Interesting News: ನಾಯಿ ಜೊತೆ ಫೆಸಿಫಿಕ್ ಸಮುದ್ರದಲ್ಲಿ ಮೂರು ತಿಂಗಳು ಕಳೆದವನ ಕಥೆ

ಸಮುದ್ರದಲ್ಲಿ ಪ್ರಯಾಣಿಸುವಾಗ ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಯಾವಾಗ ಆಪತ್ತು ಬರುತ್ತೆ ಎನ್ನಲು ಸಾಧ್ಯವಿಲ್ಲ. ಅದ್ರಲ್ಲೂ ಒಂಟಿ ಪ್ರಯಾಣ ಚಾಲೆಂಜಿಂಗ್. ಸಮಸ್ಯೆ ಬಂದಾಗ ಅದನ್ನು ಎದುರಿಸುವುದು ತಿಳಿದಿದ್ರೆ ಮಾತ್ರ ಬದುಕಿ ದಡ ಸೇರಲು ಸಾಧ್ಯ. ಇದಕ್ಕೆ ಟಿಮ್ ಉತ್ತಮ ನಿದರ್ಶನ.
 

Stranded Australian Sailor And Dog Rescued From Pacific Ocean After Three Months roo

ಲೈಫ್ ಆಫ್ ಪಿ ಚಿತ್ರವನ್ನು ನೀವು ನೋಡಿರಬಹುದು. ಸಮುದ್ರದಲ್ಲಿ ಹುಲಿ ಜೊತೆ ಸಿಕ್ಕಿಬೀಳುವ ಹುಡುಗನ ಕಥೆಯಿದು. ಸಮುದ್ರದಲ್ಲಿ ಬರುವ ಎಂಥೆಂಥ ಕಷ್ಟಗಳನ್ನು ಆತ ಎದುರಿಸಿ ಬರ್ತಾನೆ. ಮೀನು ತಿಂದು ಹೊಟ್ಟೆ ತುಂಬಿಸಿಕೊಳ್ತಾನೆ. ಇದೇ ಕಥೆ ನೆನಪಿಸುವ ಘಟನೆಯೊಂದು ನೈಜವಾಗಿ ನಡೆದಿದೆ. ಇಲ್ಲಿ ಹುಲಿ ಬದಲು ಆತನ ಜೊತೆಗಿರೋದು ನಾಯಿ. 

ಆಸ್ಟ್ರೇಲಿಯಾ (Australia) ದ ನಾವಿಕ ಮತ್ತು ಆತನ ನಾಯಿ ಇಬ್ಬರೂ ಸದ್ಯ ಸುದ್ದಿಯಲ್ಲಿದ್ದಾರೆ. ಇಬ್ಬರೂ ಮೂರು ತಿಂಗಳಿಗೂ ಹೆಚ್ಚು ಕಾಲ ಪೆಸಿಫಿಕ್ (Pacific) ಸಾಗರದಲ್ಲಿ ಸಿಲುಕಿಕೊಂಡಿದ್ದರು. ಅದೃಷ್ಟವಶಾತ್ ಇಬ್ಬರೂ ಜೀವಂತವಾಗಿ ಹಿಂತಿರುಗಿದ್ದಾರೆ.  ನಾವಿಕ ಹಾಗೂ ನಾಯಿಯಿದ್ದ ದೋಣಿ (Boat) ಚಂಡಮಾರುತದಿಂದ ನಾಶವಾಗಿತ್ತು. ದೋಣಿಯ ಎಲೆಕ್ಟ್ರಾನಿಕ್ (Electronic) ಸಂವಹನ ವ್ಯವಸ್ಥೆಯು ವಿಫಲವಾಯ್ತು. ಮೂರು ತಿಂಗಳುಗಳ ಕಾಲ ಪೆಸಿಫಿಕ್ ಸಾಗರದಲ್ಲಿದ್ದ ಇವರು ಸಮುದ್ರದ ಮೀನನ್ನು ತಿನ್ನುತ್ತಿದ್ದರು. ಮಳೆ ನೀರನ್ನೇ ಕುಡಿಯುತ್ತಿದ್ದರು. ಟಿಮ್ ಮತ್ತು ಆತನ ನಾಯಿ ಬೇಲಾ ಜೀವ ಉಳಿಸಿಕೊಳ್ಳಲು ಹರಸಾಹಸಪಟ್ಟಿದ್ದರು.  ರಕ್ಷಣಾ ತಂಡದವರ ಕೈಗೆ ಸಿಕ್ಕ ಟಿಮ್ ಬಟ್ಟೆ ಕೊಳಕಾಗಿತ್ತು, ಗಡ್ಡ ಬಂದಿದ್ದು ಬಿಟ್ಟರೆ ಮೂರು ತಿಂಗಳು ಸಮುದ್ರದಲ್ಲಿದ್ದರೂ ಟಿಮ್ ಬಲ ಕಡಿಮೆಯಾಗಿರಲಿಲ್ಲ.

