ದಿನಾ ಕುಡಿತಿದ್ದವ ಆಲ್ಕೋಹಾಲ್ ಬಿಟ್ಮೇಲೆ ಸೇವ್ ಮಾಡಿದ್ದೆಷ್ಟು ಹಣ?

ಮದ್ಯಪಾನ ನಿಮ್ಮ ಆರೋಗ್ಯದ ಜೊತೆ ಜೇಬು ಖಾಲಿ ಮಾಡುತ್ತೆ. ಈ ಬಗ್ಗೆ ಜ್ಞಾನೋದಯವಾದ ವ್ಯಕ್ತಿಯೊಬ್ಬ ದೃಢ ನಿರ್ಧಾರ ಕೈಗೊಂಡಿದ್ದಾನೆ. ಆಲ್ಕೋಹಾಲ್ ಸೇವನೆ ಬಿಟ್ಟುಬಿಡುವ ತೀರ್ಮಾನ ತೆಗೆದುಕೊಂಡು ಆರೋಗ್ಯದ ಜೊತೆ ಹಣ ಉಳಿಸಿದ್ದಾನೆ.   
 

Britain Man Leave Alcohol How Much Money Did He Save roo

ಮದ್ಯಪಾನ ಚ್ಯೂಯಿಂಗ್ ಗಮ್ ನಂತೆ. ಮೊದಲು ಗೊತ್ತಾಗದೆ ಅದನ್ನು ಮೈಗೆ ಅಂಟಿಸಿಕೊಂಡಿರ್ತೇವೆ. ನಂತ್ರ ಅದನ್ನು ತೆಗೆಯೋದು ಕಷ್ಟ. ಎಷ್ಟೇ ಕ್ಲೀನ್ ಮಾಡಿದ್ರೂ ಅಲ್ಲಿ ಇಲ್ಲಿ ಹಿಡಿದುಕೊಂಡಿರುತ್ತದೆ. ಮದ್ಯಪಾನ ಕೂಡ ಹಾಗೆ. ಒಮ್ಮೆ ಚಟ ಶುರುವಾದ್ರೆ ಆಗಾಗ ಬೇಕು ಎನ್ನಿಸುತ್ತದೆ. ಆರೋಗ್ಯ ಹಾಳ್ಮಾಡ್ತಿದೆ, ಬಿಡ್ಮೇಕು ಅಂತಾ ಅನ್ನಿಸಿದ್ರೂ ಬಿಡೋದು ಕಷ್ಟ. ಅನೇಕ ಬಾರಿ ನಮ್ಮ ಸುತ್ತಮುತ್ತಲಿನ ಜನರೇ ನಮ್ಮನ್ನು ಹಾಳು ಮಾಡ್ತಾರೆ. ಕುಡಿತ ಕಲಿಸೋದರ ಜೊತೆಗೆ ಬಿಡುವ ಮನಸ್ಸು ಮಾಡಿ ಅದ್ರಿಂದ ದೂರ ಉಳಿದಾಗ ನಮ್ಮನ್ನು ಕೀಳಾಗಿ ನೋಡಿ ಮತ್ತೆ ನಾವು ಕುಡಿಯುವಂತೆ ಮಾಡೋದು ಅವರೆ. ಸ್ನೇಹಿತರು, ಆಪ್ತರ ಮಾತಿಗೆ ಕಟ್ಟುಬಿದ್ದು ನೀವು ಬಿಟ್ಟ ಚಟವನ್ನು ಮತ್ತೆ ಅಂಟಿಸಿಕೊಂಡ್ರೆ ಮತ್ತೆ ಬಿಡೋದು ಕಷ್ಟಸಾಧ್ಯ. ಕುಡಿತ ಬರೀ ನಿಮ್ಮ ಆರೋಗ್ಯ ಹಾಳು ಮಾಡೋದಿಲ್ಲ. ಸಮಾಜದಲ್ಲಿ ನಿಮ್ಮ ಘನತೆ, ಗೌರವಕ್ಕೆ ಧಕ್ಕೆ ತರುತ್ತದೆ. ನಿಮ್ಮ ಕೈನಲ್ಲಿರುವ ಹಣವನ್ನು ಖಾಲಿ ಮಾಡಿ, ಬೀದಿಗೆ ಬರುವಂತೆ ಮಾಡುತ್ತದೆ. 

