Asianet Suvarna News Asianet Suvarna News

ಶಾಲಾ ಮಕ್ಕಳ ಬ್ಯಾಗ್‌ನಲ್ಲಿ ಕಾಂಡೋಮ್‌, ಗರ್ಭ ನಿರೋಧಕ ಮಾತ್ರೆ ಪತ್ತೆ !

ಬೆಂಗಳೂರು ನಗರದ ಹಲವು ಶಾಲೆಗಳಲ್ಲಿ ಅಧಿಕಾರಿಗಳು ವಿದ್ಯಾರ್ಥಿ-ವಿದ್ಯಾರ್ಥಿಗಳ ಬ್ಯಾಗ್ ಪರಿಶೀಲನೆ ನಡೆಸಿದ ಸಂದರ್ಭ ಶಾಕಿಂಗ್ ವಿಚಾರ ಬಯಲಿಗೆ ಬಂದಿದೆ. ಪರಿಶೀಲನೆಯ ಸಂದರ್ಭದಲ್ಲಿ ಮಕ್ಕಳ ಬ್ಯಾಗ್‌ನಲ್ಲಿ ಕಾಂಡೋಮ್‌ಗಳು, ಗರ್ಭನಿರೋಧಕ ಮಾತ್ರೆಗಳು ಸಿಕ್ಕಿವೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

Surprise School Bag Checks Yield Condoms, Cigarettes In Bengaluru Vin
Author
First Published Nov 30, 2022, 12:33 PM IST

ಬೆಂಗಳೂರು: ನಗರದ ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳ ಬ್ಯಾಗ್ ಪರಿಶೀಲನೆಗೆ ಇಳಿದ ಶಾಲಾ ಶಿಕ್ಷಕರಿಗೆ ಶಾಕ್ ಎದುರಾಗಿದೆ. ಹಲವು ಶಾಲಾ ಮಕ್ಕಳ ಬ್ಯಾಗ್ ಗಳಲ್ಲಿ ಕಾಂಡೋಮ್ ಹಾಗೂ ಗರ್ಭ ನಿರೋಧಕ ಮಾತ್ರೆಗಳು ಪತ್ತೆಯಾಗಿವೆ. ಇದರ ಜೊತೆಗೆ ಸಿಗರೇಟ್, ಲೈಟರ್, ಫೆವಿಕಾಲ್ ಮುಂತಾದ ವಸ್ತುಗಳು ಸಹ ಸಿಕ್ಕಿವೆ. 9 ಮತ್ತು 10ನೇ ತರಗತಿ ವಿದ್ಯಾರ್ಥಿ, ವಿದ್ಯಾರ್ಥಿನಿಯರ (Students) ಬ್ಯಾಗ್ ಗಳಲ್ಲಿ ಕಾಂಡೋಮ್, ಗರ್ಭ ನಿರೋಧಕ‌ ಮಾತ್ರೆ ಪತ್ತೆಯಾಗಿದ್ದು, ಈ ಬಗ್ಗೆ ಎಚ್ಚರವಹಿಸುವಂತೆ ಶಾಲಾ ಆಡಳಿತ ಮಂಡಳಿಗಳು ಪೋಷಕರಿಗೆ (Parents) ಸೂಚನೆ ನೀಡಿದ್ದಾರೆ.

ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳಿ ತರಗತಿಗಳಿಗೆ ಸೆಲ್ ಫೋನ್‌ಗಳನ್ನು ತರುತ್ತಾರೆ ಎಂಬ ದೂರಿನ ಆಧಾರದಲ್ಲಿ ಅಧಿಕಾರಿಗಳು (Officers) ವಿದ್ಯಾರ್ಥಿಗಳ ಬ್ಯಾಗ್‌ಗಳನ್ನು ಪರಿಶೀಲಿಸಲು ನಿರ್ಧರಿಸಿದ್ದರು. ತರಗತಿಯೊಳಗೆ ಸೆಲ್ ಫೋನ್ ಬಳಕೆಯನ್ನು ಪರಿಶೀಲಿಸಲು ನಗರದ ಹಲವಾರು ಶಾಲೆಗಳಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ಕರ್ನಾಟಕದ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳ ಅಸೋಸಿಯೇಟೆಡ್ ಮ್ಯಾನೇಜ್‌ಮೆಂಟ್‌ಗಳು (KAMS) ಸಹ ಶಾಲೆಗಳು ವಿದ್ಯಾರ್ಥಿಗಳ ಬ್ಯಾಗ್‌ಗಳನ್ನು ಪರೀಕ್ಷಿಸಿದ್ದರು. ಈ ಸಂದರ್ಭದಲ್ಲಿ ಸೆಲ್ ಫೋನ್‌ಗಳಲ್ಲದೆ, ಬ್ಯಾಗ್‌ನಲ್ಲಿ ಮೌಖಿಕ ಗರ್ಭನಿರೋಧಕಗಳು, ಲೈಟರ್‌ಗಳು, ಸಿಗರೇಟ್‌ಗಳು, ವೈಟ್‌ನರ್‌ಗಳು ಮತ್ತು 8, 9 ಮತ್ತು 10 ನೇ ತರಗತಿಯ ವಿದ್ಯಾರ್ಥಿಗಳ ಬ್ಯಾಗ್‌ಗಳಲ್ಲಿ ಹೆಚ್ಚುವರಿ ಹಣವನ್ನು ಪತ್ತೆ ಮಾಡಿದರು. 

ಸ್ವಿಗ್ಗಿಯಲ್ಲಿ ಜನರು ಹೆಚ್ಚು ಆರ್ಡರ್‌ ಮಾಡಿರೋದು ಆಹಾರವನ್ನಲ್ಲ, ಇದನ್ನಂತೆ !

ತರಗತಿಯಲ್ಲಿ ವಿದ್ಯಾರ್ಥಿಗಳು ಮೊಬೈಲ್ ಬಳಸುತ್ತಿದ್ದಾರೆ ಎಂಬ ದೂರಿನನ್ವಯ ಪರಿಶೀಲನೆ
ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳ ಬಿಹೇವಿಯರ್ ನಲ್ಲಿ ಬದಲಾವಣೆ ಕಂಡು ಬಂದ ಹಿನ್ನೆಲೆ ಬ್ಯಾಗ್ ಪರಿಶೀಲನೆ ನಡೆಸಲಾಗಿತ್ತು. ಶಾಲೆಯಲ್ಲಿ ಮೊಬೈಲ್ ಬಳಕೆ ನಿಷೇಧವಿದ್ದರೂ ಶಾಲೆಗೆ ಕೆಲ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮೊಬೈಲ್ ಫೋನ್ ತರುತ್ತಿದ್ದರು. ನಗರದ ಕೆಲವು ಶಾಲೆಗಳಲ್ಲಿ 10 ದಿನಗಳ ಕಾಲ ರಜೆ ಘೋಷಿಸಿ ಕೌನ್ಸಿಲಿಂಗ್ ನೀಡುವಂತೆ ಸಲಹೆ ನೀಡಲಾಗಿದೆ.

ಕೆಲವು ಶಾಲೆಗಳು ವಿಶೇಷ ಪೋಷಕ-ಶಿಕ್ಷಕರ ಸಭೆಗಳನ್ನು (Parents meeting) ನಡೆಸಿದವು. 'ಘಟನೆಯ ಬಗ್ಗೆ ತಿಳಿದು ಪೋಷಕರು ಸಹ ಅಷ್ಟೇ ಆಘಾತಕ್ಕೊಳಗಾದರು ಮತ್ತು ಮಕ್ಕಳಲ್ಲಿ ಹಠಾತ್ ವರ್ತನೆಯ ಬದಲಾವಣೆಗಳ ಬಗ್ಗೆ ನಮಗೆ ಹೇಳಿದರು' ಎಂದು ಶಾಲೆಯ ಪ್ರಾಂಶುಪಾಲರು ಹೇಳಿದರು. ಪರಿಸ್ಥಿತಿಯನ್ನು ಎಚ್ಚರಿಕೆಯಿಂದ ನಿಭಾಯಿಸಲು ಶಾಲಾ ಆಡಳಿತ ಮಂಡಳಿ ಪೋಷಕರಿಗೆ ಸೂಚನೆಗಳನ್ನು ನೀಡಿತು.ವಿದ್ಯಾರ್ಥಿಗಳನ್ನು ಅಮಾನತುಗೊಳಿಸುವ ಬದಲು  ಕೌನ್ಸೆಲಿಂಗ್ ಅನ್ನು ಶಿಫಾರಸು ಮಾಡಿತು. 'ನಾವು ಶಾಲೆಗಳಲ್ಲಿ ಕೌನ್ಸೆಲಿಂಗ್ ಅವಧಿಗಳನ್ನು ಹೊಂದಿದ್ದರೂ, ನಾವು ಹೊರಗಿನಿಂದ ಮಕ್ಕಳಿಗೆ ಸಹಾಯ ಪಡೆಯಲು ಪೋಷಕರನ್ನು ಕೇಳಿದ್ದೇವೆ ಮತ್ತು 10 ದಿನಗಳವರೆಗೆ ರಜೆ ನೀಡಿದ್ದೇವೆ' ಎಂದು ಪ್ರಾಂಶುಪಾಲರು ಹೇಳಿದರು.

