Asianet Suvarna News Asianet Suvarna News

Sumi Nagas : ಜೇನು ಗೂಡಿನಿಂದ ಹೊರ ಬರದೆ ಹೋದ್ರೆ ಮಳೆ ಬರುತ್ತೆ..! ಕೃಷಿಗೆ ನೆರವಾಗಿದೆ ಸುಮಿ ನಾಗಾ ಜನಾಂಗದ ಪ್ರಕೃತಿ ಜ್ಞಾನ

ಪರಿಸರದಲ್ಲಾಗುವ ಸಣ್ಣ ಸಣ್ಣ ಬದಲಾವಣೆಗಳು ಹವಾಮಾನದಲ್ಲಾಗುವ ದೊಡ್ಡ ಬದಲಾವಣೆಗಳನ್ನು ಸೂಚಿಸುತ್ತವೆ. ಹಿರಿಯರು, ಪ್ರಕೃತಿ ಜೊತೆ ಸುಮಧುರ ಸಂಬಂಧ ಹೊಂದಿದ್ದರು. ಕಾಲ ಬದಲಾದಂತೆ ಜನರು ಪ್ರಕೃತಿಯಿಂದ ದೂರವಾಗ್ತಿದ್ದಾರೆ. ನಾಗಾಲ್ಯಾಂಡ್ ನ ಸುಮಿ ನಾಗಾ ಸಮುದಾಯ ಈಗ್ಲೂ ಪ್ರಕೃತಿ ಜೊತೆ ಸುಂದರ ಸಂಬಂಧ ಹೊಂದಿದೆ. ಅವರ ಕೆಲವೊಂದು ನೈಸರ್ಗಿಕ ಸೂಚಕಗಳ ವಿವರ ಇಲ್ಲಿದೆ. 

Sumi Nagas traditional knowledge about nature helps them in agriculture
Author
Bangalore, First Published Dec 7, 2021, 5:08 PM IST

ಬಿರು ಬಿಸಿಲಿನಲ್ಲಿ,ಬಿಸಿಲು ಮೈಗೆ ತಾಗದಿರಲಿ ಎಂದು ನಾವು ಛತ್ರಿ ಹಿಡಿಯುವುದುಂಟು. ಆದ್ರೆ ನಾಗಾಲ್ಯಾಂಡ್ (Nagaland) ನ ಜುನ್ಹೆಬೊಟೊ ಜಿಲ್ಲೆಯ ಶಿಯಾಪು ಗ್ರಾಮದ ನಿವಾಸಿಗಳು,ಉತ್ತಮ ಬಟ್ಟೆ ಧರಿಸಿ,ಕೈನಲ್ಲಿ ಛತ್ರಿ ಹಿಡಿದು ಭಾನುವಾರ ಚರ್ಚ್ ಗೆ ಹೋಗುತ್ತಾರೆ. ತಿಳಿ ನೀಲಿಯಾಗಿರುವ ಆಕಾಶವೇ ಮಳೆ ಮುನ್ಸೂಚನೆ ನೀಡುತ್ತಿಲ್ಲ. ಹಾಗಿರುವಾಗ ಮಳೆ ಹೇಗೆ ಬರಲು ಸಾಧ್ಯ ಎಂದು ನೀವು ಭಾವಿಸಿದ್ರೆ,ಅವರು ನೀಡುವ ಕಾರಣ ಅಚ್ಚರಿ ಹುಟ್ಟಿಸುತ್ತದೆ.

ಅವರ ಪ್ರಕಾರ ಜೇನುನೊಣಗಳು ಜೇನು ಗೂಡಿನಿಂದ ಹೊರಗೆ ಬಂದಿಲ್ಲವಂತೆ. ಅವು ಜೇನುಗೂಡಿನಿಂದ ಹೊರಗೆ ಬಂದಿಲ್ಲವೆಂದ್ರೆ ಮಳೆ ಬರಲಿದೆ ಎಂದರ್ಥವಂತೆ. ಇದು ಸುಮಿ ನಾಗಾ ಜನಾಂಗದ ಜ್ಞಾನದ ಒಂದು ತುಣುಕಷ್ಟೆ. ಈ ಸಾಂಪ್ರದಾಯಿಕ ಜ್ಞಾನದ ಬಗ್ಗೆ ಕಡಿಮೆ ಅಥವಾ ಯಾವುದೇ ದಾಖಲೆಗಳಿಲ್ಲ.ಆದರೆ ನಿಸರ್ಗ ಹಾಗೂ ಅವರ ಮಧ್ಯೆಯಿರುವ ಸಂಬಂಧಕ್ಕೆ ಕೆಲವೊಂದು ಉದಾಹರಣೆಗಳು ಇಲ್ಲಿವೆ.

