'ಸ್ವರ್ಗದ ಮೆಟ್ಟಿಲಿ'ನಿಂದ ಬಿದ್ದು ಬ್ರಿಟಿಷ್ ಪ್ರವಾಸಿಗ ಸಾವು

ಸ್ವರ್ಗದ ಮೆಟ್ಟಿಲು ಅಥವಾ  ಸ್ಟೇರ್‌ವೇ ಟು ಹೆವೆನ್ ಹತ್ತಲು ಹೋಗಿ ಬ್ರಿಟಿಷ್ ಪ್ರವಾಸಿಗನೋರ್ವ ಅಲ್ಲಿಂದ ಬಿದ್ದು ಪ್ರಾಣ ಕಳೆದುಕೊಂಡು ದುರಂತ ಘಟನೆ ನಡೆದಿದೆ.  

A British tourist went to climb the Stairway to Heaven and fell from there and lost his life in a tragic incident akb

ಸ್ವರ್ಗದ ಮೆಟ್ಟಿಲು ಅಥವಾ  ಸ್ಟೇರ್‌ವೇ ಟು ಹೆವೆನ್ ಹತ್ತಲು ಹೋಗಿ ಬ್ರಿಟಿಷ್ ಪ್ರವಾಸಿಗನೋರ್ವ ಅಲ್ಲಿಂದ ಬಿದ್ದು ಪ್ರಾಣ ಕಳೆದುಕೊಂಡು ದುರಂತ ಘಟನೆ ನಡೆದಿದೆ.  ಸೆಪ್ಟೆಂಬರ್ 12 ರಂದು ಈ ಘಟನೆ ನಡೆದಿದ್ದು, 42 ವರ್ಷದ ವ್ಯಕ್ತಿಯೊಬ್ಬರು ಈ ಸ್ಟೇರ್‌ವೇ ಟು ಹೆವನ್‌ ಹತ್ತಲು ಬಂದಿದ್ದರು. ಹೀಗೆ ಇದನ್ನು ಹತ್ತುವ ವೇಳೆ 90 ಅಡಿ ಆಳಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಮೆಟ್ರೋ ನ್ಯೂಸ್‌ ವರದಿ ಮಾಡಿದೆ. 

ಇದೇನು ಸ್ವರ್ಗದ ಮೆಟ್ಟಿಲು ಸಾಯುವ ಮೊದಲೇ ಸ್ವರ್ಗನಾ ಎಂದೆಲ್ಲಾ ಯೋಚನೆ ಮಾಡ್ತಿದ್ದೀರಾ? ಇದು ಆಸ್ಟ್ರೀಯಾದ ಪ್ರವಾಸಿ ತಾಣ ಇಲ್ಲಿ ಭಾರಿ ಎತ್ತರದ ಬಂಡೆಗೆ ಕಬ್ಬಿಣದ ಮೆಟ್ಟಿಲುಗಳನ್ನು ಅಳವಡಿಸಲಾಗಿದ್ದು, ಇದಕ್ಕೆ ಸ್ಟೇರ್‌ವೇ ಟು ಹೆವೆನ್ ಎಂದು ಹೆಸರಿಡಲಾಗಿದೆ.  ಜಗತ್ತಿನಾದ್ಯಂತ ಇರುವ ಪ್ರವಾಸಿಗರ ಸೆಳೆಯುವ ಈ ಆಸ್ಟ್ರೀಯಾದ  ಸ್ಟೇರ್‌ವೇ ಟು ಹೆವೆನ್‌ಗೆ ಜಗತ್ತಿನ್ನೆಲ್ಲೆಡೆಯಿಂದ ಪ್ರವಾಸಿಗರು ಆಗಮಿಸುತ್ತಾರೆ.  ಸಾಮಾಜಿಕ ಜಾಲತಾಣದಲ್ಲಿ ಈ ತಾಣದ ಸಾಕಷ್ಟು ವೀಡಿಯೋಗಳು ಹರಿದಾಡುತ್ತಿದ್ದು, ಸ್ಟೇರ್‌ವೇ ಟು ಹೆವೆನ್ ಎಂದೇ ಫೇಮಸ್ ಆಗಿದೆ.

