Relationship Tips: ಮ್ಯಾರೀಡ್ ಲೈಫ್ ಬೋರಿಂಗ್ ಅನಿಸ್ತಿದ್ಯಾ ? ಖುಷಿಯಾಗಿರಲು ಹೀಗೆ ಮಾಡಿ

ಮದುವೆಯಾದ ಮೊದಲ್ಲೆಲ್ಲಾ ಚೆನ್ನಾಗಿತ್ತು. ಈಗ ಗಂಡ-ಹೆಂಡ್ತಿ (Husband-Wife) ಮಾತನಾಡಿದ್ರೆ ಕಿರುಚಾಟ, ಜಗಳ ಮಾತ್ರ. ಭಿನ್ನಾಭಿಪ್ರಾಯ ಹೆಚ್ಚಾಗಿ ಹೀಗೇ ಹೋದ್ರೆ ಡೈವೋರ್ಸ್ (Divorce) ಆಗೋಂದು ಖಂಡಿತ ಅಂತ ಅನಿಸಿದ್ಯಾ ? ನಿಮ್ಮ ವೈವಾಹಿಕ ಜೀವನ (Married Life) ಖುಷಿಯಾಗಿಸಲು ಹೀಗೆ ಮಾಡಿ.

Things To Do If Your Marriage Feels Boring

ಮದುವೆ (Marriage)ಯೆಂಬುದು ಒಂದು ಸುಂದರ ಅನುಬಂಧ. ಭಾರತೀಯ ಸಂಸ್ಕೃತಿಯಲ್ಲಿ ಮದುವೆಗೆ ಮಹತ್ವದ ಸ್ಥಾನವಿದೆ. ಎರಡು ಕುಟುಂಬಗಳನ್ನು ಒಗ್ಗೂಡಿಸುವ ಮದುವೆಯನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಮದುವೆಯೆಂಬ ಸಂಬಂಧವನ್ನು ಉಳಿಸಿಕೊಳ್ಳುವುದಕ್ಕಿಂತ, ಡೈವೋರ್ಸ್  (Divorce) ಕೊಟ್ಟು ಬೇರೆಯಾಗುವ ಪದ್ಧತಿ ಹೆಚ್ಚಾಗುತ್ತಿದೆ. ದಾಂಪತ್ಯವೆಂಬ ಸಂಬಂಧ ಹೆಚ್ಚು ಸಮಯ ಉಳಿಯುತ್ತಿಲ್ಲ. ಭಿನ್ನಾಭಿಪ್ರಾಯ, ಜಗಳ, ಅನೈತಿಕ ಸಂಬಂಧ ಮೊದಲಾದ ವಿಷಯಗಳಿಂದ ದಾಂಪತ್ಯದಲ್ಲಿ ಬಿರುಕು ಮೂಡುತ್ತಿದೆ.

ಅಷ್ಟೇ ಅಲ್ಲ, ಕೆಲವರ ಪಾಲಿಗೆ ಮದುವೆ ಅನ್ನೋದು ಮದುವೆಯಾದ ಕೆಲವು ವರ್ಷಗಳಿಗಷ್ಟೇ ಖುಷಿಯಾಗಿರುತ್ತದೆ. ನಂತರ ಮ್ಯಾರೀಡ್ ಲೈಫ್ ಬೋರಿಂಗ್ ಎನಿಸಿಬಿಡುತ್ತದೆ. ಪ್ರೀತಿ, ಕಾಳಜಿ ಕಿರಿಕಿರಿಯಾಗಲು ತೊಡಗುತ್ತದೆ. ಜವಾಬ್ದಾರಿ ಹೊರೆಯಾಗಿ ಬಿಡುತ್ತದೆ. ದಾಂಪತ್ಯದಲ್ಲಿ ಈ ರೀತಿಯ ಸಮಸ್ಯೆ (Problem) ಬಂದಾಗ ತಕ್ಷಣವೇ ಬಗೆಹರಿಸಿಕೊಳ್ಳುವುದು ಮುಖ್ಯ. 

