Asianet Suvarna News Asianet Suvarna News

ಸಂಜಯ್ ದತ್ ಹೋಲುವ ಕರೀಷ್ಮಾ ಕಪೂರ್ ಪುತ್ರ: ಪ್ರಪಂಚದಲ್ಲಿ ಒಂದೇ ರೀತಿ 7 ಜನ ಇರ್ತಾರಂತೆ..!

ಈಗ ಸಂಜಯ್ ದತ್ ತಮ್ಮ ತಾರುಣ್ಯದಲ್ಲಿ ಹೇಗಿದ್ದರೋ ಹಾಗೆಯೇ ಬಾಲಿವುಡ್‌ ಮತ್ತೊಬ್ಬ ನಟಿ ಕರೀಷ್ಮಾ ಕಪೂರ್ ಪುತ್ರ ಕಾಣಿಸುತ್ತಿದ್ದಾರೆ.  ಅವರ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಟ್ರೋಲ್ ಆಗ್ತಿದೆ.

There are 7 people alike in the world Bollywood actress Karisma Kapoors son who looks like Sanjay Dutt akb
Author
First Published Jul 1, 2024, 12:50 PM IST

ಬಾಲಿವುಡ್ ನಟ ಸಂಜಯ್ ದತ್ ಅವರು ಸಿನಿಮಾದ ಜೊತೆ ಜೊತೆಗೆ ಬೇರೆಯದೇ ಕಾರಣಕ್ಕೂ ಬಹಳಷ್ಟು ಸುದ್ದಿಯಾದವರು. ತಮ್ಮ ಸಿನಿಮಾ ಜೀವನದಂತೆಯೇ ಅವರ ವೈಯಕ್ತಿಕ ಜೀವನವೂ ಬಹಳ ಏಳು ಬೀಳುಗಳಿಂದ ಕೂಡಿದಿದ್ದಂತಹುದು. ಅನೇಕ ನಟಿಯರ ಜೊತೆ ಆಫೇರ್‌,  ಸಿನಿಮಾ ರಂಗದಲ್ಲಿ ನೆಲೆ ಕಾಣುವ ಮೊದಲೇ ಅಮ್ಮನ ಹಠಾತ್ ಸಾವು, ಡ್ರಗ್ ದುಶ್ಚಟ,  ಅಕ್ರಮ ಶಸ್ತ್ರಾಸ್ತ್ರ ಸಂಗ್ರಹ ಪ್ರಕರಣದಲ್ಲಿ ಜೈಲು ಪಾಲಾಗಿದ್ದು, ಹೀಗೆ ಸಂಜಯ್ ದತ್ ನಿಜ ಜೀವನ, ಯಾವ ಸಿನಿಮಾಗಳಿಗೂ ಕಡಿಮೆ ಇಲ್ಲ. ಮೂರು ಮದುವೆಯಾಗಿರುವ ಸಂಜಯ್ ದತ್ ಅವರಿಗೆ ಮೂವರು ಮಕ್ಕಳು, ಪ್ರಸ್ತುತ ತಮ್ಮ 3ನೇ ಪತ್ನಿ ಮನ್ಯಾತಾ ಹಾಗೂ ಇಬ್ಬರು ಅವಳಿ ಮಕ್ಕಳ ಜೊತೆ ವಾಸ ಮಾಡ್ತಿರುವ ಸಂಜಯ್ ದತ್ ಅವರದ್ದು, ಸದ್ಯದ ಮಟ್ಟಿಗಂತೂ ಆರಾಮದ ಜೀವನ. 

