Viral Tweet: ವಿಧವಾ ವಿವಾಹ ಕಾನೂನು ಜಾರಿಗೆ ತರ್ತಾನಂತೆ 5ರ ಬಾಲಕ!
ಐದನೇ ತರಗತಿಯ ಮಕ್ಕಳು ಪಾಠದಲ್ಲಿ ಓದಿರುವಂಥದ್ದನ್ನು ತಮಗೆ ಅನ್ವಯಿಸಿಕೊಂಡು ಬರೆಯುವ ಕೌಶಲ ಹೊಂದಿರುವುದು ಕಡಿಮೆ. ಆದರೆ, ಇಲ್ಲೊಬ್ಬ ಬಾಲಕ ಸ್ವಾತಂತ್ರ್ಯ ಪೂರ್ವ ದಿನಗಳ ಸಮಾಜ ಸುಧಾರಣೆಯ ಬಗ್ಗೆ ಬರೆಯುತ್ತ ತಾನು ವಿಧವಾ ವಿವಾಹದ ಬಗ್ಗೆ ಹೇಳಿರುವುದು ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.
ಐದನೇ ತರಗತಿಯ ಮಕ್ಕಳಿಗೆ ಪರೀಕ್ಷೆಯಲ್ಲಿ ಸೋಷಿಯಲ್ ರಿಫಾರ್ಮ್ ಬಗ್ಗೆ ಕೇಳಿದರೆ ಯಾವ ರೀತಿಯ ಅಭಿಪ್ರಾಯ ನೀಡಬಹುದು? ಬಹಳಷ್ಟು ಮಕ್ಕಳು ಕಣ್ ಕಣ್ ಬಿಡಬಹುದು. ಐದನೇ ತರಗತಿ ಏಕೆ? ಕೆಲವು ವಿಚಾರಗಳ ಬಗ್ಗೆ ಕಾಲೇಜು ವಿದ್ಯಾರ್ಥಿಗಳಿಗೂ ಅರಿವು ಇರುವುದಿಲ್ಲ. ಅದರಲ್ಲೂ ಸ್ವಾತಂತ್ರ್ಯ ಪೂರ್ವ ದಿನಗಳ ಸನ್ನಿವೇಶವನ್ನು ಕಲ್ಪನೆ ಮಾಡಿಕೊಂಡು, ಅಂದಿನ ದಿನಗಳಲ್ಲಿ ಆಗಬೇಕಾದ ಸಾಮಾಜಿಕ ಸುಧಾರಣೆ ಬಗ್ಗೆ ಕೇಳಿದರೆ ಉತ್ತರ ನೀಡುವುದು ಬಲು ಕಷ್ಟವಾಗಬಹುದು. ಆದರೆ, ಇಲ್ಲೊಬ್ಬ ಐದನೇ ತರಗತಿ ಹುಡುಗು ಭಾರೀ ಜಾಣ. ಸೋಷಿಯಲ್ ಸೈನ್ಸ್ ವಿಷಯದಲ್ಲಿ ಕೇಳಿದ ಪ್ರಶ್ನೆಗೆ ಅತ್ಯಂತ ಸಮಪರ್ಕವಾದ ಉತ್ತರ ನೀಡಿದ್ದಾನೆ. ಅದನ್ನು ಅವನ ತಂದೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವುದು ವೈರಲ್ ಆಗಿದೆ.
ಐದನೇ ತರಗತಿಯ ಮಕ್ಕಳಿಗೆ, “ನೀವು ಸ್ವಾತಂತ್ರ್ಯಪೂರ್ವ ದಿನಗಳ ಸಮಾಜ ಸುಧಾರಕರೆಂದು ಭಾವಿಸಿ, ಅಂದು ಯಾವ ರೀತಿಯ ಸಾಮಾಜಿಕ ಸುಧಾರಣೆ ತರಲು ಬಯಸುತ್ತೀರಿ?ʼ ಎಂದು ಪ್ರಶ್ನಿಸಲಾಗಿತ್ತು. ಅದಕ್ಕೆ ಆ ಹುಡುಗ, ವಿಧವಾ ವಿವಾಹ ಪದ್ಧತಿಯ ಬಗ್ಗೆ ಹೇಳಿರುವುದು ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ.
ವಿಧವಾ ವಿವಾಹ (Widow Marriage) ಅಗತ್ಯ!
ಆತನ ಉತ್ತರ (Answer) ಹೀಗಿದೆ, “ವಿಧವಾ ವಿವಾಹ ಕಾನೂನು (Act) ಆರಂಭಿಸಲು ನಾನು ಬಯಸುತ್ತೇನೆ. ಮಹಿಳೆ (Woman) ವಿಧವೆಯಾದರೆ, ಅವರು ಸತಿ (Sati) ಪದ್ಧತಿಯ ಮೊರೆ ಹೋಗುತ್ತಾರೆ ಅಥವಾ ಬಿಳಿ (White) ಸೀರೆಯುಟ್ಟು, ಬಾಹ್ಯ ಪ್ರಪಂಚದಿಂದ ದೂರ ಇರುತ್ತಾರೆ. ಅವರಿಗೆ ಹೊರಗೆಲ್ಲೂ ಹೋಗುವ ಅವಕಾಶ ಇರುವುದಿಲ್ಲ. ಇಂತಹ ವಿಧವೆಯರು ಮದುವೆಯಾದರೆ (Marriage) ಅವರಿಗೆ ಉತ್ತಮ ಹಾಗೂ ಸಂತಸದ ಜೀವನ (Happy Life) ದೊರೆಯುತ್ತದೆʼ ಎಂದು ಉತ್ತರಿಸಿದ್ದಾನೆ.
Good Sleep: ಮಕ್ಕಳೇ… ಪರೀಕ್ಷೆ ಸಮಯದಲ್ಲಿ ನಿದ್ರೆಗೆಟ್ಟು ಯಡವಟ್ಟು ಮಾಡ್ಕೊಳ್ಬೇಡಿ
ವೈರಲ್ ಆಯ್ತು
ಹುಡುಗ ಪರೀಕ್ಷಾ ಪೇಪರ್ (Answer Sheet) ನಲ್ಲಿ ಬರೆದ ಉತ್ತರವನ್ನು ಆತನ ತಂದೆ ಮಹೇಶ್ವರ್ ಪೇರಿ ಎನ್ನುವವರು ಪೋಸ್ಟ್ ಮಾಡಿದ್ದಾರೆ. ಈ ಟ್ವೀಟ್ ಈಗಾಗಲೇ 65 ಸಾವಿರಕ್ಕೂ ಅಧಿಕ ವ್ಯೂ (Veiw) ಗಳಿಸಿದೆ. ಎಲ್ಲರ ಮೆಚ್ಚುಗೆಗೂ ಪಾತ್ರವಾಗಿದೆ. ನೆಟ್ಟಿಗರು ಬಾಲಕನ ಜಾಣ್ಮೆಯನ್ನು ಶ್ಲಾಘಿಸುತ್ತಿದ್ದಾರೆ. ಬಾಲಕ ಪಠ್ಯದಲ್ಲಿ ಈ ವಿಚಾರದ ಬಗ್ಗೆ ಓದಿರಬಹುದಾಗಿದ್ದರೂ ಸಹ ಅದನ್ನು ತನಗೆ ಅನ್ವಯಿಸಿಕೊಂಡು ಬರೆದಿರುವುದು ಅವನ ಉತ್ತಮ ಕಲ್ಪನೆಯನ್ನು (Imagination) ತೋರುವಂತಿದೆ. ತನ್ನ ಯೋಚನೆಯಲ್ಲಿ ಸ್ಪಷ್ಟತೆ (Clarity) ಮತ್ತು ಅದನ್ನು ಅತ್ಯಂತ ಸರಿಯಾದ ರೀತಿಯಲ್ಲಿ ವ್ಯಕ್ತಪಡಿಸಿರುವುದು ಎಲ್ಲರ ಗಮನ ಸೆಳೆದಿದೆ. “ವಂಡರ್ ಫುಲ್ ನೈತಿಕ ಬದ್ಧತೆ, ಆತನ ಭವಿಷ್ಯ ಉಜ್ವಲವಾಗಲಿʼ ಎಂದು ಬಹಳಷ್ಟು ಜನ ಹಾರೈಸಿದ್ದಾರೆ.