ದಶಕದಿಂದಲೂ ಒಬ್ಬನೊಟ್ಟಿಗೇ ಸಂಬಂಧದಲ್ಲಿದ್ದ ತಾಪ್ಸಿ ಪನ್ನು ಸೀಕ್ರೆಟ್ ಏನು?

ಈಗಿನ ಸಂಬಂಧಗಳು ಬಹಳ ಬೇಗ ಅಂತ್ಯಕ್ಕೆ ಬಂದು ನಿಲ್ತವೆ. ಪ್ರೀತಿ ಚಿಗುರಿ ವರ್ಷದೊಳಗೆ ಬೇರೆಯಾಗುವವರೇ ಹೆಚ್ಚು. ಹೀಗಿರುವಾಗ ಹತ್ತು ವರ್ಷದಿಂದ ಒಂದೇ ಸಂಬಂಧದಲ್ಲಿ ಬಂಧಿಯಾಗಿರುವ ಈ ನಟಿ ಅದಕ್ಕೆ ಕಾರಣವೇನು ಎಂಬುದನ್ನು ಹೇಳಿದ್ದಾರೆ. 
 

Taapsee Pannu Reveals The Reason She Chose Mathias Boe roo

ಬಾಲಿವುಡ್ ನ ಕೆಲ ನಟಿಯರು ತಮ್ಮ ನಟನೆಯಿಂದ ಮಾತ್ರವಲ್ಲ ವೈಯಕ್ತಿಕ ವಿಷ್ಯದಲ್ಲೂ ಅಭಿಮಾನಿಗಳನ್ನು ಸೆಳೆಯುತ್ತಾರೆ. ನಟಿಯರು ಪದೇ ಪದೇ ಬಾಯ್ ಫ್ರೆಂಡ್ಸ್ ಬದಲಾವಣೆ ಮಾಡ್ತಾರೆ, ವಿಚ್ಛೇದನ ಹೆಚ್ಚು ಎನ್ನುವ ಜನರ ಮಾತಿಗೆ ಕೆಲ ನಟಿಯರು ಭಿನ್ನವಾಗಿ ನಿಲ್ಲುತ್ತಾರೆ. ಅವರು ವೃತ್ತಿ ಜೀವನದಲ್ಲಿ ಮಾತ್ರವಲ್ಲ ವೈಯಕ್ತಿಕ ಜೀವನದಲ್ಲೂ ಯಶಸ್ವಿಯಾಗಿದ್ದು, ಅದಕ್ಕೆ ಕಾರಣ ಅವರ ಸಂಗಾತಿ ಕೂಡ ಹೌದು.  ನಟನೆ, ಬೋಲ್ಡ್ ನೆಸ್ ಜೊತೆಗೆ ಪ್ರೀತಿ ವಿಷ್ಯದಲ್ಲಿ ಅಭಿಮಾನಿಗಳನ್ನು ಸೆಳೆದ ನಟಿಯರಲ್ಲಿ ತಾಪ್ಸಿ ಕೂಡ ಒಬ್ಬರು. ತಾಪ್ಸಿ ಕಳೆದ ಹತ್ತು ವರ್ಷಗಳಿಂದ ಗೆಳೆಯ ಮಥಿಯಾಸ್ ಬೋ ಜೊತೆ ಸಂಬಂಧದಲ್ಲಿದ್ದಾರೆ. ಸಂದರ್ಶನವೊಂದರಲ್ಲಿ ತಾಪ್ಸಿ, ಮಥಿಯಾಸ್ ಬೋರನ್ನು ಆಯ್ಕೆ ಮಾಡಿಕೊಂಡಿದ್ದು ಹೇಗೆ ಎಂಬ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ವಿದೇಶಿ ವ್ಯಕ್ತಿ ಸಂಗಾತಿಯಾಗಲು ಕಾರಣವೇನು, ಹಾಗೆ ಸಂಬಂಧದಲ್ಲಿ ಬದ್ಧತೆ ಹೇಗೆ ಬಂತು ಎಂಬುದನ್ನು ತಾಪ್ಸಿ ಹೇಳಿದ್ದಾರೆ. 

ತಾಪ್ಸಿ (Taapsee) ಮಾತುಗಳು ಬಲವಾದ ವ್ಯಕ್ತಿತ್ವ (Personality) ಹೊಂದಿರುವ ಮಹಿಳೆಯರಿಗೆ ಹೊಂದಾಣಿಕೆಯಾಗಲಿದೆ. ತಾಪ್ಸಿ ಅನುಸರಿಸಿದ ರೂಲ್ಸ್ ಸುಖ ಜೀವನ (Life) ದ ಮಂತ್ರವಾಗಿದೆ.