Relationship Tips: ಹನಿಮೂನ್‌ನಿಂದ ಬಂದ ತಕ್ಷಣ ಈ ಕೆಲ್ಸ ಮಾಡೋದನ್ನು ಮರೀಬೇಡಿ

ಮದುವೆಯು ಪ್ರೀತಿ ಮತ್ತು ವಿಶ್ವಾಸದಿಂದ ರೂಪುಗೊಂಡ ಬಲವಾದ ಬಂಧವಾಗಿದೆ. ಇದರಲ್ಲಿ ಇಬ್ಬರು ವ್ಯಕ್ತಿಗಳು ಪರಸ್ಪರರ ಸುಖ ಮತ್ತು ದುಃಖಗಳನ್ನು ಹಂಚಿಕೊಂಡು ಬಾಳಲು ನಿರ್ಧರಿಸುತ್ತಾರೆ. ಸಂಬಂಧದ ಪ್ರಾರಂಭದಲ್ಲಿ, ಎಲ್ಲಾ ದಂಪತಿಗಳು ಪರಸ್ಪರರ ಭಾವನೆಯನ್ನು ಅರಿತುಕೊಂಡು ಜೀವನ ನಡೆಸುತ್ತಾರೆ. ಆದರೆ ಕಾಲಾನಂತರದಲ್ಲಿ ಈ ಭಾವನೆಗಳು ಕಡಿಮೆಯಾಗಲು ಅಥವಾ ಕೊನೆಗೊಳ್ಳಲು ಪ್ರಾರಂಭಿಸುತ್ತವೆ. ಒಂದು ವಯಸ್ಸಿನ ನಂತರ ಇಬ್ಬರೂ ಮನೆಗೆ ಸಂಬಂಧಿಸಿದ ಜವಾಬ್ದಾರಿಗಳನ್ನು ಮಾತ್ರ ನಿರ್ವಹಿಸುತ್ತಿದ್ದಾರೆ. ಸಂಬಂಧವನ್ನು ರೋಮಾಂಚನಕಾರಿಯಾಗಿ ಮತ್ತು ತಾಜಾವಾಗಿರಿಸಲು ಕೆಲವೊಂದು ಟಿಪ್ಸ್ ಗಳು ಇಲ್ಲಿವೆ.

ಮದುವೆಯ ಸಂಬಂಧ ಸದಾಕಾಲ ಖುಷಿಯಾಗಿರಲು ಏನು ಮಾಡಬೇಕು ? ಯಾವಾಗಲೂ ಸಂಗಾತಿಯ ಜತೆ ಆತ್ಮೀಯವಾಗಿರಲು, ಭಿನ್ನಾಭಿಪ್ರಾಯ ಮೂಡಿ ದೂರವಾಗದಿರಲು ಏನು ಮಾಡಬಹುದು ? ನಿಮ್ಮ ಸಂಗಾತಿಗೆ ಹತ್ತಿರವಾಗಲು ನೀವು ನಿಯಮಿತವಾಗಿ ಮಾಡಬೇಕಾದ ಕೆಲವು ವಿಷಯಗಳು ಇಲ್ಲಿವೆ.

ರೋಮ್ಯಾಂಟಿಕ್ ಕ್ಷಣಗಳನ್ನು ನೆನಪಿಸಿಕೊಳ್ಳಿ
ಮದುವೆಯೆಂಬ ಬಂಧ ಸುಂದರವಾಗಿರಲು ಈ ಸುಂದರ ನೆನಪನ್ನು ಯಾವಾಗಲೂ ತಾಜಾವಾಗಿಡುವುದು ಮುಖ್ಯ. ಮದುವೆಯ ಕ್ಷಣಗಳು, ಗಂಡ-ಹೆಂಡತಿ ಜತೆಯಾಗಿ ಕಳೆದ ರೊಮ್ಯಾಂಟಿಕ್ ಕ್ಷಣ (Romantic Moment) ಗಳನ್ನು ಆಗಾಗ ನೆನಪಿಸಿಕೊಳ್ಳಿ. ಆ ವಿಷಯಗಳನ್ನು ನಿಮ್ಮ ಸಂಗಾತಿಯೊಂದಿಗೆ ಹಂಚಿಕೊಳ್ಳಿ. ಈ ಮೂಲಕ ನಿಮ್ಮ ಪ್ರೀತಿಯ ಕ್ಷಣಗಳು ಇನ್ನೂ ನಿಮ್ಮ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿವೆ ಎಂದು ನಿಮ್ಮ ಸಂಗಾತಿಗೆ ತಿಳಿಸಿ.

Being Single Benefits: ಸಿಂಗಲ್ ಆಗಿರೋದು ಒಳ್ಳೇದು

ಸಂಗಾತಿಯೊಂದಿಗೆ ಮುಕ್ತವಾಗಿ ಮಾತನಾಡಿ
ಮನೆಯ ನಿರ್ಧಾರಗಳಿಂದ ಹಿಡಿದು ಪ್ರಣಯದವರೆಗೆ ಎಲ್ಲವನ್ನೂ ನಿಮ್ಮ ಸಂಗಾತಿಯೊಂದಿಗೆ ಮುಕ್ತವಾಗಿ ಮಾಡಿ. ನಿಮ್ಮ ಕಲ್ಪನೆಗಳು ಮತ್ತು ಭಾವನೆಗಳನ್ನು ಪರಸ್ಪರ ಹಂಚಿಕೊಳ್ಳಲು ನಾಚಿಕೆಪಡಬೇಡಿ.

