ಮಕ್ಕಳ ಮೊಬೈಲ್ ಅಡಿಕ್ಷನ್ ಬಿಡಿಸಲೂ ಬೆಸ್ಟ್ ಮದ್ದು ಈ Sleep Talk, ಏನಿದು ಈ ಸಿಂಪಲ್ ಟೆಕ್ನಿಕ್?

ಮಲಗಿರುವ ಮಕ್ಕಳ ಮುಂದೆ ಮಾತನಾಡಿದ್ರೆ ಏನು ಗೊತ್ತಾಗುತ್ತೆ ಅಂತಾ ನೀವು ಪ್ರಶ್ನೆ ಮಾಡ್ಬಹುದು. ನಾಲ್ಕೈದು ವಾರ ಒಂದೇ ಮಾತನ್ನು ಮಕ್ಕಳು ಮಲಗಿರುವಾಗ ಹೇಳಿ ನೋಡಿ. ಸಿಗುವ ಪರಿಣಾಮ ನಿಮಗೆ ಅಚ್ಚರಿತರುತ್ತೆ. 
 

Affirmative Sleep Talk Help Children Get Over Their Behavioral Issues roo

ಮಕ್ಕಳ ಪಾಲನೆ ಈಗಿನ ದಿನಗಳಲ್ಲಿ ಸುಲಭವಲ್ಲ. ಮಕ್ಕಳಿಗೆ ನೋವಾಗದಂತೆ ಅವರನ್ನು ತಿದ್ದುವ ಕೆಲಸ ಈಗ ಆಗ್ಬೇಕಿದೆ. ಪಾಲಕರು ಒಮ್ಮೆ ಬೈದ್ರೂ ನೊಂದುಕೊಳ್ಳುವ ಮಕ್ಕಳು ಆತ್ಮಹತ್ಯೆಯಂತಹ ಕೆಲಸಕ್ಕೆ ಕೈ ಹಾಕ್ತಾರೆ. ಬಾಲ್ಯದಿಂದಲೂ ಮಕ್ಕಳನ್ನು ಹೇಗೆ ಬೆಳೆಸಬೇಕು ಎಂಬುದು ಪಾಲಕರಿಗೆ ತಿಳಿದಿದ್ರೆ ಮಕ್ಕಳ ಸ್ವಭಾವವನ್ನು ಯಾವುದೇ ಗಲಾಟೆ, ಜಗಳವಿಲ್ಲದೆ ಆರಾಮವಾಗಿ ತಿದ್ದಬಹುದು. ಅದಕ್ಕೆ ನೀವು ಹೆಚ್ಚಿನ ಶ್ರಮವಹಿಸಬೇಕಾಗಿಲ್ಲ. ದಿನದಲ್ಲಿ ಐದು ನಿಮಿಷದ ಸಮಯವನ್ನು ಮಕ್ಕಳಿಗೆ ಮೀಸಲಿಡಿ. ಮಕ್ಕಳು ಮಲಗಿದ ಒಂದು ಗಂಟೆ ನಂತ್ರ ಅಥವಾ ಏಳಲು ಒಂದು ಗಂಟೆ ಮೊದಲು ನೀವು ಮಕ್ಕಳ ಜೊತೆ ಮಾತನಾಡಬೇಕು.

ಈ ಥೆರಪಿಯನ್ನು Affirmative Sleep Talk ಎಂದು ಕರೆಯಲಾಗುತ್ತದೆ. ಅಂದ್ರೆ ಮಕ್ಕಳು (Children) ನಿದ್ರೆಯಲ್ಲಿರುವಾಗ ಮಾತನಾಡುವುದು. ಇದು ಹೊಸದಲ್ಲ. ಹಿಂದಿನ ಕಾಲದಲ್ಲಿ ಈ ವಿಧಾನವನ್ನು ಪಾಲಕರು ಪಾಲನೆ ಮಾಡ್ತಿದ್ದರು. ಇದು ನಿಮಗೆ ಮೂಢನಂಬಿಕೆ ಎನ್ನಿಸಬಹುದು. ಆದ್ರೆ ಅನೇಕರು ಇದ್ರ ಮೇಲೆ ಪ್ರಯೋಗ (Experiment) ಮಾಡಿ ಯಶಸ್ಸು ಕಂಡುಕೊಂಡಿದ್ದಾರೆ. ಇದ್ರಿಂದ ಮಕ್ಕಳಿಗೆ ಯಾವುದೇ ಹಾನಿಯಿಲ್ಲ. ಹಾಗಾಗಿ ನೀವು ಕೂಡ ಮಕ್ಕಳ ಮನಸ್ಥಿತಿ ಬದಲಿಸಲು ಈ ವಿಧಾನವನ್ನು ಬಳಸಬಹುದು. ನಾವಿಂದು ಅಫಿರ್ಮೆಟಿವ್ ಸ್ಲೀಪ್ ಟಾಕ್ ಬಗ್ಗೆ ನಿಮಗೊಂದಿಷ್ಟು ಮಾಹಿತಿ ನೀಡ್ತೇವೆ.

