Asianet Suvarna News Asianet Suvarna News

ನಿಮ್ಮದು ವಿಷಮ ಸಂಬಂಧ ಅನ್ನೋದಕ್ಕೆ ಇಲ್ಲಿವೆ ಹದಿನೆಂಟು ಲಕ್ಷಣಗಳು

ಗೆಳೆತನವಾಗಲೀ, ಲಿವ್ ಇನ್ ಆಗಲೀ, ಮೊದಲಿನ ದಿನಗಳಲ್ಲಿ ಮಧುರವಾಗಿಯೇ ಇರುತ್ತದೆ. ಇದು ಮುಗಿದ ಮೇಲೆಯೇ ಬಿಕ್ಕಟ್ಟುಗಳು ಆರಂಭವಾಗುವುದು. ಹಾಗಿದ್ದರೆ ಇಂಥ ಸಂಬಂಧದಲ್ಲಿ ಮುಂದುವರಿಯಬೇಕೇ ಬೇಡವೇ ಎಂಬ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದು ಹೇಗೆ? ಆ ಬಗ್ಗೆ ಕೆಲವು ಟಿಪ್ಸ್ ಇಲ್ಲಿವೆ. 

These are warning signs that you are you in Bad relationship
Author
Bengaluru, First Published Oct 3, 2021, 3:47 PM IST

ಸಾಮಾನ್ಯವಾಗಿ ನಿಮ್ಮ ಸಂಬಂಧ ಮಧುರವಾದದ್ದಾ, ಅಥವಾ ವಿಷಮಯವಾಗಿರುವಂಥದಾ ಎಂಬ ಸುಳಿವು ಆರಂಭದ ದಿನಗಳಲ್ಲಿ ನಿಮಗೆ ಸಿಗುವುದಿಲ್ಲ. ಯಾಕೆಂದರೆ ಯಾವುದೇ ಮದುವೆಯಾಗಲೀ, ಗೆಳೆತನವಾಗಲೀ, ಲಿವ್ ಇನ್ ಆಗಲೀ, ಮೊದಲಿನ ದಿನಗಳಲ್ಲಿ ಮಧುರವಾಗಿಯೇ ಇರುತ್ತದೆ. ಇದಕ್ಕೆ ಹನಿಮೂನ್ ಪೀರಿಯಡ್ ಎನ್ನುತ್ತಾರೆ. ಇದು ಮುಗಿದ ಮೇಲೆಯೇ ಬಿಕ್ಕಟ್ಟುಗಳು ಆರಂಭವಾಗುವುದು. ಅಲ್ಲಿಂದಲೇ ನಿಮ್ಮ ಸಂಬಂಧ ಎಂಥದು ಎಂಬ ಬಗ್ಗೆ ಸೂಚನೆಗಳು ಸಿಗುತ್ತಾ ಹೋಗುತ್ತವೆ.

ಹಾಗಿದ್ದರೆ ಇಂಥ ಸಂಬಂಧದಲ್ಲಿ ಮುಂದುವರಿಯಬೇಕೇ ಬೇಡವೇ ಎಂಬ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದು ಹೇಗೆ? ಆ ಬಗ್ಗೆ ಕೆಲವು ಟಿಪ್ಸ್ ಇಲ್ಲಿವೆ. ಈ ಅಂಶಗಳನ್ನು ಗಮನಿಸಿ. ಇವೆಲ್ಲಾ ನಿಮ್ಮ ಸಂಬಂಧದಲ್ಲಿ ಇವೆ ಎಂದಾದರೆ ನೀವು ಆ ಸಂಬಂಧದಿಂದ ಹೊರಗೆ ಬರುವುದೇ ಒಳ್ಳೆಯದು.

1. ಪದೇ ಪದೇ ನಿಮ್ಮದೇ ತ್ಯಾಗದ ಅಗತ್ಯ. ನೀವೇ ಎಲ್ಲ ವಿಷಯದಲ್ಲೂ ರಾಜಿ ಮಾಡಿಕೊಳ್ಳಬೇಕು, ನಿಮ್ಮ ಕೆಲಸ- ಸುಖ- ಸ್ಥಾನಮಾನ ಎಲ್ಲವನ್ನೂ ತ್ಯಾಗ ಮಾಡಬೇಕು, ನಿಮ್ಮ ಸಂಗಾತಿ ಅಂಥ ಯಾವ ಹೊಣೆಯನ್ನೂ ಹೊತ್ತುಕೊಳ್ಳುವುದಿಲ್ಲ.

