ಬೆಂಗಳೂರು ವಿಮಾನ ನಿಲ್ದಾಣದಲ್ಲಿ Happy Journey ಹೇಳೋ ಸ್ವೀಪರ್, ನೀವು ಥ್ಯಾಂಕ್ಸ್ ಹೇಳ್ತೀರಾ?
ಸಾರ್ವಜನಿಕ ಸ್ಥಳಗಳಲ್ಲಿ ವಾಶ್ ರೂಮಿಗೆ ಹೋಗುವುದು ಬೇಸರದ ಸಂಗತಿ. ಆದರೂ ಅನಿವಾರ್ಯ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಈ ಜರ್ನಿಗೆ ಶುಭಾಶಯ ಕೋರುವ ಮೂಲಕ ಮಹಿಳಾ ಪ್ರಯಾಣಿಕರಿಗೆ ಹಿತಕರ ಭಾವನೆ ಮೂಡಿಸಲು ಯತ್ನಿಸಲಾಗುತ್ತಿದೆ. ಇದು ಬಹಳಷ್ಟು ಪ್ರಯಾಣಿಕರಿಗೆ ಖುಷಿಯನ್ನೂ ತಂದಿದೆ.
ಸಾರ್ವಜನಿಕ ಸ್ಥಳಗಳಲ್ಲಿ ವಾಶ್ ರೂಮ್ ಗೆ ಹೋಗಬೇಕು ಅಂದರೆ ಕಸಿವಿಸಿ ಉಂಟಾದರೂ ಅನಿವಾರ್ಯವಾಗಿ ಹೋಗಲೇ ಬೇಕಾಗುತ್ತದೆ. ಅದು ಸ್ಟಾರ್ ಹೋಟೆಲಿನಂತೆ ಸ್ವಚ್ಛತೆ ಹೊಂದಿರುವ ವಿಮಾನ ನಿಲ್ದಾಣವೇ ಆಗಿರಲಿ ಅಥವಾ ಯಾವುದೋ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣವೇ ಆಗಿರಲಿ. ಕೆಲವರಿಗೆ ಅದು ಬೇಸರದ ಸಂಗತಿ ಕೂಡ ಹೌದು. ಸಾಕಷ್ಟು ಜನರಿಗೆ ಮೂತ್ರ, ಶೌಚದ ಬಗ್ಗೆ ಗೌರವದ ಭಾವನೆ ಖಂಡಿತವಾಗಿ ಇಲ್ಲ. ಹಾಗೂ ಅದೊಂದು ಖುಷಿಯಾಗಿ ಮಾಡಬೇಕಾದ ಕ್ರಿಯೆ ಎನ್ನುವ ಭಾವನೆಯೂ ಕಡಿಮೆಯೇ. ಹೀಗಿರುವಾಗ, ಬೆಂಗಳೂರು ವಿಮಾನ ನಿಲ್ದಾಣದಲ್ಲಿರುವ ಮಹಿಳಾ ಸ್ವಚ್ಛತಾ ಕರ್ಮಿಯೊಬ್ಬರು ವಾಶ್ ರೂಮಿಗೆ ಹೋಗುವ ಮಹಿಳೆಯರಿಗೆ “ಹ್ಯಾಪಿ ಜರ್ನಿ’ ಹೇಳುವ ಮೂಲಕ ಎಲ್ಲರಲ್ಲೂ ಒಂದು ಖುಷಿಯ ಝಲಕ್ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಂತಾರಾಷ್ಟ್ರೀಯ ಪ್ರಯಾಣಿಕರು ಈ ಬಗ್ಗೆ ಖುಷ್ ಆಗಿದ್ದಾರೆ. ಅಷ್ಟೇ ಅಲ್ಲ, ವಾಶ್ ರೂಮಿನ ಅನುಭವ ಹಿತವಾಗಿತ್ತು ಎಂದೂ ಹೇಳಿಕೊಂಡಿದ್ದಾರೆ. ಹೌದು, ಸಾರ್ವಜನಿಕ ಸ್ಥಳಗಳಲ್ಲಿ ತೀರ ವ್ಯವಹಾರಿಕ ಮನಸ್ಥಿತಿಯನ್ನು ಮರೆತು ಎಲ್ಲರನ್ನೂ ಪ್ರೀತಿ, ಗೌರವದಿಂದ ಕಂಡರೆ ಎಷ್ಟೆಲ್ಲ ಉತ್ತಮ ಪರಿಣಾಮ ಉಂಟಾದೀತು ಎನ್ನುವುದಕ್ಕೆ ಇದೊಂದು ಮಾದರಿ ಎನಿಸಿದೆ.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (Bangalore International Airport) ಮೂಲಕ ನಿತ್ಯವೂ ಸಾವಿರಾರು ಮಹಿಳಾ ಪ್ರಯಾಣಿಕರು (Women Travellers) ಪ್ರಯಾಣಿಸುತ್ತಾರೆ. ಅಲ್ಲಿನ ಶೌಚಾಲಯಕ್ಕೆ (Toilet) ಹೋಗುವ ಸಂದರ್ಭ ಬಹುತೇಕರಿಗೆ ಬಂದೇ ಬರುತ್ತದೆ. ಪ್ರಯಾಣಕ್ಕೂ ಮುನ್ನ ಅಥವಾ ಅಲ್ಲಿಂದ ಹೊರಬೀಳುವ ಮೊದಲು ಶೌಚಾಲಯಕ್ಕೆ ಹೋಗುವುದು ಕಿರಿಕಿರಿ ಎನಿಸುತ್ತದೆ. ಅನಿವಾರ್ಯದಿಂದ ಹಣೆ ಸಿಂಡರಿಸಿಕೊಂಡೋ, ಗಡಿಬಿಡಿಯಲ್ಲೋ ಅಲ್ಲಿಗೆ ಹೋಗುವವರೇ ಹೆಚ್ಚು. ಅಂಥವರಿಗೆ ಒಂದು ಕ್ಷಣ ಹಿತವಾಗುವಂತೆ ಅಲ್ಲಿನ ಮಹಿಳಾ ಸ್ವೀಪರ್ (Sweeper) ಒಬ್ಬರು ವಾಶ್ ರೂಮಿಗೆ (Washroom) ಹೋಗುವ ಪ್ರತಿಯೊಬ್ಬರ ಬಳಿಯೂ “ಹ್ಯಾಪಿ ಜರ್ನಿ’ (Happy Journey) ಹೇಳುತ್ತಾರೆ! ಅಮಂಡಾ-ಬೀಯಿಂಗ್ ಅಂಡಾ ಎನ್ನುವ ಪ್ರಯಾಣಿಕರೊಬ್ಬರು ಈ ಕುರಿತು ಟ್ವೀಟ್ ಒಂದನ್ನು ಹಂಚಿಕೊಂಡಿದ್ದಾರೆ. ಅದೀಗ ಸಾಕಷ್ಟು ವೈರಲ್ ಆಗುತ್ತಿದೆ. ಬಹಳಷ್ಟು ಜನ ಈ ಕುರಿತು ಪ್ರತಿಕ್ರಿಯೆ ಕೂಡ ನೀಡಿದ್ದಾರೆ.
ಹ್ಯಾಪಿ ಜರ್ನಿ!