ನದಿಗೆ ಹಾರಿ ಮಹಿಳೆ ಆತ್ಮಹತ್ಯೆ, ಆಕೆ ಮರಳಿ ಬರುತ್ತಾಳೆಂದು ದಿನವಿಡೀ ಚಪ್ಪಲಿ ಬಳಿ ಕಾದು ಕುಳಿತ ಸಾಕುನಾಯಿ

ಘಟನೆ ನಡೆದಿದ್ದು ಯಾವಾಗ?: 51 ವರ್ಷದ ಟಿಮ್ ಶಾಡಾಕ್ ಆಸ್ಟ್ರೇಲಿಯಾದ ಸಿಡ್ನಿ ನಿವಾಸಿ. ಅವರು ಏಪ್ರಿಲ್ ತಿಂಗಳಲ್ಲಿ ಮೆಕ್ಸಿಕೋದ  ಲಾ ಪಾಜ್ ಎಂಬ ನಗರದಿಂದ ತಮ್ಮ ಸಾಗರ ಪ್ರಯಾಣವನ್ನು ಪ್ರಾರಂಭಿಸಿದರು. ಅವರ ನಾಯಿ ಬೆಲ್ಲಾ ಕೂಡ ಟಿಮ್ ಜೊತೆಯಲ್ಲಿತ್ತು. ಟಿಮ್ ತನ್ನ ನಾಯಿಯೊಂದಿಗೆ ಫ್ರೆಂಚ್ ಪಾಲಿನೇಷ್ಯಾಕ್ಕೆ ಹೋಗಲು ಬಯಸಿದ್ದರು. ಫ್ರೆಂಚ್ ಪಾಲಿನೇಷ್ಯಾವು ಫ್ರಾನ್ಸ್ ಅಡಿಯಲ್ಲಿ ಒಂದು ಸಾಗರ ಪ್ರದೇಶವಾಗಿದೆ. ಅದರಲ್ಲಿ ಅನೇಕ ದ್ವೀಪಗಳಿವೆ. ಲಾ ಪಾಜ್ ನಿಂದ ಪಾಲಿನೇಷ್ಯಾದವರೆಗೆ ಟಿಮ್  ಸುಮಾರು 6 ಸಾವಿರ ಕಿಲೋಮೀಟರ್  ಪ್ರಯಾಣ ಬೆಳೆಸಬೇಕಿತ್ತು. ಇದಕ್ಕೆ ಟಿಮ್ ಎಲ್ಲ ವ್ಯವಸ್ಥೆ ಮಾಡಿದ್ದರು. ಅವನ ಬಳಿ ಕ್ಯಾಟಮರನ್ ದೋಣಿ ಇತ್ತು. ಆದ್ರೆ ಸಮುದ್ರಯಾನ ಶುರು ಮಾಡಿದ ಕೆಲವೇ ವಾರಗಳ ನಂತರ ಚಂಡಮಾರುತದಿಂದಾಗಿ ದೋಣಿ ಹಾಳಾಯ್ತು.  ಆಗ ಟೀಮ್ ಪೆಸಿಫಿಕ್ ಮಹಾಸಾಗರದ ಉತ್ತರ ಭಾಗದಲ್ಲಿ ಸಿಲುಕಿಕೊಂಡರು. 