2. ನೀವಿಬ್ಬರೂ ಒಬ್ಬರಿಂದೊಬ್ಬರು ಭಾವನಾತ್ಮಕ ಬೆಂಬಲ ಪಡೆಯುವುದಿಲ್ಲ. ಸಂಗಾತಿಯ ಬದಲು ಬೇರ್ಯಾರನ್ನೋ ಭಾವನಾತ್ಮಕ ಬೆಂಬಲಕ್ಕಾಗಿ ಆಶ್ರಯಿಸುತ್ತೀರಿ ಎಂದಾದರೆ ನಿಮ್ಮ ಸಂಬಂಧವೇ ಸರಿಯಿಲ್ಲ.

3. ನಿಮ್ಮ ಸಂಗಾತಿಯು ನಿಮ್ಮನ್ನು ಸ್ಟೀರಿಯೋಟೈಪ್‌ ಮಾಡುತ್ತಿರಬಹುದು. ಅಂದರೆ ನೀವು ಮೂರ್ಖರು ಅಥವಾ ತಾನೇ ಬುದ್ಧಿವಂತರು ಎಂದು ಸೂಚಿಸುತ್ತಿರಬಹುದು. ನೀವು ಹೊಸದನ್ನು ಪ್ರಯತ್ನಿಸುವುದನ್ನು ತಡೆಯುತ್ತಾರೆ. 

ಮೂವತ್ತರ ನಂತರ ನಿಮ್ಮ ಸೆಕ್ಸ್ ಲೈಫ್‌ನಲ್ಲಿ ಏನೇನಾಗುತ್ತೆ? ಗೊತ್ತೇ?

4. ನೀವು ಯಾವುದನ್ನಾದರೂ "ನೋ' ಎಂದು ಹೇಳಿದಾಗ ನಿಮ್ಮ ಸಂಗಾತಿ ನಿಮ್ಮ ಅನಿಸಿಕೆಯನ್ನು ಗೌರವಿಸುವುದಿಲ್ಲ. ಅದು ಸೆಕ್ಸ್ ಆಗಲಿ, ಹಣಕಾಸಿನ ವಿಷಯವಾಗಲಿ, ನಿಮ್ಮನ್ನು ನಿಮ್ಮಿಷ್ಟದಂತೆ ನಡೆಯಲು ಬಿಡುವುದಿಲ್ಲ.

5. ನಿಮ್ಮ ಸಂಗಾತಿ ನಿಮ್ಮನ್ನು ಒಂದು ವಿಷಯಕ್ಕಾಗಿ ಮಾತ್ರ ಗೌರವಿಸುತ್ತಾರೆ, ಅದು ಲೈಂಗಿಕತೆಯಾಗಲಿ, ನಿಮ್ಮ ನೋಟವಾಗಲಿ ಅಥವಾ ಹಣ ಗಳಿಸುವ ನಿಮ್ಮ ಸಾಮರ್ಥ್ಯವಾಗಲಿ.

6. ನೀವು ಪರಸ್ಪರ ಧನಾತ್ಮಕವಾಗಿ ಪ್ರಭಾವಿಸಿಲ್ಲ. ಒಬ್ಬರಿಂದೊಬ್ಬರು ಏನನ್ನೂ ಕಲಿತಿಲ್ಲ. ಒಬ್ಬರಿಂದೊಬ್ಬರು ಜೀವನದಲ್ಲಿ ಬೆಳೆದಿಲ್ಲ. ಅಥವಾ ಯಾವುದೇ ಹೊಸ ಕೌಶಲ್ಯಗಳನ್ನು ಕಲಿಸಿಲ್ಲ.