ವಾಶ್ ರೂಮಿಗೆ ಹೋಗುವುದೊಂದು ಜರ್ನಿ. ಹೌದಲ್ಲವೇ? ಅಲ್ಲಿನ ಕೆಲಸ ಕಾರ್ಯಗಳು ಸುಗಮವಾಗಿ ಆದರೆ ಅದರಷ್ಟು ಹಿತ ಬೇರೆ ಇಲ್ಲ. ಹೀಗಾಗಿ, ಅಲ್ಲಿಗೆ ಹೋಗುವ ಮುನ್ನ ವಿಶ್ (Wish\) ಮಾಡುವುದು ಉತ್ತಮ ವಿಚಾರವೇ ಸರಿ. ಅದ್ಯಾರು ಈ ಐಡಿಯಾ ಕ್ರಿಯೇಟ್ ಮಾಡಿದ್ದಾರೋ ಗೊತ್ತಿಲ್ಲ. ಆದರೆ, ಮಹಿಳಾ ಸ್ವೀಪರ್ ಹೇಳುವ “ಹ್ಯಾಪಿ ಜರ್ನಿ’ ಶಬ್ದಕ್ಕೆ ಹಲವರು ಮನ ಸೋತಿದ್ದಾರೆ. “ಸ್ವೀಪರ್ ಶುಭಾಶಯದಿಂದಾಗಿಯೇ ನನ್ನ ವಾಶ್ ರೂಮಿನ ಜರ್ನಿ ಯಾವತ್ತೂ ಸುಖಕರವಾಗಿಯೇ (Happy) ಆಗುತ್ತಿದೆ’ ಎಂದೂ ಅಮಂಡಾ ಹೇಳಿಕೊಂಡಿದ್ದಾರೆ. ಇದಕ್ಕೆ ಬೆಂಗಳೂರು ವಿಮಾನನಿಲ್ದಾಣದ ಟ್ವೀಟ್ ಕಡೆಯಿಂದಲೂ ಪ್ರತಿಕ್ರಿಯೆ ಬಂದಿದ್ದು, “ಈ ಹೊಸತನದ (Initiative) ಸೇವೆಯನ್ನು ಮೆಚ್ಚಿಕೊಂಡಿರುವುದಕ್ಕೆ ಸಂತಸವಾಗಿದೆ’ ಎಂದು ತಿಳಿಸಲಾಗಿದೆ.
ಏನೋ ಖುಷಿ ಮೂಡುವ ಹಾಗೆ...
ಇಂಥದ್ದೊಂದು ವಿಶ್ ಅನ್ನು ಬಹುತೇಕ ಯಾರೂ ನಿರೀಕ್ಷೆ (Expect) ಮಾಡಿರುವುದಿಲ್ಲ. ಸಾಮಾನ್ಯವಾಗಿ ಅಲ್ಲೆಲ್ಲ ಸ್ವೀಪರ್ ಇದ್ದೇ ಇರುತ್ತಾರೆ, ಮುಖ ನೋಡುವುದೂ ಇಲ್ಲ, ನೋಡಿದರೂ ಕೃತಕ ನಗು ನಗುತ್ತಾರೆ. ಪ್ರಯಾಣಿಕರೂ ಅಷ್ಟೆ ಇದೆಲ್ಲ ಸಾಮಾನ್ಯವೆಂಬಂತೆ ತಮ್ಮ ಪಾಡಿಗೆ ಕೆಲಸ ಮುಗಿಸಿಕೊಂಡು ಬರುತ್ತಾರೆ, ಅಲ್ಲಿರುವವರನ್ನು ಗಮನಿಸುವುದೂ ಇಲ್ಲ. ಇದೀಗ, “ಹ್ಯಾಪಿ ಜರ್ನಿ’ ಎನ್ನುವ ವಿಶ್ ಅಲ್ಲಿಗೆ ಹೋಗುವ ಮಹಿಳೆಯರಲ್ಲಿ ಎಷ್ಟು ಬದಲಾವಣೆ ತಂದಿದೆ ಎಂದರೆ, ಎಲ್ಲರೂ ಅದನ್ನು ಸ್ಮರಿಸಿಕೊಳ್ಳುತ್ತಿದ್ದಾರೆ. ಹಲವು ಮಹಿಳಾ ಪ್ರಯಾಣಿಕರು ಈ ಅನುಭವಕ್ಕೆ (Experience) ದನಿಗೂಡಿಸಿದ್ದಾರೆ. “ಪ್ರತಿಯೊಂದು ಬಾರಿ ಬಾತ್ ರೂಮಿಗೆ ಹೋಗುವಾಗಲೂ ಆಕೆ ವಿಶ್ ಮಾಡುತ್ತಾರೆ. ಪರಿಣಾಮವಾಗಿ, ಭಯಂಕರ (Terrible) ದಿನವೊಂದನ್ನು ಸಹಿಸಿಕೊಳ್ಳಲು (Bearable) ಸಾಧ್ಯವಾಗುವಂತೆ ಮಾಡುತ್ತಾರೆ’ ಎಂದು ಹೇಳಿಕೊಂಡಿದ್ದಾರೆ. ನಿಮಗೂ ಈ ಅನುಭವ ಆಗಿದ್ದರೆ ಆ ಸ್ವೀಪರ್ ಗೆ ಥ್ಯಾಂಕ್ಸ್ (Thanks) ಹೇಳಿಬಿಡಿ.