ಸಾಕಿರುವ ಜೇನುನೊಣಗಳ ಜೊತೆಗೆ, ಸುಮಿ ಸಮುದಾಯವು ಅನೇಕ ಸುಳಿವುಗಳಿಗಾಗಿ ಹುಲ್ಲಿನ ಬಿದಿರಿನ ಆಸರೆ ಪಡೆಯುತ್ತಾರೆ. ಫೈಲೋಸ್ಟಾಕಿಸ್ ಜಾತಿಯ ಬಿದಿರಿನ ಹೊಸ ಚಿಗುರುಗಳು, ಮೂಲ ಸಸ್ಯಕ್ಕಿಂತ ಎತ್ತರಕ್ಕೆ ಬೆಳೆದರೆ, ಆ ವರ್ಷ ಮಾನ್ಸೂನ್ ಋತುವಿನಲ್ಲಿ ಭಾರೀ ಮಳೆಯನ್ನು ನಿರೀಕ್ಷಿಸಬಹುದು.ಅದು ಕಡಿಮೆ ಇದ್ದರೆ, ಕಡಿಮೆ ಮಳೆಯಾಗುತ್ತದೆ ಎಂದು ಅವರು ಅರ್ಥೈಸುತ್ತಾರೆ. ಅದೇ ರೀತಿ, ಬಿದುರಿನ ಒಂದು ಜಾತಿಯಾದ ಬಂಬುಸಾ ಪಲ್ಲಿಡಾದಲ್ಲಿ ಹೂ ಬಿಟ್ಟರೆ ಕ್ಷಾಮದ ಸೂಚನೆಯಾಗಿದೆ. ಬಂಬುಸಾ ಪಲ್ಲಿಡಾದಲ್ಲಿ ಹೂ ಬಿಟ್ಟು,ಕೆಟ್ಟ ವಾಸನೆ ಬರುತ್ತಿರುವುದನ್ನು ಗಮನಿಸಿ ಸುಮಿ ನಾಗಾ,1962ರಲ್ಲಿ ಮೊಕೊಕ್‌ಚುಂಗ್ ಜಿಲ್ಲೆಯಲ್ಲಿ ಬರ ಬರಲಿದೆ ಎಂದು ಹೇಳಿದ್ದರು.

Women Special: 7 ಎಕರೆ ಜಮೀನಿನಲ್ಲಿ ಕೃಷಿ ಮಾಡಿ ಸೈ ಎನಿಸಿಕೊಂಡ ಶಿಕ್ಷಕಿ, ಭೇಷ್!

ಇದಲ್ಲದೆ 2020ರಲ್ಲಿ ಸಂಭವಿಸಿದ ಭೂಕಂಪನದ ಬಗ್ಗೆಯೂ ಮೊದಲೇ ಊಹಿಸಿದ್ದರು. ನಾಯಿ ಬೊಗಳುವ  ಶಬ್ಧ ಹಾಗೂ ಬಿಲದಿಂದ ಹೊರಬಂದ ಇಲಿಗಳು ಈ ಪ್ರಕೃತಿಯಲ್ಲಾಗುವ ಬದಲಾವಣೆಯ ಮುನ್ಸೂಚನೆ ನೀಡಿದ್ದವಂತೆ.
ಸುಮಿ ನಾಗಾ ಸಮುದಾಯವು ಪ್ರಧಾನವಾಗಿ ಕೃಷಿಯನ್ನ ಆಶ್ರಯಿಸಿವೆ. ಆಹಾರ ಮತ್ತು ಜೀವನೋಪಾಯಕ್ಕಾಗಿ ಅರಣ್ಯಗಳ ಮೇಲೆ ಅವಲಂಬಿತವಾಗಿವೆ. ಅವರ ಅನೇಕ ಸೂಚಕಗಳು, ಕೃಷಿ ಪದ್ಧತಿಗಳನ್ನು ಸುಗಮಗೊಳಿಸುತ್ತವೆ. ಕಾಲೋಚಿತ ಬದಲಾವಣೆಗಳನ್ನು ಊಹಿಸುತ್ತವೆ.

ಉದಾಹರಣೆಗೆ, ಹಿಪ್ಪುನೇರಳೆ ಗಿಡದಲ್ಲಿ ಶುರುವಾಗುವ ಮೊಗ್ಗು ವಸಂತವನ್ನು ಸೂಚಿಸುತ್ತದೆ.ಅವುಗಳ ಕೊಯ್ಲು ಎಂದರೆ ಬೇಸಿಗೆ. ಚಳಿಗಾಲವನ್ನು ಊಹಿಸಲು,ಸುಮಿ ಬುಡಕಟ್ಟು, ವಲಸೆ ಹಕ್ಕಿಗಳನ್ನು ಬಳಸುತ್ತದೆ.
ಪೂರ್ವ ಏಷ್ಯಾದಿಂದ ವ್ಯಾಗ್ ಟೈಲ್ (Motacilla)  ಮತ್ತು ಅಮುರ್ ಫಾಲ್ಕಾನ್‌ಗಳು (Falco amurensis) ಸೈಬೀರಿಯಾದಿಂದ ನಾಗಾಲ್ಯಾಂಡ್‌ಗೆ ಪ್ರತಿ ವರ್ಷ ಅಕ್ಟೋಬರ್‌ನಲ್ಲಿ ಆಫ್ರಿಕಾದ ಮಾರ್ಗವಾಗಿ ಬರುತ್ತವೆ. ಆಗ ಚಳಿಗಾಲ ಹತ್ತಿರ ಬಂತು ಎಂದು ಅವರು ಅರ್ಥೈಸಿಕೊಳ್ಳುತ್ತಾರೆ. 

