ರಾಕಿ ಹಬ್ಬ ಸಮೀಪಿಸುತ್ತಿರುವಂತೆಯೇ ಗುಜರಾತ್‌ನ ಸೂರತ್‌ನ ಅಂಗಡಿಯೊಂದು ವಿಶಿಷ್ಟವಾದ ರಾಖಿಗಳೊಂದಿಗೆ ಬಂದಿದೆ. ಈ ರಾಕಿಯ ಬೆಲೆ ಕೇಳಿದರೆ ನೀವು ಬೆಚ್ಚಿ ಬೀಳುವುದು ಮಾತ್ರ ಗ್ಯಾರಂಟಿ.

ಅಣ್ಣ ತಂಗಿಯರ ಹಬ್ಬ ರಕ್ಷಾ ಬಂಧನಕ್ಕೆ ಕೇವಲ ದಿನಗಣನೆ ಅಷ್ಟೇ ಬಾಕಿ ಇದೆ. ಈ ಹಬ್ಬಕ್ಕಾಗಿ ಮಾರುಕಟ್ಟೆಯಲ್ಲಿ ಬಣ್ಣ ಬಣ್ಣದ ತರಹೇವಾರಿ ರಾಕಿಗಳು ಬಂದಿವೆ. ಸಹೋದರ ಮತ್ತು ಸಹೋದರಿಯ ನಡುವಿನ ಬಾಂಧವ್ಯವನ್ನು ಆಚರಿಸುವ ರಕ್ಷಾ ಬಂಧನಕ್ಕೆ ಅಂಗಡಿಗಳು ಮತ್ತು ವ್ಯಾಪಾರಸ್ಥರು ಗ್ರಾಹಕರನ್ನು ಆಕರ್ಷಿಸಲು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಾರೆ. ಈ ಮಧ್ಯೆ ಹಬ್ಬ ಸಮೀಪಿಸುತ್ತಿರುವಂತೆಯೇ ಗುಜರಾತ್‌ನ ಸೂರತ್‌ನ ಅಂಗಡಿಯೊಂದು ವಿಶಿಷ್ಟವಾದ ರಾಖಿಗಳೊಂದಿಗೆ ಬಂದಿದೆ. ಈ ರಾಕಿಯ ಬೆಲೆ ಕೇಳಿದರೆ ನೀವು ಬೆಚ್ಚಿ ಬೀಳುವುದು ಮಾತ್ರ ಗ್ಯಾರಂಟಿ. ಹೌದು ಇಲ್ಲಿ ಬರೋಬರಿ 5 ಲಕ್ಷ ಬೆಲೆ ಬಾಳುವ ಚಿನ್ನದ ರಾಖಿಯನ್ನು ತಯಾರಿಸಲಾಗಿದೆ. ಇಲ್ಲಿರುವ ನೂಲಿನ ರಾಖಿಗಳಿಂದ ಹಿಡಿದು ಚಿನ್ನ, ಬೆಳ್ಳಿ, ಪ್ಲಾಟಿನಂನಿಂದ ಮಾಡಿದ ರಾಖಿಗಳಿಂದ ಹಿಡಿದು ವಜ್ರದಿಂದ ಕೂಡಿದ ರಾಖಿಗಳವರೆಗೆ ಈ ರಾಖಿಗಳ ಸೌಂದರ್ಯ ಮತ್ತು ವಿನ್ಯಾಸವನ್ನು ಜನರು ಕೊಂಡಾಡುತ್ತಿದ್ದಾರೆ. ಅದರಲ್ಲೂ ಈಗ 5 ಲಕ್ಷ ರೂಪಾಯಿ ಮೌಲ್ಯದ ರಾಖಿ ಅತ್ಯಂತ ದುಬಾರಿ ರಾಕಿಯಾಗಿದ್ದು, ಈಗ ಆಕರ್ಷಣೆಯ ಕೇಂದ್ರವಾಗಿದೆ.

ಸದಾ ಜಗಳವಾಡುತ್ತ ಪರಸ್ಪರ ಕಾಲೆಳೆದುಕೊಂಡು ಖುಷಿ ಪಡುವ ಅಣ್ಣ ತಂಗಿಯರ ಹಬ್ಬ ರಾಕಿ. ಎಷ್ಟು ಜಗಳವಾಡುತ್ತಾರೋ ಅಷ್ಟೇ ಪ್ರೀತಿ ತೋರುವ ಸಂಬಂಧ ಇದು. ಜೊತೆಯಲಿರುವಾಗ ಸದಾ ಜಗಳವಾಡುವ ಅಣ್ಣ ತಂಗಿ, ತಂಗಿಯರು ಅಥವಾ ಅಕ್ಕಂದಿರು ಮದುವೆಯಾಗಿ ಗಂಡನ ಮನೆ ಸೇರುತ್ತಿದ್ದಂತೆ ಹೆಣ್ಣು ಕರುಳಿನಂತೆ ಭಾವುಕರಾಗಿ ಅಳಲು ಶುರು ಮಾಡುತ್ತಾರೆ. ಇಂತಹ ಸಹೋದರ ಸಹೋದರಿಯರ ಸಂಬಂಧವನ್ನು ಸಾರುವ ಹಬ್ಬಕ್ಕೆ ಮದುವೆ ಮಾಡಿಕೊಟ್ಟ ಹೆಣ್ಣು ಮಕ್ಕಳು ತವರು ಸೇರುತ್ತಾರೆ. ತಮ್ಮ ಸಹೋದರನೊಂದಿಗೆ ಸಂಭ್ರಮದಿಂದ ಹಬ್ಬ ಆಚರಿಸುತ್ತಾರೆ. 

