Parenting Tips: ಪೋಷಕರು ಮಾಡೋ ಇಂಥಾ ತಪ್ಪು ಮಕ್ಕಳ ಕಾನ್ಫಿಡೆನ್ಸ್ ಕಡಿಮೆ ಮಾಡುತ್ತೆ

ಮಕ್ಕಳ ಭವಿಷ್ಯಕ್ಕೆ ಪಾಲಕರ ನಡೆ ಬಹಳ ಮುಖ್ಯ. ಬರೀ ಹೊಡೆದು ಮಕ್ಕಳನ್ನು ಸರಿಮಾಡಲು ಸಾಧ್ಯವಿಲ್ಲ. ಮಕ್ಕಳ ಭವಿಷ್ಯ ಉಜ್ವಲವಾಗಬೇಕೆಂದ್ರೆ ಅವರ ಕಾನ್ಫಿಡೆನ್ಸ್ ಹೆಚ್ಚಿಸಬೇಕು. ಆದ್ರೆ ಪೋಷಕರು ಮಾಡೋ ಕೆಲವು ಕೆಲಸ ಮಕ್ಕಳ ಕಾನ್ಫಿಡೆನ್ಸ್‌ ಕಡಿಮೆ ಮಾಡುತ್ತೆ. ಅದ್ಯಾವುದು ನಮಗೆ ಗೊತ್ತಾ ?

These mistakes of the parents can destroy the confidence of the child Vin

ಮಕ್ಕಳನ್ನು ಬೆಳೆಸುವುದು ಮತ್ತು ಅವರಿಗೆ ಉತ್ತಮ ಶಿಕ್ಷಣ ಮತ್ತು ಜೀವನ ನೀಡುವುದು ಸುಲಭದ ಮಾತಲ್ಲ. ಈ ವಿಚಾರದಲ್ಲಿ ಪೋಷಕರು ಹೆಜ್ಜೆ ಹೆಜ್ಜೆಗೂ ಮುಂದಾಗಬೇಕು. ಹೆತ್ತವರ ಸಣ್ಣ ತಪ್ಪು ಕೂಡ ಮಗುವಿನ ಮನಸ್ಸು ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅದೇ ಸಮಯದಲ್ಲಿ, ಮಗುವಿನ ಆತ್ಮವಿಶ್ವಾಸವನ್ನು ಹೆಚ್ಚಿಸುವಲ್ಲಿ ಅಥವಾ ಕಡಿಮೆ ಮಾಡುವಲ್ಲಿ ಪಾಲನೆಯು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಮಕ್ಕಳ ಆತ್ಮವಿಶ್ವಾಸವನ್ನು ಕುಗ್ಗಿಸುವ ಕೆಲಸ ಮಾಡಬಹುದಾದ ಪಾಲನೆ-ಪೋಷಣೆಗೆ ಸಂಬಂಧಿಸಿದ ಅಂತಹ ಕೆಲವು ತಪ್ಪುಗಳ ಬಗ್ಗೆ ಇಲ್ಲಿ ನಾವು ನಿಮಗೆ ಹೇಳುತ್ತಿದ್ದೇವೆ.

ಯಾವುದೇ ತಪ್ಪುಗಳನ್ನು ಮಾಡಬಾರದು ಎಂಬ ಸೂಚನೆ: ಮಕ್ಕಳು (Children) ಮಾತ್ರವಲ್ಲ, ಪ್ರತಿಯೊಬ್ಬರೂ ತಮ್ಮ ತಪ್ಪುಗಳಿಂದ ಕಲಿಯುತ್ತಾರೆ. ಯಾವುದೇ ತಪ್ಪು ಮಾಡಬಾರದು, ಸದಾ ಪರಿಪೂರ್ಣರಾಗಿರಬೇಕು ಎಂದು ಮಕ್ಕಳ ಮೇಲೆ ಒತ್ತಡ (Pressure) ಹೇರುವ ಪಾಲಕರು ಮಗುವಿನ ಆತ್ಮಸ್ಥೈರ್ಯವನ್ನು ಪದೇ ಪದೇ ಘಾಸಿಗೊಳಿಸುತ್ತಾರೆ. ಮಗು ತಪ್ಪು ಮಾಡುವುದನ್ನು ತಡೆಯಬೇಡಿ, ಬದಲಿಗೆ ತಮ್ಮ ತಪ್ಪುಗಳಿಂದ ಕಲಿಯುವಂತೆ ಅವರಿಗೆ ಸಲಹೆ ನೀಡಿ.

