸುವ ಕಡೆ ಹೆಜ್ಜೆ ಹಾಕಿ. ನಿಮ್ಮ ಸ್ನೇಹಿತರೊಂದಿಗೆ (Friends) ಸಮಯ ಕಳೆಯಿರಿ. ನಿಮ್ಮ ನೋವುಗಳನ್ನೆಲ್ಲ ಮರೆಸುವ ಶಕ್ತಿ ಸ್ನೇಹಿತರಿಗೆ ಇರುತ್ತದೆ. ಇಲ್ಲವೇ, ಪ್ರಾಣಿಗಳನ್ನು ಸಾಕಿ ನಿಮ್ಮ ಎಲ್ಲಾ ಪ್ರೀತಿಯನ್ನು ಅವುಗಳ ಮೇಲೆ ಧಾರೆಯೆರೆಯಿರಿ.
ಲವರ್ಸ್‌ಗಳಿಗೆ ಮಾತ್ರ ಅಲ್ಲ ಸಿಂಗಲ್ಸ್‌ಗಳಿಗೂ ಒಂದು ದಿನ ಇದೆ... ಏನಿದರ ವಿಶೇಷ
ಸದಾ ಬ್ಯುಸಿ (Busy) ಆಗಿರಿ
ನೀವು ಯಾವಾಗ ಸುಮ್ಮನೆ ಕುಳಿತಿರುತ್ತೀರಿ ಆಗ ಹೆಚ್ಚಿನ ಆಲೋಚನೆಗಳು (Thoughts) ನಿಮ್ಮ ತಲೆಯನ್ನು ಮುತ್ತುತ್ತವೆ. ಆದರೆ, ಇದಕ್ಕೆ ಅವಕಾಶ ಕೊಡದೆ ಯಾವುದಾದರೂ ಕೆಲಸದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ಮೇಲೆ ಹೇಳಿರುವಂತೆ ನಿಮಗೆ ಇಷ್ಟವಾಗುವ ಕೆಲಸಗಳ ಕಡೆಗೆ ಹೆಚ್ಚಿನ ಗಮನ ನೀಡಿ ನಿಮ್ಮ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಲು (Control) ಪ್ರಯತ್ನಿಸಿ.
ಆತನನ್ನು ಕ್ಷಮಿಸಿ (Forgive)
ಇದರಲ್ಲಿ ಆತನದು ತಪ್ಪಿಲ್ಲ. ಆತನ ಆಯ್ಕೆ ಬೇರೆಯಾಗಿತ್ತು ಅಷ್ಟೇ.. ಅವನನ್ನು ಅವನ ಪಾಡಿಗೆ ಬಿಟ್ಟು ನಿಮ್ಮ ಜೀವನದ ಕಡೆ ಗಮನ ನೀಡಿ. ಆತನ ಬಗ್ಗೆ ನಿಮಗೆ ಎಷ್ಟು ದಿನ ಕೋಪ ಬೇಸರ ಉಳಿದುಕೊಳ್ಳುತ್ತದೆಯೋ ಅಲ್ಲಿಯವರೆಗೂ ನೀವು ಆತನನ್ನ ಮರೆಯಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿ, ನಿಮ್ಮ ಮನಸ್ಸಿನ ಸಮಾಧಾನಕ್ಕಾಗಿ ಅವನನ್ನು ಕ್ಷಮಿಸಿಬಿಡಿ..