ಮಕ್ಕಳಿಗಾಗಿ ಸ್ವಿಗ್ಗಿಯಿಂದ ಐಸ್‌ಕ್ರೀಮ್ ಚಿಪ್ಸ್ ಆರ್ಡರ್, ಆದರೆ ಸಿಕ್ಕಿದ್ದು 2 ಪ್ಯಾಕ್ ಕಾಂಡೋಮ್!

ಮಕ್ಕಳ ಬ್ಯಾಗ್ ನಲ್ಲಿ ಗರ್ಭ ನಿರೋಧಕ ಮಾತ್ರೆ ಪತ್ತೆ ವಿಚಾರವಾಗಿ ರುಪ್ಸಾ ಅಧ್ಯಕ್ಷ ಲೋಕೆಶ್ ತಾಳಿಕಟ್ಟೆ ಪ್ರತಿಕ್ರಿಯೆ ನೀಡಿದ್ದಾರೆ. 'ಮಕ್ಕಳು ದಿಕ್ಕು ತಪ್ಪಿ ಸಾಗುತ್ತಿದ್ದಾರೆ. ಮೊಬೈಲ್ ಬಳಕೆಯಿಂದ ಮಕ್ಕಳಲ್ಲಿ ಅನೈತಿಕ ವಿಚಾರಗಳ ಬಗ್ಗೆ ಒಲವು ಹೆಚ್ಚಾಗಿದೆ. ಮಕ್ಕಳಿಗೆ ಕೌನ್ಸಿಲಿಂಗ್ ಅಗತ್ಯ ವಿದೆ. ಪೋಷಕರು ಇದರ ಬಗ್ಗೆ ಗಮನ ವಹಿಸಬೇಕು. ಇಲ್ಲದಿದ್ದರೆ ಮಕ್ಕಳ ಭವಿಷ್ಯ ಹಾಳಾಗುವುದು ಖಂಡಿತ' ಎಂದಿದ್ದಾರೆ.

ಕೊರೊನಾ ನಂತರ ಮಕ್ಕಳ ಕೈಗೆ ಮೊಬೈಲ್​ ಬಂದಿದೆ. ಅದರ ಮೂಲಕ ಕೆಟ್ಟ ಅಶ್ಲೀಲ ವೆಬ್​ಸೈಟ್​​ಗಳ ಪರಿಚಯವಾಗಿರುತ್ತದೆ. ಸಹವಾಸ ದೋಷದಿಂದಲೂ  ಮಕ್ಕಳು ತಪ್ಪು ಹಾದಿ ಹಿಡಿಯುತ್ತಾರೆ. ವಿದ್ಯಾರ್ಥಿಗಳ ಮನಸ್ಸು ಲೈಂಗಿಕತೆ ಕಡೆ ತಿರುಗಿದರೆ ಓದು ಸಾಧ್ಯವಾಗುವುದಿಲ್ಲ. ಪೋಷಕರ ನಿರಂತರ ಗಮನದಿಂದ ಮಾತ್ರ ಮಕ್ಕಳನ್ನು ಕಾಪಾಡಲು ಸಾಧ್ಯ ಎಂದು ಮನೋವೈದ್ಯ ಡಾ.ಜಗದೀಶ್​​ ಹೇಳಿದ್ದಾರೆ.

Follow Us:
Download App:
  • android
  • ios