ಮೀನಿನ ಹೊಟ್ಟೆಯ ಮೇಲೆ ಅಸಹಜವಾಗಿ ದಪ್ಪ ಚರ್ಮ ಕಾಣಿಸಿದರೆ ಸಾಮಾನ್ಯಕ್ಕಿಂತ ಚಳಿ ಹೆಚ್ಚು ಎಂದು ಅಂದಾಜಿಸಲಾಗುತ್ತದೆ.  
ಕೋಗಿಲೆಯ ಹಾಡು ರೈತರಿಗೆ ಬಿತ್ತನೆ ಮಾಡಲು ಸೂಚಿಸುತ್ತದೆ. ಬೆಂಕಿ ಹಚ್ಚುವಾಗ ಹೊಗೆ ಅನಿಯಂತ್ರಿತವಾಗಿ ಏರಿದರೆ ಹವಾಮಾನ ಶುದ್ಧವಾಗಿದೆ ಎಂದರ್ಥ. ರಾತ್ರಿ ಆಕಾಶದಲ್ಲಿ ನಕ್ಷತ್ರಗಳು ಕಾಣಿಸಿದರೆ ಶುಷ್ಕ ಹವಾಮಾನದ ಸೂಚಕ.  
ಚಂದ್ರನ ಅರ್ಧಚಂದ್ರಾಕಾರವು ಕೆಳಮುಖವಾಗಿದ್ದರೆ,ಅದರ ಸುತ್ತಲೂ ಪ್ರಭಾವಲಯವನ್ನು ಹೊಂದಿದ್ದರೆ ಮರುದಿನ ಮಳೆಯಾಗುತ್ತದೆ ಎಂದು ಅಂದಾಜಿಸುತ್ತಾರೆ.

ಮರಗಳ ಮೇಲೆ ವಾಸಿಸುವ, ಮರ ಕೊರೆಯುವ ಒಂದು ವಿಧದ ಜೀರುಂಡೆ, ಸಸ್ಯದ ಮೇಲ್ಭಾಗದಲ್ಲಿ ನೆಲೆಸಿದರೆ ಮಳೆಯಾಗುತ್ತದೆ. ಕೆಂಪು ಇರುವೆಗಳು ತಮ್ಮ ಗೂಡುಗಳನ್ನು ತೆರೆದುಕೊಂಡು ಮುಖಕ್ಕೆ ಮುಖ ಮಾಡಿದರೆ,ಮಳೆಯಾಗುವುದಿಲ್ಲ ಎಂದರ್ಥ. ಸುಮಿ ನಾಗಾ ಬುಡಕಟ್ಟು ಜನಾಂಗದವರು ಸಾಕಿದ ಕೋಳಿಗಳು  ತಮ್ಮ ಗೂಡು ತೊರೆದರೆ, ದಿನವಿಡೀ ಆರ್ದ್ರ ವಾತಾವರಣ ಇರುತ್ತದೆ ಎಂದು ನಂಬುತ್ತಾರೆ.
ಮೀನುಗಳು ಸಹ ಮಳೆಯನ್ನು ಗ್ರಹಿಸುತ್ತವೆ. ಕೊಳದ ಮೇಲ್ಮೈಯಲ್ಲಿ  ಮೀನುಗಳು ತೇಲುತ್ತಿದ್ದರೆ ಮಳೆ ಬರಲಿದೆ ಎಂಬ ಸೂಚನೆ.  

104ನೇ ವಯಸ್ಸಿಗೆ 100 ರಲ್ಲಿ 84 ಅಂಕ ಗಳಿಸಿ ನಗು ಚೆಲ್ಲಿದ ಕುಟ್ಟಿಯಮ್ಮ!

ಈ ಸಮುದಾಯದ ಹಿರಿಯರು ಅಪಾರ ಜ್ಞಾನವನ್ನು ಹೊಂದಿದ್ದರು. ಆದರೆ ಅದನ್ನು ಎಲ್ಲೂ ಬರೆದು,ಸಂಗ್ರಹಿಸಿಡಲಾಗಿಲ್ಲ. ಯುವಕರು ಶಿಕ್ಷಣ,ಉದ್ಯೋಗಕ್ಕೆ ನಗರಗಳಿಗೆ ಬರ್ತಿರುವ ಕಾರಣ ಈ ಪ್ರಕೃತಿ ಕೌಶಲ್ಯ ಮರೆಯಾಗುತ್ತಿದೆ.

Follow Us:
Download App:
  • android
  • ios