Parenting Tips: ಹೆಚ್ಚೆಚ್ಚು ಭಾಷೆ ತಿಳಿದಷ್ಟು ಮಕ್ಕಳು ಜಾಣರಾಗ್ತಾರೆ

ದೊಡ್ಡ ಕನಸು ಕಾಣಲು ಒತ್ತಡ ಹೇರದಿರಿ: ತಮ್ಮ ಕನಸಿನ ಭಾರವನ್ನು ಮಕ್ಕಳ ಮೇಲೆ ಹೊರಿಸುವ ಎಷ್ಟೋ ಹೆತ್ತವರಿದ್ದಾರೆ. ಉದಾಹರಣೆಗೆ, ಯಾರಾದರೂ ವೈದ್ಯರಾಗಲು ಸಾಧ್ಯವಾಗದಿದ್ದರೆ, ಅವನು ತನ್ನ ಮಗು ವೈದ್ಯನಾಗಬೇಕೆಂದು ಬಯಸುತ್ತಾರೆ. ಅವರ ಮಗುವಿನ ಆಸಕ್ತಿ ಮತ್ತು ಮನಸ್ಸು ಎರಡೂ ಈ ವಿಷಯಕ್ಕೆ ಹೊಂದಿಕೆಯಾಗದಿದ್ದರೂ ಸಹ ಒತ್ತಾಯ ಮಾಡುತ್ತಲೇ ಇರುತ್ತಾರೆ. ಯಾವತ್ತೂ ನಿಮ್ಮ ಮಗುವಿನ ಮುಂದೆ ಅಂತಹ ಗುರಿಗಳನ್ನು ಇಡಬೇಡಿ, ಅದು ಅವನಿಗೆ ಪೂರೈಸಲು ಕಷ್ಟವಾಗುತ್ತದೆ. ಇದು ಮಗುವಿನ ಆತ್ಮವಿಶ್ವಾಸದ (Confidence) ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಪರಿಪೂರ್ಣವಾಗಿರಬೇಕೆಂಬ ಹಂಬಲ: ಮಕ್ಕಳು ಕಲಿಕೆಯ ಹಂತದಲ್ಲಿದ್ದು ತಪ್ಪು (Mistake) ಮಾಡುವುದು ಸಹಜ. ತಪ್ಪುಗಳನ್ನು ಮಾಡುವುದನ್ನು ನಿಲ್ಲಿಸಲು ಮತ್ತು ಪರಿಪೂರ್ಣವಾಗಲು ಮಗುವಿಗೆ ಒತ್ತಾಯ ಮಾಡಬೇಡಿ. ಇದು ಮಗುವಿನ ಆತ್ಮಸ್ಥೈರ್ಯವನ್ನು ಕಡಿಮೆ ಮಾಡಬಹುದು. ಯಾರೂ ಪರಿಪೂರ್ಣರಲ್ಲ ಮತ್ತು ಪ್ರತಿಯೊಬ್ಬರೂ ತಪ್ಪು ಮಾಡುವ ಮೂಲಕ ಕಲಿಯುತ್ತಾರೆ. ಹೀಗಾಗಿ ನಿಮ್ಮ ಮಕ್ಕಳಿಗೂ ಇದಕ್ಕೆ ಅವಕಾಶ ಮಾಡಿಕೊಡಿ.