ಕುಡಿತದ ಚಟಕ್ಕೆ ದಾಸರಾದ ಅನೇಕರು ನಮಗೆ ಕುಡಿತ ಚಟವಾಗಿಲ್ಲ ಎನ್ನುತ್ತಲೇ ಹಣ, ಆರೋಗ್ಯ (Health) ಎರಡನ್ನೂ ಕಳೆದುಕೊಳ್ತಾರೆ. ಮತ್ತೆ ಕೆಲವರು ಸತ್ಯವನ್ನು ಒಪ್ಪಿಕೊಂಡು ಅದ್ರಿಂದ ಹೊರಗೆ ಬರಲು ಪ್ರಾಮಾಣಿಕ ಪ್ರಯತ್ನ ಮಾಡ್ತಾರೆ. ಕುಡಿತವನ್ನು ಸಂಪೂರ್ಣವಾಗಿ ಬಿಟ್ಟ ವ್ಯಕ್ತಿಯೊಬ್ಬ ಅದರಿಂದ ಆದ ಲಾಭಗಳ ಬಗ್ಗೆ ಹೇಳಿದ್ದಾನೆ.

ರೋಗಿಗೆ ಆ್ಯಂಟಿಬಯೋಟಿಕ್ ಏಕೆ ಅನಿವಾರ್ಯ ಎಂಬುದನ್ನು ವೈದ್ಯರು ಬರೆಯಬೇಕು

ಆತನ ಹೆಸರು ಆಂಡಿ. ವಯಸ್ಸು 37. ಆಂಡಿ ಮನೆಯಲ್ಲಿ ಮದ್ಯಪಾನ (Alcohol) ಸಾಮಾನ್ಯವಾಗಿತ್ತು. ಸ್ನೇಹಿತರ ಜೊತೆ ಕ್ರಿಕೆಟ್ ವೀಕ್ಷಣೆ ಇರಲಿ ಇಲ್ಲ ಗೆಟ್ ಟುಗೆದರ್ ಇರಲಿ, ವಿಶ್ರಾಂತಿ ಇರಲಿ ಎಲ್ಲದಕ್ಕೂ ಡ್ರಿಂಕ್ಸ್ (Drinks) ಬೇಕಿತ್ತು. ಕೊರೊನಾ ಸಂದರ್ಭದಲ್ಲಿ ಆಂಡಿ ತನ್ನ ದೇಹ ನೋಡಿಕೊಂಡಿದ್ದಾನೆ. ತೂಕ ನಿರಂತರವಾಗಿ ಹೆಚ್ಚಾಗೋದನ್ನು ಗಮನಿಸಿದ್ದಾನೆ. ಕುಡಿತದಿಂದ ತೂಕ ಏರಿಕೆಯಾಗ್ತಿದೆ ಎಂಬುದನ್ನು ಅರಿತ ಆತ ಬಿಡುವ ದೃಢ ನಿರ್ಧಾರಕ್ಕೆ ಬಂದಿದ್ದಾನೆ. ಒಂದು ವಾರ ಡ್ರಿಂಕ್ಸ್ ಮುಟ್ಟಲಿಲ್ಲ. ಅದು ಮೂರು ತಿಂಗಳವರೆಗೆ ವಿಸ್ತರಣೆಯಾಯ್ತು. ನಂತ್ರ ವರ್ಷಗಳ ಕಳೆಯಿತು. ಆತ ಇದ್ರಿಂದ ಹೊರಬರಲು ಅನ್ನಿ ಗ್ರೇಸ್ ಅವರ ಪುಸ್ತಕ, ಆಲ್ಕೋಹಾಲ್ ಪ್ರಯೋಗ ಮತ್ತು ಕ್ಯಾಥರೀನ್ ಗ್ರೇ ಅವರ ಪುಸ್ತಕ ದಿ ಅನ್ ಎಕ್ಸ್‌ಪೆಕ್ಟೆಡ್ ಜಾಯ್ ಆಫ್ ಬೀಯಿಂಗ್ ಸೋಬರ್‌ ಸಹಾಯ ಮಾಡಿತು. ಹಿಂದಿನ ವರ್ಷ ಮನೆಯ ಸದಸ್ಯರೊಬ್ಬರು ಸಾವನ್ನಪ್ಪಿದಾಗ ನೋವು ಮರೆಯಲು ಮದ್ಯಸೇವಿಸಲು ಮುಂದಾಗಿದ್ದ ಆಂಡಿ. ಆದ್ರೆ ಮದ್ಯಸೇವನೆಗೆ ಮೊದಲು ನಾನ್ ಆಲ್ಕೋಹಾಲ್ ಡ್ರಿಂಕ್ಸ್ ತೆಗೆದುಕೊಳ್ಳುವಂತೆ ಯಾರೋ ಹೇಳಿದ್ರಂತೆ. ಅದನ್ನು ಪಾಲಿಸಿದ ನಂತ್ರ ಆಂಡಿಗೆ ಆಲ್ಕೋಹಾಲ್ ಸೇವನೆ ಮಾಡುವ ಮನಸ್ಸಾಗಲಿಲ್ಲ.