ಆದರೆ ಈಗ ಸಂಜಯ್ ದತ್ ತಮ್ಮ ತಾರುಣ್ಯದಲ್ಲಿ ಹೇಗಿದ್ದರೋ ಹಾಗೆಯೇ ಬಾಲಿವುಡ್‌ ಮತ್ತೊಬ್ಬ ನಟಿ ಕರೀಷ್ಮಾ ಕಪೂರ್ ಪುತ್ರ ಕಾಣಿಸುತ್ತಿದ್ದಾರೆ. ಪ್ರಪಂಚದಲ್ಲಿ ಒಂದೇ ರೀತಿ ಏಳು ಜನರು ಇರುತ್ತಾರೆ ಎಂಬ ಮಾತಿದೆ. ಅದೇ ರೀತಿ ಈಗ ಸಂಜಯ್ ದತ್‌ನನ್ನು ಹೋಲುವಂತೆ ಕರೀಷ್ಮಾ ಪುತ್ರ ಇದ್ದಾನೆ.  ಸಂಜಯ್ ದತ್ ಹಾಗೂ ಕರೀಷ್ಮಾ ಪುತ್ರನ ಫೋಟೋವನ್ನು ಕೊಲಾಜ್ ಮಾಡಿರುವ ಟ್ರೋಲರ್‌ಗಳು ಇದು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಕಳೆದ ವರ್ಷ ಕಪೂರ್ ಕುಟುಂಬ ಆಯೋಜಿಸಿದ್ದ ಕ್ರಿಸ್ಮಸ್‌ ಪಾರ್ಟಿಗೆ ಕರೀಷ್ಮಾ ತಮ್ಮ ಮಕ್ಕಳನ್ನು ಕರೆದುಕೊಂಡು ಬಂದಿದ್ದರು. ಈ ವೇಳೆ ಕರೀಷ್ಮಾ ಪುತ್ರ ಮಾಧ್ಯಮ ಹಾಗೂ ಪಪಾರಾಜಿಗಳ ಕಣ್ಣಿಗೆ ಬಿದ್ದಿದ್ದರು. ಅಂದು ಕರೀಷ್ಮಾ ಪುತ್ರನ ಫೋಟೋ ವೈರಲ್ ಆಗಿದ್ದು, ಈಗ ಸಂಜಯ್ ದತ್ ಫೋಟೋದ ಜೊತೆ ತಳುಕು ಹಾಕಿ ವೈರಲ್ ಆಗುತ್ತಿದೆ.

ಸದಾ ಮಾಧುರಿ ಹಿಂದಿನಿಂದ ಐ ಲವ್ಯೂ ಎಂದು ಪಿಸುಗುಟ್ಟುತ್ತಿದ್ದ ಸಂಜಯ್ ದತ್; ಬಾಲಿವುಡ್‌ನ ಜನಪ್ರಿಯ ಜೋಡಿ ಬೇರಾಗಿದ್ದೇಕೆ?

ಅನೇಕರು ಇದು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಹಾಗಂತ ಸಿನಿಮಾ ರಂಗದಲ್ಲಿದ್ದಾಗ ಸಂಜಯ್ ದತ್‌ಗೂ ಆಗಿನ ಬಹು ಬೇಡಿಕೆಯ ನಟಿ ಆಗಿದ್ದ ಕರೀಷ್ಮಾ ಕಪೂರ್‌ಗೂ ಯಾವುದೇ ಆಫೇರ್‌ಗಳು ಇರಲಿಲ್ಲ ಎಂಬದು ಆಗಿನ ಸಿನಿಮಾ ಮಂದಿ ಹೇಳುವ ಮಾತು. ಇತ್ತ ಕರೀಷ್ಮಾ ಕಪೂರ್ ಅವರು ಸಿಂಗಲ್ ವುಮನ್ ಉದ್ಯಮಿ ಸಂಜಯ್ ಕಪೂರ್ ಅವರನ್ನು 2003ರಲ್ಲಿ ಮದ್ವೆಯಾಗಿದ್ದ ಕರೀಷ್ಮಾ ಅವರಿಗೆ ಇಬ್ಬರು ಮಕ್ಕಳು. ಆದರೆ ದಾಂಪತ್ಯ ಕಲಹದ ಕಾರಣಕ್ಕೆ 2016ರಲ್ಲಿ ಅವರು ಪತಿಯಿಂದ ವಿಚ್ಛೇದನ ಪಡೆದುಕೊಂಡಿದ್ದಾರೆ. ಹೀಗಿರುವಾಗ ಕರೀಷ್ಮಾ ಪುತ್ರ ಸಂಜಯ್ ಹೋಲುವುದನ್ನು ನೋಡಿ ಅನೇಕರು ಕುಹಕವಾಡುತ್ತಿದ್ದಾರೆ. 

ಬಹುಶಃ ಅವರ ಮುತ್ತಜ್ಜಂದಿರ ಜೀನ್‌ಗಳು ಒಂದೇ ಆಗಿರಬಹುದು ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದರೆ, ಮತ್ತೆ ಕೆಲವರು ಭಾರತೀಯರಿಗೆ ಪಕ್ಕದ ಮನೆಯವರ ಕತೆ ಕೇಳುವುದರಲ್ಲಿ ಏನೋ ಖುಷಿ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಆತ ಸೋದರ ಮಾವ ರಣ್‌ಬೀರ್ ಕಪೂರ್ ರೀತಿ ಕಾಣುತ್ತಿದ್ದಾನೆ ಎಂದು ಕಾಮೆಂಟ್ ಮಾಡಿದ್ದಾರೆ. 

