Asianet Suvarna News Asianet Suvarna News

ನೂರು ಮೆಸೇಜ್ ಕಳಿಸಿದ್ರೂ ನಿಮ್ಮ ಲವರ್ ರಿಪ್ಲೈ ಮಾಡಲ್ವಾ? ಕಾರಣ ಇದಿರಬಹುದು ನೋಡಿ

ನಿಮ್ಮ ಗೆಳೆಯ ನಿರಂತರವಾಗಿ ನಿಮಗೆ ಟೆಕ್ಸ್ಟ್ ಮಾಡುತ್ತಿಲ್ಲವಾ? ನಿಮ್ಮ ಹತ್ತು ಮೆಸೇಜ್ ಗೆ ಒಂದಕ್ಕಾದರೂ ರಿಪ್ಲೈ ಮಾಡುತ್ತಿಲ್ಲವಾ? ಬೇಸರ ಬೇಡ. ಇದಕ್ಕೆ ಹಲವಾರು ಕಾರಣ ಇರಬಹುದು. ಸಾವಧಾನದಿಂದ ಅವರ ಸ್ಥಿತಿ ಅರಿತು ವರ್ತಿಸಿ.  
 

These are some reason for guys not text back
Author
First Published Jan 24, 2023, 5:26 PM IST

“ಹತ್ತು ಮೆಸೇಜ್ ಮಾಡಿದ್ರೆ ತಿರುಗಿ ಒಂದ್ ಮೆಸೇಜ್ ಹಾಕೋಕೆ ಅರ್ಧ ದಿನ ಕಾಯಿಸ್ತಾನೆ, ಕೇಡಿ, ಇವನಿಗೇನಾಗಿದೆ? ನಾನು ಅಂದ್ರೆ ಇಷ್ಟವಿಲ್ಲವೇನೋ, ನನ್ನನ್ನು ಅವಾಯ್ಡ್ ಮಾಡಿದ್ತಾನೇನೋ’ ಅಂತೆಲ್ಲ ಯೋಚಿಸುವ ಹುಡುಗಿಯರಿಗೆ ಬರವಿಲ್ಲ. ಏಕೆಂದರೆ, ಇವರು ಮೆಸೇಜ್ ಮಾಡಿ ಮಾಡಿ ಬೆರಳುಗಳನ್ನು ನೋಯಿಸಿಕೊಂಡಿದ್ರೆ ಇವರ ಆ ಗೆಳೆಯ ಮಾತ್ರ ಹತ್ತು ಮೆಸೇಜ್ ಗೆ ಒಂದು ರಿಪ್ಲೈ ಮಾಡುತ್ತಾನೆ! ಇದು ಬಹಳಷ್ಟು ಹುಡುಗರ ಖಯಾಲಿ. ಅದೇನೋ ಗೊತ್ತಿಲ್ಲ, ತೀರ ಹುಡುಗಿಯರಂತೆ ಇಡೀ ದಿನ ಮೆಸೇಜ್ ಗಳ ಲೋಕದಲ್ಲಿರುವುದು ಹುಡುಗರಿಗೆ ಆಗಿ ಬರೋದಿಲ್ಲ. ಅವರು ಫ್ರೀ ಇದ್ದರೂ ಅಷ್ಟೆ, ಇಲ್ಲದಿದ್ದರೂ ಅಷ್ಟೆ. ಬೇಕಿದ್ದರೆ ನೇರವಾಗಿ ಕಾಲ್ ಮಾಡಿ ಮಾತಾಡಬಲ್ಲರೇ ಹೊರತು, ಮೆಸೇಜ್ ಮಾಡುವ ತಾಳ್ಮೆ ಕಡಿಮೆ. ಆದರೆ, ಅಂತಹ ಸಮಯದಲ್ಲಿ ಇಲ್ಲಸಲ್ಲದ್ದನ್ನು ಯೋಚಿಸುವ ಹುಡುಗಿಯರೇ ಹೆಚ್ಚು. ಹುಡುಗರು ಮೆಸೇಜ್ ಮಾಡದೆ ಇರಲು ಹಲವು ಸಾಮಾನ್ಯ ಕಾರಣಗಳಿವೆ.