ಚಿಕನ್ ಶವರ್ಮ ತಿಂದ ಬಾಲಕಿ ಸಾವು : ಶವರ್ಮ, ಗ್ರಿಲ್ಡ್‌ ಚಿಕನ್‌ಗೆ ತಾತ್ಕಾಲಿಕ ನಿಷೇಧ

ಕಡಿದಾದ ಹಾಗೂ ಭಾರಿ ಎತ್ತರವಿರುವ ಬೆಟ್ಟಕ್ಕೆ ಅಳವಡಿಸಿದ ಏಣಿಯನ್ನು ಹತ್ತುವ ವೇಳೆ ಈತ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾನೆ. ಈತ ಕೆಳಗೆ ಬಿದ್ದ ಕೂಡಲೇ ಅಲ್ಲಿನ ಪೊಲೀಸ್ ಇಲಾಖೆಗೆ ಮಾಹಿತಿ ನೀಡಲಾಗಿತ್ತು, ಕೂಡಲೇ ಆತನ ರಕ್ಷಣೆಗಾಗಿ ಹೆಲಿಕಾಪ್ಟರ್ (helicopters) ತಂದು ಕಾರ್ಯಚರಣೆ ನಡೆಸಲಾಗಿತ್ತು. ಆದರೂ ಆತನನ್ನು ಬದುಕಿಸಿಕೊಳ್ಳಲಾಗಲಿಲ್ಲ  ಆತನ ಶವವನ್ನು ಕಣಿವೆಯಿಂದ ಮೇಲೆತ್ತಲಾಯ್ತು ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಈ ಪ್ರಕರಣದಲ್ಲಿ ಯಾವುದೇ ಮೂರನೇ ವ್ಯಕ್ತಿಯ ನಿರ್ಲಕ್ಷ್ಯವನ್ನು ಅಧಿಕಾರಿಗಳು ತಳ್ಳಿಹಾಕಿದ್ದಾರೆ. ಏಕೆಂದರೆ ಘಟನೆ ನಡೆಯುವ ವೇಳೆ ಅವರೊಬ್ಬರೇ ಇದ್ದರೂ ಅವರು ಸಂಪೂರ್ಣ ಒಬ್ಬಂಟಿಯಾಗಿದ್ದರು ಎಂದು ತಿಳಿಸಿದ್ದಾರೆ ಆದರೆ  ಮೃತ ವ್ಯಕ್ತಿಯ ಗುರುತು ಪತ್ತೆ ಮಾಡಿಲ್ಲ. 

ಇಲ್ಲಿನ ಡ್ಯಾಚ್‌ಸ್ಟೈನ್ ಪ್ರದೇಶದ ಟೂರಿಸ್ಟ್ ವೆಬ್‌ಸೈಟ್‌ನಲ್ಲಿಈ  ಸ್ಟೇರ್‌ ವೇ ಟು ಹೆವನ್‌ಗೆ,   'ಟ್ರಕ್ಕಿಂಗ್‌ ಉತ್ಸಾಹಿಗಳಿಗೆ  ಝ್ವಿಸೆಲಾಲ್ಮ್‌ನಲ್ಲಿ ಹೊಸ ಆಕರ್ಷಣೆ' ಎಂದು ಪ್ರಚಾರ ಮಾಡಲಾಗಿದೆ. ನಾಲ್ಕು ಹಂತಗಳಲ್ಲಿ ಈ ಸ್ವರ್ಗದ ಮೆಟ್ಟಿಲನ್ನು ಏರುವ ಈ ಸಾಹಸಿ ಕಾರ್ಯವೂ ಗಟ್ಟಿ ಹೃದಯದವರಿಗೆ ಮಾತ್ರ ಕೆಳಗೆ ನೋಡಿದರೆ ಬೆನ್ನು ಮೂಳೆಯಲ್ಲಿ ನಡುಕ ಹುಟ್ಟಿಸುವಂತೆ ಮಾಡುತ್ತದೆ ಈ ರೋಚಕ ಸಾಹಸ.