ಇತ್ತ ಸಂಜಯ್ ದತ್ ಅವರ ಹೆಸರು ಕೂಡ ತಮ್ಮ ಮದುವೆಗೆ ಮೊದಲೇ ಬಾಲಿವುಡ್‌ನ ಅನೇಕ ನಟಿಯರ ಹೇಸರಿನೊಂದಿಗೆ ತಳುಕು ಹಾಕಿಕೊಂಡಿತ್ತು. ಅವರಲ್ಲಿ ಮೊದಲಿಗಳು ಟೀನಾ ಮುನಿಮ್, ಪ್ರಸ್ತುತ ಅನಿಲ್ ಅಂಬಾನಿ ಪತ್ನಿಯಾಗಿರುವ ಟೀನಾ ಅವರ ಹೆಸರು 1970ರಿಂದ 1980ರ ಮಧ್ಯೆ ಸಂಜಯ್ ಜೊತೆ ತಳುಕು ಹಾಕಿಕೊಂಡಿತ್ತು. ಅವರಿಬ್ಬರೂ ರಾಕಿ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದರು. 

ರೀಚಾ ಶರ್ಮಾ: ಸಂಜಯ್ ದತ್ ಅವರ ಮೊದಲ ಪತ್ನಿಯಾಗಿದ್ದ ರೀಚಾ ಶರ್ಮಾ ಅವರು 1996ರಲ್ಲೇ ಬ್ರೈನ್ ಟ್ಯೂಮರ್‌ನಿಂದ ತೀರಿಕೊಂಡಿದ್ದರು. 1987ರಲ್ಲಿ ಮದುವೆಯಾದ ಇವರಿಬ್ಬರಿಗೆ ತ್ರಿಶಾಲಾ ದತ್ ಎಂಬ ಮಗಳಿದ್ದಾಳೆ. ಬಾಲಿವುಡ್‌ನ ಎವರ್‌ಗ್ರೀನ್ ಬ್ಯೂಟಿ ಮಾಧುರಿ ದೀಕ್ಷಿತ್ ಅವರ ಹೆಸರು ಕೂಡ ಸಂಜಯ್ ದತ್ ಜೊತೆ ತಳುಕು ಹಾಕಿಕೊಂಡಿತ್ತು. ಇವರಿಬ್ಬರು ಸಾಜನ್, ಖಳ್‌ನಾಯಕ್ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದರು. 

ಮದ್ರಾಸ್‌ನಲ್ಲಿ ತಮ್ಮ ಹಿಂದಿನ ಜನ್ಮದ ಭವಿಷ್ಯ ಕೇಳಿದ ಸಂಜಯ್ ದತ್; ಪತ್ನಿಯನ್ನು ಕೊಂದಿದ್ದು ನಿಜವೇ?

ರೀಯಾ ಪಿಳೈ: ಇದಾದ ನಂತರ ಸಂಜಯ್ ಮಾಡೆಲ್ ರಿಯಾ ಪಿಳೈ ಅವರನ್ನು ಮದ್ವೆಯಾದರು. ಆದರೆ 2005ರಲ್ಲಿ ಇವರಿಬ್ಬರು ವಿಚ್ಛೇದನ ಪಡೆದುಕೊಂಡರು. ಆದರೆ ಈಕೆಯ ಜೊತೆಗಿನ ವಿಚ್ಚೇದನದ ನಂತರ ಸಂಜಯ್ ದತ್ ಸಾಮಾಜಿಕ ಹೋರಾಟಗಾರ್ತಿ ನಾದಿಯಾ ದುರಾನಿ ಜೊತೆ ಸಂಬಂಧದಲ್ಲಿದ್ದರು ಎಂಬ ಗುಲ್ಲು ಎದ್ದಿತ್ತು. ಇದಾದ ನಂತರ ನಟಿ ಮಾಡೆಲ್ ಲೀಸಾ ಜೊತೆಗೆ ಸಂಜಯ್ ಹೆಸರು ಕೇಳಿ ಬಂದಿತ್ತು. ಕಡೆಯದಾಗಿ ಸಂಜಯ್ ದತ್ 2008ರಲ್ಲಿ ನಟಿ ಹಾಗೂ ಉದ್ಯಮಿ ಮಾನ್ಯತಾ ದತ್ ಅವರನ್ನು ಮದ್ವೆಯಾದರು. 2010ರಲ್ಲಿ ಇವರು ಶಹ್ರಾನ್, ಇಕ್ರಾ ಎಂಬ ಒಂದು ಗಂಡು ಒಂದು ಹೆಣ್ಣು ಅವಳಿ ಮಕ್ಕಳನ್ನು ಹೊಂದಿದ್ದು, ಪ್ರಸ್ತುತ ಸಂಜಯ್ ಅವರದ್ದು ಸುಖಿ ಜೀವನ. 

 

Latest Videos
Follow Us:
Download App:
  • android
  • ios