ಮಗಳು, ತಪ್ಪು ಮಾಡಿದರೆ ಮನ್ನಿಸಿ, ಹೊರ ಹೋಗಿ ಸುತ್ತಾಡಿಕೊಂಡು ಬನ್ನಿಯೊಮ್ಮೆ!

ಪ್ರಯತ್ನಗಳನ್ನು ನಿರ್ಲಕ್ಷಿಸುವುದು: ಮಕ್ಕಳು ತಮ್ಮ ಹೆತ್ತವರನ್ನು ಮೆಚ್ಚಿಸಲು ಮತ್ತು ಅವರ ಗಮನವನ್ನು ಸೆಳೆಯಲು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಾರೆ. ತಮ್ಮ ಹೆತ್ತವರ ಸಂತೋಷ (Happy)ಕ್ಕಾಗಿ, ಅಧ್ಯಯನದ ಮೇಲೆ ಗಮನ ಕೇಂದ್ರೀಕರಿಸಲು ಮತ್ತು ಅವರ ಮಾತುಗಳನ್ನು ಪೂರೈಸಲು ಪ್ರಯತ್ನಿಸುತ್ತಾರೆ. ಹೀಗೆ ಮಾಡುವಾಗ ನಿಮ್ಮ ಮಗುವಿನ ಪ್ರಯತ್ನಗಳನ್ನು ಲಘುವಾಗಿ ಪರಿಗಣಿಸಬೇಡಿ. ಬದಲಿಗೆ ಅವರ ಪ್ರಯತ್ನಗಳನ್ನು ಪ್ರಶಂಸಿಸಿ. ಇದು ಮಗುವಿನ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಮಕ್ಕಳ ಶ್ರಮವನ್ನು ಗುರುತಿಸಿದಾಗ ಅವರಲ್ಲಿ ಆತ್ಮವಿಶ್ವಾಸವೂ ಹೆಚ್ಚುತ್ತದೆ.

ಮಾತನಾಡಲು ಅವಕಾಶ ನೀಡದೇ ಇರುವುದು: ಅನೇಕ ಪೋಷಕರು (Parents) ಮಕ್ಕಳಿಗೆ ನಿರ್ಧಿಷ್ಟವಾಗಿ ಹೀಗೆಯೇ ಮಾಡಬೇಕೆಂದು ಸೂಚನೆ ನೀಡುತ್ತಾರೆ ಮತ್ತು ಮಗುವು ಅವುಗಳನ್ನು ಪಾಲಿಸಬೇಕೆಂದು ನಿರೀಕ್ಷಿಸುತ್ತಾರೆ. ಮಗುವು ಮಾತನಾಡಲು ಅಥವಾ ತನ್ನ ಅಭಿಪ್ರಾಯವನ್ನು  ವಿವರಿಸಲು ಪ್ರಯತ್ನಿಸಿದಾಗ, ಅವನಿಗೆ ಮಾತನಾಡಲು ಅವಕಾಶ ನೀಡುವುದಿಲ್ಲ. ಇದರಿಂದ ಮಗುವಿಗೆ ತನ್ನ ಮಾತುಗಳಿಗೆ ಪ್ರಾಮುಖ್ಯತೆ ಇಲ್ಲ ಎಂದು ಅನಿಸಬಹುದು. ಇದು  ಮಗುವಿನ ಆತ್ಮವಿಶ್ವಾಸವನ್ನು ಮತ್ತಷ್ಟು ಕುಗ್ಗಿಸಬಹುದು.

ನಕಾರಾತ್ಮಕದಿಂದ ಸಕಾರಾತ್ಮದ ಕಡೆಗೆ ಚಿಂತಿಸಲು ಮಕ್ಕಳನ್ನು ಹೀಗೆ ಟ್ರೈನ್ ಮಾಡಿ

Latest Videos
Follow Us:
Download App:
  • android
  • ios