7. ನೀವು ಒಬ್ಬರನ್ನೊಬ್ಬರು ಋಣಾತ್ಮಕವಾಗಿ ಪ್ರಭಾವಿಸಿದ್ದೀರಿ. ವಿಶೇಷವಾಗಿ ಮದ್ಯಪಾನ, ಸೋಮಾರಿತನ ಅಥವಾ ಧೂಮಪಾನದಂತಹ ಹಾನಿಕಾರಕ ಅಭ್ಯಾಸಗಳು.

8. ನಿಮ್ಮ ಸಂಗಾತಿ ನಿಮ್ಮ ದೇಹದ ಬಗ್ಗೆ ನಿಮಗೆ ಒಳ್ಳೆಯ ಭಾವನೆ ಮೂಡಿಸುವುದಿಲ್ಲ; ಅವರು ನಿಮ್ಮ ದೇಹದ ದಪ್ಪ, ಕೃಶಕಾಯ, ಚರ್ಮದ ಬಣ್ಣ ಇತ್ಯಾದಿಗಳನ್ನು ಗೇಲಿ ಮಾಡುತ್ತಾರೆ.

9. ನಿಮ್ಮ ಲೈಂಗಿಕ ಆಯ್ಕೆಯನ್ನು ನಿರಾಕರಿಸುತ್ತಾರೆ. ನಿಮ್ಮನ್ನು ಸೆಕ್ಸ್‌ಗಾಗು ಬಲಾತ್ಕರಿಸುತ್ತಾರೆ. ಒಪ್ಪದಿದ್ದಾಗ ಥಳಿಸುತ್ತಾರೆ ಅಥವಾ ವ್ಯಂಗ್ಯವಾಡುತ್ತಾರೆ.

10. ಈ ಸಂಬಂಧದಲ್ಲಿ ನಿಮಗೆ ಭದ್ರತೆಯ ಭಾವನೆಯಿಲ್ಲ. ಹಲವಾರು ಬಾರಿ ಮುರಿದುಹೋದ ಭಾವನೆ ನಿಮಗೆ ಉಂಟಾಗಿದೆ.

11. ನಿಮ್ಮ ಮಕ್ಕಳ ಮುಂದೆ ಪರಸ್ಪರ ಕಿರಿಚಾಡುವುದು, ಸಂವಹನ ನಡೆಸುವ ಸಮಯದಲ್ಲಿ ನೀವು ನಾಚಿಕೆಪಡುವಂತಹ ಕೆಲಸಗಳನ್ನು ಮಾಡುತ್ತೀರಿ.

12. ನಿಮ್ಮ ಸಂಗಾತಿಯು ನೀವಿಬ್ಬರೂ ಒಪ್ಪಿದ ಒಪ್ಪಂದಗಳನ್ನು ಮುರಿಯುತ್ತಾರೆ. ಅನೈತಿಕ ಚಟುವಟಿಕೆಗಳಲ್ಲಿ ನಿಮ್ಮನ್ನು ಒಳಗೊಳ್ಳುವಂತೆ ಮಾಡುತ್ತಾರೆ.

13. ಸಂಬಂಧವನ್ನು ಆರಂಭಿಸುವಾಗ ಇದ್ದುದಕ್ಕಿಂತ ಈಗ ನಿಮಗೆ ಆತ್ಮವಿಶ್ವಾಸ ಕಡಿಮೆಯಾಗಿದೆ, ಕೀಳರಿಮೆ ಹೆಚ್ಚಾಗಿದೆ, ನಿಮ್ಮ ಬಗ್ಗೆ ಕಡಿಮೆ ಧನಾತ್ಮಕ ಭಾವನೆಗಳಿವೆ.

Feelfree: ನನ್ನ ಗೆಳೆಯ ಥ್ರೀಸಮ್‌ಗೆ ಒತ್ತಾಯಿಸ್ತಾನೆ, ಏನು ಮಾಡಲಿ?

14. ನೀವು ಯಾವುದಾದರೂ ಪ್ರಮುಖ ವಿಷಯದ ಬಗ್ಗೆ ಮಾತನಾಡಲು ಬಯಸಿದಾಗ ನಿಮ್ಮ ಸಂಗಾತಿಯ ಗಮನವನ್ನು ಪಡೆಯಲು ನಿಮಗೆ ಸಾಧ್ಯವಾಗುವುದಿಲ್ಲ.