ಟಿಮ್ ಹೇಗೆ ಬದುಕುಳಿದರು? :  ಜುಲೈ 12 ರಂದು ಕಣ್ಗಾವಲು ಹೆಲಿಕಾಪ್ಟರ್ ಸಮುದ್ರದಲ್ಲಿ ಟಿಮ್‌ನ ಹಾನಿಗೊಳಗಾದ ದೋಣಿಯನ್ನು ಗುರುತಿಸಿತ್ತು. ದೊಡ್ಡ ಮೀನುಗಾರಿಕಾ ದೋಣಿ ಕಳುಹಿಸುವ ಮೂಲಕ  ಟಿಮ್ ಮತ್ತು ಅವರ ನಾಯಿಯನ್ನು ರಕ್ಷಿಸಲಾಗಿದೆ. 

ಮಕ್ಕಳ ಮೊಬೈಲ್ ಅಡಿಕ್ಷನ್ ಬಿಡಿಸಲೂ ಬೆಸ್ಟ್ ಮದ್ದು ಈ Sleep Talk, ಏನಿದು ಈ ಸಿಂಪಲ್ ಟೆಕ್ನಿಕ್?

ಟಿಮ್ ಇಷ್ಟು ದಿನ ಬದುಕಿದ್ದು ಹೇಗೆ? : ಟಿಮ್  ರಕ್ಷಣೆ ಮಾಡಿದ ನಂತ್ರ ಅವರ ಪರೀಕ್ಷೆ ಮಾಡಲಾಗಿದೆ. ಯಾವುದೇ ಆರೋಗ್ಯ ಸಮಸ್ಯೆ ಅವರನ್ನು ಕಾಡಿಲ್ಲ. ಅವರು ಸಾಮಾನ್ಯವಾಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ವೈದ್ಯರ ಪ್ರಕಾರ, ಅವರ ಹೃದಯ ಬಡಿತ, ರಕ್ತದೊತ್ತಡ ಇತ್ಯಾದಿಗಳು ಸಾಮಾನ್ಯವಾಗಿವೆ. ಟಿಮ್ ತೂಕ ಮಾತ್ರ ಇಳಿದಿದೆ. ಮೂರು ತಿಂಗಳಲ್ಲಿ ಟೀಮ್ ಗಡ್ಡ ಸಾಕಷ್ಟು ಬೆಳೆದಿದೆ. ಮೀನು ಹಿಡಿಯುವುದು ಹೇಗೆ, ಬದುಕುವುದು ಹೇಗೆ ಎಂಬುದನ್ನು ತಿಳಿದಿದ್ದ ಟಿಮ್, ಸಮುದ್ರದಲ್ಲಿ ಅಗ್ನಿಪರೀಕ್ಷೆ ಎದುರಿಸಿದ್ದೇನೆ ಎನ್ನುತ್ತಾರೆ. ಸಮುದ್ರದಲ್ಲಿ ಬಿಸಿಲು ಹೆಚ್ಚಿದ್ದಾಗ ಟಿಮ್ ತನ್ನ ನಾಯಿ ಜೊತೆ ದೋಣಿ ಕೆಳಭಾಗಕ್ಕೆ ಹೋಗ್ತಿದ್ದರಂತೆ. ಸಮುದ್ರದಲ್ಲಿಯೇ ಬಹಳ ದಿನ ಒಂಟಿಯಾಗಿ ಕಳೆದ ಕಾರಣ ನನಗೆ ಉತ್ತಮ ಆಹಾರ ಹಾಗೂ ಸಾಕಷ್ಟು ನಿದ್ರೆಯ ಅವಶ್ಯಕತೆಯಿದೆ ಎಂದು ಟಿಮ್ ಹೇಳಿದ್ದಾರೆ. ಟಿಮ್ ಗೆ ಸದ್ಯ ಅಗತ್ಯವಿರುವ ಚಿಕಿತ್ಸೆ ನಡೆಯುತ್ತಿದ್ದು, ಮೆಕ್ಸಿಕೊಕ್ಕೆ ಅವರು ಶೀಘ್ರವೇ ಪ್ರಯಾಣ ಬೆಳೆಸಲಿದ್ದಾರೆ. 
 

Latest Videos
Follow Us:
Download App:
  • android
  • ios