BusinessSuccess: ಹೈಸ್ಕೂಲ್‌ ಡ್ರಾಪ್‌ ಔಟ್‌ ಹುಡುಗ ಸೈಬರ್‌ ಭದ್ರತಾ ಕಂಪೆನಿ ಸ್ಥಾಪಿಸಿ ಬೆಳೆದ ರೋಚಕತೆ

ಅಫಿರ್ಮೆಟಿವ್ ಸ್ಲೀಪ್ ಟಾಕ್ ಅಂದ್ರೇನು? : ಮಗು ಮಲಗಿರುವಾಗ ಪ್ರತಿ ದಿನ ಐದು ನಿಮಿಷಗಳ ಕಾಲ ಅವರ ಕಿವಿಯಲ್ಲಿ ಸಕಾರಾತ್ಮಕ ಮಾತುಗಳನ್ನು ಪಿಸುಗುಟ್ಟುವುದು. ಇದನ್ನು ಅಫಿರ್ಮೆಟಿವ್ ಸ್ಲೀಪ್ ಟಾಕ್ ಎಂದು ಕರೆಯುತ್ತಾರೆ. 

ಮಕ್ಕಳು ಸರಿಯಾಗಿ ಓದುತ್ತಿಲ್ಲ, ತರಗತಿಯಲ್ಲಿ ಏಕಾಗ್ರತೆ ಕೊರತೆ, ಮನೆ, ಸ್ನೇಹಿತರ ಜೊತೆ ವಾದ ಮತ್ತು ಜಗಳ, ಒಡಹುಟ್ಟಿದವರ ಮಧ್ಯೆ  ಪೈಪೋಟಿ, ಮನೆ ಕೆಲಸದಲ್ಲಿ ಸೋಮಾರಿತನ, ಅತಿಯಾದ ಟಿವಿ, ಮೊಬೈಲ್ ವೀಕ್ಷಣೆ. ಬೆರಳು ಚೀಪುವುದು, ಉಗುರು ಕಚ್ಚುವುದು, ಹಾಸಿಗೆ ಒದ್ದೆ ಮಾಡುವುದು, ನಾಚಿಕೆ ಸ್ವಭಾವ, ಸಾರ್ವಜನಿಕರ ಜೊತೆ ಬೆರೆಯುವ ಸಮಸ್ಯೆ, ಮಾತಿನ ಸಮಸ್ಯೆ, ಅನಾವಶ್ಯಕ ಭಯ ಹೀಗೆ ನಿಮ್ಮ ಮಕ್ಕಳಲ್ಲಿ ಯಾವುದೇ ಸಮಸ್ಯೆಯಿದ್ದರೂ ನೀವು ಈ ವಿಧಾನದ ಮೂಲಕ ಬಗೆಹರಿಸಿಕೊಳ್ಳಬಹುದು. 

ಕಂಪೆನಿಯಲ್ಲಿ ಸಿಬ್ಬಂದಿಗೆ ರಾತ್ರಿ ಕೆಲಸ ಬ್ಯಾನ್‌, ಹೆಚ್ಚಾಯ್ತು ಮಹಿಳಾ ನೌಕರರು ಗರ್ಭಿಣಿಯಾಗುವ ಪ್ರಮಾಣ