15. ನೀವು ಯಶಸ್ಸನ್ನು ಅನುಭವಿಸಿದಾಗ ನಿಮ್ಮ ಸಂಗಾತಿ ಅದರಲ್ಲಿ ಆಸಕ್ತಿ ತೋರುವುದಿಲ್ಲ, ಅಥವಾ ಅವರು ನಿಮ್ಮ ಯಶಸ್ಸನ್ನು ಕೀಳು ಮಾಡಲು ಯತ್ನಿಸುತ್ತಾರೆ.

16. ಲೈಂಗಿಕತೆಯ ಕೊರತೆ. ನಿಮ್ಮ ನಡುವೆ ಮಧುರವಾದ ಒಂದೇ ಒಂದು ಕ್ಷಣವೂ ಇತ್ತೀಚೆಗೆ ಬಂದಿಲ್ಲ. ಒಳ್ಳೆಯ ಸೆಕ್ಸ್ ನಿಮ್ಮಿಂದ ಸಾಧ್ಯವಾಗುತ್ತಲೇ ಇಲ್ಲ.

17. ನೀವು ಅಥವಾ ನಿಮ್ಮ ಸಂಗಾತಿ ಸೆಕ್ಸ್ ಅಥವಾ ಭಾವನಾತ್ಮಕ ಅಗತ್ಯಕ್ಕಾಗಿ ನಿಮ್ಮ ಸಂಬಂಧದಿಂದ ಆಚೆಗೆ ನೋಡುತ್ತಿದ್ದೀರಿ, ಅಥವಾ ಅವಲಂಬಿಸಿದ್ದೀರಿ.

18. ನೀವಿಬ್ಬರೂ ಗಳಿಸುವುದಕ್ಕಿಂತಲೂ ಹೆಚ್ಚು ಖರ್ಚು ಮಾಡುತ್ತಿದ್ದೀರಿ. ಅಥವಾ ನಿಮ್ಮ ಗಳಿಕೆಯನ್ನು ನಿಮ್ಮ ಒಪ್ಪಿಗೆಯಿಲ್ಲದೆ ನಿಮ್ಮ ಸಂಗಾತಿ ಖರ್ಚು ಮಾಡುತ್ತಿದ್ದಾರೆ. ಆರ್ಥಿಕ ಚಟುವಟಿಕೆಯಲ್ಲಿ ನಿಮ್ಮ ಸಂಗಾತಿ ನಿಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ.

#Feelfree: ಪತ್ನಿಯ ಕನ್ಯಾಪೊರೆ ಹರಿದಿರೋದು ಪತಿಗೆ ಗೊತ್ತಾಗುತ್ತಾ?

ಇವೆಲ್ಲವೂ ಕೆಟ್ಟ ಸಂಬಂಧದಲ್ಲಿ ನೀವಿದ್ದೀರಿ ಎಂಬುದಕ್ಕೆ ದೃಷ್ಟಾಂತಗಳು. ಇಂಥ ಸಂಬಂಧದಲ್ಲಿ ನೀವು ಮುಂದುವರಿಯದೇ ಇರುವುದು ಒಳ್ಳೆಯದು. ಇವುಗಳಲ್ಲಿ ಒಂದೋ ಎರಡೂ ಗುಣಗಳಿದ್ದರೆ ಕೆಲವೊಮ್ಮೆ ನೀವು ಕೌನ್ಸೆಲಿಂಗ್ ಮೂಲಕ ಸರಿಪಡಿಸಲು ಯತ್ನಿಸಬಹುದು. ಆದರೆ ಎರಡಕ್ಕೂ ಹೆಚ್ಚು ಗುಣಗಳಿದ್ದು, ನಿಯಂತ್ರಿಸಲು ಸಾಧ್ಯವೇ ಇಲ್ಲ ಎಂದಾದರೆ ನೀವು ಅಂಥಲ್ಲಿಂದ ಹೊರನಡೆಯುವುದೇ ವಾಸಿ.

Follow Us:
Download App:
  • android
  • ios