ಅವುಗಳ ಬಗ್ಗೆ ಅರಿತುಕೊಂಡ ಬಳಿಕವಾದರೂ ನೆಮ್ಮದಿಯಿಂದಿರುವುದು ಉತ್ತಮ. ಅಷ್ಟಕ್ಕೂ ಮೆಸೇಜ್ ಮಾಡುತ್ತ ಸಮಯ ಕಳೆಯುವುದು ಹುಡುಗರಿಗೆ ಭಾರೀ ಇಷ್ಟವಾದ ಕಾಯಕವೇನೂ ಅಲ್ಲ ಎನ್ನುವುದು ಮೊದಲ ಸತ್ಯ. ಪ್ರೀತಿಪಾತ್ರರೊಂದಿಗೆ ಸದಾ ಸಂಪರ್ಕದಲ್ಲಿರಲು (Communicate) ಕೆಲವೊಮ್ಮೆ ಸಾಧ್ಯವಾಗುವುದಿಲ್ಲ. ನೀವೂ ಕೆಲಸದಲ್ಲಿ (Work) ಬ್ಯುಸಿಯಾಗಿರಬಹುದು, ಅವರೂ ಕೆಲಸದಲ್ಲಿ ಮಗ್ನರಾಗಿರಬಹುದು. ಆದರೂ ಅವರಿಂದ ಯಾವುದೇ ಮೆಸೇಜ್ (Message) ಬಂದಿಲ್ಲ ಎಂದಾದರೆ ಅದೇನೋ ಕಸಿವಿಸಿ ಮನಸ್ಸನ್ನು ಆಕ್ರಮಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಹುಡುಗರು ಈ ಕೆಲವು ಕಾರಣದಿಂದ ಮೆಸೇಜ್ ಮಾಡೋಕೆ ವಿಳಂಬಿಸ್ತಾರೆ. 

•    ಕಾರ್ಯದಲ್ಲಿ ಬ್ಯುಸಿ (Busy)
ಹಲವರಿಗೆ ತಮ್ಮ ಕಚೇರಿ (Office) ಕಾರ್ಯ ಹಾಗೂ ಖಾಸಗಿ (Personal) ಬದುಕನ್ನು ಮ್ಯಾನೇಜ್ ಮಾಡುವ ತಂತ್ರ ಕಡಿಮೆ ಇರುತ್ತದೆ. ಕಚೇರಿಯ ಕೆಲಸದಲ್ಲಿ ತೊಡಗಿಕೊಂಡು ಲವರ್ (Lover) ಅನ್ನು ಮರೆಯುವ ಪುರುಷರು (Male) ಹೆಚ್ಚು. ಮೀಟಿಂಗ್, ಸಮಯಕ್ಕೆ ಕಾರ್ಯ ಮುಗಿಸುವ ತುರ್ತು (Deadline) ಇತ್ಯಾದಿಗಳಲ್ಲಿ ಮುಳುಗಿಹೋದರೆ ಮುಗಿಯಿತು, ಬೇರೆ ಪ್ರಪಂಚವೊಂದಿದೆ ಎನ್ನುವ ಅರಿವೂ ಅವರಿಗೆ ಆಗುವುದಿಲ್ಲ. ಹೀಗಾಗಿ, ಇಂಥವರನ್ನು ದೂರುವುದು ಅನಗತ್ಯ.

Relationship Tips: ಇಂತಹ ಹುಡುಗರು ಪ್ರಪಂಚದಲ್ಲೇ ಬೆಸ್ಟ್‌ ಲವರ್ಸ್‌ ಆಗ್ತಾರೆ

•    ಒಂದು ಧ್ಯಾನಸ್ಥ ಸ್ಥಿತಿ (Mood) 
ಕೆಲವು ಜನ ತೀವ್ರ ಒತ್ತಡವಾದರೆ, ಯಾವುದಾದರೊಂದು ಘಟನೆಗೆ ನೋವಾದರೆ ಸುಧಾರಿಸಿಕೊಳ್ಳಲು ಸಮಯ ತೆಗೆದುಕೊಳ್ಳುತ್ತಾರೆ. ಅಥವಾ ಇಂಥ ಯಾವುದೇ ಘಟನೆ ಸಂಭವಿಸದೆಯೂ ಅನೇಕರು ತಮ್ಮದೇ ಧ್ಯಾನಸ್ಥ ಮನಸ್ಥಿತಿಯಲ್ಲಿರುತ್ತಾರೆ. ಪ್ರಯಾಣಿಸುವಾಗ (Travel) ಹಾಡು (Song) ಕೇಳಬಹುದು, ಪುಸ್ತಕ (Book) ಓದಬಹುದು, ಸುಮ್ಮನೆ ಸಿನಿಮಾ ನೋಡುತ್ತಿರಬಹುದು, ವಾಕ್ (Walk) ಹೋಗಬಹುದು. ಒಟ್ಟಿನಲ್ಲಿ ಕೆಲವು ಕಾರ್ಯಗಳನ್ನು ಮಾಡುವಾಗ ಅವರಿಗೆ ಮೆಸೇಜ್ ನೋಡಲು, ಮಾಡಲು ಇಷ್ಟವಾಗುವುದಿಲ್ಲ, ನೆನಪೂ ಇರುವುದಿಲ್ಲ. 