ಅಫಿರ್ಮೆಟಿವ್ ಸ್ಲೀಪ್ ಟಾಕ್ ಮಾಡೋದು ಹೇಗೆ? : ನಿಮ್ಮ ಮಗುವಿನ ಸಮಸ್ಯೆ ಯಾವುದು ಎಂಬುದನ್ನು ಮೊದಲು ಪಟ್ಟಿ ಮಾಡಿ. ಐದು ಸಮಸ್ಯೆಯನ್ನು ಮಾತ್ರ ಮೊದಲು ಆಯ್ಕೆ ಮಾಡಿಕೊಳ್ಳಿ. ಮಗು ಮಲಗಿದ ನಂತ್ರ ಅವರ ಜೊತೆ ಮಾತು ಶುರು ಮಾಡಿ. ನೀವು ಮಕ್ಕಳನ್ನು ತುಂಬಾ ಪ್ರೀತಿಸುತ್ತೀರಿ ಮತ್ತು ಅವರಿಗಾಗಿ ಯಾವಾಗಲೂ ಇರುತ್ತೀರಿ ಎಂದು ಹೇಳುವ ಮೂಲಕ ಯಾವಾಗಲೂ ನಿಮ್ಮ ಮಾತನ್ನು ಪ್ರಾರಂಭಿಸಬೇಕು. ನಿದ್ರಿಸುತ್ತಿರುವಾಗ ಅವರ ಉಪಪ್ರಜ್ಞೆಗೆ ಸೂಚಿಸಲು ಒಂದು ಅಥವಾ ಎರಡು ಸಕಾರಾತ್ಮಕ ಮಾತನ್ನು ಪುನರಾವರ್ತಿಸಬೇಕು. ನೀವು ಮಾತನಾಡುವಾಗ ಅವರ ಹೆಸರನ್ನು ಹೇಳಬೇಕು. ಆಗ ನೀವು ಹೇಳ್ತಿರುವ ಮಾತು ಅವರಿಗೆ ಎಂಬುದು ಮಕ್ಕಳ ಅರಿವಿಗೆ ಬರುತ್ತದೆ. ನೀವು ಏನು ಮಾತನಾಡುತ್ತೀರಿ ಎಂಬುದು ಇಲ್ಲಿ ಮುಖ್ಯವಾಗುತ್ತದೆ. ಸಕಾರಾತ್ಮಕ ವಾಕ್ಯಗಳನ್ನು (Positive Sentence) ಮಾತ್ರ ಬಳಸಬೇಕು. ನಕಾರಾತ್ಮಕ ಪದಗಳನ್ನು ತಪ್ಪಿಸಿ. ಉದಾಹರಣೆಗೆ, ನಿಮ್ಮ ಮಗುವಿನ ಹೊಡೆತದ ಚಟ ಬಿಡಿಸಲು ನೀವು ಬಯಸಿದ್ದರೆ ಸುಹಾಸ್ ಯಾವಾಗಲೂ ನಿಧಾನವಾಗಿ ಮಾತನಾಡುತ್ತಾನೆ. ಸುಹಾಸ್ ಒಬ್ಬ ಸುಂದರ ಮತ್ತು ಸಂತೋಷದ ವ್ಯಕ್ತಿ. ಸುಹಾಸ್ ಜೋರಾಗಿ ಮಾತನಾಡುವುದಿಲ್ಲ ಎಂದು ನೀವು ಹೇಳಬೇಕು.  ಮಗು ಯಾವುದೇ ಚಟುವಟಿಕೆ ಮಾಡಲು ನೀವು ಬಯಸಿದ್ದರೆ, ಸುಹಾಸ್ ಈ ಚಟುವಟಿಕೆ ಮಾಡಬೇಕೆಂದು ನಾನು ಬಯಸುತ್ತೇನೆ ಎನ್ನುವ ಬದಲು ಸುಹಾಸ್ ಈ ಚಟುವಟಿಕೆಯನ್ನು ಮಾಡುತ್ತಾನೆ ಎಂದು ನೀವು ಹೇಳಬೇಕು. 

ಪ್ರತಿ ದಿನ ನೀವು ಒಂದೇ ರೀತಿಯಲ್ಲಿ ವಿಷ್ಯವನ್ನು ಹೇಳಬೇಕಾಗುತ್ತದೆ. ಅಗತ್ಯವೆನಿಸಿದ್ರೆ ನೀವು ಅದನ್ನು ಬರೆದಿಟ್ಟುಕೊಳ್ಳಬಹುದು. ಕನಿಷ್ಠ ನಾಲ್ಕು ವಾರಗಳ ಕಾಲ ನೀವಿದನ್ನು ಮಾಡ್ಬೇಕು. ಮೊದಲ ವಾರದಲ್ಲಿಯೇ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿದ್ರೂ ನೀವು ಇದನ್ನು ಮುಂದುವರೆಸಿ. ಇದು ಮಕ್ಕಳ ನಡವಳಿಕೆ ಮತ್ತು ಅಭ್ಯಾಸಗಳಲ್ಲಿ ಸಕಾರಾತ್ಮಕ ಬದಲಾವಣೆಯನ್ನು ಉತ್ತೇಜಿಸುತ್ತದೆ.
 

Latest Videos
Follow Us:
Download App:
  • android
  • ios