100 ಗ್ರಾಂ ತುಳಸಿಲಿ ಎಷ್ಟೆಲ್ಲ ನ್ಯೂಟ್ರಿಶನ್ ಇದೆ, ಆದ್ರೆ ಗರ್ಭಿಣಿಯರು ಸೇವಿಸ್ಬೋದಾ?

ಆಲ್ಕೋಹಾಲ್ ಸಂಪೂರ್ಣ ಬಿಟ್ಟಿರುವ ಆಂಡಿ 25 ಕೆ.ಜಿ ತೂಕ ಇಳಿಸಿದ್ದಾನೆ. ಇಬ್ಬರು ಮಕ್ಕಳ ತಂದೆ ಆಂಡಿಗೆ ಇದ್ರಿಂದ ಸಾಕಷ್ಟು ಖುಷಿ ಇದೆ. ಮದ್ಯ ಸೇವನೆ ತ್ಯಜಿಸಿದಾಗ ಅನೇಕರು ಕಾಲೆಳೆಯುವ ಪ್ರಯತ್ನ ಮಾಡಿದ್ದರಂತೆ. ಬೋರಿಂಗ್ ವ್ಯಕ್ತಿ ಎಂಬ ಪಟ್ಟ ಕಟ್ಟಿದ್ದರಂತೆ. ಆದ್ರೆ ಆಂಡಿ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳಲಿಲ್ಲ. ಒಂದು ವರ್ಷ ಮದ್ಯಪಾನ ಮಾಡದೆ ಆಂಡಿ 3.6 ಲಕ್ಷ ರೂಪಾಯಿ ಉಳಿಸಿದ್ದೇನೆ ಎನ್ನುತ್ತಾನೆ. ಆತ ತಾನು ಸುಧಾರಿಸಿದ್ದಲ್ಲದೆ ಮದ್ಯಪಾನ ಬಿಡಲು ಮುಂದಾಗಿರುವ ಆದ್ರೆ ಬಿಡಲು ಸಾಧ್ಯವಾಗದೆ ಇರುವ ವ್ಯಕ್ತಿಗಳಿಗೆ ನೆರವಾಗ್ತಿದ್ದಾನೆ. ಆಲ್ಕೋಹಾಲ್ ಹೇಗೆ ತ್ಯಜಿಸಬೇಕು ಎನ್ನುವ ಬಗ್ಗೆ ಜನರಿಗೆ ಮಾಹಿತಿ ನೀಡ್ತಿದ್ದಾನೆ. ಆಲ್ಕೋಹಾಲ್ ಸಂಪೂರ್ಣ ತ್ಯಜಿಸಿ ನನ್ನ ಮೂಲ ಉದ್ದೇಶವನ್ನು ಯಶಸ್ವಿಗೊಳಿಸಲು ನಾನು ಸಫಲನಾಗಿದ್ದೇನೆ ಎಂದು ಆಂಡಿ ಹೇಳಿಕೊಂಡಿದ್ದಾನೆ.  

Latest Videos
Follow Us:
Download App:
  • android
  • ios