ಒಂದೇ ವರ್ಷದಲ್ಲಿ 45 ಕೆಜಿ ತೂಕ ಇಳಿಸಿಕೊಂಡ ಫಿಟ್‌ನೆಸ್ ಇನ್‌ಫ್ಲುಯೆನ್ಸರ್‌ ಸಾವು

40 ಮೀಟರ್‌ ಎತ್ತರವನ್ನು ಹೊಂದಿರುವ ಸ್ವರ್ಗದ ಮೆಟ್ಟಿಲು ಎಂದೇ ಖ್ಯಾತಿ ಗಳಿಸಿರುವ ಪನೋರಮಾ-ಲ್ಯಾಡರ್ ಫೆರಾಟಾಸ್  (Panorama-ladder Ferratas) ಎಲ್ಲಾ ಪ್ರವಾಸಿಗರ ಹೊಸ ಟಾಪ್ ಆಕರ್ಷಣೆಯಾಗಿದೆ. ಡಚ್‌ಸ್ಟೈನ್‌ನ ( Dachstein) ಗೊಸೌ (Gosau) ಬಳಿಯ ಜ್ವಿಸೆಲಾಲ್ಮ್‌ (Zwieselalm) ಸಮೀಪದ ಡೊನರ್‌ಕೊಗೆಲ್‌ನಲ್ಲಿರುವ (Donnerkogel) ಈ ಫೆರಾಟಾ ಮೂಲಕ ಡಚ್‌ಸ್ಟೈನ್‌ನ ಹಿಮನದಿಯ ಅದ್ಭುತ ಮತ್ತುಮನೋರಮಣೀಯ ನೋಟಗಳನ್ನು ನೋಡಬಹುದಾಗಿದೆ.  ಜೊತೆಗೆ ಆಸ್ಟ್ರಿಯಾದ ಅತಿ ಎತ್ತರದ ಪರ್ವತವಾದ ಗ್ರೋಬ್‌ಲಾಕ್ನರ್‌ನ್ನು ನೋಡಬಹುದಾಗಿದೆ.  ವೃತ್ತಿಪರ ಕ್ಲೈಂಬರ್‌ ಹೆಲಿ ಪುಟ್ಜ್‌ ಅವರ ಮೇಲುಸ್ತುವಾರಿಯಲ್ಲಿ ಈ ಸ್ವರ್ಗದ ಏಣಿಯನ್ನು ನಿರ್ಮಿಸಲಾಗಿದೆ. 

ಅಲ್ಲದೇ ಈ ಸ್ವರ್ಗದ ಮೆಟ್ಟಿಲು ಏರುವ ಸಾಹಸ ಅನುಭವಿಗಳಿಗೆ (experienced climbers) ಮಾತ್ರ ಇದರ ಜೊತೆ ಸೌಮ್ಯವಾದ ಹವಾಮಾನ ಮತ್ತು ಶಾಂತ ಗಾಳಿಯ ಪರಿಸ್ಥಿತಿಯೂ ಅಲ್ಲಿರಬೇಕು. ಹಾಗೂ ಮೊದಲ ಬಾರಿ ಹತ್ತುವವರಿಗೆ ಇದನ್ನು ಶಿಫಾರಸು ಮಾಡಲಾಗದು ಎಂದು ಪ್ರವಾಸಿ ವೆಬ್‌ಸೈಟ್‌ನಲ್ಲಿ ವಿವರ ನೀಡಲಾಗಿದೆ. 

 
 
 
 
 
 
 
 
 
 
 
 
 
 
 

A post shared by 365 Austria (@365austria)

 

Latest Videos
Follow Us:
Download App:
  • android
  • ios