Rakshabandhan : ರಾಶಿಗನುಗುಣವಾಗಿ ಸಹೋದರಿಗೆ ನೀಡಿ ಈ ಗಿಫ್ಟ್

ಹಿಂದೆಲ್ಲಾ ಸಹೋದರಿಯರು ಮಾತ್ರ ತಮ್ಮ ಸಹೋದರರ ಮಣಿಕಟ್ಟಿನ ಮೇಲೆ ರೇಷ್ಮೆ ದಾರದಿಂದ ಮಾಡಿದ ರಾಖಿಯನ್ನು ಕಟ್ಟುತ್ತಿದ್ದರು, ಆದರೂ ಹಳ್ಳಿಗಾಡಿನಲ್ಲಿ ಈ ಟ್ರೆಂಡ್ ಹೀಗೆ ಮುಂದುವರೆದಿದೆ. ಆದರೆ ನಗರಗಳಲ್ಲಿ ಮಾತ್ರ ಕಾಲಕ್ಕೆ ತಕ್ಕಂತೆ ಕೋಲ ಎಂಬಂತೆ ರಾಖಿಯ ವಿನ್ಯಾಸಗಳಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿವೆ. ನಗರ ಪ್ರದೇಶಗಳಲ್ಲಿ ಬದಲಾಗುತ್ತಿರುವ ಕಾಲವು ರಾಖಿಗಳ ವ್ಯಾಖ್ಯಾನವನ್ನು ಬದಲಾಯಿಸಿದೆ.

ಹೀಗಾಗಿಯೇ ಆಭರಣ ಮಳಿಗೆಯ ಮಾಲೀಕ ದೀಪಕ್ ಭಾಯ್ ಚೋಕ್ಸಿ ಅವರು ಈ ಚಿನ್ನದ ರಕ್ಷೆಯನ್ನು ನಿರ್ಮಿಸಿದ್ದಾರೆ. ಇವರು ಸುದ್ದಿ ಸಂಸ್ಥೆ ಎನ್‌ಐಗೆ ನೀಡಿದ ಹೇಳಿಕೆಯಲ್ಲಿ ನಾವು ಸಿದ್ಧಪಡಿಸಿದ ರಾಖಿಗಳನ್ನು ರಕ್ಷಾಬಂಧನದ ನಂತರ ಆಭರಣವಾಗಿಯೂ ಧರಿಸಬಹುದು. ನಾವು ಪ್ರತಿ ವರ್ಷವೂ ಈ ಪವಿತ್ರ ಹಬ್ಬವನ್ನು ಹೊಸ ರೀತಿಯಲ್ಲಿ ಆಚರಿಸಲು ಪ್ರಯತ್ನಿಸುತ್ತೇವೆ ಎಂದು ಹೇಳಿದರು. ಸೂರತ್‌ನಲ್ಲಿರುವ ಈ ಆಭರಣ ಮಳಿಗೆಯಲ್ಲಿ ಚಿನ್ನ, ಬೆಳ್ಳಿ ಮತ್ತು ಪ್ಲಾಟಿನಂನಿಂದ ತಯಾರಿಸಿದ ವಿವಿಧ ರೀತಿಯ ರಾಖಿಗಳಿವೆ. ಈ ಶೋರೂಂನಲ್ಲಿ ರಕ್ಷಾಬಂಧನ ಹಬ್ಬಕ್ಕಾಗಿ 400 ರೂಪಾಯಿಯಿಂದ ಹಿಡಿದು 5 ಲಕ್ಷದವರೆಗಿನ ರಾಖಿಗಳನ್ನು ಸಿದ್ಧಪಡಿಸಲಾಗಿದೆ ಎಂದು ಸ್ಥಳೀಯ ಗ್ರಾಹಕ ಸಿಮ್ರಾನ್ ಸಿಂಗ್ ಹೇಳಿದರು. 

ರಕ್ಷಾ ಬಂಧನ ಹಬ್ಬಕ್ಕೆ ಪ್ರಧಾನಿ ಮೋದಿಗೆ ರಾಖಿ ಕಳುಹಿಸಿದ ಪಾಕಿಸ್ತಾನಿ ಸಹೋದರಿ, ಜೊತೆಗೊಂದು ಪತ್ರ!

ರಕ್ಷಾಬಂಧನ ಹಬ್ಬವು ಸಹೋದರ ಸಹೋದರಿಯರ ನಡುವಿನ ಸುಂದರ ಸಂಬಂಧವನ್ನು ತೋರಿಸುವ ಪ್ರಮುಖ ಹಬ್ಬವಾಗಿದೆ. ರಕ್ಷಾಬಂಧನದ ದಿನದಂದು, ಒಬ್ಬ ಸಹೋದರಿ ತನ್ನ ಸಹೋದರನ ಮಣಿಕಟ್ಟಿನ ಮೇಲೆ ರಾಖಿಯನ್ನು ಕಟ್ಟುತ್ತಾಳೆ ಮತ್ತು ತನ್ನ ಸಹೋದರನಿಂದ ರಕ್ಷಣೆಯ ಭರವಸೆಯನ್ನು ತೆಗೆದುಕೊಳ್ಳುತ್ತಾಳೆ ಅದಕ್ಕೆ ಪ್ರತಿಯಾಗಿ, ಸಹೋದರನು ಭರವಸೆ ನೀಡುವ ಮೂಲಕ ಸ್ವಲ್ಪ ಉಡುಗೊರೆಯನ್ನು ನೀಡುತ್ತಾನೆ.