ನಾನು ಪುರುಷನನ್ನು ಬಯಸಿದ್ದೇನೆ… ಹುಡುಗನಲ್ಲ: ಸಂದರ್ಶನದಲ್ಲಿ ಮಾತನಾಡಿದ ತಾಪ್ಸಿ, ರಾಜಕುಮಾರನನ್ನು ತಲುಪುವ ಮೊದಲು ನನಗೆ ಅನೇಕ ಕಪ್ಪೆಗಳಿಗೆ ಮುತ್ತಿಡುವ ಪರಿಸ್ಥಿತಿ ಬಂದಿತ್ತು. ಆದ್ರೆ ನನಗೆ ಒಂದು ಪುರುಷ ಸಂಗಾತಿಯ ರೂಪದಲ್ಲಿ ಬೇಕಾಗಿತ್ತು, ಹುಡುಗನ ಅಗತ್ಯವಿರಲಿಲ್ಲ ಎಂದು ತಾಪ್ಸಿ ಹೇಳಿದ್ದಾರೆ.

ತಾಪ್ಸಿ ಪನ್ನು ಸಖತ್ತಾಗಿ ಫಿಟ್ನೆಸ್ ಮೈಂಟೇನ್ ಮಾಡೋಕೆ ಇದೇ ಅಕ್ಕಿ ತಿನ್ತಾರಂತೆ

ಹುಡುಗ ಹಾಗೂ ಪುರುಷರ ಮಧ್ಯೆ ಸಾಕಷ್ಟು ಅಂತರವಿರುತ್ತದೆ. ನನಗೆ ವಯಸ್ಕ ಮನಸ್ಸಿನ ವ್ಯಕ್ತಿಯ ಅಗತ್ಯವಿತ್ತು. ಭಾವನಾತ್ಮಕ ವಿಷ್ಯದಲ್ಲಿ ನಾನು ರಾಜಿಮಾಡಿಕೊಳ್ಳಲು ಬಯಸಲಿಲ್ಲ. ಈ ವಿಷ್ಯ ನನ್ನ ವೈಯಕ್ತಿಕ ಹಾಗೂ ವೃತ್ತಿ ಜೀವನದಲ್ಲಿ ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರಲಿದೆ ಎಂಬುದು ನನಗೆ ಗೊತ್ತಿತ್ತು. ನಾನು ಎಂದೂ ಹುಡುಗನನ್ನು ಸಂಗಾತಿಯಾಗಿ ಬಯಸಿರಲಿಲ್ಲ ಎನ್ನುತ್ತಾರೆ ತಾಪ್ಸಿ. ತಾಪ್ಸಿ ಮಾತಿನಲ್ಲಿ ಸಂಪೂರ್ಣ ಸತ್ಯವಿದೆ. ಯಾವುದೇ ಹುಡುಗಿ ಒಬ್ಬ ಪುರುಷನನ್ನು ಸಂಗಾತಿಯಾಗಿ ಆಯ್ಕೆ ಮಾಡಿಕೊಳ್ಳಬೇಕೇ ವಿನಃ ಹುಡುಗನನ್ನಲ್ಲ. ಸಂಗಾತಿಯಾಗುವ ವ್ಯಕ್ತಿ ಪ್ರಬುದ್ಧನಾಗಿರಬೇಕು. ಸಂಬಂಧ ಶೀಘ್ರವೇ ಪತಗೊಳ್ಳಲು ಅಥವಾ ಸಣ್ಣಪುಟ್ಟ ವಿಷ್ಯಕ್ಕೆ ಗಲಾಟೆ ನಡೆಯಲು ಮುಖ್ಯ ಕಾರಣ ಅಪಕ್ವವಾದ ಸಂಬಂಧ. ಪ್ರಬುದ್ಧ ವ್ಯಕ್ತಿ ಚಿಕ್ಕ ವಿಷ್ಯಕ್ಕೆ ಗಲಾಟೆ ಮಾಡುವುದಿಲ್ಲ. ಬಾಲಿಶವಾಗಿ ವರ್ತಿಸುವುದಿಲ್ಲ. ನಿಮಗೆ ಸಂಪೂರ್ಣ ಬೆಂಬಲ ನೀಡುತ್ತಾರೆ. ನಿಮ್ಮನ್ನು ಅರ್ಥಮಾಡಿಕೊಳ್ಳುವುದಲ್ಲದೆ ಜವಾಬ್ದಾರಿ ಅರಿತು ನಡೆಯುತ್ತಾರೆ. ಸಂಬಂಧದ ಮೌಲ್ಯ ಅವರಿಗೆ ತಿಳಿದಿರುತ್ತದೆ. ಅವರು ಶಾಂತವಾಗಿ ಸಮಸ್ಯೆ ಬಗೆಹರಿಸಿಕೊಳ್ಳುವ ಪ್ರಯತ್ನ ನಡೆಸುತ್ತಾರೆ.