•    ತಲೆ ತಿಂತೀರಾ? 
ನೀವು ಸಿಕ್ಕಾಪಟ್ಟೆ ತಲೆ ತಿನ್ನುವ ಪೈಕಿಯವರಾಗಿದ್ದರೆ ಅವರು ಖಂಡಿತ ನಿಮ್ಮನ್ನು ಅವಾಯ್ಡ್ (Avoid) ಮಾಡುತ್ತಿರುತ್ತಾರೆ. ಅನಗತ್ಯ ಮಾತುಗಳು, ವಿವಾದ, ಗಾಸಿಪ್ (Gossip)ಗಳು, ಭವಿಷ್ಯದಲ್ಲಿ ಹೀಗಿರೋಣ, ಹಾಗಿರೋಣ ಎನ್ನುವ ಅತಿಯಾದ ಸಲ್ಲಾಪಗಳು ಅನೇಕರಿಗೆ ಇಷ್ಟವಾಗುವುದಿಲ್ಲ. ಪ್ರತಿಯೊಂದಕ್ಕೂ ಅವರನ್ನೇ ಅವಲಂಬಿಸುವವರು (Dependant) ನೀವಾಗಿದ್ದರೆ, ಚಿಕ್ಕಪುಟ್ಟದ್ದನ್ನೂ ದೊಡ್ಡ ವಿಷಯವನ್ನಾಗಿ ಬಿಂಬಿಸುತ್ತಿದ್ದರೆ ಅವರಿಗೆ ಇಷ್ಟವಾಗುವುದಿಲ್ಲ. ಅಂಥವರು ಸಹ ಕಮ್ಯೂನಿಕೇಟ್ ಮಾಡುವುದು ಕಡಿಮೆ. ನಿಮ್ಮ ಸ್ವಭಾವಕ್ಕೆ (Behaviour) ಅವರು ಸುಸ್ತಾಗಿರಬಹುದು ಎನ್ನುವ ಎಚ್ಚರಿಕೆಯೂ ಇರಲಿ.

ರೊಮ್ಯಾನ್ಸ್ ಆದ್ಮೇಲೆ? ರಿಯಲ್ ಲೈಫ್ ಸತ್ಯಗಳ ಬಗ್ಗೆ ಸುಧಾಮೂರ್ತಿ ಮಾತು!

•    ಭಾವನೆ (Emotions) ವ್ಯಕ್ತಪಡಿಸುವುದಕ್ಕೆ ಅಡ್ಡಿ
ನಿಮ್ಮೊಂದಿಗೆ ಮಾತನಾಡಬೇಕು, ಮೆಸೇಜ್ ಮಾಡಬೇಕು ಎನ್ನುವ ಅನಿಸಿಕೆ ಅವರಿಗಿದ್ದರೂ ಕೆಲವೊಮ್ಮೆ ಸಂದರ್ಭ ಅದಕ್ಕೆ ಅನುವು ಮಾಡಿಕೊಡುವುದಿಲ್ಲ. ಭಾವನೆಗಳನ್ನು ವ್ಯಕ್ತಪಡಿಸಲು (Express) ಸಾಧ್ಯವಾಗದ ಸ್ಥಳದಲ್ಲಿ ಅವರು ಇರಬಹುದು.

•    ಸಿಂಪಲ್ಲಾಗಿ ಮರೆತುಬಿಟ್ಟಿರಬಹುದು!
ಮುಖ್ಯವಾದ ವ್ಯಕ್ತಿಯನ್ನು ಮರೆಯೋಕೆ (Forget) ಸಾಧ್ಯವಾ ಎನ್ನಬೇಡಿ. ಮರೆವು ಸಹಜ ಗುಣ. ಮೆಸೇಜ್ ಗೆ ರಿಪ್ಲೈ (Reply) ಮಾಡಲು ಅವರಿಗೆ ಮರೆತುಹೋಗಿರಬಹುದು. 

Follow Us:
Download App:
  • android
  • ios