ಸಣ್ಣ ವಿಷಯಗಳಿಗಾಗಿ ಮನಸ್ಥಿತಿಯನ್ನು ಹಾಳು ಮಾಡಬೇಡಿ
ಸಂತೋಷದ ದಾಂಪತ್ಯ ಜೀವನಕ್ಕಾಗಿ, ದಂಪತಿಗಳು ತಮ್ಮ ಒಳ್ಳೆಯ ಮತ್ತು ಕೆಟ್ಟ ಅಭ್ಯಾಸಗಳೆರಡನ್ನೂ ಪರಸ್ಪರ ಒಪ್ಪಿಕೊಳ್ಳುವುದು ಬಹಳ ಮುಖ್ಯ. ನೀವು ಒಂದು ವಿಷಯದಲ್ಲಿ ಒಳ್ಳೆಯವರಾಗಿದ್ದರೆ, ನಿಮ್ಮ ಸಂಗಾತಿ ಬೇರೆ ಯಾವುದರಲ್ಲಿಯೂ ಒಳ್ಳೆಯವರಾಗಿರುತ್ತಾರೆ. ಪಾಲುದಾರರು ತಪ್ಪು ಮಾಡಿದಾಗ ಕಿರುಚಾಡುವ ಅಥವಾ ಕೋಪವನ್ನು ತೋರಿಸುವ ಬದಲು, ಪ್ರೀತಿ ಮತ್ತು ಸಾಂತ್ವನದಿಂದ ವಿವರಿಸಲು ಪ್ರಯತ್ನಿಸಿ. ನೀವೇ ತಪ್ಪು ಮಾಡಿದಾಗ ಅವರಲ್ಲಿ ಕ್ಷಮೆ ಕೇಳಿ. 

ಸಂಗಾತಿಯನ್ನು ಆಗಾಗ ಹೊಗಳಿ ಖುಷಿಪಡಿಸಿ
ಹೊಗಳುವುದು ಯಾರಿಗೆ ತಾನೇ ಇಷ್ಟವಾಗಲ್ಲ ಹೇಳಿ. ಅದು ನಿಮ್ಮ ಸಂಗಾತಿಗೂ ಇಷ್ಟವಾಗುತ್ತದೆ. ಹೀಗಾಗಿ ಆಗಾ ಸಂಗಾತಿಯ ಕುರಿತಾಗಿ ಮೆಚ್ಚುಗೆ ಮಾತನಾಡಿ. ಅವರ ಒಳ್ಳೆಯ ಗುಣಗಳು, ವರ್ತನೆ, ಸಿದ್ಧಪಡಿಸಿದ ಆಹಾರ, ನೀಡಿರುವ ಗಿಫ್ಟ್ ಹೀಗೆ ಹಲವು ವಿಷಯಗಳ ಬಗ್ಗೆ ಮೆಚ್ಚುಗೆ ಸೂಚಿಸಿ. ಇದರಿಂದ ಸಂಬಂಧ ಗಟ್ಟಿಯಾಗುವುದರ ಜೊತೆಗೆ ಪ್ರೀತಿ ಹೆಚ್ಚುತ್ತದೆ.

ರಜಾದಿನವನ್ನು ಖುಷಿಯಾಗಿ ಕಳೆಯಿರಿ
ಮೊದಲಿನಂತೆಯೇ ಜೀವನದಲ್ಲಿ ರಂಗು ತುಂಬಲು, ನೀವು ನಡುವೆ ನಿಮ್ಮ ಸಂಗಾತಿಯೊಂದಿಗೆ ರಜಾದಿನ (Holiday)ವನ್ನು ಸಹ ಉತ್ತಮವಾಗಿ ಯೋಜಿಸಬಹುದು. ಕೆಲಸದ ಕಾರಣ ನಿಮ್ಮ ಸಂಗಾತಿಗೆ ಸಮಯ ನೀಡಲು ಸಾಧ್ಯವಾಗದಿದ್ದರೆ, ಕೆಲಸದಿಂದ ಕೆಲವು ದಿನಗಳ ರಜೆ ತೆಗೆದುಕೊಂಡು ರಜೆಯ ಮೇಲೆ ಹೋಗಿ. ಇದರೊಂದಿಗೆ, ನೀವು ಮಾನಸಿಕವಾಗಿ ಉಲ್ಲಾಸಗೊಳ್ಳುವುದರೊಂದಿಗೆ ಸಂಬಂಧವನ್ನು ಬಲಪಡಿಸಲು ಸಾಧ್ಯವಾಗುತ್ತದೆ.

Latest Videos
Follow Us:
Download App:
  • android
  • ios