ಸಂವೇದನಾಶೀಲ ವ್ಯಕ್ತಿತ್ವ (Sensitive PErsonality) ಮುಖ್ಯವಾಗುತ್ತದೆ. ಇಂಥವರು ಮಾನಸಿಕ ಮತ್ತು ಭಾವನಾತ್ಮಕ ತಿಳಿವಳಿಕೆ (Emotional Awareness) ಹೊಂದಿರುತ್ತಾರೆ. ತಮ್ಮ ಅಭಿಪ್ರಾಯವನ್ನು ಸಂಗಾತಿ ಮುಂದೆ ಹೇಗೆ ವ್ಯಕ್ತಪಡಿಸಬೇಕು ಎಂಬುದು ಅವರಿಗೆ ತಿಳಿದಿರುತ್ತದೆ. ಇಬ್ಬರ ಮಧ್ಯೆ ಸಂವಹನ ಸುಧಾರಿಸುವುದಲ್ಲದೆ ತಪ್ಪು ತಿಳುವಳಿಕೆಗೆ ಆಸ್ಪದ ಇರೋದಿಲ್ಲ.

ನಟನೆಯಲ್ಲಿ ಮಾತ್ರವಲ್ಲ ಶಿಕ್ಷಣದಲ್ಲೂ ಟಾಪರ್ಸ್ ಈ ಬಾಲಿವುಡ್‌ ಸ್ಟಾರ್ಸ್!

ಈಗಿನ ಕಾಲದಲ್ಲಿ ಇಬ್ಬರೂ ದುಡಿಯುವುದ್ರಿಂದ ಪರಸ್ಪರ ಬೆಂಬಲ ಅಗತ್ಯ. ಪಕ್ವ ವ್ಯಕ್ತಿ ಸಂಗಾತಿಗೆ ಬೆಂಬಲ ನೀಡುತ್ತಾನೆ. ಇದ್ರಿಂದ ಆಕೆಯ ವೃತ್ತಿ ಜೀವನದಲ್ಲಿ ಯಾವುದೇ ಸಮಸ್ಯೆ ಕಾಡುವುದಿಲ್ಲ. ತಾಪ್ಸಿ ಕೂಡ ಮಥಿಯಾಸ್‌ ಬೆಂಬಲ ಪಡೆದಿದ್ದಾರೆ. ಹತ್ತು ವರ್ಷಗಳಿಂದ ಅವರ ಜೊತೆ ಸಂಬಂಧದಲ್ಲಿದ್ದರೂ ಅವರಿಗೆ ವೃತ್ತಿ ಜೀವನದಲ್ಲಿ ಯಾವುದೇ ಸಮಸ್ಯೆ ಆಗಲಿಲ್ಲ. 

ವೃತ್ತಿ ಜೀವನವನ್ನು (Career) ಬೆಂಬಲಿಸುವ ಸಂಗಾತಿ ಸಿಕ್ಕಾಗ ಜೀವನದ ಬಹುತೇಕ ಒತ್ತಡ (Stress) ಕಡಿಮೆ ಆಗಿರುತ್ತದೆ. ಕನಸುಗಳನ್ನು ಹಿಸುಕಿ ಹಾಕುವ ಸಂದರ್ಭ ಬರೋದಿಲ್ಲ. ತಾಯಿಯಾದ್ಮೇಲೂ ನಿಮ್ಮ ವೃತ್ತಿ ಜೀವನವನ್ನು ನೀವು ಸುಲಭವಾಗಿ ನಿರ್ವಹಿಸಬಹುದು. ತಾಪ್ಸಿ ಹುಡುಗನ ಬದಲು ಪುರುಷನನ್ನು ಸಂಗಾತಿಯಾಗಿ ಆಯ್ಕೆ ಮಾಡಿಕೊಳ್ಳಲು ಇದೆಲ್ಲ ಕಾರಣವಾಗಿದೆ. 

Latest Videos
Follow Us:
Download App:
  • android
  • ios